ಇರಾನ್ ಜತೆ ವ್ಯವಹರಿಸುವ ರಾಷ್ಟ್ರಗಳ ಮೇಲೆ ಶೇ 25ರಷ್ಟು ಸುಂಕ ವಿಧಿಸಿದ ಟ್ರಂಪ್

Date:

ಇರಾನ್‌ನಲ್ಲಿ ನಡೆಯುತ್ತಿರುವ ಸರಕಾರ ವಿರೋಧಿ ಪ್ರತಿಭಟನೆಗಳು ಮತ್ತು ಪ್ರತಿಭಟನಾಕಾರರ ಮೇಲಿನ ಮಾರಣಾಂತಿಕ ದಮನ ಕಾರ್ಯಾಚರಣೆಯ ಹಿನ್ನೆಲೆಯಲ್ಲಿ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ. ಇರಾನ್‌ನೊಂದಿಗೆ ವ್ಯವಹಾರ ನಡೆಸುವ ಯಾವುದೇ ದೇಶದ ಮೇಲೆ ಶೇ 25ರಷ್ಟು ಸುಂಕ (ಟ್ಯಾರಿಫ್) ವಿಧಿಸುವುದಾಗಿ ಸೋಮವಾರ ಟ್ರಂಪ್ ಘೋಷಿಸಿದ್ದಾರೆ.

- Advertisement -

​ತಮ್ಮ ಸಾಮಾಜಿಕ ಜಾಲತಾಣ ‘ಟ್ರುತ್ ಸೋಷಿಯಲ್’ನಲ್ಲಿ ಈ ಕುರಿತು ಪ್ರಕಟಿಸಿರುವ ಟ್ರಂಪ್, “ಇರಾನ್ ಇಸ್ಲಾಮಿಕ್ ಗಣರಾಜ್ಯದೊಂದಿಗೆ ವಾಣಿಜ್ಯ ಸಂಬಂಧವನ್ನು ಕಾಯ್ದುಕೊಂಡಿರುವ ಯಾವುದೇ ದೇಶವು, ಅಮೆರಿಕದೊಂದಿಗೆ ನಡೆಸುವ ಎಲ್ಲ ವ್ಯವಹಾರಗಳ ಮೇಲೂ ಈ ಸುಂಕ ತಕ್ಷಣದಿಂದಲೇ ಜಾರಿಗೆ ಬರಲಿದೆ,” ಎಂದು ತಿಳಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಹಮ್ ಔರತೇನ್ ಆಜಾದ್ ಹೈ: ಸುರಕ್ಷತೆಯ ಹೆಸರಲ್ಲಿ ಕಡಿವಾಣ...

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಹಿಳೆಯರು ಮತ್ತು ಅಪ್ರಾಪ್ತೆಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳಿಗೆ ಕಡಿವಾಣ ಇಲ್ಲದಂತಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಅಭದ್ರತೆಯ ವಾತಾವರಣವಿರುವಾಗ ಈ ಲೋಪಗಳನ್ನು ಸರಿಪಡಿಸದೆಯೇ ದೌರ್ಜನ್ಯಕ್ಕೆ ಒಳಗಾಗುತ್ತಿರುವ ಸ್ರೀ ಸಮುದಾಯದ ಉಡುವ,...

ತಮ್ಮ ವಿರುದ್ಧ ತಾವೇ’ಆರೋಪಪಟ್ಟಿ’ ಸಿದ್ಧಪಡಿಸಿಕೊಂಡ ಗ್ಯಾನೇಶ್ ಕುಮಾರ್: ಪ್ರೆಸ್...

ಚುನಾವಣಾ ಆಯೋಗದ ಇತ್ತೀಚಿನ ನಡೆಗಳು ಮತ್ತು ಸಾಂವಿಧಾನಿಕ ವೈಫಲ್ಯದ ಅಸಲಿಯತ್ತನ್ನು ಸ್ವರಾಜ್ ಇಂಡಿಯಾ ಸದಸ್ಯ ಹಾಗೂ ‘ಭಾರತ್ ಜೋಡೊ ಅಭಿಯಾನ’ದ ರಾಷ್ಟ್ರೀಯ ಸಂಚಾಲಕ ಯೋಗೇಂದ್ರ ಯಾದವ್ ಅವರು 'ದಿ ಇಂಡಿಯನ್ ಎಕ್ಸ್‌ಪ್ರೆಸ್' ಪತ್ರಿಕೆಯಲ್ಲಿ...

SIR | ‘ಫಾರ್ಮ್ 7’ ದುರ್ಬಳಕೆ – ಅಕ್ರಮ:...

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾಗರಿಕನಿಗೆ ಇರುವ ಅತ್ಯಂತ ಮೂಲಭೂತ ಮತ್ತು ಶಕ್ತಿಶಾಲಿ ಅಸ್ತ್ರ - ಮತದಾನದ ಹಕ್ಕು. ಆದರೆ, ಇತ್ತೀಚಿನ ದಿನಗಳಲ್ಲಿ ಚುನಾವಣಾ ಆಯೋಗದ ನಿರ್ಲಜ್ಜತನ ಮತ್ತು ನಿಯಮಗಳಲ್ಲಿನ ಲೋಪದೋಷಗಳನ್ನು ಬಳಸಿಕೊಂಡು, ಮತದಾರರ ಪಟ್ಟಿಯಿಂದ...

​ಟ್ರಂಪ್ ಅವರ ಈ ಆದೇಶವು ಜಾಗತಿಕ ವಾಣಿಜ್ಯ ವಲಯದಲ್ಲಿ ಸಂಚಲನ ಮೂಡಿಸಿದೆ. ಇರಾನ್‌ನೊಂದಿಗೆ ವ್ಯಾಪಾರ ಪಾಲುದಾರಿಕೆ ಹೊಂದಿರುವ ಪ್ರಾದೇಶಿಕ ರಾಷ್ಟ್ರಗಳಲ್ಲದೆ, ಪ್ರಮುಖ ಆರ್ಥಿಕ ಶಕ್ತಿಗಳಾದ ಭಾರತ, ಚೀನಾ, ಟರ್ಕಿ ಮತ್ತು ಯುಎಇ ಮೇಲೂ ಈ ನಿರ್ಧಾರ ಗಂಭೀರ ಪರಿಣಾಮ ಬೀರುವ ಸಾಧ್ಯತೆಯಿದೆ.

ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ‘ರೋಮಿಯೋ-ಜ್ಯೂಲಿಯೆಟ್ ವಿನಾಯಿತಿ’ ಸುಪ್ರೀಮ್ ಸೂಚನೆ ಯಾಕಾಗಿ ಸೂಕ್ತ?

​”ಇರಾನ್‌ನೊಂದಿಗೆ ವ್ಯವಹರಿಸುವ ಯಾವುದೇ ದೇಶವು ಅಮೆರಿಕದೊಂದಿಗೆ ಮಾಡುವ ಎಲ್ಲ ವ್ಯವಹಾರಗಳ ಮೇಲೂ ಶೇ 25ರಷ್ಟು ಸುಂಕ ಪಾವತಿಸಬೇಕಾಗುತ್ತದೆ. ಈ ಆದೇಶ ಅಂತಿಮ ಮತ್ತು ನಿರ್ಣಾಯಕ,” ಎಂದು ಟ್ರಂಪ್ ಸ್ಪಷ್ಟಪಡಿಸಿದ್ದಾರೆ.

​ಆದರೆ, ಈ ನೀತಿಯನ್ನು ಹೇಗೆ ಜಾರಿಗೊಳಿಸಲಾಗುತ್ತದೆ, ಯಾವೆಲ್ಲಾ ಸರಕುಗಳಿಗೆ ಇದು ಅನ್ವಯಿಸುತ್ತದೆ ಅಥವಾ ಮಾನವೀಯ ನೆರವು ಹಾಗೂ ಆಯಕಟ್ಟಿನ ವ್ಯಾಪಾರಗಳಿಗೆ ವಿನಾಯಿತಿ ಇದೆಯೇ ಎಂಬ ಬಗ್ಗೆ ಟ್ರಂಪ್ ಯಾವುದೇ ವಿವರಗಳನ್ನು ನೀಡಿಲ್ಲ.

​ಹಿಂಸಾಚಾರಕ್ಕೆ 648 ಬಲಿ
ಇರಾನ್‌ನಲ್ಲಿ ವಾರಗಟ್ಟಲೆ ನಡೆಯುತ್ತಿರುವ ಪ್ರತಿಭಟನೆಗಳನ್ನು ಹತ್ತಿಕ್ಕಲು ಅಲ್ಲಿನ ಸರ್ಕಾರ ನಡೆಸಿದ ಹಿಂಸಾತ್ಮಕ ಕಾರ್ಯಾಚರಣೆಯಲ್ಲಿ ಕನಿಷ್ಠ 648 ಜನರು ಸಾವನ್ನಪ್ಪಿದ್ದಾರೆ ಎಂದು ನಾರ್ವೆ ಮೂಲದ ಇರಾನ್ ಮಾನವ ಹಕ್ಕುಗಳ ಸಂಸ್ಥೆ ವರದಿ ಮಾಡಿದೆ. ಆದರೆ, ಇರಾನ್ ಸರ್ಕಾರ ಈವರೆಗೂ ಅಧಿಕೃತ ಸಾವಿನ ಸಂಖ್ಯೆಯನ್ನು ಪ್ರಕಟಿಸಿಲ್ಲ. ಈ ಅಶಾಂತಿಗೆ ಅಮೆರಿಕ ಮತ್ತು ಇಸ್ರೇಲ್‌ನ ಕುಮ್ಮಕ್ಕು ಕಾರಣ ಎಂದು ಟೆಹ್ರಾನ್ ಆರೋಪಿಸಿದೆ.

​ಸೇನಾ ಕ್ರಮಕ್ಕೆ ಸೆನೆಟರ್ ಗ್ರಹಾಂ ಆಗ್ರಹ
ಇದೇ ವೇಳೆ, ಅಮೆರಿಕದ ಹಿರಿಯ ಸೆನೆಟರ್ ಲಿಂಡ್ಸೆ ಗ್ರಹಾಂ ಅವರು ಇರಾನ್ ನಾಯಕತ್ವದ ವಿರುದ್ಧ ಸೇನಾ ಕ್ರಮ ಕೈಗೊಳ್ಳುವಂತೆ ಟ್ರಂಪ್ ಅವರನ್ನು ಒತ್ತಾಯಿಸಿದ್ದಾರೆ. “ಇರಾನ್ ಆಡಳಿತವು ಎಲ್ಲ ಮಿತಿಗಳನ್ನು (ರೆಡ್ ಲೈನ್) ಮೀರಿದೆ. ಅವರು ತಮ್ಮದೇ ಜನರನ್ನು ಕೊಲ್ಲುತ್ತಿದ್ದಾರೆ. ಹೀಗಾಗಿ, ಇರಾನ್ ನಾಯಕರನ್ನು ಗುರಿಯಾಗಿಸಿಕೊಂಡು ನಿರ್ಣಾಯಕ ಸೇನಾ ಕ್ರಮ ಕೈಗೊಳ್ಳುವ ಸಮಯ ಬಂದಿದೆ,” ಎಂದು ಗ್ರಹಾಂ ಅಭಿಪ್ರಾಯಪಟ್ಟಿದ್ದಾರೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮುಳುಗುತ್ತಿರುವ ಬ್ಯಾಂಕಾಕ್: 50 ಜಿಲ್ಲೆಗಳಲ್ಲಿ ‘ವಿಪತ್ತು’ ಘೋಷಣೆ, ಸ್ತಬ್ಧಗೊಂಡ ಜನಜೀವನ

ಸತತ ಮಳೆಯಿಂದಾಗಿ ಥಾಯ್ಲೆಂಡ್ ರಾಜಧಾನಿ ಬ್ಯಾಂಕಾಕ್ ಅಕ್ಷರಶಃ ಜಲಾವೃತಗೊಂಡಿದ್ದು, ನಗರದ ಎಲ್ಲಾ...

ವಿಶ್ವಸಂಸ್ಥೆಯಲ್ಲಿ ನೆತನ್ಯಾಹು ಭಾಷಣಕ್ಕೆ ಜಾಗತಿಕ ಬಹಿಷ್ಕಾರ: ಖುರ್ಚಿಗೆ ಅಂಟಿಕೊಂಡ ಭಾರತದ ಧೋರಣೆಗೆ ಖಂಡನೆ

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ (UNGA) ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಭಾಷಣ...

CNN, MS NOW, Politicoಗೆ ಶ್ವೇತಭವನ ಪ್ರವೇಶ ನಿರ್ಬಂಧ; ಟ್ರಂಪ್ ಆದೇಶಕ್ಕೆ ಫೆಡರಲ್ ಕೋರ್ಟ್ ತಡೆ

CNN, MS NOW ಮತ್ತು Politico ಸುದ್ದಿ‌ ಸಂಸ್ಥೆಗಳ ಪತ್ರಕರ್ತರಿಗೆ ಶ್ವೇತಭವನ...

ಸೂಚನೆಯಿಲ್ಲದೆ ಆಸ್ಟ್ರೇಲಿಯಾದ ಸರ್ಕಾರಿ ವೆಬ್‌ಸೈಟ್ ಹ್ಯಾಕ್ ಮಾಡಿದ ‘OpenAI’

ಆಸ್ಟ್ರೇಲಿಯಾದ ಸರ್ಕಾರಿ ಆರೋಗ್ಯ ಇಲಾಖೆಯ ವೆಬ್‌ಸೈಟ್‌ ಒಂದನ್ನು ಕೃತಕ ಬುದ್ಧಿಮತ್ತೆ (AI)...