ಉಕ್ರೇನ್‌-ರಷ್ಯಾ ಸಂಘರ್ಷ | ಮಾತುಕತೆ ವಿಫಲ: ರಷ್ಯಾ ಡ್ರೋನ್ ದಾಳಿಗೆ ಉಕ್ರೇನ್‌ನ 9 ಮಂದಿ ಬಲಿ

Date:

ಕಳೆದ ಮೂರು ವರ್ಷಗಳಿಂದ ಉಕ್ರೇನ್ ಮತ್ತು ರಷ್ಯಾ ನಡುವೆ ಸಂಘರ್ಷ ನಡೆಯುತ್ತಿದೆ. ಉಕ್ರೇನ್ ಮೇಲೆ ರಷ್ಯಾ ನಿರಂತರವಾಗಿ ದಾಳಿ ಮಾಡುತ್ತಿದೆ. ಈ ನಡುವೆ, ಉಭಯ ರಾಷ್ಟ್ರಗಳ ನಡುವೆ ಕದನ ವಿರಾಮ ಘೋಷಣೆಯ ಮಾತುಕತೆಗಳು ಆರಂಭವಾಗಿದ್ದವು. ಆದರೆ, ಇಂದು (ಶನಿವಾರ) ಮಾತುಕತೆ ವಿಫಲವಾದ ಕೆಲವೇ ಗಂಟೆಗಳಲ್ಲಿ ಉಕ್ರೇನ್‌ ಮೇಲೆ ರಷ್ಯಾ ಮತ್ತೆ ದಾಳಿ ನಡೆಸಿದೆ. ರಷ್ಯಾ ನಡೆಸಿದ ಡ್ರೋನ್ ದಾಳಿಗೆ ಉಕ್ರೇನ್‌ನ ಒಂಬತ್ತು ಮಂದಿ ಬಲಿಯಾಗಿದ್ದಾರೆ.

- Advertisement -

ರಷ್ಯಾ ಹಾರಿಸಿದ ಡ್ರೋನ್ ಉಕ್ರೇನ್‌ನ ಈಶಾನ್ಯ ಸುಮಿ ಪ್ರದೇಶದ ಮೇಲೆ ರಷ್ಯಾ ಡ್ರೋನ್ ದಾಳಿ ನಡೆಸಿದೆ. ರಷ್ಯಾ ಹಾರಿಸಿದ ಡ್ರೋನ್ ಚಲಿಸುತ್ತಿದ್ದ ಬಸ್‌ ಮೇಲೆ ದಾಳಿ ಮಾಡಿದ್ದು, ಬಸ್‌ನಲ್ಲಿದ್ದ 9 ಮಂದಿ ಸಾವನ್ನಪ್ಪಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬ್ರಿಟಿಷ್ ಕಾಲದ ʼಗುಲಾಮಗಿರಿʼ ಕಾನೂನುಗಳೇ ಇಂದಿನ ಪೊಲೀಸ್‌ ವ್ಯವಸ್ಥೆಯ...

ಸ್ವಾತಂತ್ರ್ಯ ಬಂದು ದಶಕಗಳೇ ಕಳೆದಿದ್ದರೂ, ನಾವಿನ್ನೂ ಬ್ರಿಟಿಷರು ಭಾರತೀಯರನ್ನು ದಮನ ಮಾಡಲು ರೂಪಿಸಿದ 1861ರ ಪೊಲೀಸ್ ಕಾಯಿದೆಯ ನೆರಳಿನಲ್ಲೇ ಬದುಕುತ್ತಿದ್ದೇವೆಯೇ? ಖಾಕಿ ಪಡೆಯನ್ನು 'ಪ್ರಜೆಗಳ ರಕ್ಷಕ'ನಾಗಿಸಬೇಕಿದ್ದ ವ್ಯವಸ್ಥೆ, ಇಂದಿಗೂ ರಾಜಕಾರಣಿಗಳ ಕೈಗೊಂಬೆಯಾಗಿ ಉಳಿದುಕೊಳ್ಳಲು...

ಯಾರು ಹಿತವರು ಈ ಇಬ್ಬರೊಳಗೆ? ನೇಹಾ ಬೋರಾ ಅಭಿಜಿತ್...

“ಹೋಲಿಕೆ ಬೇಡ, ಒಗ್ಗಟ್ಟು ಬೇಕು. ನಾವೆಲ್ಲರೂ ಒಟ್ಟಾಗಿ ಚುನಾವಣಾ ಆಯೋಗದ ಅಕ್ರಮಗಳ ವಿರುದ್ಧ ಹೋರಾಡಬೇಕು” ಎಂದು ನೇಹಾ ಬರೆದರೆ, ಅದಕ್ಕೆ ಅಭಿಜೀತ್ ಉತ್ತರ- “ಇಂಕ್ವಿಲಾಬ್ ಜಿಂದಾಬಾದ್” ನೇಹಾ ಬೋರಾ ಮತ್ತು ಅಭಿಜಿತ್ ದೀಪ್ಕೆ ನಡುವೆ...

ಸ್ವತಂತ್ರ ಸಾಂವಿಧಾನಿಕ ಸಂಸ್ಥೆಗಳ ಮೇಲಿನ ನಂಬಿಕೆಯನ್ನು ಕಸಿದುಕೊಳ್ಳುತ್ತಿರುವ ಚುನಾವಣಾ...

ನ್ಯಾಯಾಲಯ ಮತ್ತು ಚುನಾವಣಾ ಆಯೋಗಗಳ 'ಸ್ವತಂತ್ರತೆ' ಎಂಬ ಮುಖವಾಡವೇ ಈಗ ಸರ್ಕಾರಕ್ಕೆ ರಕ್ಷಣಾ ಕವಚವಾಗಿ ಕೆಲಸ ಮಾಡುತ್ತಿದೆ. ಹೀಗಾಗಿ ಇವತ್ತು ವಿರೋಧ ಪಕ್ಷಗಳ ಆಕ್ರೋಶವೆಲ್ಲವೂ ಸಾಂವಿಧಾನಿಕ ಸಂಸ್ಥೆಗಳ ಕಡೆಗೆ ತಿರುಗಿದೆ. ಸರ್ಕಾರ ತೀರಾ...

ದಾಳಿ ಬಗ್ಗೆ ಸುಮಿ ಸ್ಥಳೀಯ ಆಡಳಿತವು ಮಾಹಿತಿ ನೀಡಿದ್ದು, “ರಷ್ಯಾ ಮತ್ತೊಂದು ಯುದ್ಧ ಅಪರಾಧ ಎಸಗಿದೆ. ನಾಗರಿಕ ಸಾರಿಗೆಯ ಮೇಲೆ ದುರುದ್ದೇಶದಿಂದ ದಾಳಿ ನಡೆಸಿ, ಅಮಾಯಕ ನಾಗರಿಕರನ್ನು ಕೊಂದಿದೆ” ಎಂದು ಆರೋಪಿಸಿದೆ.

ಶುಕ್ರವಾರ ಬೆಳಗ್ಗೆ ಉಭಯ ರಾಷ್ಟ್ರಗಳು ಕದನ ವಿರಾಮ ಸ್ಥಾಪಿಸುವುದಕ್ಕಾಗಿ ಟರ್ಕಿಯಲ್ಲಿ ಸಭೆ ಸೇರಿ, ಮಾತುಕತೆ ನಡೆಸಿದ್ದವು. ನಿರಂತರವಾಗಿ ನಡೆದ ಮಾತುಕತೆಯಲ್ಲಿ ಯಾವುದೇ ಮಹತ್ವದ ನಿರ್ಧಾರ ಅಥವಾ ಒಪ್ಪಂದಕ್ಕೆ ಎರಡೂ ರಾಷ್ಟ್ರಗಳು ಒಮ್ಮತ ವ್ಯಕ್ತಪಡಿಸಿಲ್ಲ. ಉಭಯ ರಾಷ್ಟ್ರಗಳ ಖೈದಿಗಳ ವಿನಿಮಯಕ್ಕೆ ಇಬ್ಬರೂ ಸಮ್ಮತಿಸಿದರೂ, ಸಂಘರ್ಷ ಕೊನೆಗೊಳಿಸಲು ಅಗತ್ಯವಾದ ಪ್ರಮುಖ ಷರತ್ತುಗಳಿಗೆ ಎರಡೂ ರಾಷ್ಟ್ರಗಳ ಭಿನ್ನಾಭಿಪ್ರಾಯ ಹೊಂದಿದ್ದವು. ಹೀಗಾಗಿ, ಮಾತುಕತೆ ವಿಫಲವಾಗಿದೆ ಎಂದು ವರದಿಯಾಗಿದೆ.

ಆ ಸಭೆಗೂ ಮುನ್ನ ಉಕ್ರೇನ್‌ ಅಧ್ಯಕ್ಷ ವ್ಲೊಡಿಮಿರ್ ಝೆಲೆನ್ಸ್ಕಿ ಅವರು ಅಮೆರಿಕ, ಫ್ರಾನ್ಸ್, ಜರ್ಮನಿ, ಯುಕೆ ಮತ್ತು ಪೋಲೆಂಡ್ ನಾಯಕರೊಂದಿಗೆ ಚರ್ಚಿಸಿದ್ದಾರೆ. ಆ ಬಳಿಕ ರಷ್ಯಾದೊಂದಿಗೆ ಸಭೆ ನಡೆದಿದೆ. ಆದರೆ, ಸಭೆಯಲ್ಲಿ “ಪೂರ್ಣ ಮತ್ತು ಬೇಷರತ್ತಾದ ಕದನ ವಿರಾಮ ಮತ್ತು ಹತ್ಯೆಗಳನ್ನು ಕೊನೆಗೊಳಿಸಬೇಕು ಎಂಬ ಷರತ್ತನ್ನು ರಷ್ಯಾ ತಿರಸ್ಕರಿಸಿದೆ” ಎಂದು ವರದಿಯಾಗಿದೆ.

ಈ ಲೇಖನ ಓದಿದ್ದೀರಾ?: ಭಾರತ-ಪಾಕ್ ಸಂಘರ್ಷ | ಜಾಗತಿಕವಾಗಿ ಭಾರತಕ್ಕೆಷ್ಟು ಬೆಂಬಲ ಸಿಕ್ಕಿತು?

“ಯುದ್ಧವನ್ನು ಕೊನೆಗೊಳಿಸಲು ರಷ್ಯಾ ಸಿದ್ಧವಾಗುವವರೆಗೆ ರಷ್ಯಾದ ಮೇಲೆ ಒತ್ತಡ ಹೇರಬೇಕು. ಕದನ ವಿರಾಮವು ಶಾಂತಿ ಸಾಧಿಸುವುದರ ಮೊದಲ ಹೆಜ್ಜೆಯಾಗಿದೆ” ಎಂದು ಝೆಲೆನ್ಸ್ಕಿ ಹೇಳಿದ್ದಾರೆ.

ರಷ್ಯಾದ ಪಡೆಗಳು ಉಕ್ರೇನ್‌ನ ಸರಿಸುಮಾರು ಐದನೇ ಒಂದು ಭಾಗವನ್ನು ಆಕ್ರಮಿಸಿಕೊಂಡಿವೆ. ರಷ್ಯಾದ ಅಧ್ಯಕ್ಷ ಪುಟಿನ್ ಅವರು ಕೈವ್ ಪ್ರದೇಶವನ್ನು ರಷ್ಯಾ ಸುಪರ್ದಿಗೆ ನೀಡಬೇಕು, ನ್ಯಾಟೋಗೆ ಸೇರುವ ನಿರ್ಧಾರವನ್ನು ಉಕ್ರೇನ್‌ ಕೈಬಿಡಬೇಕು, ತಟಸ್ಥ ನಿಲುವನ್ನು ಅಳವಡಿಸಿಕೊಳ್ಳಬೇಕು ಎಂದು ತಾಕೀತು ಮಾಡುತ್ತಿದ್ದಾರೆ ಎಂದು ವರದಿಯಾಗಿದೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗಾಜಾದಲ್ಲಿ ಮೃತರ ಸಂಖ್ಯೆ 74,000 ದಾಟಿದೆ: ಆರೋಗ್ಯ ಸಚಿವಾಲಯ

ಇಸ್ರೇಲ್ ನಡೆಸುತ್ತಿರುವ ದೀರ್ಘಕಾಲದ ಕ್ರೌರ್ಯದಿಂದಾಗಿ ಗಾಜಾ ಪಟ್ಟಿಯಲ್ಲಿ ಮೃತರ ಸಂಖ್ಯೆ 74,000...

ದಕ್ಷಿಣ ಆಫ್ರಿಕಾದ ಹಲವೆಡೆ ಸಾಮೂಹಿಕ ಗುಂಡಿನ ದಾಳಿ; 27 ಮಂದಿ ಭೀಕರ ಸಾವು

ದಕ್ಷಿಣ ಆಫ್ರಿಕಾದ ವಿವಿಧ ಪಟ್ಟಣಗಳಲ್ಲಿ ಭೀಕರ ಸಾಮೂಹಿಕ ಗುಂಡಿನ ದಾಳಿಗಳು ನಡೆದಿದ್ದು,...

ಪಾಕಿಸ್ತಾನದಲ್ಲಿ ಆತ್ಮಾಹುತಿ ದಾಳಿ: 11 ಮಂದಿ ಬಲಿ, 30 ಜನರಿಗೆ ಗಾಯ

ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ಶನಿವಾರ ನಡೆದ ಭೀಕರ ಆತ್ಮಾಹುತಿ ದಾಳಿಯಲ್ಲಿ...

ಯುದ್ಧದಾಹಿ ಅಮೆರಿಕ: ಇರಾನ್‌ನ 7 ದಿನಗಳ ಕದನ ವಿರಾಮ ಪ್ರಸ್ತಾವಕ್ಕೆ ಟ್ರಂಪ್ ತಿರಸ್ಕಾರ

ಇರಾನ್‌ ಕದನ ವಿರಾಮಕ್ಕೆ ಮುಂದಿಟ್ಟಿರುವ 7 ದಿನಗಳ ಶಾಂತಿ ಪ್ರಸ್ತಾವವನ್ನು ಅಮೆರಿಕ...