ಉತ್ತರ ಕ್ಯಾಲಿಫೋರ್ನಿಯಾದಲ್ಲಿ ಕಾಡ್ಗಿಚ್ಚು; ಹೆಚ್ಚಿದ ಶಾಖ – ಸಾವಿರಾರು ಜನರ ಸ್ಥಳಾಂತರ

Date:

ಉತ್ತರ ಕ್ಯಾಲಿಫೋರ್ನಿಯಾದಲ್ಲಿ ಕಾಡ್ಗಿಚ್ಚಿ ವ್ಯಾಪಿಸಿದ್ದು, ಬೆಂಕಿ ನಂದಿಸಲು ಅಗ್ನಿಶಾಮಕ ದಳದ ಸಿಬ್ಬಂದಿಗಳು ಹೆಲಿಕಾಪ್ಟರ್‌ ಮೂಲಕ ನೀರನ್ನು ಸುರಿಯುತ್ತಿದ್ದಾರೆ. ಬೆಂಕಿ ವಸತಿ ಪ್ರದೇಶ, ಮನೆಗಳಿಗೆ ಪಸರಿಸದಂತೆ ತಡೆದಿದ್ದಾರೆ. ಆದರೆ, ಕಾಡ್ಗಿಚ್ಚಿನಿಂದಾಗಿ ರಾಜ್ಯದಲ್ಲಿ ಶಾಖವು ತೀವ್ರವಾಗಿ ಹೆಚ್ಚಾಗಿದ್ದು, ಸುಮಾರು 26,000 ಜನರನ್ನು ಸ್ಥಳಾಂತರಿಸಲಾಗಿದೆ.

- Advertisement -

ಮೊದಲಿಗೆ ಮಂಗಳವಾರ ಮಧ್ಯಾಹ್ನ, ಉತ್ತರ ಕ್ಯಾಲಿಫೋರ್ನಿಯಾದ ಸ್ಯಾಕ್ರಮೆಂಟೋದ ಬುಟ್ಟೆ ಕೌಂಟಿಯ ಓರೊವಿಲ್ಲೆ ನಗರದ ಬಳಿ ಬೆಂಕಿ ಕಾಣಿಸಿಕೊಂಡಿತ್ತು. ಬಳಿಕ, ಬೆಂಕಿಯು 14 ಚದುರ ಕಿ.ಮೀ ವ್ಯಾಪಿಸಿಕೊಂಡಿದೆ. ಇದರಿಂದಾಗಿ, ಇಡೀ ಸ್ಯಾಕ್ರಮೆಂಟೋ ಪ್ರದೇಶ ಹೊಗೆಯಿಂದ ಆವೃತಗೊಂಡಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಪಾಕಿಸ್ತಾನದಲ್ಲಿ ಅಹಿಂಸಾ ಮೂರ್ತಿಯ ‘ರಹಸ್ಯರಕ್ಷಣೆ’: ಕರಾಚಿಯಿಂದ ಇಸ್ಲಾಮಾಬಾದ್‌ಗೆ ಗಾಂಧಿ...

ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿರುವ ಭಾರತೀಯ ಹೈಕಮಿಷನ್ ಕಚೇರಿಯ ಪ್ರವೇಶ ದ್ವಾರದಲ್ಲಿ ಮಹಾತ್ಮ ಗಾಂಧೀಜಿಯವರ ಭವ್ಯ ಕಂಚಿನ ಪ್ರತಿಮೆ ಇಂದಿಗೂ ಗಾಂಭೀರ್ಯದಿಂದ ನಿಂತಿದೆ. ಕೈಯಲ್ಲಿ ಊರುಗೋಲು ಹಿಡಿದು ದೂರದ ದಿಗಂತವನ್ನು ದಿಟ್ಟಿಸುವಂತಿರುವ ಈ ಬಾಪೂ ಪ್ರತಿಮೆಯು...

ಗಾಂಧಿಯ ಆರ್ಥಿಕ ಸಾಮಾಜಿಕ ಸಂಕೇತಗಳು: ಉಪ್ಪು, ಖಾದಿ, ಚರಕ...

ಗ್ರಾಮೀಣ ಭಾರತದ ಆರ್ಥಿಕತೆ ಮನಗಂಡಿದ್ದ ಗಾಂಧಿ ಹಾಲಿನ ಬಗೆಗಿನ ಕಠೋರ ನಿಲುವನ್ನು ನಿರಾಕರಿಸಿ ತನ್ನನ್ನು ತಾನು ಮೇಕೆಯ ಮಮಕಾರದ ಹಾಲಿಗೆ ಕೊಟ್ಟುಕೊಂಡಿದ್ದರು. ಈಗಿನ ಪಶುಪಾಲಕ ಸಮುದಾಯಗಳ ಸಾವಯವ ಬದುಕಿನ ರೀತಿ ನೀತಿ ಗಮನಿಸಿ......

ಈ ದಿನ ವಿಶೇಷ | ಗಾಂಧೀ ಎಂದರೆ ಏನು?

ಇಂದು ಮಹಾತ್ಮಾ ಗಾಂಧೀಜಿಯವರ ಜನ್ಮದಿನ. ಅವರ ವಿಚಾರ, ಚಿಂತನೆ, ನಡೆ-ನುಡಿ... ಅವರನ್ನು ಗ್ರಹಿಸಲು ಅವರ ದಿನಚರಿಯ ಭಾಗವೇ ಆಗಿದ್ದ ಕೆಲವು ತುಣುಕುಗಳು ನಿಮ್ಮ ಓದಿಗಾಗಿ... ಆರೆಸ್ಸೆಸ್‌ಗೊಂದು ಕಿವಿಮಾತುಅದು ದೇಶ ವಿಭಜನೆಯ ಕಾಲ. ಎಲ್ಲೆಲ್ಲೂ ಹಿಂದೂ-ಮುಸ್ಲಿಂ...

ಒರೊವಿಲ್ಲೆಯಲ್ಲಿ ಮಂಗಳವಾರ ರಾತ್ರಿ ತುರ್ತು ಪರಿಸ್ಥಿತಿಯನ್ನು ಘೋಷಿಸಲಾಗಿತ್ತು. ತ್ವರಿತವಾಗಿ ರಕ್ಷಣಾ ಕಾರ್ಯ ಆರಂಭಿಸಲಾಗಿತ್ತು. ಅದಾಗ್ಯೂ, ನಗರವನ್ನು ದಾಟಿ, ಗ್ರಾಮೀಣ ಪ್ರದೇಶಗಳಿಗೆ ಬುಧವಾರ ಬೆಂಕಿ ವಿಸ್ತರಿಸಿತ್ತು.

ಬುಧವಾರ ಸಂಜೆಯ ವೇಳೆಗೆ ಬೆಂಕಿ ನಂದಿಸುವ ಕೆಲಸ ಮುಗಿದಿದ್ದು, ಅಗ್ನಿಶಾಮಕ ಸಿಬ್ಬಂದಿಗಳು ರಕ್ಷಣಾ ಕಾರ್ಯವನ್ನೂ ನಿಲ್ಲಿಸಿದ್ದಾರೆ. ಸ್ಥಳಾಂತರಗೊಂಡಿರುವ ಬಹುತೇಕ ನಿವಾಸಿಗಳನ್ನು ಶೀಘ್ರದಲ್ಲೇ ಅವರ ಮನೆಗಳಿಗೆ ಮರಳಲು ಅವಕಾಶ ನೀಡಲಾಗುತ್ತದೆ ಎಂದು ಒರೊವಿಲ್ಲೆ ಮೇಯರ್ ಡೇವಿಡ್ ಪಿಟ್‌ಮನ್ ತಿಳಿಸಿದ್ದಾರೆ.

ಏತನ್ಮಧ್ಯೆ, ಒರೊವಿಲ್ಲೆಯಿಂದ ದಕ್ಷಿಣ ಭಾಗಕ್ಕೆ 8 ಕಿ.ಮೀ ದೂರದಲ್ಲಿರುವ ಪಲೆರ್ಮೊ ಪಟ್ಟಣದಲ್ಲಿಯೂ ಬುಧವಾರ ಸಂಜೆ ಮತ್ತೊಂದು ಬೆಂಕಿ ಅವಘಡ ನಡೆದಿದೆ. ಅಲ್ಲಿನ ಜನರನ್ನೂ ಸ್ಥಳಾಂತರಿಸಲಾಗಿದೆ. ಬೆಂಕಿಯನ್ನು ಶೀಘ್ರವೇ ನಂದಿಸಲಾಗಿದೆ.

ಒರೊವಿಲ್ಲೆ ಮತ್ತು ಪಲೆರ್ಮೊ ಬಳಿ ಸಂಭವಿಸಿದ ಬೆಂಕಿಯಿಂದಾದ ಆಸ್ತಿ ನಷ್ಟದ ಬಗ್ಗೆ ತಕ್ಷಣದ ಅಧಿಕೃತ ವರದಿ ಬಂದಿಲ್ಲ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಕ್ಷಿಣ ಆಫ್ರಿಕಾದ ಹಲವೆಡೆ ಸಾಮೂಹಿಕ ಗುಂಡಿನ ದಾಳಿ; 27 ಮಂದಿ ಭೀಕರ ಸಾವು

ದಕ್ಷಿಣ ಆಫ್ರಿಕಾದ ವಿವಿಧ ಪಟ್ಟಣಗಳಲ್ಲಿ ಭೀಕರ ಸಾಮೂಹಿಕ ಗುಂಡಿನ ದಾಳಿಗಳು ನಡೆದಿದ್ದು,...

ಪಾಕಿಸ್ತಾನದಲ್ಲಿ ಆತ್ಮಾಹುತಿ ದಾಳಿ: 11 ಮಂದಿ ಬಲಿ, 30 ಜನರಿಗೆ ಗಾಯ

ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ಶನಿವಾರ ನಡೆದ ಭೀಕರ ಆತ್ಮಾಹುತಿ ದಾಳಿಯಲ್ಲಿ...

ಯುದ್ಧದಾಹಿ ಅಮೆರಿಕ: ಇರಾನ್‌ನ 7 ದಿನಗಳ ಕದನ ವಿರಾಮ ಪ್ರಸ್ತಾವಕ್ಕೆ ಟ್ರಂಪ್ ತಿರಸ್ಕಾರ

ಇರಾನ್‌ ಕದನ ವಿರಾಮಕ್ಕೆ ಮುಂದಿಟ್ಟಿರುವ 7 ದಿನಗಳ ಶಾಂತಿ ಪ್ರಸ್ತಾವವನ್ನು ಅಮೆರಿಕ...

ಯುದ್ಧದ ಕರಾಳ ನೆರಳು: ರಷ್ಯಾ ಕನಸು ನಚ್ಚುನೂರಾಗಿ ಉಕ್ರೇನ್‌ನಲ್ಲಿ ಬಂಧಿಯಾದ ಭಾರತೀಯ ಯುವಕ!

ಉತ್ತಮ ಜೀವನ ರೂಪಿಸಿಕೊಳ್ಳಬೇಕು, ದೇಶ ವಿದೇಶ ಸುತ್ತಿ ಆರ್ಥಿಕವಾಗಿ ಕುಟುಂಬವನ್ನು ಬೆಂಬಲಿಸಬೇಕು...