ಅಮೆರಿಕದಲ್ಲಿ ಮೂವರು ಭಾರತೀಯ ಸಂಜಾತ ವಿದ್ಯಾರ್ಥಿಗಳ ನಿಗೂಢ ಸಾವು

Date:

ಅಮೆರಿಕದಲ್ಲಿ ತಿಂಗಳೊಳಗೆ ಮೂವರು ಭಾರತೀಯ ಸಂಜಾತ ವಿದ್ಯಾರ್ಥಿಗಳ ನಿಗೂಢ ಸಾವು ಅನಿವಾಸಿ ಭಾರತೀಯರ ನಡುವೆ ಕಳವಳ ಮೂಡಿಸಿದೆ

ಕೆಲವೇ ವಾರಗಳ ಅಂತರದಲ್ಲಿ ಅಮೆರಿಕದಲ್ಲಿ ಮೂವರು ಭಾರತೀಯ ಸಂಜಾತ ಅಮೆರಿಕದ ವಿದ್ಯಾರ್ಥಿಗಳು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಕಳವಳಕಾರಿ ಪ್ರಕರಣಗಳು ವರದಿಯಾಗಿವೆ. 

ಭಾರತೀಯ ಮೂಲದ ನೀಲ್ ಆಚಾರ್ಯ ನಿಗೂಢ ಸಾವು ಮತ್ತು ವಿವೇಕ್ ಸೈನ್ ಕೊಲೆಯಾಗಿ ಪತ್ತೆಯಾಗಿರುವ ಬೆನ್ನಲ್ಲೇ ಇದೀಗ ಓಹಿಯೋದಲ್ಲಿ ಮತ್ತೊಬ್ಬ ಭಾರತೀಯ ಸಂಜಾತ ಅಮೆರಿಕನ್ ವಿದ್ಯಾರ್ಥಿಯ ಶವ ಗುರುವಾರ ಪತ್ತೆಯಾಗಿದೆ ಎಂದು ಅಮೆರಿಕದ ನ್ಯೂಯಾರ್ಕನಲ್ಲಿರುವ ಭಾರತೀಯ ರಾಯಭಾರಿ ಕಚೇರಿ ತಿಳಿಸಿದೆ.

ಆದರೆ, ಗುರುವಾರ ಶವವಾಗಿ ಪತ್ತೆಯಾದ ಓಹಿಯೋ ನಿವಾಸಿಯಾಗಿದ್ದ ಶ್ರೇಯಸ್ ರೆಡ್ಡಿ ಬೆನಿಗೇರಿ ಅನುಮಾನಾಸ್ಪದವಾಗಿ ಸಾವನ್ನಪ್ಪಿಲ್ಲ ಎಂದೂ ರಾಯಭಾರಿ ಕಚೇರಿ ತಿಳಿಸಿದೆ. “ಶ್ರೇಯಸ್  ಸಾವಿಗೆ ಸಂಬಂಧಿಸಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆದರೆ ಕೊಲೆಯಾಗಿರುವ ಸಂಭವವಿಲ್ಲ” ಎಂದು ರಾಯಭಾರಿ ಕಚೇರಿ ಅಧಿಕಾರಿಗಳು ತಿಳಿಸಿದ್ದಾರೆ. ಬೆನ್ನಿಗೇರಿ ಸಿನ್ಸಿನಾಟಿಯ ಲಿಂಡ್ನರ್ ಸ್ಕೂಲ್ ಆಫ್ ಬ್ಯುಸಿನೆಸ್‌ನ ವಿದ್ಯಾರ್ಥಿಯಾಗಿದ್ದ. 

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಇತ್ತೀಚೆಗೆ ಅಮೆರಿಕದ ಇಂಡಿಯಾನಾ ರಾಜ್ಯದಲ್ಲಿ ಪ್ಯುರ್‍‌ಡ್ಯೂ ವಿಶ್ವವಿದ್ಯಾಲಯದಲ್ಲಿ ಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿಯಾಗಿದ್ದ ನೀಲ್ ಆಚಾರ್‍ಯ ಕಣ್ಮರೆಯಾಗಿ ನಂತರ ಶವವಾಗಿ ಪತ್ತೆಯಾಗಿದ್ದರು.  ವಿವೇಕ್ ಜನವರಿ 16ರಂದು ಜಾರ್ಜಿಯದ ಲಿಥೋನಿಯ ನಗರದ ನಿವಾಸಿಯಿಂದ ಕೊಲೆಯಾಗಿದ್ದ.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚೀನಾ | 100ಕ್ಕೂ ಹೆಚ್ಚು ಕಾರುಗಳ ನಡುವೆ ಸರಣಿ ಅಪಘಾತ

ಚೀನಾದ ಸುಝೌ ನಗರದ ಹಿಮಾವೃತ ಎಕ್ಸ್‌ಪ್ರೆಸ್‌ವೇನಲ್ಲಿ 100ಕ್ಕೂ ಹೆಚ್ಚು ಕಾರುಗಳು ಪರಸ್ಪರ...

‘ಹೇರ್‌ ಸ್ಟೈಲ್’ ಕಾರಣಕ್ಕೆ ಶಾಲೆಯಲ್ಲಿ ಕಪ್ಪು ವರ್ಣೀಯ ವಿದ್ಯಾರ್ಥಿಗೆ ಶಿಕ್ಷೆ; ಶಾಲೆಯ ನಡೆ ಎತ್ತಿಹಿಡಿದ ಕೋರ್ಟ್‌

ತನ್ನ ಕೂದಲು ವಿನ್ಯಾಸದ ಕಾರಣಕ್ಕಾಗಿ ಕಪ್ಪು ವರ್ಣೀಯ ವಿದ್ಯಾರ್ಥಿಗೆ ಹೈಸ್ಕೂಲ್‌ನಲ್ಲಿ ಶಿಕ್ಷಿಸಿರುವ...

ಯುಎಇ | ಅಬುಧಾಬಿಯಲ್ಲಿ ಮೊದಲ ಹಿಂದೂ ದೇವಾಲಯ ಲೋಕಾರ್ಪಣೆಗೊಳಿಸಿದ ಪ್ರಧಾನಿ ಮೋದಿ

ಯುನೈಟೆಡ್ ಅರಬ್ ಎಮಿರೇಟ್ಸ್‌(ಯುಎಇ)ಯ ಅಬುಧಾಬಿಯಲ್ಲಿ ನಿರ್ಮಿಸಲಾಗಿರುವ ಮೊದಲ ಹಿಂದೂ ದೇವಾಲಯವನ್ನು ಪ್ರಧಾನಿ...

ಅಮೆರಿಕ | ಭಾರತ ಮೂಲದ ದಂಪತಿ, ಇಬ್ಬರು ಅವಳಿ ಮಕ್ಕಳು ಅನುಮಾನಾಸ್ಪದ ಸಾವು

ಭಾರತೀಯ ಮೂಲದ ಕೇರಳದಿಂದ ವಲಸೆ ಹೋಗಿದ್ದ ದಂಪತಿ ಹಾಗೂ ಅವರ ಇಬ್ಬರು...