ಜಿಡಿಪಿ ಲೆಕ್ಕಾಚಾರದ ಎಡವಟ್ಟು: ಆರ್ಥಿಕತೆ ಮತ್ತು ನೀತಿಗಳ ಮೇಲೆ ಅದರ ಗಂಭೀರ ಪರಿಣಾಮ

Date:

ಇತ್ತೀಚೆಗೆ, ಸರ್ಕಾರವು ಜಿಡಿಪಿ ಅಂಕಿಅಂಶಗಳ ಹೊಸ ಸರಣಿಯನ್ನು ಬಿಡುಗಡೆ ಮಾಡಿದೆ. ಎರಡು ಕಾರಣಗಳಿಗಾಗಿ ಈ ಪರಿಷ್ಕರಣೆಯನ್ನು ಮಾಡಲಾಗಿದೆ.

- Advertisement -

ಮೊದಲನೆಯದಾಗಿ ಭಾರತದ ಆರ್ಥಿಕತೆಯಲ್ಲಿ ಅಪಾರ ಬದಲಾವಣೆಗಳಾಗಿವೆ. ಹಾಗಾಗಿ ವಿವಿಧ ಸರಕು ಮತ್ತು ಸೇವೆಗಳ ಪ್ರಾಮುಖ್ಯತೆ ಅಥವಾ ವೇಯ್‌ಟೇಜ್ ಅನ್ನು ನವೀಕರಿಸಬೇಕಿತ್ತು. ಈಗಿರುವ ವೇಯ್‌ಟೇಜ್ ಅನ್ನು 2011-12ರಲ್ಲಿ ನಿರ್ಧರಿಸಲಾಗಿತ್ತು. ಹಾಗಾಗಿ ಈ ಬದಲಾವಣೆಯನ್ನು ಎಂದೋ ಮಾಡಬೇಕಿತ್ತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಯೂರೋಪ್‌ | ಇಂಧನ ಬೆಲೆಯೇರಿಕೆ–ಬದುಕು ದುರ್ಭರ: ಜನಾಕ್ರೋಶಕ್ಕೆ ನಡುಗುತ್ತಿವೆ...

ಇಂಧನ ಬೆಲೆ ಏರಿಕೆ, ಕೈಗೆಟುಕದ ಮನೆಬಾಡಿಗೆ, ಕಡಿಮೆ ವೇತನ, ನಿರುದ್ಯೋಗದ ಆತಂಕ ಹಾಗೂ ಜನಕಲ್ಯಾಣ ಯೋಜನೆಗಳಿಗೆ ಅನುದಾನ ಕಡಿತದ ವಿರುದ್ಧ ಯೂರೋಪಿನ ಹಲವು ದೇಶಗಳಲ್ಲಿ ಜನಾಕ್ರೋಶ ಭುಗಿಲೆದ್ದಿದೆ. ಫ್ರಾನ್ಸ್‌ನಿಂದ ಇಟಲಿ, ಬೆಲ್ಜಿಯಂ, ಸ್ಪೇನ್...

ಬೆಳಗಾವಿ | ಅಲೆಮಾರಿಗಳಿಗೆ ಆಧಾರ್ ಕಾರ್ಡ್ ಸಮಸ್ಯೆ; ʼಈದಿನʼದ...

ಬೆಳಗಾವಿ ಜಿಲ್ಲೆಯ ಯರಗಟ್ಟಿ ಪಟ್ಟಣದಲ್ಲಿ ಸುಮಾರು 25ರಿಂದ 30 ವರ್ಷಗಳಿಂದ ವಾಸಿಸುತ್ತಿರುವ ಅಲೆಮಾರಿ ಸಮುದಾಯದವರ ಬದುಕಿನ ಕಥೆ ಕೇಳಿದರೆ ಎಂಥವರಿಗೂ ಕನಿಕರ ಬರುತ್ತದೆ. ಆಧಾರ್ ಕಾರ್ಡ್, ಪಡಿತರ ಚೀಟಿ ಸೇರಿದಂತೆ ಮೂಲಭೂತ ಸೌಲಭ್ಯಗಳಿಲ್ಲದೆ...

ಶಿವಮೊಗ್ಗ | ಜಿ.ಪಂ., ತಾ.ಪಂ. ಚುನಾವಣೆ: ಗ್ರಾಮೀಣ ರಾಜಕೀಯದಲ್ಲಿ...

ಶಿವಮೊಗ್ಗ ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಜಿಲ್ಲಾ ಪಂಚಾಯತಿ (ಜಿ.ಪಂ.) ಹಾಗೂ ತಾಲೂಕು ಪಂಚಾಯತಿ (ತಾ.ಪಂ.) ಚುನಾವಣೆಗಳ ಕುರಿತು ರಾಜಕೀಯ ಚರ್ಚೆಗಳು ಮತ್ತು ನಿರೀಕ್ಷೆಗಳು ಹೆಚ್ಚುತ್ತಿವೆ. ದೀರ್ಘಕಾಲದಿಂದ ಚುನಾಯಿತ ಪ್ರತಿನಿಧಿಗಳಿಲ್ಲದೆ ಆಡಳಿತ ನಡೆಯುತ್ತಿರುವ ಹಿನ್ನೆಲೆಯಲ್ಲಿ,...

ಎರಡನೆಯದಾಗಿ ಜಿಡಿಪಿಯನ್ನು ಲೆಕ್ಕ ಹಾಕುವ ವಿಧಾನದಲ್ಲಿದ್ದ ಕೆಲವು ಲೋಪದೋಷಗಳನ್ನು ಸರಿಪಡಿಸಬೇಕಾಗಿತ್ತು. ಈ ಹೊಸ ವಿಧಾನವನ್ನು ಜಾರಿಗೆ ತರುವ ಪ್ರಕ್ರಿಯೆಯಲ್ಲಿ ಎಲ್ಲರ ಸಲಹೆ-ಸೂಚನೆಗಳನ್ನು ಪಡೆಯಲಾಗಿದೆ. ಇದಕ್ಕಾಗಿ ಸಂಖ್ಯಾಶಾಸ್ತ್ರ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯವನ್ನು (MoSPI)ಮೆಚ್ಚಿಕೊಳ್ಳಬೇಕು. ಆದರೆ, ಹಳೆಯ ತಪ್ಪುಗಳನ್ನು ಪರಿಣಾಮಕಾರಿಯಾಗಿ ಸರಿಪಡಿಸಲಾಗಿದೆಯೇ ಎನ್ನುವುದು ಗೊತ್ತಾಗುವುದಕ್ಕೆ ಸಮಯಬೇಕು. ಇದು ಹೊಸ ಅಂಕಿಅಂಶಗಳ ಗುಣಮಟ್ಟ ಮತ್ತು ಅವು ಎಷ್ಟು ನೈಜವಾಗಿವೆ ಎನ್ನುವುದನ್ನು ಸಂಪೂರ್ಣವಾಗಿ ಅವಲಂಬಿಸಿದೆ.

ಮೇಲ್ನೋಟಕ್ಕೆ ಕೆಲವು ಸುಧಾರಣೆಗಳಾಗಿರುವುದು ಸ್ಪಷ್ಟವಾಗಿ ಕಾಣುತ್ತದೆ. ಆದರೆ ಕೆಲವು ವಿಚಿತ್ರ ಸಂಗತಿಗಳು ಹಾಗೆ ಉಳಿದಿವೆ. ಉದಾಹರಣೆಗೆ: ಉತ್ಪಾದನಾ ವಲಯದ ಸರಕುಗಳ ಹಣದುಬ್ಬರವು ಸತತ 10 ತ್ರೈಮಾಸಿಕಗಳು ಋಣಾತ್ಮಕವಾಗಿಯೇ ಇದೆ. ಇದು ಆಶ್ಚರ್ಯ. ಇದರಿಂದಾಗಿ ಉತ್ಪಾದನ ವಲಯದ ನೈಜ ಬೆಳವಣಿಗೆಯ ದರದಲ್ಲಿ ಅನಿರೀಕ್ಷಿತವಾದ ಏರಿಕೆಯನ್ನು ಕಾಣುತ್ತಿದ್ದೇವೆ.

ಅಷ್ಟೇ ಅಲ್ಲದೆ ಆಮದು ಬೆಲೆಗಳನ್ನು ಸರಿದೂಗಿಸುವುದಕ್ಕಾಗಿ ಬಳಸಿರುವ ‘ಇಂಪೋರ್ಟ್ ಡಿಪ್ಲೇಟರ್‌ಗಳು’ ಹಿಂದೆ ಬಳಸಿ ಡೆಪ್ಲೇಟರುಗಳಿಗಿಂತ ಸಂಪೂರ್ಣ ಭಿನ್ನವಾಗಿವೆ. ಇದರಿಂದಾಗ ನೈಜ ಆಮದು ಬೆಳವಣಿಗೆಯ ದರದಲ್ಲಿ ವಿಪರೀತ ಬದಲಾವಣೆಯನ್ನು ನೋಡುತ್ತಿದ್ದೇವೆ.

Screenshot 2026 04 20 172228

ಆದರೆ ಈ ಹೊಸ ವಿಧಾನವನ್ನು ವಿವರವಾಗಿ ಪರಿಶೀಲಿಸುವ ಮೊದಲು, ಹಳೆಯ ವಿಧಾನದಲ್ಲಿದ್ದ ಸಮಸ್ಯೆಗಳೇನು? ಅವು ಅಷ್ಟೊಂದು ಗಂಭೀರವಾಗಿದ್ದವೇ? ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ನಮ್ಮ ಹೊಸ ಸಂಶೋಧನಾ ಪ್ರಬಂಧದಲ್ಲಿ ನಾವು ಈ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಪ್ರಯತ್ನಿಸಿದ್ದೇವೆ.

ಈ ಸಮಸ್ಯೆಗಳು ಎಂದಿನಿಂದ ಶುರುವಾಯ್ತು ಅಂತ ನೋಡೋಣ. ಸುಮಾರು ಹತ್ತು ವರ್ಷಗಳ ಹಿಂದಿನವರೆಗೂ, ಜಿಡಿಪಿ ಅಂಕಿ-ಅಂಶಗಳಿಗೂ ಮತ್ತು ದೇಶದ ಆರ್ಥಿಕತೆಯ ಆರೋಗ್ಯವನ್ನು ಅಳೆಯಲು ಅರ್ಥಶಾಸ್ತ್ರಜ್ಞರು ಬಳಸುವ ಸಾಮಾನ್ಯ ಸೂಚಕಗಳ ನಡುವೆ ನಿಖಟ ಸಂಬಂಧವಿತ್ತು. ರಫ್ತು, ಬ್ಯಾಂಕ್ ಸಾಲಗಳು, ತೆರಿಗೆ ಸಂಗ್ರಹ, ವಿದ್ಯುತ್ ಬಳಕೆ, ಮಾರಾಟದ ಪ್ರಮಾಣ ಮತ್ತು ಕೈಗಾರಿಕಾ ಉತ್ಪಾದನಾ ಸೂಚ್ಯಂಕ ಇವೆಲ್ಲವೂ ಜಿಡಿಪಿಯ ಜೊತೆಜೊತೆಯಾಗಿಯೇ ಸಾಗುತ್ತಿದ್ದವು. ಅಂದರೆ ಜಿಡಿಪಿಯಲ್ಲಿ ಹೆಚ್ಚಳವಾಗಿದ್ದರೆ, ಇವುಗಳಲ್ಲೂ ಹೆಚ್ಚಳವಾಗಿರುತ್ತಿತ್ತು. ಆದರೆ, ಜನವರಿ 2015ರಲ್ಲಿ ಜಿಡಿಪಿ ಲೆಕ್ಕ ಹಾಕುವ ಪದ್ಧತಿಯನ್ನು ಸಂಪೂರ್ಣವಾಗಿ ಬದಲಿಸಿದ ನಂತರದ ದಿನಗಳಲ್ಲಿ ಈ ಸಂಬಂಧ ಕಡಿದುಹೋಯಿತು.

ಇದಕ್ಕೆ ಮುಖ್ಯವಾದ ಕಾರಣವೆಂದರೆ ಬಳಸಿದ ಮಾಹಿತಿ ಮೂಲಗಳು ಸಮರ್ಪಕವಾಗಿರಲಿಲ್ಲ. ವಿಶೇಷವಾಗಿ, ಅನೌಪಚಾರಿಕ ವಲಯದ ಸಾಧನೆಯನ್ನು ಅಳೆಯಲು ಔಪಚಾರಿಕ ವಲಯದ (Formal sector) ದತ್ತಾಂಶಗಳನ್ನು ಆಧಾರವಾಗಿಟ್ಟುಕೊಳ್ಳಲಾಯಿತು. ಪರಿಸ್ಥಿತಿ ಸಾಮಾನ್ಯವಾಗಿರುವಾಗ ಈ ರೀತಿ ಮಾಡುವುದು ಒಂದು ಮಟ್ಟಿಗೆ ಸರಿಯಿರಬಹುದು.

ಆದರೆ 2015ರ ನಂತರ ಅನೌಪಚಾರಿಕ ವಲಯವು ಮೂರು ಭೀಕರ ಆಘಾತಗಳಿಗೆ ಒಳಗಾಗಿತ್ತು. ನೋಟು ಅಮಾನೀಕರಣ, ಜಿಎಸ್‌ಟಿ ಜಾರಿ ಹಾಗೂ ಕೋವಿಡ್ ಸಾಂಕ್ರಾಮಿಕ ಈ ಮೂರು ಆಘಾತಗಳಿಂದ ಅನೌಪಚಾರಿಕ ವಲಯಕ್ಕೆ ತೀವ್ರ ಹೊಡೆತ ಬಿದ್ದಿತ್ತು. ಆದರೆ ಹೊಸ ಲೆಕ್ಕಾಚಾರದ ಪದ್ಧತಿಯಲ್ಲಿ ಅನೌಪಚಾರಿಕ ವಲಯದ ಬಗ್ಗೆ ಮಾಹಿತಿ ಇಲ್ಲದ ಕಾರಣ ಬದಲಿಗೆ ಔಪಚಾರಿಕ ವಲಯದ ಮಾಹಿತಿಯನ್ನು ಬಳಸಿದ್ದರಿಂದ ಅನೌಪಚಾರಿಕ ವಲಯದ ಬೆಳವಣಿಗೆ ವಾಸ್ತವಕ್ಕಿಂತ ಹೆಚ್ಚಾಗಿ ಕಾಣಿಸಿಕೊಂಡಿತು.. 2011-12ರಲ್ಲಿ ಅನೌಪಚಾರಿಕ ಉದ್ಯಮಗಳು ಆರ್ಥಿಕತೆಯ ಶೇಕಡಾ 45ಕ್ಕಿಂತಲೂ ಹೆಚ್ಚಿದ್ದರಿಂದ, ಇದೊಂದು ದೊಡ್ಡ ಸಮಸ್ಯೆಯಾಯಿತು. ಇನ್ನೊಂದು ಮುಖ್ಯವಾದ ಸಮಸ್ಯೆ ಅಂದ್ರೆ, ಹಣದುಬ್ಬರದ ಪರಿಣಾಮವನ್ನು ತೆಗೆಯಲು ಸರಿಯಾದ ಡಿಪ್ಲೇಟರುಗಳನ್ನು ಬಳಸದೇ ಇದ್ದುದು. ‘ಡಬಲ್ ಡಿಪ್ಲೇಷನ್’ ಬಳಸದೇ ಇದ್ದ ಬಗ್ಗೆ ಈಗಾಗಲೇ ಸಾಕಷ್ಟು ಚರ್ಚೆಯಾಗಿದೆ. ಆದರೆ ಅದಕ್ಕಿಂತ ದೊಡ್ಡ ಸಮಸ್ಯೆಯೆಂದರೆ ಸೇವಾವಲಯದ ಉತ್ಪಾದನೆಯನ್ನು ಅಳೆಯಲು ಸಗಟು ಬೆಲೆ ಸೂಚ್ಯಂಕ ಬಳಸಿದ್ದು, ವಾಸ್ತವವಾಗಿ ಈ ಡಬ್ಲೂಪಿಐನಲ್ಲಿ ಸೇವೆಗಳ ನಿಖರವಾದ ಬೆಲೆ ತಿಳಿಯುವುದಿಲ್ಲ. ಕಳೆದ ಹತ್ತು ವರ್ಷಗಳಲ್ಲಿ ತೈಲ ಬೆಲೆಗಳು ತೀರಾ ಕಡಿಮೆಯಾದಾಗ ಡಬ್ಲ್ಯೂ ಪಿಐ ಕೂಡ ವಿಪರೀತ ಇಳಿದಿತ್ತು. ಇದರಿಂದ ಹಣದುಬ್ಬರದ ದರವೂ ಕಡಿಮೆ ಕಾಣುತ್ತಿತ್ತು. ಪರಿಣಾಮವಾಗಿ ನೈಜ ಆರ್ಥಿಕ ಬೆಳವಣಿಗೆ ವಾಸ್ತವಕ್ಕಿಂತ ಹೆಚ್ಚಾಗಿಯೇ ಕಂಡಿತು.

ಈ ತಪ್ಪುಗಳಿಂದಾಗಿ ದೊಡ್ಡ ಎಡವಟ್ಟುಗಳಾದವು. 2015ರ ಹೊಸ ಲೆಕ್ಕಾಚಾರದ ಪದ್ಧತಿಯನ್ನು 2011-12ರ ನಂತರದ ಅಂಕಿಅಂಶಗಳಿಗೆ ಮತ್ತು ಹಳೆಯ 2004-05ರವರೆಗಿನ ಅಂಕಿಅಂಶಗಳಿಗೆ ಅನ್ವಯಿಸಿದಾಗ, ಜಿಡಿಪಿ ಬೆಳವಣಿಗೆಯ ಅಂದಾಜಿನಲ್ಲಿ ಗಣನೀಯವಾದ ತಪ್ಪುಗಳಾದವು. 2011-12ರಿಂದ 2023-24ರ ವರೆಗಿನ 12 ವರ್ಷಗಳಲ್ಲಿ, ಭಾರತದ ಆರ್ಥಿಕ ಬೆಳವಣಿಗೆಯನ್ನು ಪ್ರತಿ ವರ್ಷ ಸರಾಸರಿ ಒಂದೂವರೆಯಿಂದ ಎರಡು ಪರ್ಸೆಂಟ್‌ನಷ್ಟು (1.5% – 2%) ಜಾಸ್ತಿ ಮಾಡಿ ತೋರಿಸಲಾಗಿದೆ. ಇದಕ್ಕೆ ತಪ್ಪು ಮಾಹಿತಿ ಒಂದು ಕಾರಣವಾದರೆ, ಬೆಲೆ ಏರಿಳಿತ ಅಳೆಯುವ ತಪ್ಪು ಪದ್ಧತಿ ಇನ್ನೊಂದು ಕಾರಣ. ಅಸಲಿಗೆ, ಆರ್ಥಿಕತೆ ಶೇ. 6ರಷ್ಟು ಬೆಳೆದಿದೆ ಅಂತ ನಾವು ಅಂದುಕೊಂಡಿದ್ದೆವು. ಆದರೆ ನಿಜವಾಗಿ ಅದು ಬೆಳೆದಿರುವುದು ಕೇವಲ ಶೇ. 4ರಿಂದ 4.5ರಷ್ಟು ಮಾತ್ರ. ಹಾಗಾಗಿ, ಭಾರತದ ನಿಜವಾದ ಬೆಳವಣಿಗೆಯ ನಿಜವಾದ ಸಾಮರ್ಥ್ಯವನ್ನು ನಾವು ಹೊಸದಾಗಿ ಲೆಕ್ಕಹಾಕಬೇಕಾಗಿದೆ.

Screenshot 2026 04 20 172311

ಆದರೆ ಅದಕ್ಕಿಂತ ಹಿಂದಿನ ವರ್ಷಗಳ ವಿಷಯದಲ್ಲಿ ಅಂದರೆ 2004-05 ರಿಂದ 2011-12ಕ್ಕೆ ಸಂಬಂಧಿಸಿದಂತೆ, ಹೊಸ ಲೆಕ್ಕಾಚಾರದ ಪದ್ಧತಿ ಉಲ್ಟಾ ಕೆಲಸ ಮಾಡಿದೆ! ಇಲ್ಲಿ ಅದು ಬೆಳವಣಿಗೆಯನ್ನು ಪ್ರತಿ ವರ್ಷ ಸರಾಸರಿ ಶೇಕಡ ಒಂದರಿಂದ ಒಂದೂವರೆಯಷ್ಟು (1-1.5%) ಕಡಿಮೆ ಮಾಡಿ ತೋರಿಸಿದೆ.

ಇದರ ಒಟ್ಟಾರೆ ಪರಿಣಾಮವೆಂದರೆ ಕಳೆದ 20 ವರ್ಷಗಳ ನಮ್ಮ ಆರ್ಥಿಕ ಬೆಳವಣಿಗೆ ಸಾಗಿರುವ ಹಾದಿಯೇ ನಮಗೆ ತಪ್ಪಾಗಿ ಕಾಣುತ್ತಿದೆ. 2000ರ ದಶಕದಲ್ಲಿ (2000-2010ರ ನಡುವೆ) ಭಾರತದ ಆರ್ಥಿಕತೆಯಲ್ಲಿ ಉತ್ತಮ ಪ್ರಗತಿಯಾಗಿತ್ತು (Boom). ನಂತರದ ದಿನಗಳಲ್ಲಿ ಅಷ್ಟೇ ತೀವ್ರವಾದ ಕುಸಿತವನ್ನು ಕಂಡಿತ್ತು. ಆದರೆ ಈಗ ನಮ್ಮ ಆರ್ಥಿಕತೆ ಕಂಡ ಏರಿಳಿತದ ಇತಿಹಾಸವನ್ನೇ ಅಳಿಸಿಹಾಕಿಬಿಟ್ಟಿದ್ದೇವೆ. ಬದಲಿಗೆ, ಭಾರತದ ಆರ್ಥಿಕತೆ ನಿರಂತರವಾಗಿ, ವೇಗವಾಗಿ ಬೆಳೆಯುತ್ತಿದೆ ಅನ್ನುವ ತಪ್ಪು ಚಿತ್ರವನ್ನು ಕಟ್ಟಿಕೊಡುತ್ತಿದ್ದೇವೆ.

ಅಂಕಿಅಂಶಗಳನ್ನು ಗಮನಿಸಿದರೆ ಸಮಸ್ಯೆ ಎಲ್ಲಿದೆ ಅನ್ನುವುದು ತಿಳಿಯುತ್ತದೆ. ಆರ್ಥಿಕತೆಯ ಮುಖ್ಯ ಸೂಚಕಗಳು 1990 ರಿಂದ 2000ರ ದಶಕದ ಆರಂಭದವರೆಗೆ ತೀವ್ರವಾಗಿ ಏರಿದವು. ಆದರೆ ನಂತರದ ದಿನಗಳಲ್ಲಿ ದಿಢೀರನೆ ಕುಸಿದು. 2005ಕ್ಕಿಂತ ಮೊದಲಿದ್ದ ಸ್ಥಿತಿಗಿಂತಲೂ ಕೆಳಕ್ಕೆ ಹೋದವು (ಚಿತ್ರದಲ್ಲಿರುವ ಬಾಣದ ಗುರುತುಗಳನ್ನು ನೋಡಿ). ಆದರೂ, ಸರ್ಕಾರದ ಅಧಿಕೃತ ಜಿಡಿಪಿ ಲೆಕ್ಕಾಚಾರಗಳು (ನೆರಳು ಮಾಡಿರುವ ಭಾಗ) ಮಾತ್ರ ಇಡೀ ಅವಧಿಯಲ್ಲಿ ಬೆಳವಣಿಗೆ ಸ್ಥಿರವಾಗಿದೆ ಎಂದು ಹೇಳುತ್ತಿದೆ.

ಚಿತ್ರ ನೋಡಿದರೆ, 2003ರಿಂದ 2010ರ ನಡುವೆ ಭಾರತದಲ್ಲಿ ಇಂಡಿಯಾ ಹೊಳೆಯುತ್ತಿದೆ ಅನ್ನುವ ಸಂಭ್ರಮ ಕಾಣಿಸುತ್ತಿಲ್ಲ. ಹೊಸ ಲೆಕ್ಕಾಚಾರ ಅಂತಹ ಚಿತ್ರ ಕೊಡುತ್ತಿದೆ. ಆದರೆ ಆ ಸಮಯದಲ್ಲಿ ಆರ್ಥಿಕತೆಯಲ್ಲಿ ತೀವ್ರವಾದ ವೇಗ ಮತ್ತು ಚೈತನ್ಯವನ್ನು ನೋಡಬಹುದಿತ್ತು ಅನ್ನುವುದು ವಾಸ್ತವ. ಇದು ಎಲ್ಲರಿಗೂ ಅನುಭವಕ್ಕೆ ಬರುತ್ತಿತ್ತು. ಅಷ್ಟೇ ಅಲ್ಲ, ದೇಶದ ಯಾವುದೇ ಪ್ರಮುಖ ಆರ್ಥಿಕ ಅಂಕಿಅಂಶಗಳನ್ನು ನೋಡಿದರೂ ಈ ಚೈತನ್ಯ ಎದ್ದು ಕಾಣುತ್ತಿತ್ತು. ಅಷ್ಟೇ ಅಲ್ಲ, ಜಾಗತಿಕ ಆರ್ಥಿಕ ಕುಸಿತದ ನಂತರದ ಮಂದಗತಿಯಾಗಲಿ, ಬ್ಯಾಂಕುಗಳ ಸಾಲದ ಸಮಸ್ಯೆಗಳಾಗಲಿ ಅಥವಾ 2015ರ ನಂತರದ ನಾಲ್ಕು ದೊಡ್ಡ ಹೊಡೆತಗಳಾದ ನೋಟು ಅಮಾನೀಕರಣ, ಜಿಎಸ್‌ಟಿ, ಐಎಲ್‌ಎಫ್‌ಎಸ್ ಸಾಲದ ಬಿಕ್ಕಟ್ಟು ಮತ್ತು ಕೋವಿಡ್ ಇವು ಯಾವುದರ ಪ್ರಭಾವವೂ ಸರ್ಕಾರದ ಲೆಕ್ಕದಲ್ಲಿ ಕಾಣುತ್ತಿಲ್ಲ. ಸರ್ಕಾರದ ಅಧಿಕೃತ ಅಂಕಿಅಂಶಗಳನ್ನು ನೋಡಿದರೆ ಕಳೆದ 20 ವರ್ಷಗಳು ಬರೀ ‘ಅಚ್ಛೇ ದಿನಗಳೇ’ ಆಗಿದ್ದವು ಮತ್ತು ಆರ್ಥಿಕತೆ ನಿರಂತರ ಶೇ. 6-7ರಷ್ಟು ಬೆಳೆಯುತ್ತಲೇ ಇತ್ತು ಎಂದು ಭಾಸವಾಗುತ್ತದೆ.

ಈ ತಪ್ಪು ಲೆಕ್ಕಾಚಾರದಿಂದಾಗಿ ನಮ್ಮ ಆರ್ಥಿಕ ನೀತಿಗಳನ್ನು ರೂಪಿಸೋದು ತುಂಬಾ ಕಷ್ಟವಾಯಿತು. ಕೆಲವು ಸಲ ದೇಶದ ಆರ್ಥಿಕತೆ ದುರ್ಬಲವಾಗಿದ್ದರೂ ಅಂಕಿಅಂಶಗಳು ಮಾತ್ರ ‘ಎಲ್ಲಾ ಸ್ಟ್ರಾಂಗ್ ಆಗಿದೆ’ ಅಂತ ತಪ್ಪು ಸೂಚನೆ ಕೊಡುತ್ತಿದ್ದವು. ಇನ್ನು ಕೆಲವು ಸಲ ಬೆಳವಣಿಗೆ ಚೆನ್ನಾಗಿದ್ದರೂ ನೀತಿಗಳನ್ನು ಸಡಿಲಿಸಬೇಕು ಎಂದು ಸೂಚಿಸುತ್ತಿದ್ದವು. ಇದರಿಂದಾಗಿ ಮುಖ್ಯವಾದ ಸುಧಾರಣೆಗಳನ್ನು ತರಬೇಕೆಂಬ ತುರ್ತು ಹೋಗಿಯೇ ಬಿಟ್ಟಿತು. ವಿಶೇಷವಾಗಿ 2014-15 ಮತ್ತು 2019-20ರ ನಡುವೆ ಇಂತಹದೊಂದು ಉದಾಸೀನತೆ ಕಾಣಿಸಿಕೊಂಡಿತು. ನಮ್ಮ ದೇಶ ಜಗತ್ತಿನಲ್ಲೇ ಅತಿ ವೇಗವಾಗಿ ಬೆಳೆಯುತ್ತಿರುವಾಗ, ಈಗಿರೋ ನಿಯಮಗಳನ್ನು ಬದಲಿಸೋ ಅಗತ್ಯ ಏನಿದೆ ಅನ್ನುವ ತಾತ್ಸಾರ ಬಂದುಬಿಟ್ಟಿತು.

ಇತ್ತೀಚಿನ ವರ್ಷಗಳಲ್ಲಿ ಎಲ್ಲರಿಗೂ ಕೆಲವು ಒಗಟುಗಳು ಕಾಡುತ್ತಿವೆ. ಒಂದು ವೇಳೆ ದೇಶದ ಆರ್ಥಿಕತೆ ಅಷ್ಟು ಬಲವಾಗಿದ್ದರೆ, ಖಾಸಗಿ ಕಂಪನಿಗಳು ಯಾಕೆ ಹೊಸದಾಗಿ ಬಂಡವಾಳ ಹೂಡುತ್ತಿಲ್ಲ? ವಿದೇಶಿ ಹೂಡಿಕೆ ಯಾಕೆ ಕಡಿಮೆ ಆಗ್ತಿದೆ? ಜನರ ಕೂಲಿ ದರ, ಉದ್ಯೋಗದ ಬೆಳವಣಿಗೆ ಯಾಕೆ ನಿಧಾನವಾಗಿದೆ? ಜಗತ್ತಿನಲ್ಲೇ ನಾವು ಅತಿ ವೇಗವಾಗಿ ಬೆಳೆಯುತ್ತಿರುವ ರಾಷ್ಟವಾಗಿದ್ದರೆ ರೂಪಾಯಿ ಬೆಲೆ ಯಾಕೆ ಕುಸಿಯುತ್ತಿದೆ? ಈ ಪ್ರತಿಯೊಂದು ಪ್ರಶ್ನೆಗೂ ಸಂಕೀರ್ಣವಾದ ಹಾಗು ವಿಭಿನ್ನ ವಿವರಣೆಗಳನ್ನು ನೀಡಬಹುದು. ಆದರೆ ಪರಿಹಾರಗಳು ಯಾವಾಗಲೂ ಸರಳವಾಗಿರುತ್ತದೆ ಅನ್ನುವ ಒಕಾಮ್ಸ್ ರೇಜರ್ ಅನ್ನೋ ಸೂತ್ರವನ್ನು ಅನ್ವಯಿಸುವುದಾದರೆ ಎಲ್ಲಾ ಪ್ರಶ್ನೆಗಳಿಗೆ ಇರೋ ಒಂದೆ ಸರಳ ಉತ್ತರವೆಂದರೆ; ನಮ್ಮ ಬೆಳವಣಿಗೆ ನಮಗೆ ಕಣ್ಣಿಗೆ ಕಾಣಿಸುತಿರುವಷ್ಟು ಸ್ಟ್ರಾಂಗ್ ಆಗಿಲ್ಲ, ಅಷ್ಟೆ!

ಜಗತ್ತಿನಲ್ಲೇ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಗಳಲ್ಲಿ ಭಾರತವೂ ಒಂದು ಅಂತ ಹೆಮ್ಮೆ ಪಡುತ್ತಿದ್ದೇವೆ. ಐಎಂಎಫ್ ಲೆಕ್ಕದ ಪ್ರಕಾರ, 2011ರಿಂದ 2023ರ ನಡುವೆ ಭಾರತ ನಾಲ್ಕನೇ ಅತಿ ವೇಗದ ಆರ್ಥಿಕತೆಯಾಗಿತ್ತು. ಈಗ ನಾವು ಮಾಡಿರೋ ಈ ಹೊಸ ಲೆಕ್ಕದ ಪ್ರಕಾರ ನೋಡಿದ್ರೂ, ಅತಿ ವೇಗವಾಗಿ ಬೆಳೆಯುತ್ತಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ ಮೊದಲ 7 ಅಥವಾ 8ನೇ ಸ್ಥಾನದಲ್ಲಿ ಇದ್ದೇ ಇರುತ್ತೆ. ನಮ್ಮ ದೇಶದ ಬಗ್ಗೆ ಹೆಮ್ಮೆ ಪಡೋಕೆ ನಮಗೆ ಸಾವಿರ ಕಾರಣಗಳಿವೆ. ಅದಕ್ಕೆ ಇಂತಹ ತಪ್ಪಾದ ಅಂಕಿಅಂಶಗಳ “ಊರುಗೋಲು’ ಬೇಕಿಲ್ಲ.

ಈ ವಿಶ್ಲೇಷಣೆಯನ್ನು ಮಾಡುವಾಗ ನಮಗೆ ಸರ್ಕಾರದ ಸಾಂಖ್ಯಿಕ ಇಲಾಖೆ (MoSPI) ಮಾಡುತ್ತಿರುವ ಕೆಲಸದ ಬಗ್ಗೆ ಅಪಾರ ಮೆಚ್ಚುಗೆ ಇದೆ. ಹಾಗೆಯೇ ನಮ್ಮ ಈ ವಿಶ್ಲೇಷಣೆ ಸಾಂಖ್ಯಿಕ ಇಲಾಖೆಯ ಕೆಲಸಕ್ಕೆ ಪೂರಕವಾಗಿಯೂ ಇದೆ. ಮೋಸ್ಪಿಯ ಕೆಲಸಕ್ಕೆ ಮೆಚ್ಚುಗೆ ಯಾಕೆಂದರೆ ನಮ್ಮನ್ನು ಸೇರಿದಂತೆ ಹಲವು ತಜ್ಞರು ತೋರಿಸಿದ್ದ ಸಮಸ್ಯೆಗಳನ್ನು ಸರಿಪಡಿಸಲು ಮೋಸ್ಸಿ ಪ್ರಾಮಾಣಿಕವಾದ ಪ್ರಯತ್ನ ಮಾಡಿದೆ. ನಮ್ಮ ವಿಶ್ಲೇಷಣೆ ಮೋಸ್ಪಿಯ ಕೆಲಸಕ್ಕೆ ಪೂರಕ ಯಾಕೆಂದರೆ, ಸರ್ಕಾರದ ಹೊಸ ವಿಧಾನ ಭವಿಷ್ಯದ ವರ್ಷಗಳ ಅಂದಾಜಿಗೆ ಅನ್ವಯವಾಗುತ್ತದೆ. ನಮ್ಮ ಸಂಶೋಧನೆಯು ಹಳೆಯ ಕಾಲದ ತಪ್ಪುಗಳನ್ನು ಸರಿಪಡಿಸಿ ಸರಿಯಾದ ಇತಿಹಾಸವನ್ನು ದಾಖಲಿಸಲು ನೆರವಾಗುತ್ತದೆ. ಮುಂದಿನ ದಿನಗಳಲ್ಲಿ MoSPI ಇಲಾಖೆಯು ಕಳೆದ ಒಂದು ಅಥವಾ ಎರಡು ದಶಕಗಳ ಹಳೆಯ ಲೆಕ್ಕಗಳನ್ನು ಮತ್ತೆ ಸರಿಪಡಿಸಲು ಮುಂದಾದಾಗ, ನಮ್ಮ ಈ ಸಂಶೋಧನೆಯು ಅವರಿಗೆ ಒಂದು ಸೂಕ್ತ ಅಳತೆಗೋಲು ಅಥವಾ ಮಾರ್ಗದರ್ಶಿಯಂತೆ ಇರಲಿದೆ.

ಹಳೆಯ ಕಾಲದ ಈ ಗೊಂದಲದ ಮಂಜು ಸರಿದು, ಮುಂದೆ ಆರ್ಥಿಕತೆಯ ಹಾದಿಯಲ್ಲಿ ಸ್ಪಷ್ಟವಾದ ಬೆಳಕು ಕಾಣುತ್ತದೆ ಎಂಬ ಭರವಸೆ ನಮ್ಮದು.

ChatGPT Image Jan 14 2026 05 19 46 PM 2

ಆರ್ಥಿಕತೆಯ ಕುರಿತು, ಅರ್ಥಶಾಸ್ತ್ರದ ಕುರಿತು ಮತ್ತು ಈ ವಿಷಯದಲ್ಲಿ ಜಗತ್ತಿನಲ್ಲಿ ನಡೆಯುವ ಹಲವಾರು ವಿದ್ಯಮಾನಗಳ ಕುರಿತು ಈದಿನ.ಕಾಮ್‌ನಲ್ಲಿ ಪ್ರಕಟವಾಗುತ್ತಿರುವ ಈ ಬರೆಹಗಳು ಮೂಲದಲ್ಲಿ ಡಾ.ಟಿ.ಎಸ್.ವೇಣುಗೋಪಾಲ್‌ ಮತ್ತು ಡಾ.ಶೈಲಜಾ ಅವರು ಹೊರತರುತ್ತಿರುವ ʼಅರ್ಥʼ ಎಂಬ ಇ-ಮ್ಯಾಗಜೀನ್‌ನಲ್ಲಿ ಪ್ರಕಟವಾದಂಥವು. ಇವುಗಳನ್ನು ನಮ್ಮಲ್ಲಿ ಪ್ರಕಟಿಸಲು ಅನುಮತಿ ಕೊಟ್ಟಿರುವ ಅವರಿಗೆ ಹೃತ್ಪೂರ್ವಕ ಧನ್ಯವಾದಗಳು. ಮೂಲ ಲೇಖನಗಳ ಜೊತೆಗೆ ಅವರ ಕೆಲವು ಪುಸ್ತಕಗಳನ್ನು ನೇರವಾಗಿ ಓದಲು ಬಯಸುವವರು ಇಲ್ಲಿ ಕ್ಲಿಕ್ ಮಾಡಿ.

https://Lokayatha.com

lokayatha logo 220x67 1
lokayatha.com
Website |  + posts

ಅರ್ಥಶಾಸ್ತ್ರವನ್ನು ಕುರಿತು ಪ್ರಕಟವಾಗಿರುವ ಬರಹಗಳು ಇಲ್ಲವೆ.

ಪೋಸ್ಟ್ ಹಂಚಿಕೊಳ್ಳಿ:

lokayatha.com
lokayatha.comhttps://lokayatha.com/
ಅರ್ಥಶಾಸ್ತ್ರವನ್ನು ಕುರಿತು ಪ್ರಕಟವಾಗಿರುವ ಬರಹಗಳು ಇಲ್ಲವೆ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಆರ್ಥಿಕ ಬೆಳವಣಿಗೆ: ಟ್ರಂಪೋನಾಮಿಕ್ಸ್‌ ವೈಫಲ್ಯ

ಡೊನಾಲ್ಡ್ ಟ್ರಂಪ್ ಎರಡನೇ ಬಾರಿಗೆ ಅಧಿಕಾರಕ್ಕೆ ಬಂದು ಒಂದು ವರ್ಷಕ್ಕೂ ಹೆಚ್ಚು...

ಯುದ್ಧದ ಆರ್ಥಿಕ ಮತ್ತು ರಾಜಕೀಯ ತಲ್ಲಣಗಳು

ಅಲೆಕ್ಸಾಂಡರ್ ಪೋಪ್ ಅವರು ಹೇಳಿದ್ದು ಸರಿ. "ತಪ್ಪು ಮಾಡುವುದು ಮನುಷ್ಯ ಸಹಜ...

ಕನಿಷ್ಠ ಕೂಲಿ ಖಾತ್ರಿಗೆ ಕಳೆದು ಹೋದ ಅವಕಾಶ

ಕಳೆದ ಕೆಲವು ತಿಂಗಳುಗಳಿಂದ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ...

ಸೀಬೇ ನಿನ್ನಂಡ್ರೆ ನಂಗ್ಟಲು ಇಷ್ಟ

ನಾನು ಸಾಹಸದ ಕಥೆಗಳನ್ನೇ ಓದುತ್ತಾ ಪಟ್ಟಣದಲ್ಲಿ ಬೆಳೆದ ಹುಡುಗ. ನನಗೆ ಮರ...