3,991 ಕಾನ್‌ಸ್ಟೆಬಲ್ ಹುದ್ದೆಗೆ 4.54 ಲಕ್ಷ ಅರ್ಜಿ; ಪಿಎಚ್‌.ಡಿ, ಎಂಜಿನಿಯರ್‌ ಪದವೀಧರರೂ ಸ್ಪರ್ಧೆ

Date:

ಕರ್ನಾಟಕ ಪೊಲೀಸ್ ಇಲಾಖೆಯ 3,991 ನಾಗರಿಕ (ಸಿವಿಲ್) ಪೊಲೀಸ್ ಕಾನ್‌ಸ್ಟೆಬಲ್ ಹುದ್ದೆಗಳ ನೇಮಕಾತಿಗೆ ಭಾರೀ ಪೈಪೋಟಿ ನಡೆಸಿದೆ. ಒಟ್ಟು 4,54,536 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ. ಆಗಸ್ಟ್‌ 2ರಂದು ನಡೆಯಲಿರುವ ಲಿಖಿತ ಪರೀಕ್ಷೆಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ನಡೆಸಲಿದೆ.

- Advertisement -

ಒಟ್ಟು 3,991 ಹುದ್ದೆಗಳ ಪೈಕಿ 3,395 ಹುದ್ದೆಗಳು ಕಲ್ಯಾಣ ಕರ್ನಾಟಕೇತರ (NKK) ಪ್ರದೇಶಕ್ಕೆ ಹಾಗೂ 596 ಹುದ್ದೆಗಳು ಕಲ್ಯಾಣ ಕರ್ನಾಟಕ (HK) ಪ್ರದೇಶಕ್ಕೆ ಮೀಸಲಾಗಿವೆ. ಮೂಲಗಳ ಪ್ರಕಾರ, ಕಲ್ಯಾಣ ಕರ್ನಾಟಕೇತರ ಪ್ರದೇಶದಲ್ಲಿ 3,77,861 ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದರೆ, ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ 76,675 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ. ಪರೀಕ್ಷೆಗಾಗಿ ಕಲ್ಯಾಣ ಕರ್ನಾಟಕೇತರ ಭಾಗದಲ್ಲಿ 884 ಪರೀಕ್ಷಾ ಕೇಂದ್ರಗಳು ಹಾಗೂ ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ 186 ಪರೀಕ್ಷಾ ಕೇಂದ್ರಗಳನ್ನು ಗುರುತಿಸಲಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಟಾಟಾ ಸನ್ಸ್ ಬೋರ್ಡ್ ರೂಮ್ ಕಲಹದ ಆಳ ಅಗಲವೇನು...

ಭಾರತದ ಭಾರೀ ಉದ್ಯಮ ಬ್ರ್ಯಾಂಡ್‌ಗಳಲ್ಲಿ ಒಂದು ಟಾಟಾ. ಉಪ್ಪಿನಿಂದ ಹಿಡಿದು ಉಕ್ಕು, ಕಾರು, ಐಟಿ, ಹೋಟೆಲ್, ವಿಮಾನಯಾನ, ಎಲೆಕ್ಟ್ರಿಕ್ ವಾಹನ, ಈಗ ಸೆಮಿಕಂಡಕ್ಟರ್‌ವರೆಗೆ ಟಾಟಾ ಸಾಮ್ರಾಜ್ಯ ವ್ಯಾಪಿಸಿದೆ. ಆದರೆ, ಈಗ ಇದೇ ಟಾಟಾ ಸಾಮ್ರಾಜ್ಯದ...

ESA ತೂಗುಗತ್ತಿ: ಕಸ್ತೂರಿ ರಂಗನ್ ವರದಿ ಕುರಿತು ಅರಣ್ಯ...

“ಗ್ರಾಮದ ಕನಿಷ್ಠ 20 ಪ್ರತಿಶತದಷ್ಟು ಪ್ರದೇಶವು ‘ಪರಿಸರ ಸೂಕ್ಷ್ಮ ಪ್ರದೇಶ’ (ESA) ಎಂದು ಕಂಡುಬಂದರೆ, ಉಳಿದ 80% ಪ್ರದೇಶ ನಗರೀಕರಣಗೊಂಡಿದ್ದರೂ ಇಡೀ ಗ್ರಾಮವನ್ನು ESA ಎಂದು ಪರಿಗಣಿಸುವ ನೀತಿಯನ್ನು ಕಸ್ತೂರಿ ರಂಗನ್ ವರದಿ...

ರಾಮದುರ್ಗ, ಸವದತ್ತಿ ಬರ ಘೋಷಣೆಗೆ ರೈತರ ಆಗ್ರಹ: 10...

"ಬರಪೀಡಿತ ತಾಲೂಕು ಘೋಷಣೆಯಾಗುತ್ತದೆಂಬ ವಿಶ್ವಾಸದಲ್ಲಿ ಗ್ರೌಂಡ್ ಟ್ರೂಥಿಂಗ್ ಮಾಡಲು ಸಿದ್ಧರಾಗಿದ್ದೆವು. ಆದರೆ ಅದು ಆಗಿಲ್ಲ. ಬರಪೀಡಿತ ತಾಲೂಕು ಎಂದು ಘೋಷಣೆ ಮಾಡಲು ಇನ್ನೂ ಅವಕಾಶವಿದೆ" ಎಂದು ಕೃಷಿ ಅಧಿಕಾರಿಗಳು ಹೇಳಿದರು. ಮುಂಗಾರು ಆರಂಭದಲ್ಲಿ ಉತ್ತಮ...

ಇದರೊಂದಿಗೆ, ಕರ್ನಾಟಕ ರಾಜ್ಯ ಮೀಸಲು ಪೊಲೀಸ್ (KSRP), ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಪಡೆ (KSISF), ವಿಶೇಷ ಮೀಸಲು ಪೊಲೀಸ್ ಪಡೆ, ನಗರ ಸಶಸ್ತ್ರ ಮೀಸಲು ಹಾಗೂ ಜಿಲ್ಲಾ ಸಶಸ್ತ್ರ ಮೀಸಲು ಪಡೆಗಳಲ್ಲಿ 3,934 ಕಾನ್‌ಸ್ಟೆಬಲ್ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯೂ ಆರಂಭಗೊಂಡಿದ್ದು, ಆ ಹುದ್ದೆಗಳ ಪರೀಕ್ಷೆಗಳೂ ಶೀಘ್ರದಲ್ಲೇ ನಡೆಯಲಿವೆ. ಈ ಮೂಲಕ ರಾಜ್ಯ ಸರ್ಕಾರವು ಒಟ್ಟಾರೆ 7,925 ಕಾನ್‌ಸ್ಟೆಬಲ್ ಹುದ್ದೆಗಳ ಭರ್ತಿಗೆ ನೇಮಕಾತಿ ಪ್ರಕ್ರಿಯೆ ಆರಂಭಿಸಿದೆ.

ಸಿವಿಲ್ ಪೊಲೀಸ್ ಕಾನ್‌ಸ್ಟೆಬಲ್ ಹುದ್ದೆಗೆ ಪಿಯುಸಿ ಕನಿಷ್ಠ ಶೈಕ್ಷಣಿಕ ಅರ್ಹತೆ ನಿಗದಿಪಡಿಸಲಾಗಿದ್ದರೂ, ಪ್ರತಿ ನೇಮಕಾತಿಯಲ್ಲೂ ಪದವೀಧರರು, ಸ್ನಾತಕೋತ್ತರ ಪದವೀಧರರು, ಎಂಜಿನಿಯರ್‌ಗಳು ಹಾಗೂ ಪಿಎಚ್‌ಡಿ ಪದವೀಧರರು ಸಹ ಅರ್ಜಿ ಸಲ್ಲಿಸುತ್ತಿರುವುದು ಗಮನಾರ್ಹವಾಗಿದೆ.

ಇದನ್ನೂ ಓದಿ: ವಿದ್ಯಾರ್ಥಿಗಳಿಗೆ ಗುಂಡಿಕ್ಕುವ ಹೇಳಿಕೆ ಖಂಡನೀಯ; ಮೋಹನ್‌ದಾಸ್ ವಿರುದ್ಧ ಎಫ್‌ಐಆರ್‌ಗೆ AIDWA ಆಗ್ರಹ

ಸರ್ಕಾರಿ ಉದ್ಯೋಗದ ಮೇಲಿನ ಹೆಚ್ಚುತ್ತಿರುವ ಆಸಕ್ತಿ ಹಾಗೂ ಉತ್ತಮ ವೇತನ-ಸೌಲಭ್ಯಗಳಿಂದ ನಗರ, ಪಟ್ಟಣ ಮತ್ತು ಗ್ರಾಮೀಣ ಪ್ರದೇಶಗಳ ವಿದ್ಯಾವಂತ ಯುವಕರು ಕೂಡ ಕಾನ್‌ಸ್ಟೆಬಲ್ ಹುದ್ದೆಗಳನ್ನು ಆಯ್ಕೆ ಮಾಡುತ್ತಿದ್ದಾರೆ ಎಂದು ನಿವೃತ್ತ ಐಪಿಎಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಲಿಖಿತ ಪರೀಕ್ಷೆಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳು ನಂತರ ದೈಹಿಕ ಗುಣಮಟ್ಟ (PMT) ಮತ್ತು ದೈಹಿಕ ಸಹಿಷ್ಣುತೆ (ET) ಪರೀಕ್ಷೆಗಳಿಗೆ ಹಾಜರಾಗಬೇಕು. ಬಳಿಕ ವೈದ್ಯಕೀಯ ಪರೀಕ್ಷೆ ನಡೆಸಲಾಗುತ್ತದೆ. ಅಂತಿಮ ಹಂತದಲ್ಲಿ ಜಾತಿ ಮತ್ತು ಆದಾಯ ಪ್ರಮಾಣಪತ್ರಗಳ ಪರಿಶೀಲನೆ ನಡೆಯಲಿದ್ದು, ಜಿಲ್ಲಾಧಿಕಾರಿ ನೇತೃತ್ವದ ಜಿಲ್ಲಾ ಸಮಿತಿಯು ಈ ಪ್ರಕ್ರಿಯೆ ಪೂರ್ಣಗೊಳಿಸಲಿದೆ. ಪ್ರಮಾಣಪತ್ರಗಳನ್ನು ತಹಶೀಲ್ದಾರ್ ನೀಡಲಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಸವನ ಬಾಗೇವಾಡಿ | ಕನಿಷ್ಠ ವೇತನ ಜಾರಿಗೆ ಒತ್ತಾಯಿಸಿ ಪತ್ರ ಚಳವಳಿ

ಶಾಸನಬದ್ಧವಾಗಿ ನಿಗದಿಪಡಿಸಿರುವ ಪರಿಷ್ಕೃತ ಕನಿಷ್ಠ ವೇತನವನ್ನು ಕೂಡಲೇ ಜಾರಿಗೊಳಿಸುವಂತೆ ಒತ್ತಾಯಿಸಿ ಕರ್ನಾಟಕ...

ನಿಠಾರಿ ಸರಣಿ ಹತ್ಯೆ ಪ್ರಕರಣ: ಖುಲಾಸೆಯಾಗಿದ್ದ ಸುರೇಂದ್ರ ಕೋಲಿ ಅನುಮಾನಾಸ್ಪದ ಸಾವು

ದೇಶವನ್ನೇ ಬೆಚ್ಚಿಬೀಳಿಸಿದ್ದ ಭೀಕರ ನೋಯ್ಡಾದ ನಿಠಾರಿ ಸರಣಿ ಹತ್ಯೆ ಪ್ರಕರಣದಲ್ಲಿ ಸಾಕ್ಷ್ಯಾಧಾರಗಳ...

ವಿಜಯಪುರ | ಯೋಗದಿಂದ ದೈಹಿಕ, ಮಾನಸಿಕ ಆರೋಗ್ಯ ವೃದ್ಧಿ: ಸುನೀಲಗೌಡ ಪಾಟೀಲ

ಯೋಗಾಭ್ಯಾಸದಿಂದ ಉತ್ತಮ ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳುವುದರ ಜೊತೆಗೆ ಒತ್ತಡವನ್ನು...

ಹಫೀಜ್‌ಪೇಟ್‌ | ಮಹಿಳೆ ಮೇಲೆ ಹಲ್ಲೆಗೈದು, ಕೂದಲು ಹಿಡಿದು ಎಳೆದಾಡಿದ ಪೇದೆ; ಶಿಸ್ತು ಕ್ರಮಕ್ಕೆ ಶಿಫಾರಸು

ತೆಲಂಗಾಣದ ಹಫೀಜ್‌ಪೇಟ್ ರೈಲು ನಿಲ್ದಾಣದಲ್ಲಿ ಮಹಿಳೆಯೊಬ್ಬರ ಮೇಲೆ ಪೊಲೀಸ್ ಸಿಬ್ಬಂದಿ ಹಲ್ಲೆ...