ಬಕ್ರೀದ್ ಹಬ್ಬ | ಈದ್ಗಾ ಮೈದಾನದಲ್ಲಿ ಭರ್ಜರಿ ವ್ಯಾಪಾರ

Date:

  • ಬಂಡೂರು ಕುರಿ ಕನಿಷ್ಠ ₹15 ಸಾವಿರದಿಂದ ಗರಿಷ್ಠ ₹90 ಸಾವಿರದವರೆಗೆ ಮಾರಾಟ
  • ಕೋವಿಡ್ ಪೂರ್ವದ ಸಮಯಕ್ಕೆ ಹೋಲಿಸಿದರೆ ವ್ಯಾಪಾರವು ಈ ವರ್ಷ ಹೆಚ್ಚಾಗಿದೆ

ಕಳೆದ ಕೆಲವು ತಿಂಗಳ ಹಿಂದೆ ವಿವಾದದ ಕೇಂದ್ರ ಬಿಂದುವಾಗಿದ್ದ ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಇದೀಗ ಬಕ್ರೀದ್‌ ಸಂಭ್ರಮ ಮನೆ ಮಾಡಿದೆ. ಭಾನುವಾರದಂದು ಟಗರು, ಕುರಿ ಹಾಗೂ ಮೇಕೆಗಳ ಮಾರಾಟ ಜೋರಾಗಿ ನಡೆಯುತ್ತಿದೆ.

- Advertisement -

ಜೂನ್‌ 29ರಂದು ಬಕ್ರೀದ್ ಹಬ್ಬವಿದ್ದು, ಮೂರು ದಿನಕ್ಕೂ ಮುಂಚೆಯೇ ಕುರಿ, ಮೇಕೆ ಹಾಗೂ ಟಗರು ಖರೀದಿಗೆ ಜನ ಮುಗಿಬಿದ್ದಿದ್ದರು. ಭಾನುವಾರ ಬೆಳಗ್ಗೆಯಿಂದ ಮೈದಾನದಲ್ಲಿ ಜನಸಾಗರವೇ ನೆರೆದಿದ್ದು, ದಿನ ಕಳೆದಂತೆ ನೂಕುನುಗ್ಗಲು ಉಂಟಾಯಿತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

SIR ವಿರೋಧಿ ಹೋರಾಟ: ಡಿಕೆಶಿ–ಮಮತಾ ತೋರಿದ ದಾರಿ ವಿಪಕ್ಷಗಳಿಗೆ...

ಭಾರತದ ಪ್ರಜಾಪ್ರಭುತ್ವದ ಅಡಿಪಾಯವೇ ನ್ಯಾಯಯುತ, ಸ್ವತಂತ್ರ ಹಾಗೂ ಪಾರದರ್ಶಕ ಚುನಾವಣೆ. ಆದರೆ, ಅಧಿಕಾರದ ಗದ್ದುಗೆ ಏರಿರುವ ಮೋದಿ-ಶಾ ಜೋಡಿ, ಈ ಅಡಿಪಾಯವನ್ನೇ (ಚುನಾವಣಾ ಆಯೋಗವನ್ನೇ) ತಮ್ಮ ಸೂತ್ರದ ಬೊಂಬೆ ಮಾಡಿಕೊಂಡಿದೆ. ಎಸ್‌ಐಆರ್‌ ಹೆಸರಿನಲ್ಲಿ...

ಪೊಲೀಸ್ ಇಲಾಖೆ ಸುಧಾರಣೆಗೆ 3 ಸಮಿತಿ; ಬದಲಾವಣೆ ಅಗತ್ಯವೇ?...

ಪೊಲೀಸ್‌ ಇಲಾಖೆಯ ಕಾರ್ಯವೈಖರಿಯಲ್ಲಿ ಸುಧಾರಣೆ, ಡಿಜಿಟಲ್‌ ಟಚ್‌ ಹಾಗೂ ನೇಮಕಾತಿ ವ್ಯವಸ್ಥೆಯ ಪುನರ್‌ರಚನೆಗೆ ರಾಜ್ಯ ಸರ್ಕಾರ ಉನ್ನತ ಮಟ್ಟದ 3 ತಜ್ಞರ ಸಮಿತಿಗಳನ್ನು ರಚಿಸಿದೆ. ಆದರೆ, ಪೊಲೀಸ್‌ ಠಾಣೆಗಳಲ್ಲಿ ಸಾರ್ವಜನಿಕರು ಎದುರಿಸುವ ಸಮಸ್ಯೆಗಳಿಂದ...

ಪಾಕಿಸ್ತಾನದಲ್ಲಿ ಅಹಿಂಸಾ ಮೂರ್ತಿಯ ‘ರಹಸ್ಯರಕ್ಷಣೆ’: ಕರಾಚಿಯಿಂದ ಇಸ್ಲಾಮಾಬಾದ್‌ಗೆ ಗಾಂಧಿ...

ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿರುವ ಭಾರತೀಯ ಹೈಕಮಿಷನ್ ಕಚೇರಿಯ ಪ್ರವೇಶ ದ್ವಾರದಲ್ಲಿ ಮಹಾತ್ಮ ಗಾಂಧೀಜಿಯವರ ಭವ್ಯ ಕಂಚಿನ ಪ್ರತಿಮೆ ಇಂದಿಗೂ ಗಾಂಭೀರ್ಯದಿಂದ ನಿಂತಿದೆ. ಕೈಯಲ್ಲಿ ಊರುಗೋಲು ಹಿಡಿದು ದೂರದ ದಿಗಂತವನ್ನು ದಿಟ್ಟಿಸುವಂತಿರುವ ಈ ಬಾಪೂ ಪ್ರತಿಮೆಯು...

ಕರ್ನಾಟಕದ ಹೆಮ್ಮೆಯ ಮಂಡ್ಯದ ಬಂಡೂರು (ಬನ್ನೂರು) ತಳಿ, ಕೊಪ್ಪಳದ ಗುಡ್ಡಗಾಡು ಪ್ರದೇಶದ ತೆಂಗುರಿ ತಳಿ, ಉತ್ತರ ಕರ್ನಾಟಕದ ಡೆಕ್ಕನಿ ತಳಿ, ರಾಜಸ್ಥಾನದ ಶಿರೋಹಿ, ಕೋಟಾ ತಳಿ, ಕಿರಿಗಾವು, ಮೌಳಿ, ತಮಿಳುನಾಡು ಕುರಿ, ಬಾಗಲಕೋಟೆ, ಅಮೀನಗಡ, ಗಂಡಸಿ, ಶಿರಾ, ತುಮಕೂರು, ಚಿತ್ರದುರ್ಗ ಸೇರಿದಂತೆ ನೂರಾರು ತಳಿಗಳು ಮಾರಾಟಕ್ಕಿದ್ದವು.

ಬಂಡೂರು ಕುರಿಗಳು ಕನಿಷ್ಠ ₹15 ಸಾವಿರದಿಂದ ಗರಿಷ್ಠ ₹90 ಸಾವಿರದವರೆಗೆ ಮಾರಾಟವಾದವು. ಅಮೀನಗಡ ತಳಿಯ ಟಗರು ಕನಿಷ್ಠ ₹20 ಸಾವಿರದಿಂದ ಗರಿಷ್ಠ ₹1.20 ಲಕ್ಷದವರೆಗೆ ಮಾರಾಟವಾಗಿವೆ. ಕರ್ನಾಟಕದ ನಾನಾ ಭಾಗಗಳಿಂದ ನೂರಾರು ಮಾರಾಟಗಾರರು ಮೈದಾನದಲ್ಲಿ ನೆರೆದಿದ್ದರು. ಕೋವಿಡ್ ಪೂರ್ವದ ಸಮಯಕ್ಕೆ ಹೋಲಿಸಿದರೆ ವ್ಯಾಪಾರವು ಈ ವರ್ಷ ಹೆಚ್ಚಾಗಿದೆ ಎಂದು ವ್ಯಾಪಾರಸ್ಥರು ಹೇಳಿದರು.

ಪ್ರಾಣಿಗಳ ಬೆಲೆ ಸುಮಾರು ₹10,000 ಪ್ರಾರಂಭವಾಗಿ ಒಂದು ಲಕ್ಷವನ್ನು ದಾಟಿತು. ಈದ್ಗಾ ಮಾರುಕಟ್ಟೆಯಲ್ಲಿ ವಿಶೇಷ ಆಕರ್ಷಣೆಯಾಗಿದ್ದು, ಕನ್ನಡದಲ್ಲಿ ‘ಟಗರು’ ಎಂದು ಕರೆಯಲ್ಪಡುವ ಗಂಡು ಕೊಂಬಿನ ಕುರಿ ಸುಮಾರು ನೂರು ಕೆಜಿ ತೂಕ ಹಾಗೂ ₹1.2 ಲಕ್ಷ ಬೆಲೆಯಿತ್ತು.

ಈ ಸುದ್ದಿ ಓದಿದ್ದೀರಾ? ₹100 ಸನಿಹಕ್ಕೆ 1ಕೆಜಿ ಟೊಮೆಟೊ ದರ!

“ಟಗರಿಗೆ ವಿಶೇಷ ಕಾಳಜಿಯ ಅಗತ್ಯವಿದೆ. ಬಾದಾಮಿ, ಗೋಡಂಬಿ ಹಾಗೂ ಹಣ್ಣುಗಳನ್ನು ನೀಡಲಾಗುತ್ತದೆ. ಅದರ ಆಹಾರದ ವೆಚ್ಚವೇ ದಿನಕ್ಕೆ ₹600 ಆಗುತ್ತದೆ. ಅದರ ತೂಕ 100 ಕೆಜಿ ಮುಟ್ಟಲು ಮೂರು ವರ್ಷಕ್ಕೂ ಹೆಚ್ಚು ಕಾಲ ಆರೈಕೆ ಮಾಡಬೇಕು” ಎಂದು ಮಾರಾಟಗಾರರೊಬ್ಬರು ಹೇಳಿದರು.

“ಕಳೆದ ವರ್ಷ ಬನ್ನೂರು ಕುರಿಯ ಬೆಲೆ ₹15 ಸಾವಿರ. ಆದರೆ, ಈ ವರ್ಷ ₹20 ಸಾವಿರ ಆಗಿದೆ. ಕಳೆದ ವರ್ಷದ ಬೆಲೆಗೆ ಹೋಲಿಸಿದರೆ ಈ ಬಾರಿ ದರ ಹೆಚ್ಚಾಗಿದೆ” ಎಂದು ಖರೀದಿದಾರರೊಬ್ಬರು ತಿಳಿಸಿದರು.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಾಮಾಜಿಕ ಕಾರ್ಯಕರ್ತ ನದೀಮ್ ಖಾನ್ ಗೃಹಬಂಧನ: ಸೋಲಿಡಾರಿಟಿ ಯೂತ್ ಮೂವ್ಮೆಂಟ್ ಕರ್ನಾಟಕ ಖಂಡನೆ

ಮಸೀದಿಗಳು ಮತ್ತು ಇತರ ಧಾರ್ಮಿಕ ಸ್ಥಳಗಳ ಮೇಲಿನ ದಾಳಿಗಳು, ಮತದಾರರ ಪಟ್ಟಿಯಲ್ಲಿನ...

ಡ್ರೋನ್ ಪ್ರತಾಪ್ ವಿರುದ್ಧದ ಕ್ರಿಮಿನಲ್ ಪ್ರಕರಣ ರದ್ದು:‌ ಹೈಕೋರ್ಟ್ ಹೇಳಿದ್ದೇನು?

ಕೃಷಿ ಹೊಂಡಲ್ಲಿ 100 ಗ್ರಾಂ ಸೋಡಿಯಂ ಬಳಸಿ ವಿಜ್ಞಾನ ಪ್ರಯೋಗ ನಡೆಸಿದ...

ಬೆಂಗಳೂರು | 700 ಕೆ.ಜಿ ಪಿಒಪಿ ಗಣೇಶ ಮೂರ್ತಿ ತ್ಯಾಜ್ಯ ತೆರವುಗೊಳಿಸಿದ ‘ವಿ ಆರ್ ಆರಂಭ್’

ಬೆಂಗಳೂರಿನ ಸರ್ಜಾಪುರ ಸಮೀಪದ ಹಲನಾಯಕನಹಳ್ಳಿ ಕೆರೆಯಲ್ಲಿ ಸಂಗ್ರಹವಾಗಿದ್ದ ಪ್ಲಾಸ್ಟರ್ ಆಫ್ ಪ್ಯಾರಿಸ್...

ಹವಾಮಾನ | ರಾಜ್ಯದಲ್ಲಿ ಮುಂದಿನ 2 ದಿನ ಭಾರಿ ಮಳೆ: 6 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್

ಕರ್ನಾಟಕದ ದಕ್ಷಿಣ ಒಳನಾಡಿನಲ್ಲಿ ಮುಂದಿನ ಎರಡು ದಿನಗಳ ಕಾಲ ಬಿರುಗಾಳಿ ಸಹಿತ...