ಬೆಂಗಳೂರು | ಚಲ್ಕೆರೆ ಕೆರೆಯಲ್ಲಿ ಮೀನುಗಳ ಮಾರಣಹೋಮ

Date:

  • ಕೊತ್ತನೂರು, ಸೀತಾರಾಮಪಾಳ್ಯ ಕೆರೆಗಳಲ್ಲಿ ಮೀನು ಸಾವನ್ನಪ್ಪುತ್ತಿರುವ ವರದಿ
  • ಒಳಚರಂಡಿಯ ನೀರು ಕೆರೆಗೆ ಹರಿಯುತ್ತಿರುವುದನ್ನು ತಡೆಯಬೇಕು: ನಡಿಗೆದಾರರು

ಬೆಂಗಳೂರಿನ ಔಟರ್ ರಿಂಗ್ ರೋಡ್ (ಒಆರ್‌ಆರ್) ಬಳಿಯ ಚಲ್ಕೆರೆ ಕೆರೆಯಲ್ಲಿ ಬುಧವಾರ ಸುಮಾರು 50 ಮೀನುಗಳು ಸಾವನ್ನಪ್ಪಿದ್ದು, ಆತಂಕ ಮೂಡಿಸಿದೆ.

ಚಲ್ಕೆರೆ ಕೆರೆಗೆ ಕೊಳಚೆ ನೀರು ಹರಿದು ಹೋಗುತ್ತಿರುವುದರಿಂದ ಮೀನುಗಳ ಸಾವನ್ನಪ್ಪುತ್ತಿವೆ. ಈ ತಿಂಗಳಲ್ಲಿ ಕೊಳಚೆ ನೀರಿನಿಂದ ಮೀನುಗಳು ಸಾವನ್ನಪ್ಪತ್ತಿರುವ ಪಟ್ಟಿಯಲ್ಲಿ ಈ ಕೆರೆ ಆರನೇ ಸ್ಥಾನದಲ್ಲಿದೆ.

ಚಲ್ಕೆರೆ ಕೆರೆಯಲ್ಲಿ ಅಲ್ಲಲ್ಲಿ ಸತ್ತ ಮೀನುಗಳು ಪತ್ತೆಯಾಗಿವೆ. ಕೆರೆಯ ನೀರಿನ ಬಣ್ಣವೂ ಕಪ್ಪು ಬಣ್ಣಕ್ಕೆ ತಿರುಗಿದ್ದು, ಮಾಲಿನ್ಯದ ಪ್ರಮಾಣವನ್ನು ಸೂಚಿಸುತ್ತಿದೆ. ಕೆರೆಯ ಸುತ್ತಮುತ್ತ ಪ್ರದೇಶಗಳನ್ನು ಸರಿಯಾಗಿ ನಿರ್ವಹಿಸದ ಕಾರಣ ಅತಿಯಾದ ಕಳೆ ಬೆಳೆದಿದೆ. ಆದರೂ, ಇಲ್ಲಿನ ವಿಹಾರಿಗಳು ಕೊಳಚೆನೀರಿನ ಹರಿವಿನ ಸಮಸ್ಯೆಯನ್ನು ಹೊರತುಪಡಿಸಿ, ಕೆರೆಯ ಸ್ಥಿತಿಯ ಬಗ್ಗೆ ಯಾವುದೇ ದೂರು ನೀಡಿಲ್ಲ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

“ಕೊಳಚೆ ನೀರು ಸಾಮಾನ್ಯವಾಗಿ ಕೆರೆಗೆ ಸೇರುವುದಿಲ್ಲ. ಬಿಬಿಎಂಪಿ ಡೈವರ್ಶನ್ ಚಾನೆಲ್‌ಗಳನ್ನು ಒದಗಿಸಿದೆ. ಆದರೆ, ಭಾರೀ ಮಳೆಯಾದಾಗಲೆಲ್ಲಾ ಮಳೆನೀರಿನೊಂದಿಗೆ ಕೊಳಚೆ ನೀರು ಕೆರೆಗೆ ಹರಿಯುತ್ತದೆ. ಇದು ಮೀನುಗಳ ಸಾವಿಗೆ ಕಾರಣವಾಗಬಹುದು” ಎಂದು ಕೆರೆಗೆ ನಿಯೋಜಿಸಲಾದ ಸಿಬ್ಬಂದಿ ಹೇಳಿದರು.

ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಕಾಂಗ್ರೆಸ್ ಕಾರ್ಯಕರ್ತನ ಬರ್ಬರ ಹತ್ಯೆ

ಕಳೆದ ಒಂದು ತಿಂಗಳಿನಿಂದ ಕೊತ್ತನೂರು, ಸೀತಾರಾಮಪಾಳ್ಯ ಸೇರಿದಂತೆ ನಾನಾ ಕಡೆಗಳಲ್ಲಿ ಮೀನು ಸಾವನ್ನಪ್ಪುತ್ತಿರುವ ವರದಿ ಕಂಡುಬಂದಿದೆ.

ಕೆರೆಗಳ ಎಂಜಿನಿಯರ್ ವಿಜಯ್ ಕುಮಾರ್ ಹರಿದಾಸ್ ಮಾತನಾಡಿ, “ಈ ಕೆರೆಗಳಲ್ಲಿ ಮೀನುಗಾರಿಕೆ ವಾರ್ಷಿಕ ವಿದ್ಯಮಾನವಾಗಿದೆ. ಪ್ರತಿ ಮಳೆಗಾಲದ ಆರಂಭದಲ್ಲಿ ಕೆರೆಗಳಿಗೆ ಕೊಳಚೆ ನೀರು ಹರಿದು ಬರುತ್ತದೆ. ಇದರಿಂದ ಮೀನು ಸಾವನ್ನಪ್ಪುತ್ತಿವೆ. ಇದು ನೀರಿನ ಗುಣಮಟ್ಟದಲ್ಲಿ ಬದಲಾವಣೆಗೆ ಕಾರಣವಾಗುತ್ತದೆ” ಎಂದರು.

ಬಿಬಿಎಂಪಿಯು ಮಳೆನೀರು ಚರಂಡಿಗಳನ್ನು ಸರಿಪಡಿಸುವ ಮೂಲಕ ಒಳಚರಂಡಿಯ ನೀರು ಕೆರೆಗೆ ಪೋಲಾಗುವುದನ್ನು ತಡೆಯಬೇಕು. ಪ್ರತಿ ವರ್ಷ ಮೀನುಗಳು ಸಾಯುತ್ತಿದ್ದು, ಈ ರೀತಿ ಮುಂದೆ ಆಗದಂತೆ ಗಮನಹರಿಸಬೇಕು ಎಂದು ನಡಿಗೆದಾರರು ಹೇಳಿದರು.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮತದಾರರಿಗೆ ಉಚಿತ ಆಹಾರ ನೀಡಲು ಹೋಟೆಲ್‌ಗಳಿಗೆ ಹೈಕೋರ್ಟ್ ಅನುಮತಿ

ಚುನಾವಣೆಯ ದಿನ ಮತದಾನ ಮಾಡಿದವರಿಗೆ ಉಚಿತ ಆಹಾರ ವಿತರಣೆ ಮಾಡಲು ಬೃಹತ್...

ಲೋಕಸಭಾ ಚುನಾವಣೆ | ಊರಿಗೆ ಹೊರಟ ಮತದಾರರು; ಸುಲಿಗೆಗಿಳಿದ ಖಾಸಗಿ ಬಸ್‌ಗಳು

ಲೋಕಸಭಾ ಚುನಾವಣೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿವೆ. ಏ.26ರಂದು ಮತದಾನ...

ಬೆಂ. ದಕ್ಷಿಣ ಲೋಕಸಭಾ ಕ್ಷೇತ್ರ | 16 ಕಡೆ ಶೋಧ ಕಾರ್ಯ: 22 ಕೆಜಿ ಚಿನ್ನ, 6 ಕೋಟಿ ಮೌಲ್ಯದ ವಜ್ರ ಪತ್ತೆ

ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಕಳೆದ ಎರಡು ದಿನಗಳಿಂದ ಬೆಂಗಳೂರು ದಕ್ಷಿಣ...

ಬೆಂಗಳೂರು | ಅಗ್ನಿ ಅವಘಡ: ₹5 ಕೋಟಿ ಮೌಲ್ಯದ ಬಟ್ಟೆ, 40 ಬೈಕ್ ಭಸ್ಮ

ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ಸಿಂಗಸಂದ್ರದ ಮಣಿಪಾಲ್​ ಕಂಟ್ರಿ ರೋಡ್​​ನಲ್ಲಿರುವ ಟಿಂಬರ್​ ಯಾರ್ಡ್​ನಲ್ಲಿ...