ಬೆಂಗಳೂರು | ರಾಜಕಾಲುವೆ ಒತ್ತುವರಿ ಮಾಡಿದ್ದ ಬಿಲ್ಡರ್‌ಗೆ ₹85 ಲಕ್ಷ ದಂಡ ವಿಧಿಸಿದ ಎನ್‌ಜಿಟಿ

Date:

  • ಸ್ಥಳೀಯ ಅಧಿಕಾರಿಗಳಿಗೆ ದೂರು ನೀಡಿದರೂ ಪ್ರಯೋಜನವಿಲ್ಲ
  • ಸ್ಥಳೀಯರ ಸತತ ಎರಡು ವರ್ಷಗಳ ಹೋರಾಟಕ್ಕೆ ಸಿಕ್ಕ ಫಲ

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ರಾಜಕಾಲುವೆ ಹಾಗೂ ಬಫರ್ ಜೋನ್ ಅತಿಕ್ರಮಣ ಮಾಡಿಕೊಂಡು ಶೌಚಾಲಯ ಮತ್ತು ಈಜುಕೊಳ ನಿರ್ಮಿಸಿದ್ದ ಖಾಸಗಿ ಬಿಲ್ಡರ್‌ಗೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ಒತ್ತುವರಿ ತೆರವುಗೊಳಿಸುವಂತೆ ಆದೇಶ ನೀಡಿ, ₹85 ಲಕ್ಷ ದಂಡ ವಿಧಿಸಿದೆ.

ಖಾಸಗಿ ಬಿಲ್ಡರ್‌ಗಳು ಬೆಂಗಳೂರಿನ ಪೂರ್ವ ತಾಲೂಕು ಕುಂಬೇನ ಅಗ್ರಹಾರ ಮೂಲಕ ಹಾದು ಹೋಗಿದ್ದ ರಾಜಕಾಲುವೆ ಹಾಗೂ 15 ಮೀಟರ್ ಬಫರ್ ಜೋನ್​ನಲ್ಲಿ ಒತ್ತುವರಿ ಮಾಡಿದ್ದರು.

ರಾಜಕಾಲುವೆ ಒತ್ತುವರಿ ಮಾಡಿಕೊಂಡಿರುವದನ್ನು ತೆರುವು ಮಾಡುವಂತೆ ಸ್ಥಳೀಯರೆಲ್ಲರೂ ತಿಳಿಸಿದ್ದರು. ಈ ವಿಚಾರವಾಗಿ ಸ್ಥಳೀಯ ಅಧಿಕಾರಿಗಳಿಗೆ ದೂರು ನೀಡಿದರೂ, ಯಾವುದೇ ಪ್ರಯೋಜನವಾಗಿರಲಿಲ್ಲ. ಖಾಸಗಿ ಬಿಲ್ಡರ್‌ ಒತ್ತುವರಿ ಮಾಡಿಕೊಂಡಿರುವ ಪ್ರದೇಶವನ್ನು ತೆರವು ಮಾಡಿರಲಿಲ್ಲ.  

ರಾಜಕಾಲುವೆ ಒತ್ತುವರಿ ತೆರುವು ಆಗದ ಹಿನ್ನಲೆ, ಸ್ಥಳೀಯರೆಲ್ಲರೂ ಸೇರಿ ರಾಜಕಾಲುವೆ ಹಾಗೂ ಬಫರ್ ಜೋನ್ ಉಳಿಸುವ ಯೋಚನೆಯಿಂದ ಈ ಬಗ್ಗೆ ಚನ್ನೈನಲ್ಲಿರುವ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಗೆ ದೂರು ನೀಡಿದ್ದರು.

ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಪಾರ್ಕಿಂಗ್‌ ವಿಚಾರಕ್ಕೆ ಜಗಳ : ಸಹೋದ್ಯೋಗಿಯ ಕೊಲೆ

ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯಲ್ಲಿ ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯವೂ ಒತ್ತುವರಿ ತೆರವು ಮಾಡುವಂತೆ ಬಿಲ್ಡರ್‌ಗೆ ತಿಳಿಸಿದೆ. ಜತೆಗೆ ಒತ್ತುವರಿ ಮಾಡಿಕೊಂಡಿರುವವರಿಗೆ ₹85 ಲಕ್ಷ ದಂಡ ವಿಧಿಸಿದೆ.

ಸ್ಥಳೀಯರ ಸತತ ಎರಡು ವರ್ಷಗಳ ಹೋರಾಟಕ್ಕೆ ಫಲ ಸಿಕ್ಕಿದೆ. ನ್ಯಾಯಾಲಯದ ಈ ಆದೇಶದ ಬೆನ್ನಲ್ಲೆ, ಸ್ಥಳೀಯ ಅಧಿಕಾರಿಗಳು ರಾಜಕಾಲುವೆ ಒತ್ತುವರಿಯನ್ನು ತೆರವು ಮಾಡಿದ್ದಾರೆ. ಈಗ ರಾಜಕಾಲುವೆಯ ಬಫರ್ ಜೋನ್​ನಲ್ಲಿ ‘ಗ್ರೀನ್ ಲ್ಯಾಂಡ್’ ನಿರ್ಮಾಣ ಮಾಡಲು ಮುಂದಾಗಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

Subscribe

ಹೆಚ್ಚು ಓದಿಸಿಕೊಂಡ ಲೇಖನಗಳು

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪ್ರವೀಣ್ ಪತ್ನಿಗೆ ಖಾಯಂ ಉದ್ಯೋಗ ಕೊಡಿಸಲಾಗದ ಸಂಸದ ನಳಿನ್ ರಾಜೀನಾಮೆ ನೀಡಲಿ: ಪ್ರತಿಭಾ ಕುಳಾಯಿ

ಬಿಜೆಪಿ ಕೊಡಿಸಿರುವ ಗುತ್ತಿಗೆ ಆಧಾರದ ಕೆಲಸದ ಅವಧಿ ಮುಗಿದಿದೆ ನೂತನ ಸರ್ಕಾರ ಬಂದ...

ಆನೇಕಲ್ |ಕಾಡಾನೆ ದಾಳಿಗೆ ಕುರಿ ಕಾಯುತ್ತಿದ್ದ ಮಹಿಳೆ ಬಲಿ

ಮನವಿ ಮಾಡಿದ್ದರೂ ಕ್ರಮ ಕೈಗೊಳ್ಳದ ಅರಣ್ಯ ಇಲಾಖೆ ಸಿಬ್ಬಂದಿ ಮಹಿಳೆಯನ್ನು ಕಾಲಿನಿಂದ ತುಳಿದು...

ಪ್ರವೀಣ್‌ ಪತ್ನಿಗೆ ಮತ್ತೆ ಉದ್ಯೋಗ ಕೊಡುತ್ತೇವೆ: ಸಿಎಂ ಸಿದ್ಧರಾಮಯ್ಯ

ವಿಶೇಷ ಪ್ರಕರಣವೆಂದು ಪರಿಗಣಿಸಿ ಮಾನವೀಯತೆ ಆಧಾರದಲ್ಲಿ ನೂತನ ಕುಮಾರಿ ಮರು ನೇಮಕ...

ಟಿಕೆಟ್‌ ರಹಿತ ಪ್ರಯಾಣ: ₹5,54,832 ದಂಡ ವಸೂಲಿ ಮಾಡಿದ ಕೆಎಸ್‌ಆರ್‌ಟಿಸಿ

ಟಿಕೆಟ್‌ ರಹಿತ 3,415 ಪ್ರಯಾಣಿಕರಿಗೆ ದಂಡ ವಿಧಿಸಿದ ನಿಗಮ ನಿಗಮದ ವ್ಯಾಪ್ತಿಯಲ್ಲಿ ಸಂಚರಿಸುವ...