ವಿದೇಶ

ಅಮೆರಿಕಕ್ಕೆ ಮತ್ತಷ್ಟು ‘ಕಹಿ ಸೋಲು’ ಉಣಿಸಲು ಸಿದ್ಧ: ಹಾರ್ಮುಜ್ ಮುಚ್ಚಿದ ಬೆನ್ನಲ್ಲೇ ಇರಾನ್ ಎಚ್ಚರಿಕೆ

ಅಮೆರಿಕ ಮತ್ತು ಇಸ್ರೇಲ್ ವಿರುದ್ಧದ ಸಂಘರ್ಷದ ನಡುವೆ ತನ್ನ ವಾಗ್ದಾಳಿಯನ್ನು ತೀವ್ರಗೊಳಿಸಿರುವ ಇರಾನ್, 'ಶತ್ರುಗಳಿಗೆ ಮತ್ತಷ್ಟು ಕಹಿ ಸೋಲುಗಳನ್ನು ಉಣಿಸಲು ನಮ್ಮ ನೌಕಾಪಡೆಯು ಸರ್ವಸನ್ನದ್ಧವಾಗಿದೆ' ಎಂದು ಇರಾನ್‌ನ ಪರಮೋಚ್ಚ ನಾಯಕ ಮೊಜ್ತಬಾ ಖಮೇನಿ...

ಬುಧವಾರದೊಳಗೆ ಒಪ್ಪಂದ ಅಂತಿಮಗೊಳ್ಳದಿದ್ದರೆ ಇರಾನ್ ಮೇಲೆ ಮತ್ತೆ ಬಾಂಬ್ ದಾಳಿ: ಟ್ರಂಪ್ ಎಚ್ಚರಿಕೆ

ಅಮೆರಿಕ ಮತ್ತು ಇರಾನ್ ನಡುವಿನ ಶಾಂತಿ ಮಾತುಕತೆಗಳು ನಿರ್ಣಾಯಕ ಹಂತ ತಲುಪಿರುವ ಬೆನ್ನಲ್ಲೇ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಠಿಣ ಎಚ್ಚರಿಕೆಯೊಂದನ್ನು ರವಾನಿಸಿದ್ದಾರೆ. 'ಬುಧವಾರದ ಗಡುವಿನೊಳಗೆ ಇರಾನ್ ಜೊತೆಗಿನ ಒಪ್ಪಂದ ಅಂತಿಮಗೊಳ್ಳದಿದ್ದರೆ, ಆ...

ಭವಿಷ್ಯದಲ್ಲಿ ಬಡತನವೇ ಇರಲ್ಲ ಎಂದ ಟೆಸ್ಲಾ ಸಿಇಒ; AIನಿಂದಾಗುವ ನಿರುದ್ಯೋಗ ಬಿಕ್ಕಟ್ಟಿಗೆ ಮಸ್ಕ್‌ ಕೊಟ್ಟ ಮಾಸ್ಟರ್‌ ಪ್ಲ್ಯಾನ್‌ ಏನು ಗೊತ್ತೇ?

ಕೃತಕ ಬುದ್ಧಿಮತ್ತೆ (AI) ಮತ್ತು ರೊಬೊಟಿಕ್ಸ್ ತಂತ್ರಜ್ಞಾನದ ಬೆಳವಣಿಗೆಯಿಂದಾಗಿ ಜಾಗತಿಕವಾಗಿ ಈಗಾಗಲೇ ಲಕ್ಷಾಂತರ ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಈ ಉದ್ಯೋಗ ನಷ್ಟ ಮತ್ತಷ್ಟು ಹೆಚ್ಚಾಗಬಹುದು ಎಂಬ ಆತಂಕದ ನಡುವೆ, ಟೆಸ್ಲಾ...

ಪಿಒಕೆ ಒಳಗೊಂಡ ‘ಕ್ಷೇತ್ರಗಳ ಪುನರ್‌ವಿಂಗಡನೆ ಮಸೂದೆ’: ಭಾರತದ ನಡೆಗೆ ಪಾಕ್‌ ಆಕ್ಷೇಪ

ಕೇಂದ್ರ ಸರ್ಕಾರವು ಸಂಸತ್ತಿನಲ್ಲಿ 'ಕ್ಷೇತ್ರಗಳ ಪುನರ್‌ವಿಂಗಡನೆ ಮಸೂದೆ 2026' ಅನ್ನು ಮಂಡಿಸಿದ್ದು, ಇದರಲ್ಲಿ ಪಾಕಿಸ್ತಾನ ಆಕ್ರಮಿತ ಜಮ್ಮು ಮತ್ತು ಕಾಶ್ಮೀರದ ಕ್ಷೇತ್ರಗಳಿಗೆ ಕಾನೂನಿನ ಚೌಕಟ್ಟನ್ನು ರೂಪಿಸಿರುವ ಬಗ್ಗೆ ಪಾಕಿಸ್ತಾನ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ....

ಲಷ್ಕರ್ ಸಹ-ಸಂಸ್ಥಾಪಕ, ಹಫೀಜ್ ಸಯೀದ್ ಆಪ್ತ ಅಮೀರ್ ಹಂಝಾ ಮೇಲೆ ಪಾಕ್‌ನಲ್ಲಿ ಗುಂಡಿನ ದಾಳಿ

ನಿಷೇಧಿತ ಉಗ್ರಗಾಮಿ ಸಂಘಟನೆ ಲಷ್ಕರ್-ಎ-ತಯಬಾದ (ಎಲ್‌ಇಟಿ) ಸಹ-ಸಂಸ್ಥಾಪಕ ಹಾಗೂ ಪ್ರಮುಖ ಉಗ್ರ ಹಫೀಜ್ ಸಯೀದ್‌ನ ಪರಮಾಪ್ತ ಅಮೀರ್ ಹಂಝಾ ಮೇಲೆ ಪಾಕಿಸ್ತಾನದ ಲಾಹೋರ್‌ನಲ್ಲಿ ಅಪರಿಚಿತರು ಗುಂಡಿನ ದಾಳಿ ನಡೆಸಿದ್ದಾರೆ. ಕಳೆದ ಒಂದು ವರ್ಷದ...

ಲೆಬನಾನ್ ಗಡಿಯಲ್ಲಿ 10 ದಿನಗಳ ಕದನ ವಿರಾಮ; ಆದರೂ ಸೇನೆ ಹಿಂಪಡೆಯಲು ಇಸ್ರೇಲ್ ನಕಾರ

ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧದ ಸ್ಥಿತಿಯು ತೀವ್ರವಾಗುತ್ತಿರುವ ಬೆಳವಣಿಗೆಯಲ್ಲೀ, ಇಸ್ರೇಲ್ ಮತ್ತು ಲೆಬನಾನ್ ನಡುವೆ 10 ದಿನಗಳ ತಾತ್ಕಾಲಿಕ ಕದನ ವಿರಾಮ ಜಾರಿಗೆ ಬಂದಿದೆ. ಇನ್ನೊಂದೆಡೆ, ಅಮೆರಿಕ ಮತ್ತು ಇರಾನ್...

ತಾನೇ ಪೋಪ್, ತಾನೇ ಕ್ರಿಸ್ತ; AI ಚಿತ್ರ ಹಂಚಿಕೊಂಡ ಟ್ರಂಪ್: ಪ್ರಜಾಪ್ರಭುತ್ವದ ಭವಿಷ್ಯಕ್ಕೆ ಗಂಭೀರ ಎಚ್ಚರಿಕೆ!

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ವ್ಯಾಟಿಕನ್‌ನ ಪೋಪ್ ನಡುವಿನ ಸಂಘರ್ಷವು ಮುಂದುವರೆದಿದೆ. ಯುದ್ಧ ಮತ್ತು ಶಾಂತಿ ವಿಚಾರವಾಗಿ ಟ್ರಂಪ್ ಮತ್ತು ಪೋಪ್ 14ನೇ ಲಿಯೋ ನಡುವೆ ತೀವ್ರ ಜಟಾಪಟಿ ನಡೆಯುತ್ತಿದೆ. ಈ...

ಅಂಡಮಾನ್ ಸಮುದ್ರದಲ್ಲಿ ಮುಳುಗಿದ ನೌಕೆ: ರೋಹಿಂಗ್ಯಾ ನಿರಾಶ್ರಿತರು ಸೇರಿ 250ಕ್ಕೂ ಹೆಚ್ಚು ಮಂದಿ ನಾಪತ್ತೆ

ಬಾಂಗ್ಲಾದೇಶದಿಂದ ಮಲೇಷ್ಯಾಕ್ಕೆ ತೆರಳುತ್ತಿದ್ದ ಸುಮಾರು 250ಕ್ಕೂ ಹೆಚ್ಚು ಜನರನ್ನು ಹೊತ್ತಿದ್ದ ಬೋಟ್‌ವೊಂದು ಅಂಡಮಾನ್ ಸಮುದ್ರದಲ್ಲಿ ಮುಳುಗಡೆಯಾಗಿದ್ದು, ಅದರಲ್ಲಿದ್ದವರೆಲ್ಲರೂ ನಾಪತ್ತೆಯಾಗಿದ್ದಾರೆ ಎಂದು ವಿಶ್ವಸಂಸ್ಥೆಯ ನಿರಾಶ್ರಿತರ ಮತ್ತು ವಲಸೆ ಸಂಸ್ಥೆಗಳು (UNHCR & IOM) ಆತಂಕ...

ಫುಟ್‌ಬಾಲ್ ಲೋಕದಲ್ಲಿ ಸೂತಕದ ಛಾಯೆ: ದರೋಡೆಕೋರರ ಗುಂಡಿಗೆ 20ರ ಹರೆಯದ ಘಾನಾ ಆಟಗಾರ ಬಲಿ!

ಘಾನಾ ಪ್ರೀಮಿಯರ್ ಲೀಗ್‌ನ ಪ್ರತಿಭಾವಂತ ಫುಟ್‌ಬಾಲ್ ಆಟಗಾರ 20ರ ಹರೆಯದ ಡೊಮಿನಿಕ್ ಫ್ರಿಂಪಾಂಗ್ ಭೀಕರ ದರೋಡೆಕೋರರ ದಾಳಿಯಲ್ಲಿ ಮೃತಪಟ್ಟಿದ್ದಾರೆ. ಪಂದ್ಯ ಮುಗಿಸಿ ಹಿಂದಿರುಗುತ್ತಿದ್ದ ತಂಡದ ಬಸ್ ಮೇಲೆ ಶಸ್ತ್ರಸಜ್ಜಿತ ದರೋಡೆಕೋರರು ನಡೆಸಿದ ಗುಂಡಿನ...

ಅಮೆರಿಕಾ ದಿಗ್ಬಂಧನ ಆರಂಭಕ್ಕೂ ಮುನ್ನವೇ ಹಾರ್ಮುಜ್ ಜಲಸಂಧಿ ದಾಟಿದ ಇರಾನ್‌ನ ಎರಡು ತೈಲ ಟ್ಯಾಂಕರ್‌ಗಳು

ಇರಾನ್ ಬಂದರುಗಳನ್ನು ಗುರಿಯಾಗಿಸಿಕೊಂಡು ಅಮೆರಿಕಾ ಯುದ್ಧನೌಕೆಗಳು ದಿಗ್ಬಂಧನ ವಿಧಿಸಲು ಸಜ್ಜಾಗುತ್ತಿರುವಂತೆಯೇ, ಇರಾನ್ ಸಂಪರ್ಕ ಹೊಂದಿರುವ ಎರಡು ತೈಲ ಟ್ಯಾಂಕರ್‌ಗಳು ಹಾರ್ಮುಜ್ ಜಲಸಂಧಿಯ ಮೂಲಕ ಕೊಲ್ಲಿಯಿಂದ ಯಶಸ್ವಿಯಾಗಿ ಹೊರಬಂದಿವೆ. ವರದಿಗಳ ಪ್ರಕಾರ, 'ಒರೊರಾ' ಟ್ಯಾಂಕರ್...

‘ಯಾವುದೇ ಬೆದರಿಕೆಗೆ ಬಗ್ಗುವುದಿಲ್ಲ’: ಅಮೆರಿಕದ ನೌಕಾ ದಿಗ್ಬಂಧನಕ್ಕೆ ಇರಾನ್ ತಿರುಗೇಟು

ಅಮೆರಿಕ ವಿಧಿಸಿರುವ ನೌಕಾ ದಿಗ್ಬಂಧನ ಹಾಗೂ ವಿಫಲವಾದ ಶಾಂತಿ ಮಾತುಕತೆಯ ಕುರಿತು ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಇರಾನ್, "ಅಮೆರಿಕದ ಯಾವುದೇ ಬೆದರಿಕೆಗಳಿಗೆ ನಮ್ಮ ದೇಶ ಬಗ್ಗುವುದಿಲ್ಲ," ಎಂದು ತಿಳಿಸಿದೆ. ಪಾಕಿಸ್ತಾನದಲ್ಲಿ ನಡೆದ ಶಾಂತಿ ಮಾತುಕತೆಯ...

ಶಾಂತಿ ಮಾತುಕತೆ ಮುರಿದ ನಂತರ ಇರಾನ್ ಬಂದರುಗಳ ಮೇಲೆ ಅಮೆರಿಕ ದಿಗ್ಬಂಧನ; ಲೆಬನಾನ್‌ನಲ್ಲಿ 2055 ಕ್ಕೆ ಏರಿದ ಮೃತರ ಸಂಖ್ಯೆ

ಅಮೆರಿಕ ಮತ್ತು ಇರಾನ್ ನಡುವಿನ ಶಾಂತಿ ಮಾತುಕತೆಗಳು ವಿಫಲಗೊಂಡಿದ್ದು, ಏಪ್ರಿಲ್ 13 ರಿಂದ ಇರಾನ್ ಬಂದರುಗಳ ಮೇಲೆ ನೌಕಾ ದಿಗ್ಬಂಧನ ಹೇರಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆದೇಶ ಹೊರಡಿಸಿದ್ದಾರೆ. ಈ ಬೆಳವಣಿಗೆಯಿಂದ...

ಈ ಹೊತ್ತಿನ ಪ್ರಮುಖ ಸುದ್ದಿ