ಅಲ್ಲಮನ ಅನನ್ಯ ಪದಪ್ರಯೋಗಗಳು | ಸಜ್ಜನವೆ ಮಜ್ಜನ: ಪುಣ್ಯಸ್ನಾನವಲ್ಲ

Date:

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ ಪದದ ಬಗ್ಗೆ ಈ ಕೆಳಗಿನ ಮಾದರಿಯಲ್ಲಿ ವಿವರಿಸಲಾಗುವುದು. ಈದಿನ ಓದುಗರಿಗಾಗಿ ಅಲ್ಲಮನ ಅರಿವು…

ಸಜ್ಜನವೆ ಮಜ್ಜನ: ಪುಣ್ಯಸ್ನಾನವಲ್ಲ
ಉದಕ ಮಜ್ಜನವಲ್ಲ, ಪತ್ರೆ ಪೂಜೆಯಲ್ಲ.
ಧೂಪ ಪರಿಮಳವಲ್ಲ, ಕಂಚು ಬೆಳಗಲ್ಲ, ಸಯಧಾನ ಅರ್ಪಿತವಲ್ಲ.
ಅದೆಂತೆಂದಡೆ:
ಸಜ್ಜನವೆ ಮಜ್ಜನ,
ಸತ್ಯಸದಾಚಾರವೆ ಪತ್ರೆ ಪುಷ್ಪ. ಅಷ್ಟಮದಂಗಳ ಸುಟ್ಟುದೆ ಧೂಪ,
ನಯನವೆ ಸ್ವಯಂ ಜ್ಯೋತಿ,
ಪರಿಣಾಮವೆ ಅರ್ಪಿತ
ಕಾಣಾ ಗುಹೇಶ್ವರಾ

- Advertisement -

ಪದಾರ್ಥ:
ಉದಕ = ನೀರು
ಮಜ್ಜನ = ಸ್ನಾನ, ಅಭಿಷೇಕ
ಸಯಧಾನ = ನೈವೇದ್ಯ

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಹೊಸ ಓದು | ಬಿ. ಚಂದ್ರೇಗೌಡರ ‘ಕಾಳ ಮಾವನ...

ಬಿ. ಚಂದ್ರೇಗೌಡರ 'ಬಯಲು ಸೀಮೆಯ ಕಟ್ಟೆಪುರಾಣ' ಅಂಕಣ ಬರಹದಿಂದ ಎದ್ದುಬಂದ ಕಾಳಮಾವ ಈಗ ತನ್ನ ಕಡೇ ದಿನಗಳಲ್ಲಿದ್ದಾರೆ. ಅವರು ಕಣ್ಣುಮುಚ್ಚುವ, ಕಾಲುಮಡಚುವ ದೃಶ್ಯಗಳು ಭಾರತದ ಆತ್ಮಸಾಕ್ಷಿಯ ಅಂತ್ಯಸಂಸ್ಕಾರವನ್ನು ಸಂಕೇತಿಸುವಂತಿವೆ. ನಮ್ಮ ನೆಲದ ನಾಲಿಗೆನಿಷ್ಠೆ...

ಬ್ರಿಟಿಷ್ ಕಾಲದ ʼಗುಲಾಮಗಿರಿʼ ಕಾನೂನುಗಳೇ ಇಂದಿನ ಪೊಲೀಸ್‌ ವ್ಯವಸ್ಥೆಯ...

ಸ್ವಾತಂತ್ರ್ಯ ಬಂದು ದಶಕಗಳೇ ಕಳೆದಿದ್ದರೂ, ನಾವಿನ್ನೂ ಬ್ರಿಟಿಷರು ಭಾರತೀಯರನ್ನು ದಮನ ಮಾಡಲು ರೂಪಿಸಿದ 1861ರ ಪೊಲೀಸ್ ಕಾಯಿದೆಯ ನೆರಳಿನಲ್ಲೇ ಬದುಕುತ್ತಿದ್ದೇವೆಯೇ? ಖಾಕಿ ಪಡೆಯನ್ನು 'ಪ್ರಜೆಗಳ ರಕ್ಷಕ'ನಾಗಿಸಬೇಕಿದ್ದ ವ್ಯವಸ್ಥೆ, ಇಂದಿಗೂ ರಾಜಕಾರಣಿಗಳ ಕೈಗೊಂಬೆಯಾಗಿ ಉಳಿದುಕೊಳ್ಳಲು...

ಯಾರು ಹಿತವರು ಈ ಇಬ್ಬರೊಳಗೆ? ನೇಹಾ ಬೋರಾ ಅಭಿಜಿತ್...

“ಹೋಲಿಕೆ ಬೇಡ, ಒಗ್ಗಟ್ಟು ಬೇಕು. ನಾವೆಲ್ಲರೂ ಒಟ್ಟಾಗಿ ಚುನಾವಣಾ ಆಯೋಗದ ಅಕ್ರಮಗಳ ವಿರುದ್ಧ ಹೋರಾಡಬೇಕು” ಎಂದು ನೇಹಾ ಬರೆದರೆ, ಅದಕ್ಕೆ ಅಭಿಜೀತ್ ಉತ್ತರ- “ಇಂಕ್ವಿಲಾಬ್ ಜಿಂದಾಬಾದ್” ನೇಹಾ ಬೋರಾ ಮತ್ತು ಅಭಿಜಿತ್ ದೀಪ್ಕೆ ನಡುವೆ...

ವಚನಾರ್ಥ:
ಮನುಷ್ಯನ ಅಂತರಂಗ ಶುದ್ದಿಯತ್ತ ಗಮನ ಸೆಳೆಯಲು ಅಲ್ಲಮ ರಚಿಸಿದ ವಚನವಿದು. ನೀರಲ್ಲಿ ಮುಳುಗಿ ಸ್ನಾನ ಮಾಡಿ ಮಡಿಯುಟ್ಟು ಹೂ ಪತ್ರೆ ಧರಿಸಿ ಧೂಪದ ಪರಿಮಳ ಪಸರಿಸಿ ಕರ್ಪೂರ ಬೆಳಗಿಸಿ ನೈವೇದ್ಯವ ಅರ್ಪಣೆ ಮಾಡುವುದು ಬಾಹ್ಯಪೂಜೆ. ಅಂತಹ ತೋರಿಕೆಯ ಪೂಜೆ ಅಲ್ಲಮನಿಂದ ಅಲ್ಲಗಳೆಯಲ್ಪಟ್ಟಿದೆ. ಅಲ್ಲಮನ ಪ್ರಕಾರ ಸದ್ಗುಣಗಳೇ ಸ್ನಾನ, ಅಭಿಷೇಕ.
ಸತ್ಯ ಸದಾಚಾರಗಳೇ ಪತ್ರೆ ಪುಷ್ಪ. ಧನ, ಕುಲ, ವಿದ್ಯೆ, ರೂಪ, ಯೌವನ, ತೋಳ್ಬಲ, ಜನಬಲ, ಅಧಿಕಾರ ಎಂಬ ಅಷ್ಟಮದಗಳನ್ನು ಮನಸ್ಸಲ್ಲಿ ಸುಡುವುದೇ ಧೂಪ. ಇಂತಹ ವ್ಯಕ್ತಿಯಲ್ಲಿ ಉಂಟಾಗಿರುವ ಅಂತರಂಗ ಶುದ್ದಿಯು ಆತನ ಕಣ್ಣುಗಳಲ್ಲಿ ಪ್ರತಿಫಲನವಾಗಿ ತೇಜೋಮಯವಾಗಿ ಹೊಳೆಯುತ್ತಿರುತ್ತದೆ.

ಅಂತಹ ಪರಿಪೂರ್ಣವಾದ ವ್ಯಕ್ತಿತ್ವದಲ್ಲಿ ದೈವಕಳೆ ಕಂಡುಬರುತ್ತದೆ. ‘ನಯನವೆ ಸ್ವಯಂ ಜ್ಯೋತಿ’ ಎಂದ ಅಲ್ಲಮನ ವಚನದ ಸಾಲಿಗೆ ಉದಾಹರಣೆಯಾಗಿ ಶ್ರೀ ರಮಣಮಹರ್ಷಿಗಳ ಭಾವಚಿತ್ರದಲ್ಲಿರುವ ಜ್ಯೋತಿಯಂತೆ ಹೊಳೆಯುವ ಅವರ ಕಣ್ಣುಗಳನ್ನು ಗಮನಿಸಬಹುದು.

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ನೀರಲಾದ ನಿರ್ಮಿತಂಗಳು

ಪದ ಪ್ರಯೋಗಾರ್ಥ:
ಸಜ್ಜನವೆ ಮಜ್ಜನ. ಅಂತರಂಗ ಶುದ್ಧವಿಲ್ಲದೆ, ಸಜ್ಜನತೆಯಿಲ್ಲದೇ ಯಾವುದೇ ಪುಣ್ಯಸ್ನಾನ ಮಾಡಿದರೂ ಫಲವಿಲ್ಲ. ಉದಕ ಮಜ್ಜನವಲ್ಲ, ಜೀವನದಲ್ಲಿ ಸಜ್ಜನವೇ ಮಜ್ಜನ. ಅತ್ಯಂತ ಪರಿಣಾಮಕಾರಿಯಾಗಿ ಪ್ರಾಸಬದ್ಧವಾಗಿ ಸಜ್ಜನವೇ ಮಜ್ಜನ ಎಂದು ಅಲ್ಲಮ ಅಂದಿರುವುದು ಅನನ್ಯ ಪದಪ್ರಯೋಗ. ಸಜ್ಜನವೇ ಮಜ್ಜನವಾಗಿ, ಸತ್ಯವೇ ಹೂಪತ್ರೆಯಾಗಿ ನಡೆಯಬೇಕಿರುವ ಅಂತರಂಗದ ಪೂಜೆಯನ್ನು ಬೇಂದ್ರೆಯವರು ಚೈತನ್ಯದ ಪೂಜೆ ಅಂತ ಕರೆದಿದ್ದಾರೆ.
“ಚೈತನ್ಯದ ಪೂಜೆ ನಡೆದSದ
ನೋಡS ತಂಗಿ, ಅಭಂಗದ ಭಂಗೀS,
ಸೌಜನ್ಯ ಎಂಬುದು ಮೊದಲನೆ ಹೂವು
ಅರಳೋಣ ನಾವೂ ನೀವೂ,
ಸಾಮರ್ಥ್ಯ ಎಂಬುದು ಬೆಲಪತ್ರಿ, ಶಿವಗರ್ಪಿತ ಇರಲಿ ಖಾತ್ರಿ.
ಸತ್ಯ ಎಂಬುವ ನಿತ್ಯದ ದೀಪ, ಸುತ್ತೆಲ್ಲಾ ಅವನದೇ ರೂಪ,
ಪ್ರೀತಿ ಎಂಬುವ ನೈವೇದ್ಯ, ಇದು ಎಲ್ಲರ ಹೃದಯದ ಸಂವೇದ್ಯ”

ಅಲ್ಲಮ ಹೇಳಿರುವ ಸಜ್ಜನವೇ ಬೇಂದ್ರೆಯವರು ಬಳಸಿರುವ ಸೌಜನ್ಯ ಎಂಬ ಪದ. ಬೇಂದ್ರೆಯವರು ಹೇಳಿರುವ ಪ್ರೀತಿ ನೈವೇದ್ಯ, ಹೃದಯದ ಸಂವೇದ್ಯವೇ ಅಲ್ಲಮ ವಚನದ ಕೊನೆಯಲ್ಲಿ ನುಡಿದಿರುವ ‘ಪರಿಣಾಮವೆ ಅರ್ಪಿತ’.

ಶಿವಕುಮಾರ್
ಹರಿಹರ ಶಿವಕುಮಾರ್
+ posts

ಲೇಖಕ, ವೃತ್ತಿಯಿಂದ ಚಾರ್ಟರ್ಡ್ ಅಕೌಂಟೆಂಟ್. ಲೆಕ್ಕಪರಿಶೋಧನೆ ಮತ್ತು ತೆರಿಗೆ ವಿಚಾರಗಳಲ್ಲಿ ಪರಿಣತಿ. ಕನ್ನಡದಲ್ಲಿ ಕಂಪ್ಯೂಟರ್ ಬಳಕೆ ಇವರ ಹವ್ಯಾಸ. ಕನ್ನಡ ಭಾಷೆ ಮತ್ತು ಸಾಹಿತ್ಯದಲ್ಲಿ ಆಸಕ್ತರು. ಶಿವಮೊಗ್ಗ ಜಿಲ್ಲೆಯವರು, ಸದ್ಯ ಬೆಂಗಳೂರಿನಲ್ಲಿ ನೆಲೆ.

ಪೋಸ್ಟ್ ಹಂಚಿಕೊಳ್ಳಿ:

ಹರಿಹರ ಶಿವಕುಮಾರ್
ಹರಿಹರ ಶಿವಕುಮಾರ್
ಲೇಖಕ, ವೃತ್ತಿಯಿಂದ ಚಾರ್ಟರ್ಡ್ ಅಕೌಂಟೆಂಟ್. ಲೆಕ್ಕಪರಿಶೋಧನೆ ಮತ್ತು ತೆರಿಗೆ ವಿಚಾರಗಳಲ್ಲಿ ಪರಿಣತಿ. ಕನ್ನಡದಲ್ಲಿ ಕಂಪ್ಯೂಟರ್ ಬಳಕೆ ಇವರ ಹವ್ಯಾಸ. ಕನ್ನಡ ಭಾಷೆ ಮತ್ತು ಸಾಹಿತ್ಯದಲ್ಲಿ ಆಸಕ್ತರು. ಶಿವಮೊಗ್ಗ ಜಿಲ್ಲೆಯವರು, ಸದ್ಯ ಬೆಂಗಳೂರಿನಲ್ಲಿ ನೆಲೆ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಚನ ಕಲ್ಯಾಣ | ಇವ ನಮ್ಮವನೆಂದೆನಿಸಯ್ಯಾ….

ಇವನಾರವ, ಇವನಾರವ, ಇವನಾರವನೆಂದೆನಿಸದಿರಯ್ಯಾ. ಇವ ನಮ್ಮವ, ಇವ ನಮ್ಮವ, ಇವ ನಮ್ಮವನೆಂದೆನಿಸಯ್ಯಾ....

ಅವಳ ಕಣ್ಣೋಟ | ಮಿಮಿ-ತಾಯ್ತನದ ನಡುವೆ ಮರೆಯಾದ ಕನಸು

ಮಹಿಳೆಯರ ಬದುಕಿನಲ್ಲಿ ಮದುವೆ, ತಾಯ್ತನ ಇವೆಲ್ಲವೂ ಸಹಜವಾದ ಆಯ್ಕೆಗಳೇ. ಆದರೆ ಅವಳ...

ಕೃಷಿರಂಗ | ಬರ ಪೀಡಿತ ಜಿಲ್ಲೆಗಳಿಗೆ ವರದಾನ- ಸಮಗ್ರ ಕೃಷಿ

ಸಮಗ್ರ ಕೃಷಿಯನ್ನು ಅರ್ಥಮಾಡಿಕೊಳ್ಳುವುದು ಕಠಿಣವಲ್ಲ. ಅದು ಸರಳವಾದ ಕ್ರಮ. ಸುಲಭವಾಗಿ ಪಾಲಿಸಬಹುದಾದ...

ದಿಲ್ಲಿ ಮಾತು | ಬೆಳಕಿನ ಬೆನ್ನೇರಿ ಹೋದ ಕತ್ತಲು, ಮತ್ತೆ ಮರಳದಂತೆ ಮುಚ್ಚಿದ ಕಬ್ಬಿಣದ ಬಾಗಿಲುಗಳು…

2020ರ ದೆಹಲಿ ಗಲಭೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ ಕಳೆದ ಆರು ವರ್ಷಗಳಿಂದ ತಿಹಾರ್...