ಈ ದಿನ ಸಂಪಾದಕೀಯ | ವಂದೇ ಮಾತರಂ – ಕಾಂಗ್ರೆಸ್‌ ಸಿದ್ಧಾಂತ: ಡಿಕೆ ಆಯ್ಕೆ ಏನು?

Date:

ವಂದೇ ಮಾತರಂನ ಮೊದಲ ಎರಡು ಚರಣಗಳನ್ನು ಹಾಡುವುದರಲ್ಲಿ ಕಾಂಗ್ರೆಸ್‌ಗೆ ಯಾವುದೇ ಗೊಂದಲವಿಲ್ಲ. ಯಾಕೆಂದರೆ, ಆ ಎರಡು ಚರಣಗಳನ್ನು ‘ರಾಷ್ಟ್ರೀಯ ಗೀತೆ’ಯಾಗಿ ಘೋಷಿಸಿದ್ದೇ ಕಾಂಗ್ರೆಸ್‌. ಆದರೆ, ಪೂರ್ಣಗೀತೆ ಹಾಡುವ ವಿಚಾರದಲ್ಲಿ ಡಿ.ಕೆ ಶಿವಕುಮಾರ್ ಏನು ಮಾಡಬಹುದು?

- Advertisement -

‘ವಂದೇ ಮಾತರಂ’ ಗೀತೆಯ 150ನೇ ವರ್ಷಾಚರಣೆಯನ್ನು ಮೋದಿ ಸರ್ಕಾರ ಘೋಷಿಸಿ ಆರು ತಿಂಗಳು ಕಳೆದಿವೆ. ಇನ್ನೂ ಆರು ತಿಂಗಳು ‘ವಂದೇ ಮಾತರಂ’ ಆಚರಣೆ ಮುಂದುವರೆಯಲಿದೆ. ಈ ಗೀತೆಯು ಹಾಡುವುದಕ್ಕಿಂತ ಹೆಚ್ಚಾಗಿ ವಿವಾದದ ಸುಳಿಯಲ್ಲೇ ಸುತ್ತುತ್ತಿದೆ. ಕೇಂದ್ರ ಸರ್ಕಾರವೇ ಇದನ್ನು ವಿವಾದದ ಕೇಂದ್ರವನ್ನಾಗಿಸಿದೆ. ತನ್ನ ಸೈದ್ಧಾಂತಿಕ ಕೋಮುದ್ವೇಷದ ಹೂರಣವನ್ನು ದೇಶಾದ್ಯಂತ ಬಿತ್ತುವ ತಂತ್ರ-ಕುತಂತ್ರ ಹೆಣೆಯುತ್ತಿದೆ. ಸದ್ಯ, ಕೇರಳದಲ್ಲಿ ‘ವಂದೇ ಮಾತರಂ’ ವಿವಾದ ಮುಂಚೂಣಿಯಲ್ಲಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಲೈಂಗಿಕ ಕಿರುಕುಳ ಆರೋಪಕ್ಕೆ ಜಾತಿದೌರ್ಜನ್ಯ ಗುರಾಣಿಯೇ? ಸಂತ್ರಸ್ತೆಯ ವಿರುದ್ಧ...

ಸಿಇಸಿ ಗ್ಯಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಜಂತರ್ ಮಂತರ್ ಸಮೀಪ ನಡೆದ ಪ್ರತಿಭಟನೆಯಲ್ಲಿ ಮೂವರು ಮಹಿಳಾ ಪತ್ರಕರ್ತೆಯರಿಗೆ ಲೈಂಗಿಕ ಕಿರುಕುಳ ನೀಡಿದ ಗಂಭೀರ ಆರೋಪ ಎದುರಿಸುತ್ತಿರುವ ದೆಹಲಿ ಪೊಲೀಸ್ ಸಹಾಯಕ ಆಯುಕ್ತ (ಎಸಿಪಿ)...

ಚಿಕ್ಕಬಳ್ಳಾಪುರ ಕಾಂಗ್ರೆಸ್‌ನಲ್ಲಿ ಭಿನ್ನಮತ ಸ್ಫೋಟ: ಶಾಸಕ ಪ್ರದೀಪ್ ಈಶ್ವರ್...

ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಅವರು ತಾವು ರಾಜಕೀಯಕ್ಕೆ ಬರಲು ಮತ್ತು ಟಿಕೆಟ್ ಪಡೆಯಲು ಚಿಂತಾಮಣಿ ಶಾಸಕ ಹಾಗೂ ಮಾಜಿ ಸಚಿವ ಡಾ. ಎಂ.ಸಿ. ಸುಧಾಕರ್ ಅವರೇ ಕಾರಣ ಎಂದು ಬಹಿರಂಗವಾಗಿ ಹಲವಾರು...

ಬೆವರಿನ ಹಣಕ್ಕೆ ಮೋದಿ ಸರ್ಕಾರದ ಕಂಟಕ: ಹೊಸ ಪಿಎಫ್...

ತಮ್ಮದೇ ಬೆವರಿನ ಗಳಿಕೆ, ತುರ್ತು ಬದುಕಿನ ಆಸರೆ ಪಿಎಫ್. ಆದರೆ ಇಂದು ಆ ಹಣವನ್ನು ಪಡೆಯಲಾಗದೆ ಗಾರ್ಮೆಂಟ್ಸ್ ಕಾರ್ಮಿಕರು ಕಣ್ಣೀರು ಹಾಕುವಂತಾಗಿದೆ. ಬಟ್ಟೆ ಕಾರ್ಖಾನೆಗಳ ಶ್ರಮಿಕರ ಬದುಕಿಗೆ ಕೇಂದ್ರದ ಮೋದಿ ಸರ್ಕಾರದ ಹೊಸ...

ಕೇರಳದ ಹೊಸ ಸರ್ಕಾರದ ಮೊದಲ ವಿಧಾನಸಭಾ ಅಧಿವೇಶನದಲ್ಲಿ ಭಾಷಣ ಮಾಡಿದ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರು, ಸದನದಲ್ಲಿ ವಂದೇ ಮಾತರಂ ಗೀತೆಯನ್ನು ಪೂರ್ತಿ ಹಾಡಿಲ್ಲವೆಂದು ಸಿಟ್ಟಾಗಿದ್ದಾರೆ. ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅವರ ಅಸಮಾಧಾನವು ‘ವಂದೇ ಮಾತರಂ’ ಕುರಿತ ಚರ್ಚೆಯನ್ನು ಮತ್ತೆ ಮುನ್ನಲೆಗೆ ತಂದಿದೆ.

ರಾಜ್ಯಪಾಲರು ಸಿಟ್ಟಾದರೂ, ಕೇರಳ ಸರ್ಕಾರ ಮತ್ತು ವಿಪಕ್ಷಗಳು ಶಾಂತಚಿತ್ತದಿಂದಿವೆ. ಆಡಳಿತಾರೂಢ ಕಾಂಗ್ರೆಸ್‌ ನೇತೃತ್ವದ ಯುಡಿಎ ಮತ್ತು ಮುಖ್ಯಮಂತ್ರಿ ವಿ.ಡಿ ಸತೀಶನ್ ಅವರು ‘ವಂದೇ ಮಾತರಂ ಅನ್ನು ಪೂರ್ಣ ಹಾಡಲೇಬೇಕೆಂಬುದು ಕಡ್ಡಾಯವಲ್ಲ. ಸಂವಿಧಾನದಲ್ಲಿ ಅಂತಹ ಯಾವುದೇ ನಿಬಂದನೆಗಳಿಲ್ಲ’ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಅವರ ಮಾತಿಗೆ ವಿಪಕ್ಷ ನಾಯಕ ಪಿಣರಾಯಿ ವಿಜಯನ್ ಕೂಡ ದನಿಗೂಡಿಸಿದ್ದಾರೆ.

ತಮಿಳುನಾಡಿನಲ್ಲಿ, ಜೋಸೆಫ್ ವಿಜಯ್ ಅವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವ ವೇಳೆ ವಂದೇ ಮಾತರಂ ಅನ್ನು ಪೂರ್ತಿ ಹಾಡಲು ಅವಕಾಶ ನೀಡಲಾಗಿತ್ತು. ವಿಜಯ್ ನಡೆಗೆ ರಾಜ್ಯಾದ್ಯಂತ ಭಾರೀ ಆಕ್ರೋಶ ವಿರೋಧಗಳು ವ್ಯಕ್ತವಾಗಿದ್ದವು. ದಕ್ಷಿಣ ಭಾರತದ ರಾಜ್ಯಗಳಲ್ಲಿ ವಂದೇ ಮಾತರಂ ಸೇರಿದಂತೆ ಹಿಂದಿ ಸಾಂಸ್ಕೃತಿಕ ವಿಷಯಗಳನ್ನು ಕೇಂದ್ರ ಸರ್ಕಾರ ಬಲವಂತವಾಗಿ ಹೇರುತ್ತಿದೆ ಎಂಬ ಆಕ್ರೋಶವಿದೆ.

ವಂದೇ ಮಾತರಂ ಅನ್ನು ಪೂರ್ತಿಯಾಗಿ ಹಾಡುವುದು ಬಿಜೆಪಿಯ ಸಾಂಸ್ಕೃತಿಕ ಅಜೆಂಡಾವಾಗಿದೆ. ಸಂವಿಧಾನದ ಧರ್ಮನಿರಪೇಕ್ಷ ತತ್ವವನ್ನು ಬುಡಮೇಲು ಮಾಡುವುದು ಮತ್ತು ಅಲ್ಪಸಂಖ್ಯಾತರ ಭಾವನೆಗಳಿಗೆ ಧಕ್ಕೆ ತರುವುದು ಆರ್‌ಎಸ್‌ಎಸ್‌/ಬಿಜೆಪಿಯ ತಂತ್ರವೆಂಬ ಭಾವನೆ ದಕ್ಷಿಣ ರಾಜ್ಯಗಳಲ್ಲಿವೆ.

ಈ ವಿರೋಧ, ಆಕ್ಷೇಪಗಳು ರಾಜಕೀಯವಷ್ಟೇ ಅಲ್ಲ. ವಂದೇ ಮಾತರಂ ಗೀತೆಯ ಇತಿಹಾಸ ಮತ್ತು ವಿವಾದದ ಬೇರುಗಳೇ ಆ ರೀತಿಯಲ್ಲಿವೆ. 1870ರ ದಶಕದಲ್ಲಿ ಬಂಕಿಮಚಂದ್ರ ಚಟರ್ಜಿ ಅವರು ಬರೆದ ಈ ಗೀತೆ, ‘ಆನಂದಮಠ’ (1882) ಕಾದಂಬರಿಯಲ್ಲಿದೆ. ಈ ಗೀತೆಯ ಮೊದಲ ಚರಣಗಳು ಇಂಪಾಗಿದ್ದರೂ, ಕಿವಿಗೆ ಕಂಪು ನೀಡಿದರೂ, ನಂತರದ ಚರಣಗಳಲ್ಲಿರುವುದು ಕೇವಲ ದ್ವೇಷ, ಪ್ರಚೋದನೆ, ಹಿಂಸೆ ಸಾರುತ್ತವೆ.

ವಂದೇ ಮಾತರಂ ಗೀತೆ ರಚನೆಯಾದ ಸಮಯದಲ್ಲಿ, ಭೀಕರ ಕ್ಷಾಮವು ಪಶ್ಚಿಮ ಬಂಗಾಳವನ್ನು ಧ್ವಂಸಗೊಳಿಸಿತ್ತು. ಆಗ ಬ್ರಿಟಿಷರ ಕೈಗೊಂಬೆಯಂತಿದ್ದ ನವಾಬರು ಬಂಗಾಳವನ್ನು ಆಳುತ್ತಿದ್ದರು. ಬರ, ಬೆಳೆ ನಷ್ಟದ ನಡುವೆಯೂ ಬ್ರಿಟಿಷ್ ಅಧಿಕಾರಿಗಳು ರೈತರಿಂದ ಹೆಚ್ಚು ತೆರಿಗೆ (ಧಾನ್ಯ) ವಸೂಲಿ ಮಾಡುತ್ತಿದ್ದರು. ಆ ಸಮಯದಲ್ಲಿ, ನವಾಬರು ಮತ್ತು ಈಸ್ಟ್‌ ಇಂಡಿಯಾ ಕಂಪನಿ ವಿರುದ್ಧ ಹಿಂದು-ಮುಸ್ಲಿಮರು ಯುದ್ಧಗಳನ್ನು ನಡೆಸಿದರು. ಆದರೆ, ಬಂಕಿಮ್ ಚಂದ್ರ ಅವರು ಮುಸ್ಲಿಂ ನವಾಬನನ್ನು ಮಾತ್ರವೇ ಸಂಪೂರ್ಣವಾಗಿ ತಪ್ಪಿತಸ್ಥನೆಂದು ಪರಿಗಣಿಸಿದರು. ತಮ್ಮ ನಿರೂಪಣೆಯಲ್ಲಿ ನವಾಬರು ಮತ್ತು ಬ್ರಿಟಿಷರ ವಿರುದ್ಧ ಮುಸ್ಲಿಂ ಫಕೀರರು ನಡೆಸಿದ ದಂಗೆಗಳನ್ನು ಮರೆಮಾಚಿದರು. ಪರಿಣಾಮ, ನವಾಬನ ವಿರುದ್ಧದ ನಿರೂಪಣೆಯು ಮುಸ್ಲಿಂ ದುಷ್ಕೃತ್ಯದ ಚಿತ್ರಣವಾಗಿ ಪಸರಿಸಿತು.

ಗೀತೆಯು ಮೃದುವಾಗಿ ಪ್ರಾರಂಭವಾಗುತ್ತದೆ. ಮೊದಲ ಎರಡು ಚರಣಗಳಲ್ಲಿ ಸಮೃದ್ಧಗೊಂಡ ಶಾಂತ ಭೂಮಿಯನ್ನು ಸೊಂಪಾದ ಸಂಸ್ಕೃತ ಪದಗಳನ್ನು ಬಳಸಿ ಆಹ್ವಾನಿಸುತ್ತದೆ. ಆದರೆ, ಮೂರನೇ ಚರಣದಿಂದ ಅದರ ಅಸಲಿಯತ್ತು ಆರಂಭವಾಗುತ್ತದೆ. ಕ್ಷಣಾರ್ಧದಲ್ಲಿ ಗೀತೆಯು ಕತ್ತಿಗಳ ಘರ್ಜನೆಯಾಗಿ, ಶತ್ರುಗಳಿಗೆ ವಿನಾಶ ಉಂಟುಮಾಡುವ ಗುಡುಗಿನ ಧ್ವನಿಗಳಾಗಿ ರೂಪಾಂತರಗೊಳ್ಳುತ್ತದೆ. ಭೂಮಿಯು ರಾಕ್ಷಸರನ್ನು ಸಂಹರಿಸುವ, ಹತ್ತು ಕೈಗಳಲ್ಲಿ ಮಾರಕ ಆಯುಧಗಳನ್ನು ಹೊಂದಿರುವ ಕಾಳಿಯಾಗಿ ಬದಲಾಗುತ್ತದೆ.

ಆ ಚರಣಗಳಲ್ಲಿ; ಹಿಂದು ಪ್ರಬಲ ಜಾತಿಯ ಒಂದು ಗುಂಪು ಮುಸ್ಲಿಮರನ್ನು ಕೊಲ್ಲುವಂತೆ, ಅವರ ಗುಡಿಸಲುಗಳನ್ನು ದೋಚುವಂತೆ, ಅವರ ಮಸೀದಿಗಳನ್ನು ಕೆಡವುವಂತೆ, ಮುಸ್ಲಿಂ ಮಹಿಳೆಯರನ್ನು ಸೆರೆಹಿಡಿದು ಹಾಗೂ ಸತ್ತ ಮುಸ್ಲಿಮರ ಮುಖಗಳ ಮೇಲೆ ಮುದ್ರೆ ಹಾಕುವಂತೆ ಹಿಂದುಗಳನ್ನು ಪ್ರಚೋದಿಸುತ್ತದೆ. ಈ ಕೃತ್ಯಗಳು ನಡೆಯುವವರೆಗೆ ಶ್ರೇಣೀಕೃತ ಜಾತಿ ವ್ಯವಸ್ಥೆಯನ್ನು ಸ್ಥಗಿತಗೊಳಿಸುವುದಾಗಿಯೂ, ವಿಜಯದ ನಂತರ ವ್ಯವಸ್ಥೆಯನ್ನು ಮರುಸ್ಥಾಪಿಸುವುದಾಗಿಯೂ ಗೀತೆ ಭರವಸೆ ನೀಡುತ್ತದೆ. ಮುಸ್ಲಿಮರ ಮೇಲಿನ ರಕ್ತಪಾತವು ತಮ್ಮ ಅತ್ಯುನ್ನತ ಪವಿತ್ರ ಕರ್ತವ್ಯವಾಗಿದ್ದು, ಇದನ್ನು ದೇವತೆ ಸೂಚಿಸಿದ್ದಾಳೆಂದು ಬಡ ಹಿಂದುಗಳನ್ನು ನಂಬಿಸಲಾಗುತ್ತದೆ.

ಮಾತೃಭೂಮಿ ದೇವತೆಯು ಮೂರು ದೇವತೆಗಳಾದ ‘ಜಗದ್ಧಾತ್ರಿ, ಕಾಳಿ ಮತ್ತು ದುರ್ಗಾ’ ಪ್ರತಿರೂಪವಾಗಿದ್ದಾಳೆ. ಆಕೆಯ ಮಕ್ಕಳು ಶತ್ರುವನ್ನು ಸದೆಬಡಿದು, ಆನಂತರ, ಆಕೆಯ ಹಿಂದಿನ ವೈಭವವನ್ನು ಮರುಕಳಿಸುವಂತೆ ಮಾಡಬೇಕು ಎಂದು ಪ್ರಚಾರ ಮಾಡಲಾಗುತ್ತದೆ.

ಗೀತೆಯಲ್ಲಿ ಪದಗಳ ಮೇಲಿರುವ ಬಂಕಿಮ್ ಅವರ ಅಪ್ರತಿಮ ಪಾಂಡಿತ್ಯವು, ಸಂಕುಚಿತ ಶಕ್ತಿ ಮತ್ತು ಭಾವೋದ್ರಿಕ್ತ ವಾಕ್ಚಾತುರ್ಯದಿಂದ ಓದುಗರನ್ನು ಆಕರ್ಷಿಸುತ್ತವೆ.

ಆದ್ದರಿಂದಲೇ, ನೆಹರು, ಸುಭಾಷ್ ಚಂದ್ರ ಬೋಸ್‌ ನೇತೃತ್ವದ ಕಾಂಗ್ರೆಸ್‌ ಸಮಿತಿ (1937), ಸಂವಿಧಾನ ರಚನಾ ಸಮಿತಿಗಳು ‘ರಾಷ್ಟ್ರೀಯ ಗೀತೆ’ಯಾಗಿ ವಂದೇ ಮಾತರಂ ಅನ್ನು ಆಯ್ಕೆ ಮಾಡುವಾಗ ಕೇವಲ ಎರಡು ಚರಣಗಳನ್ನು ಮಾತ್ರವೇ ಆರಿಸಿಕೊಂಡಿತು. ಪ್ರಚೋದನೆ, ಕೋಮುದ್ವೇಷ ಬಿತ್ತುವ ಉಳಿದ ಚರಣಗಳನ್ನು ಕಡೆಗಣಿಸಿತು.

ಆದರೆ, ಈಗ ಕೋಮುದ್ವೇಷವನ್ನೇ ತನ್ನ ಬಂಡವಾಳ, ಜೀವಾಳ ಮಾಡಿಕೊಂಡಿರುವ ಮೋದಿ ಸರ್ಕಾರ, ‘ವಂದೇ ಮಾತರಂ’ನ 150ನೇ ವರ್ಷಾಚರಣೆಯ ಹೆಸರಿನಲ್ಲಿ ಮುಸ್ಲಿಂ ದ್ವೇಷವನ್ನು ಪ್ರಚೋದಿಸುವ ‘ವಂದೇ ಮಾತರಂ’ನ ಎಲ್ಲ ಚರಣಗಳನ್ನೂ ಹಾಡುವಂತೆ ಪ್ರೇರೇಪಿಸುತ್ತಿದೆ. ಆ ಮೂಲಕ, ರಾಷ್ಟ್ರಗೀತೆಯನ್ನೂ ಹಿಂದೆ ಸರಿಸಿ, ದ್ವೇಷಪೂರಿತ ಗೀತೆಗೆ ಮೊದಲ ಆದ್ಯತೆ ನೀಡುತ್ತಿದೆ. ಎಲ್ಲ ರಾಜ್ಯಗಳಲ್ಲಿ ರಾಜ್ಯಪಾಲರ ಮೂಲಕ ಈ ಗೀತೆಯ ಎಲ್ಲ ಚರಣಗಳನ್ನೂ ಹೇರಲು ಹವಣಿಸುತ್ತಿದೆ.

ಆದಾಗ್ಯೂ, ವಂದೇ ಮಾತರಂ ಅನ್ನು ಕಡ್ಡಾಯವಾಗಿ ಹಾಡಲೇಬೇಕೆಂದು ಸಂವಿಧಾನ ಹೇಳುವುದಿಲ್ಲ. ರಾಷ್ಟ್ರಗೀತೆಯಂತೆ ವಂದೇ ಮಾತರಂಗೆ ‘ರಾಷ್ಟ್ರೀಯ ಗೌರವಕ್ಕೆ ಅವಮಾನ ತಡೆ ಕಾಯ್ದೆ, 1971’ ಅಡಿಯಲ್ಲಿ ರಕ್ಷಣೆಯಾಗಲೀ, ಅವಮಾನಿಸಿದರೆ ಶಿಕ್ಷೆ ವಿಧಿಸುವ ನೀತಿಗಳಾಗಲೀ ಇಲ್ಲ.

ಇತ್ತೀಚೆಗೆ, ಸುಪ್ರೀಂ ಕೋರ್ಟ್‌ ಕೂಡ “ವಂದೇ ಮಾತರಂ ಕುರಿತಾದ ಕೇಂದ್ರ ಸರ್ಕಾರದ ಮಾರ್ಗಸೂಚಿಗಳು ಕೇವಲ ಸಲಹೆ ಅಷ್ಟೇ. ಇದನ್ನು ಹಾಡಲೇಬೇಕು ಎಂದು ನಾಗರಿಕರನ್ನು ಬಲವಂತಪಡಿಸಲು ಬರುವುದಿಲ್ಲ. ಇದು ವ್ಯಕ್ತಿಯ ವೈಯಕ್ತಿಕ ವಿವೇಚನೆ ಮತ್ತು ಸ್ವಾತಂತ್ರ್ಯಕ್ಕೆ ಬಿಟ್ಟದ್ದು. ಹಾಡದಿದ್ದವರಿಗೆ ಯಾವುದೇ ಕಾನೂನಾತ್ಮಕ ಶಿಕ್ಷೆಯಿಲ್ಲ” ಎಂದು ಸ್ಪಷ್ಟಪಡಿಸಿದೆ.

ಈ ಲೇಖನ ಓದಿದ್ದೀರಾ?: ʼವಂದೇ ಮಾತರಂ’ವಿವಾದ; ಪರಿವಾರ- ಪ್ರಧಾನಿ ಪೋಣಿಸಿದ ಸುಳ್ಳುಗಳ ಬೊಂತೆ

ಆದ್ದರಿಂದ, ಮೋದಿ ಸರ್ಕಾರದ ಕೋಮುವಾದಿ ತಂತ್ರಕ್ಕೆ ದಕ್ಷಿಣದ ರಾಜ್ಯಗಳು ಮಣೆ ಹಾಕುತ್ತಿಲ್ಲ. ದಕ್ಷಿಣ ರಾಜ್ಯಗಳ ಜೊತೆಗೆ ಈಶಾನ್ಯ ರಾಜ್ಯಗಳೂ ‘ವಂದೇ ಮಾತರಂ’ನ ದ್ವೇಷಪೂರಿತ ಚರಣಗಳ ವಿರುದ್ಧ ಸೆಟೆದುನಿಂತಿವೆ. ನಾಗಾಲ್ಯಾಂಡ್‌ನಲ್ಲಿ ಬಿಜೆಪಿಯ ಮಿತ್ರಪಕ್ಷ ‘ನಾಗಾ ಪೀಪಲ್ಸ್‌ ಫ್ರಂಟ್‌’ ಕೂಡ ವಂದೇ ಮಾತರಂನ ಪೂರ್ಣ ಚರಣಗಳನ್ನು ಹಾಡಬೇಕೆಂಬುದನ್ನು ಗಟ್ಟಿದನಿಯಲ್ಲಿ ವಿರೋಧಿಸಿದೆ.

ಸದ್ಯಕ್ಕೆ, ನಮ್ಮ ಮುಂದಿರುವ ಪ್ರಶ್ನೆ ಒಂದೇ: ಕೇರಳವು ‘ವಂದೇ ಮಾತರಂ’ನ ಪೂರ್ಣ ಗೀತೆಗೆ ಮಣೆ ಹಾಕಿಲ್ಲ. ತಮಿಳುನಾಡಿನಲ್ಲಿ ವಿಜಯ್ ಅವರು ಪೂರ್ತಿ ಗೀತೆ ಹಾಡಿ, ವಿರೋಧಕ್ಕೆ ತುತ್ತಾಗಿದ್ದಾರೆ. ಈಗ, ಕರ್ನಾಟಕದಲ್ಲಿ ಸದ್ಯದಲ್ಲೇ ಡಿ.ಕೆ ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಅವರಿಗೆ ರಾಜ್ಯಪಾಲ ಥಾವರ್ ಚಂದ್ರ ಗೆಹ್ಲೋಟ್ ಅವರು ಪ್ರಮಾಣ ವಚನ ಬೋಧಿಸಲಿದ್ದಾರೆ. ಆ ಸಮಯದಲ್ಲಿಯೂ ‘ವಂದೇ ಮಾತರಂ’ ವಿವಾದ ಮುನ್ನೆಲೆಗೆ ಬರುವ ಸಾಧ್ಯತೆ ದಟ್ಟವಾಗಿದೆ.

ವಂದೇ ಮಾತರಂನ ಮೊದಲ ಎರಡು ಚರಣಗಳನ್ನು ಹಾಡುವುದರಲ್ಲಿ ಕಾಂಗ್ರೆಸ್‌ಗೆ ಯಾವುದೇ ಗೊಂದಲವಿಲ್ಲ. ಯಾಕೆಂದರೆ, ಆ ಎರಡು ಚರಣಗಳನ್ನು ‘ರಾಷ್ಟ್ರೀಯ ಗೀತೆ’ಯಾಗಿ ಘೋಷಿಸಿದ್ದೇ ಕಾಂಗ್ರೆಸ್‌. ಆದರೆ, ಪೂರ್ಣಗೀತೆ ಹಾಡುವ ವಿಚಾರದಲ್ಲಿ ಡಿ.ಕೆ ಶಿವಕುಮಾರ್ ಏನು ಮಾಡಬಹುದು? ಕಾಂಗ್ರೆಸ್‌ನ ಸೈದ್ಧಾಂತಿಕ ಬದ್ಧತೆಯನ್ನು ಡಿ.ಕೆ ಶಿವಕುಮಾರ್ ಹೊಂದಿದ್ದರೆ, ಅವರೂ ಕೂಡ ಸಿದ್ದರಾಮಯ್ಯರಂತೆ ವಂದೇ ಮಾತರಂನ ಪೂರ್ಣ ಚರಣ ಹಾಡುವುದಕ್ಕೆ ಮಣೆ ಹಾಕಬಾರದು.

ತಮ್ಮದೇ ಪಕ್ಷ ಅಧಿಕಾರದಲ್ಲಿರುವ ಕೇರಳ ಮಾದರಿಯಲ್ಲಿ ವಂದೇ ಮಾತರಂ ಕಡ್ಡಾಯವಲ್ಲ ಎಂಬ ಕಾನೂನಾತ್ಮಕ ನಿಲುವಿಗೆ ಅಂಟಿಕೊಂಡು, ರಾಷ್ಟ್ರಗೀತೆಗೆ (ಜನ ಗಣ ಮನ) ಆದ್ಯತೆ ನೀಡಬೇಕು. ಇಲ್ಲವಾದಲ್ಲಿ, ರಾಜ್ಯದ ಎದುರು ಅಪಹಾಸ್ಯಕ್ಕೆ ತುತ್ತಾಗುವುದು ನಿಶ್ಚಿತ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ಗ್ಯಾನೇಶ್ ರಕ್ಷಣೆಗಾಗಿ ಯುವತಿಯರನ್ನು ಪೀಡಿಸುವ ಕೀಚಕರಾಗುತ್ತಿದ್ದಾರೆಯೇ ದೆಹಲಿ ಪೊಲೀಸರು?

ರಕ್ಷಕರೇ ಭಕ್ಷಕರಾಗುವ ಅದೇ ಹಳೆಯ ನಿರಾಶಾಜನಕ ಕತೆಯಿದು. ದೆಹಲಿ ಪ್ರತಿಭಟನೆಯಲ್ಲಿ ಪೊಲೀಸರ...

ಈ ದಿನ ಸಂಪಾದಕೀಯ | ಸಂಸದೀಯ ಸಮಿತಿ ಸಭೆಯಿಂದ ಸುಪ್ರೀಂ ಕೋರ್ಟ್‌ ಹಿಂದೆ ಸರಿದದ್ದು ಸ್ವಾಗತಾರ್ಹ!

ಸಂವಿಧಾನದ 143ನೇ ವಿಧಿಯಡಿ ಸಂಸದೀಯ ಸಮಿತಿಯು ಮಹತ್ವದ ಕಾನೂನು ರೂಪಿಸುವಾಗ, ಸುಪ್ರೀಂ...

ಈ ದಿನ ಸಂಪಾದಕೀಯ | ಡಿಕೆಶಿ ಪ್ರತಿರೋಧಕ್ಕೆ ಮಣಿದ ಚುನಾವಣಾ ಆಯೋಗ; ಈವರೆಗಿನ ಅಕ್ರಮಗಳಿಗೆ ಹೊಣೆ ಯಾರು?

ಕರ್ನಾಟಕದಲ್ಲಿ ಎಸ್‌ಐಆರ್‌ ಆರಂಭವಾಗುವ ಮೊದಲೇ ನಾಗರಿಕ ಸಂಘಟನೆಗಳು ಕಾಂಗ್ರೆಸ್‌ ಗೆ ಎಸ್‌ಐಆರ್‌...

ಈ ದಿನ ಸಂಪಾದಕೀಯ | ದೇಶಕ್ಕೆ ಆರ್ಥಿಕ ಬಿಕ್ಕಟ್ಟು ಎದುರಾಗಲಿದೆಯೇ, ನಾಯಕರ ಮಾತು ಎಚ್ಚರಿಕೆಯ ಗಂಟೆಯೇ?

ವಿದೇಶಾಂಗ ನೀತಿ ಗೊತ್ತಿಲ್ಲದ ಜೈಶಂಕರ್‌, ಬಡವರು ಹೇಗೆ ಬದುಕುತ್ತಿದ್ದಾರೆ ಎಂದು ಅರಿಯದ...