ಈ ದಿನ ಸಂಪಾದಕೀಯ | ಸರ್ವಪಕ್ಷ ಸಭೆ ಎಂದಾಕ್ಷಣ ಹೆದರಿ ಓಡುವುದೇಕೆ ಪ್ರಧಾನಿ ಮೋದಿ?

Date:

ಕಳೆದ ಹನ್ನೆರಡು ವರ್ಷಗಳಲ್ಲಿ ಮೋದಿ ಎಂದೂ ಪತ್ರಿಕಾಗೋಷ್ಟಿ ಕರೆಯಲಿಲ್ಲ, ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಲಿಲ್ಲ. ಹಾಗೆಯೇ ಅಧಿವೇಶನದಲ್ಲಿ ಖುದ್ದು ಹಾಜರಿದ್ದು ಪ್ರತಿಪಕ್ಷಗಳ ಪ್ರಶ್ನೆಗಳಿಗೆ ಕಿವಿಯಾದವರೂ ಅಲ್ಲ. ದೇಶ ಬಿಕ್ಕಟ್ಟಿನಲ್ಲಿರುವಾಗ ಕರೆಯುವ ಸರ್ವಪಕ್ಷ ಸಭೆಗಳಿಗೂ ಭಾಗಿಯಾದವರಲ್ಲ. ಮೋದಿಯವರಿಗೆ ಪ್ರಶ್ನೆಗಳೆಂದರೆ ಆಗುವುದಿಲ್ಲ. ಅಂತಹ ಸಂದರ್ಭ ಸೃಷ್ಟಿಯಾದರೆ, ಅವರು ಅಲ್ಲಿರುವುದಿಲ್ಲ.

ಏ. 1ರಂದು ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆಯವರು ‘ಎಲ್ಲಿ ನಿಮ್ಮ ಪ್ರಧಾನಿ’ ಎಂದು ಏರಿದ ಧ್ವನಿಯಲ್ಲಿ ಆಡಳಿತ ಪಕ್ಷದವರನ್ನು ಪ್ರಶ್ನಿಸಿದರು. ಆ ಪ್ರಶ್ನೆ ಕೊಂಚ ಗಡುಸಾಗಿತ್ತು, ಆಕ್ರೋಶಭರಿತವಾಗಿತ್ತು. ವಿರೋಧ ಪಕ್ಷದ ನಾಯಕರು ಆ ರೀತಿ ಆಕ್ರೋಶ ವ್ಯಕ್ತಪಡಿಸಲು ಕಾರಣವೂ ಇತ್ತು.

- Advertisement -

ಅದೇನೆಂದರೆ, ಪಶ್ಚಿಮ ಏಷ್ಯಾ ಸಂಘರ್ಷ ಕುರಿತು ನಡೆದ ಸರ್ವಪಕ್ಷಗಳ ಸಭೆಗೆ ಪ್ರಧಾನಮಂತ್ರಿ ಮೋದಿ ಗೈರು ಹಾಜರಾಗಿದ್ದರು. ಅಷ್ಟೇ ಅಲ್ಲ, ಕೊಲ್ಲಿ ಯುದ್ಧದಿಂದಾಗಿ ಪೆಟ್ರೋಲ್, ಡೀಸೆಲ್‌, ಎಲ್‌ಪಿಜಿ ಕೊರತೆ ಉಂಟಾಗಿತ್ತು. ಇದರಿಂದ ಸರಕು-ಸಾಗಾಣಿಕೆ ವೆಚ್ಚ ಹೆಚ್ಚಾಗಿತ್ತು. ದಿನಬಳಕೆಯ ವಸ್ತುಗಳ ಬೆಲೆ ಏರಿಕೆಯಾಗಿತ್ತು. ಸಮಸ್ಯೆ ಸಾಮಾನ್ಯನ ಮನೆಗೇ ಬಂದಿತ್ತು. ಇದರ ಜೊತೆಗೆ ದೇಶದ ವಿದೇಶಾಂಗ ನೀತಿ, ಆಮದು-ರಫ್ತು ಸ್ಥಗಿತ, ಷೇರುಪೇಟೆ ಕುಸಿತ, ಆರ್ಥಿಕತೆ ಮೇಲಿನ ಪರಿಣಾಮ ಕುರಿತು ಚರ್ಚೆಗೆ ಸರ್ಕಾರ ಅಧಿವೇಶನದಲ್ಲಿ ಅವಕಾಶ ಕೊಟ್ಟಿರಲಿಲ್ಲ. ಕೊಟ್ಟರೂ ಕೇಳಿಸಿಕೊಳ್ಳಲು ಪ್ರಧಾನಿ ಮೋದಿಯವರೇ ಸದನದಲ್ಲಿ ಇರಲಿಲ್ಲ. ಇದು ಖರ್ಗೆಯವರ ಕೋಪಕ್ಕೆ ಕಾರಣವಾಗಿತ್ತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಹೊಸ ಓದು | ಬಿ. ಚಂದ್ರೇಗೌಡರ ‘ಕಾಳ ಮಾವನ...

ಬಿ. ಚಂದ್ರೇಗೌಡರ 'ಬಯಲು ಸೀಮೆಯ ಕಟ್ಟೆಪುರಾಣ' ಅಂಕಣ ಬರಹದಿಂದ ಎದ್ದುಬಂದ ಕಾಳಮಾವ ಈಗ ತನ್ನ ಕಡೇ ದಿನಗಳಲ್ಲಿದ್ದಾರೆ. ಅವರು ಕಣ್ಣುಮುಚ್ಚುವ, ಕಾಲುಮಡಚುವ ದೃಶ್ಯಗಳು ಭಾರತದ ಆತ್ಮಸಾಕ್ಷಿಯ ಅಂತ್ಯಸಂಸ್ಕಾರವನ್ನು ಸಂಕೇತಿಸುವಂತಿವೆ. ನಮ್ಮ ನೆಲದ ನಾಲಿಗೆನಿಷ್ಠೆ...

ಬ್ರಿಟಿಷ್ ಕಾಲದ ʼಗುಲಾಮಗಿರಿʼ ಕಾನೂನುಗಳೇ ಇಂದಿನ ಪೊಲೀಸ್‌ ವ್ಯವಸ್ಥೆಯ...

ಸ್ವಾತಂತ್ರ್ಯ ಬಂದು ದಶಕಗಳೇ ಕಳೆದಿದ್ದರೂ, ನಾವಿನ್ನೂ ಬ್ರಿಟಿಷರು ಭಾರತೀಯರನ್ನು ದಮನ ಮಾಡಲು ರೂಪಿಸಿದ 1861ರ ಪೊಲೀಸ್ ಕಾಯಿದೆಯ ನೆರಳಿನಲ್ಲೇ ಬದುಕುತ್ತಿದ್ದೇವೆಯೇ? ಖಾಕಿ ಪಡೆಯನ್ನು 'ಪ್ರಜೆಗಳ ರಕ್ಷಕ'ನಾಗಿಸಬೇಕಿದ್ದ ವ್ಯವಸ್ಥೆ, ಇಂದಿಗೂ ರಾಜಕಾರಣಿಗಳ ಕೈಗೊಂಬೆಯಾಗಿ ಉಳಿದುಕೊಳ್ಳಲು...

ಯಾರು ಹಿತವರು ಈ ಇಬ್ಬರೊಳಗೆ? ನೇಹಾ ಬೋರಾ ಅಭಿಜಿತ್...

“ಹೋಲಿಕೆ ಬೇಡ, ಒಗ್ಗಟ್ಟು ಬೇಕು. ನಾವೆಲ್ಲರೂ ಒಟ್ಟಾಗಿ ಚುನಾವಣಾ ಆಯೋಗದ ಅಕ್ರಮಗಳ ವಿರುದ್ಧ ಹೋರಾಡಬೇಕು” ಎಂದು ನೇಹಾ ಬರೆದರೆ, ಅದಕ್ಕೆ ಅಭಿಜೀತ್ ಉತ್ತರ- “ಇಂಕ್ವಿಲಾಬ್ ಜಿಂದಾಬಾದ್” ನೇಹಾ ಬೋರಾ ಮತ್ತು ಅಭಿಜಿತ್ ದೀಪ್ಕೆ ನಡುವೆ...

ಪ್ರಧಾನಿಗಳಿಗೆ ಸರ್ವಪಕ್ಷ ಸಭೆಗಿಂತ ಮತ್ತು ಅಧಿವೇಶನಕ್ಕಿಂತ ಮುಖ್ಯವಾದದ್ದು ಯಾವುದು ಎನ್ನುವ ಪ್ರಶ್ನೆ ಎದುರಾಗುವುದು ಸಹಜ. ಉತ್ತರವೆಂಬಂತೆ, ಪ್ರಧಾನಿ ಮೋದಿಯವರು ಮಹತ್ವದ ಅಧಿವೇಶನದಿಂದ ತಪ್ಪಿಸಿಕೊಂಡು ಅಸ್ಸಾಮಿನ ಟೀ ಪ್ಲಾಂಟೇಷನ್‌ನಲ್ಲಿ ಮಹಿಳಾ ಕಾರ್ಮಿಕರೊಂದಿಗೆ ಟೀ ಎಲೆ ಕೀಳುತ್ತಿದ್ದರು. ಆನಂತರ, ಚುನಾವಣಾ ರ್‍ಯಾಲಿಯಲ್ಲಿ ಪಾಲ್ಗೊಂಡು ವಿರೋಧ ಪಕ್ಷವಾದ ಕಾಂಗ್ರೆಸ್ಸನ್ನು ಹಿಗ್ಗಾಮುಗ್ಗಾ ಟೀಕಿಸುತ್ತಿದ್ದರು.

ಕಳೆದ ಹನ್ನೆರಡು ವರ್ಷಗಳಲ್ಲಿ ಅಧಿವೇಶನ ನಡೆದ ದಿನಗಳನ್ನು, ಅಧಿವೇಶನಗಳಲ್ಲಿ ಪ್ರಧಾನಿಗಳ ಹಾಜರಿಯನ್ನು, ವಿಪಕ್ಷಗಳ ಪ್ರಶ್ನೆಗಳಿಗೆ ಪ್ರಧಾನಿಗಳು ಸಂಯಮದಿಂದ ಉತ್ತರಿಸಿದ್ದನ್ನು, ಯಾವುದಾದರೂ ವಿಷಯ ಕುರಿತು ಸುದೀರ್ಘವಾಗಿ ಪ್ರಧಾನಿಗಳು ಮಾತನಾಡಿದ್ದನ್ನು ದೇಶ ಕಂಡಿದ್ದಿಲ್ಲ. ಪ್ರಧಾನಿ ಮೋದಿಯವರಿಗೆ ಪ್ರಶ್ನೆಗಳೆಂದರೆ ಆಗುವುದಿಲ್ಲ. ಅಂತಹ ಸಂದರ್ಭ ಸೃಷ್ಟಿಯಾದರೆ, ಅವರು ಅಲ್ಲಿರುವುದಿಲ್ಲ.

ಉದಾಹರಣೆಗೆ ಪಹಲ್ಗಾಮ್ ಉಗ್ರರ ದಾಳಿಯನ್ನು ಗಮನಿಸಬಹುದು. ದಾಳಿಯಿಂದ ಪತಿ ಕಳೆದುಕೊಂಡ ಮಹಿಳೆಯರು ದುಃಖದ ಮಡುವಿನಲ್ಲಿದ್ದರೆ; ಪ್ರಧಾನಿ ಮೋದಿಯವರು ಬಿಹಾರದ ಮಧುಬನಿಯಲ್ಲಿ ಭೀಕರ ಚುನಾವಣಾ ಭಾಷಣ ಕುಟ್ಟುತ್ತಿದ್ದರು. ದಾಳಿಯಲ್ಲಿ ಭದ್ರತಾ ವೈಫಲ್ಯ, ಗುಪ್ತಚರ ಇಲಾಖೆಯ ನಿಷ್ಕ್ರಿಯತೆ ಎದ್ದು ಕಾಣುತ್ತಿತ್ತು. ಆ ಬಗ್ಗೆ ಪ್ರತಿಪಕ್ಷಗಳು ಪ್ರಶ್ನೆ ಎತ್ತಿದ್ದವು. ಉತ್ತರಿಸಬೇಕಾದ ಪ್ರಧಾನಿಗಳು, ಎರಡು ಬಾರಿ ಸರ್ವಪಕ್ಷ ಸಭೆ ನಡೆದರೂ, ಒಮ್ಮೆಯೂ ಹಾಜರಾಗಲಿಲ್ಲ. ಆದರೆ ‘ನಾವು ಚರ್ಚೆಗೆ ಸಿದ್ಧರಿದ್ದೇವೆ’ ಎಂಬ ಹೇಳಿಕೆ ಮಾತ್ರ ಬರುತ್ತದೆ. ಮಡಿಲ ಮಾಧ್ಯಮಗಳಿಂದ ಅದು ದೇಶದಾದ್ಯಂತ ಸುದ್ದಿಯಾಗುತ್ತದೆ.  

ಇದೇ ರೀತಿ ಈ ಬಾರಿಯ ಬಜೆಟ್ ಅಧಿವೇಶನದಲ್ಲೂ ಪ್ರಧಾನಿ ಮೋದಿಯವರ ಬಣ್ಣವಿಲ್ಲದ ಬೀದಿ ನಾಟಕ ಪುನರಾವರ್ತನೆಯಾಗಿದೆ. ಎಂದಿನಂತೆ ಪ್ರಧಾನಿ ಮೋದಿಯವರು ಹೆಚ್ಚೆಂದರೆ ಹತ್ತು ನಿಮಿಷ ಕೂತು ನಿರ್ಗಮಿಸಿದ್ದಾರೆ. ಬಿಜೆಪಿಯ ಬಾಯಿ ಬಡುಕರು ಸದನದೊಳಗೆ ಗದ್ದಲವೆಬ್ಬಿಸಿದ್ದಾರೆ. ಸ್ಪೀಕರ್‍‌ಗೆ ಅಷ್ಟು ಸಾಕಾಗಿದೆ, ಸದನವನ್ನು ಮುಂದೂಡಿದ್ದಾರೆ.

ಅದರಲ್ಲೂ ಈ ಬಾರಿ ಅಧಿವೇಶನದಲ್ಲಿ ದೇಶ ಎದುರಿಸುತ್ತಿರುವ ಗಂಭೀರ ಸಮಸ್ಯೆಗಳಾದ ಬೆಲೆ ಏರಿಕೆ, ಸಿಲಿಂಡರ್ ಸರಬರಾಜು ವ್ಯತ್ಯಯ, ಪೆಟ್ರೋಲ್-ಡೀಸೆಲ್ ಕೊರತೆ, ಆಮದು-ರಫ್ತು ಸ್ಥಗಿತ, ಬೆಲೆ ಏರಿಕೆಗಳನ್ನು ಕುರಿತು ಸರ್ಕಾರ ಉತ್ತರಿಸಬೇಕಿತ್ತು. ಅದಕ್ಕಿಂತಲೂ ಮುಖ್ಯವಾಗಿ ಪಶ್ಚಿಮ ಏಷ್ಯಾ ಸಂಘರ್ಷ ಕುರಿತು ದೇಶದ ನಿಲುವು, ವಿದೇಶಾಂಗ ನೀತಿಯಂತಹ ಗಂಭೀರ ವಿಷಯಗಳನ್ನು ಕುರಿತು ಚರ್ಚಿಸಬೇಕಿತ್ತು. ಆಳುವ ಸರ್ಕಾರವೇ ಮಾ. 25ರಂದು ಕರೆದಿದ್ದ ಸರ್ವಪಕ್ಷಗಳ ಸಭೆಗೆ ಪ್ರಧಾನಮಂತ್ರಿ ಮೋದಿಯವರೇ ಗೈರು ಹಾಜರಾಗಿದ್ದರು.

ಪಹಲ್ಗಾಮ್‌ ಉಗ್ರರ ದಾಳಿಯ ಸಂದರ್ಭದಲ್ಲಿಯೂ, ಕೊಲ್ಲಿ ಯುದ್ಧದ ಈ ಬಿಕ್ಕಟ್ಟಿನ ಸಮಯದಲ್ಲಿಯೂ- ಮೋದಿಯವರಿಗೆ ಚುನಾವಣೆಯೇ ಮುಖ್ಯವಾಗಿದೆ. ಚುನಾವಣೆಯ ನಡುವೆ ಸಮಯ ಸಿಕ್ಕರೆ, ರಾಮನ ಭಜನೆಯಲ್ಲೋ, ವಿದೇಶ ಪ್ರಯಾಣದಲ್ಲೋ, ವಿವಿಧ ವೇಷಭೂಷಣಗಳ ಫ್ಯಾಷನ್ ಪರೇಡ್‌ನಲ್ಲೋ ಕಾಲ ಕಳೆಯುತ್ತಾರೆ.  

ಸರ್ವಪಕ್ಷಗಳ ಸಭೆಗೆ ಪ್ರಧಾನಿ ಮೋದಿಯವರು ಗೈರಾಗಿರುವುದು ಕೇವಲ ಪ್ರೋಟೋಕಾಲ್ ಉಲ್ಲಂಘನೆ ಎಂದು ಸರಳವಾಗಿ ತಳ್ಳಿಹಾಕುವ ವಿಷಯವಲ್ಲ; ಇದು ಪ್ರಜಾಪ್ರಭುತ್ವದ ಆತ್ಮವನ್ನೇ ಪ್ರಶ್ನಿಸುವ ಸಂಗತಿ. ಸರ್ವಪಕ್ಷಗಳ ಸಭೆ ಎಂಬುದು ವಿಭಿನ್ನ ರಾಜಕೀಯ ಧೋರಣೆಗಳು, ವಾದ-ವಿವಾದಗಳು ಮತ್ತು ಜನಪ್ರತಿನಿಧಿಗಳ ಧ್ವನಿಗಳು ಒಂದೇ ವೇದಿಕೆಯಲ್ಲಿ ಕೇಳಿಸಿಕೊಳ್ಳುವ ಅಪರೂಪದ ಅವಕಾಶ. ಅಂತಹ ವೇದಿಕೆಗೆ ದೇಶದ ಪ್ರಧಾನಿಯೇ ಗೈರಾಗುವುದು, ಸರ್ಕಾರದ ಸಂವಾದ ಮನೋಭಾವದ ಮೇಲೆ ಅನುಮಾನ ಮೂಡಿಸುತ್ತದೆ.

ಪ್ರಜಾಪ್ರಭುತ್ವವು ಕೇವಲ ಬಹುಮತದ ಆಡಳಿತವಲ್ಲ; ಅದು ಪರಸ್ಪರ ಸಂವಾದ, ಸಹಕಾರ ಮತ್ತು ಭಿನ್ನಮತಗಳ ಗೌರವದ ಮೇಲೆಯೇ ನಿಂತಿರುವಂಥದ್ದು. ಸರ್ವಪಕ್ಷ ಸಭೆಗಳಲ್ಲಿ ಪ್ರಧಾನಿಯ ಸಾನ್ನಿಧ್ಯವು ಕೇವಲ ಔಪಚಾರಿಕತೆಯಲ್ಲ; ಅದು ಎಲ್ಲ ಪಕ್ಷಗಳಿಗೂ ಸಮಾನ ಮಾನ್ಯತೆ ನೀಡುವ ರಾಜಕೀಯ ಸಂದೇಶ ಸಾರುವಂಥದ್ದು. ಇಂತಹ ಸಂದರ್ಭಗಳಲ್ಲಿ ಗೈರು ಹಾಜರಾಗುವುದು- ವಿರೋಧ ಪಕ್ಷಗಳನ್ನು ಮತ್ತು ಮತದಾರರನ್ನು ಅವಮಾನಿಸಿದಂತೆ. ಪ್ರಜಾಪ್ರಭುತ್ವದ ಮೂಲಭೂತ ಮೌಲ್ಯಗಳನ್ನು ಮಣ್ಣು ಮಾಡಿದಂತೆ.

ಸರ್ಕಾರವು ತಾನು ಎಲ್ಲರ ಸರ್ಕಾರ ಎಂಬುದನ್ನು ಸಾಬೀತುಪಡಿಸಬೇಕಾದರೆ, ವಿರೋಧ ಪಕ್ಷಗಳೊಂದಿಗೆ ತೆರೆದ ಮನಸ್ಸಿನ ಸಂವಾದ ನಡೆಸುವುದು ಅನಿವಾರ್ಯ. ಇಂತಹ ಸಭೆಗಳಲ್ಲಿ ದೇಶದ ನಾಯಕರ ಸಕ್ರಿಯ ಭಾಗವಹಿಸುವಿಕೆ ಕೇವಲ ನಿರೀಕ್ಷೆಯಲ್ಲ, ಅವಶ್ಯಕತೆಯೂ ಆಗಿದೆ. ಯಾವುದೇ ವಿಷಯದ ಬಗ್ಗೆ, ರಚನಾತ್ಮಕ ಮತ್ತು ಗುಣಾತ್ಮಕ ಚರ್ಚೆ ನಡೆಸಿದರೆ ಪರಿಹಾರದ ದಾರಿ ಸಿಕ್ಕೇ ಸಿಗುತ್ತದೆ. ಆಡಳಿತ ಪಕ್ಷ ಹಠಮಾರಿ ಧೋರಣೆ ತಳೆಯದೆ, ಪ್ರತಿಪಕ್ಷಗಳ ಮಾತನ್ನು ಸಂಯಮದಿಂದ ಆಲಿಸಬೇಕು ಮತ್ತು ಟೀಕೆ, ನ್ಯೂನತೆಗಳನ್ನು ರಚನಾತ್ಮಕವಾಗಿ ಸ್ವೀಕರಿಸಿ, ಸುಧಾರಣೆಗಳನ್ನು ಕಂಡುಕೊಳ್ಳಬೇಕು.

ಕಳೆದ ಹನ್ನೆರಡು ವರ್ಷಗಳಲ್ಲಿ ಮೋದಿ ಎಂದೂ ಪತ್ರಿಕಾಗೋಷ್ಟಿ ಕರೆಯಲಿಲ್ಲ, ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಲಿಲ್ಲ. ಹಾಗೆಯೇ ಅಧಿವೇಶನದಲ್ಲಿ ಖುದ್ದು ಹಾಜರಿದ್ದು ಪ್ರತಿಪಕ್ಷಗಳ ಪ್ರಶ್ನೆಗಳಿಗೆ ಕಿವಿಯಾದವರೂ ಅಲ್ಲ. ದೇಶ ಬಿಕ್ಕಟ್ಟಿನಲ್ಲಿರುವಾಗ ಕರೆಯುವ ಸರ್ವಪಕ್ಷ ಸಭೆಗಳಿಗೂ ಭಾಗಿಯಾದವರಲ್ಲ. ಅವರ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ನೀಡಿ ಉತ್ತಮ ಸಂಸದೀಯ ನಡವಳಿಕೆಗೆ ಪಾತ್ರರಾದವರೂ ಅಲ್ಲ. ಇವರನ್ನು ನಾವು ಪ್ರಧಾನ ಮಂತ್ರಿ ಎಂದು ಕರೆಯುವುದರಲ್ಲಿ ಅರ್ಥವೇ ಇಲ್ಲ. 

WhatsApp Image 2025 11 17 at 3.23.18 PM
ಈ ದಿನ ಸಂಪಾದಕೀಯ
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮೈಸೂರು ದಸರಾ ಉದ್ಘಾಟನೆಗೆ ಅಭಿನವ ಗವಿಸಿದ್ದೇಶ್ವರ ಶ್ರೀಗೆ ಆಹ್ವಾನ

ಕೊಪ್ಪಳದ ಗವಿಸಿದ್ದೇಶ್ವರ ಮಠದ ಪೀಠಾಧಿಪತಿಗಳಾದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಅವರು ಈ...

ಪತ್ರಕರ್ತೆಯರ ಮೇಲೆ ಲೈಂಗಿಕ ದೌರ್ಜನ್ಯ; ಮಹಿಳೆಯರಿಗೆ ಸುರಕ್ಷತೆಯೇ ಇಲ್ಲವೇ: ಮೋಶಾಗೆ ಪ್ರಿಯಾಂಕಾ ಗಾಂಧಿ ಪ್ರಶ್ನೆ

ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆಯ ವರದಿಗಾರಿಕೆ ಮಾಡುತ್ತಿದ್ದ ಮಹಿಳಾ ಪತ್ರಕರ್ತೆಯರ ಮೇಲೆ...