ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ದೇಶದ ಆರ್ಥಿಕತೆಗೆ ಆಧಾರವಾಗಿದೆ ಎಂದು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಸಹಾಯಕ ವ್ಯವಸ್ಥಾಪಕಿ ರೇಷ್ಮಾ ದೊಡ್ಡಿ ಹೇಳಿದರು.
ಬೀದರ್ ನಗರದ ಅಕ್ಕಮಹಾದೇವಿ ಮಹಿಳಾ ಕಾಲೇಜಿನಲ್ಲಿ ಬುಧವಾರ ಆಯೋಜಿಸಿದ್ದ ಭಾರತೀಯ ರಿಸರ್ವ್ ಬ್ಯಾಂಕ್ ಸ್ಥಾಪನಾ ದಿನಾಚರಣೆ ಕಾರ್ಯಕ್ರಮವನ್ನು ಸಸಿಗೆ ನೀರೆರೆದು ಉದ್ಘಾಟಿಸಿ ಅವರು ಮಾತನಾಡಿ, “ಆರ್.ಬಿ.ಐ. ದೇಶದ ಇಡೀ ಆರ್ಥ ವ್ಯವಸ್ಥೆಯ ಕೇಂದ್ರವಾಗಿದೆ. 91 ವರ್ಷಗಳಿಂದ ಜನರ ಹಿತಕ್ಕೆ ಪೂರಕವಾಗಿ ಕೆಲಸ ಮಾಡುತ್ತಿದೆ. ಕಾಲಕಾಲಕ್ಕೆ ಹಣಕಾಸಿನ ನೀತಿಗಳನ್ನು ರೂಪಿಸುತ್ತಿದೆ” ಎಂದು ತಿಳಿಸಿದರು.
ಕಾಲೇಜು ಪ್ರಾಚಾರ್ಯೆ ಡಾ.ರಂಜನಾ ಪಾಟೀಲ ಮಾತನಾಡಿ, “ಪ್ರಸ್ತುತ ಹಣಕಾಸು ಜ್ಞಾನ ಅತ್ಯಗತ್ಯ. ಬ್ಯಾಂಕ್ ವ್ಯವಹಾರದ ಬಗ್ಗೆ ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು” ಎಂದು ಸಲಹೆ ಮಾಡಿದರು.
ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ವಿದ್ಯಾಸಾಗರ್ ಮಾತನಾಡಿ, ʼಆರ್.ಬಿ.ಐ. ದೇಶದ ಆರ್ಥ ವ್ಯವಸ್ಥೆಯ ಆಧುನಿಕರಣ ಮಾಡುತ್ತಿದೆ. ದೇಶದಲ್ಲಿ ಹಣಕಾಸಿನ ತುರ್ತು ಪರಿಸ್ಥಿತಿ ಉಂಟಾಗದಂತೆ ಅಚ್ಚುಕಟ್ಟಾಗಿ ಕಾರ್ಯ ನಿರ್ವಹಿಸಿದೆ. ದೇಶಕ್ಕೆ ಭಾರತೀಯ ರಿಸರ್ವ್ ಬ್ಯಾಂಕ್ ಕೊಡುಗೆ ಅಪಾರವಾಗಿದೆʼ ಎಂದರು.
ಇದನ್ನೂ ಓದಿ : ಬೀದರ್ | ಸ್ತ್ರೀ ಕುಲದ ಸ್ವಾಭಿಮಾನ ಅಕ್ಕ ಮಹಾದೇವಿ : ಪ್ರೊ.ಪರಮೇಶ್ವರ ನಾಯ್ಕ
ಐ.ಕ್ಯೂ.ಎ.ಸಿ. ವಿಭಾಗದ ಮುಖ್ಯಸ್ಥೆ ಡಾ.ಮೀನಾ ಗಾಯಕವಾಡ್, ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಘಟಕದ ಮುಖ್ಯಸ್ಥೆ ಡಾ.ಗಂಗಾಂಬಿಕೆ ಪಾಟೀಲ, ವಾಣಿಜ್ಯ ವಿಭಾಗದ ಮುಖ್ಯಸ್ಥೆ ಮಾಲಾಶ್ರೀ ಮೂಲಗೆ, ಅಂಬಿಕಾ ಉಪಸ್ಥಿತರಿದ್ದರು.
ಸುಷ್ಮಾ ನಿರೂಪಿಸಿದರು. ಶಿವಮಂಗಲಾ ಪಾಟೀಲ ಸ್ವಾಗತಿಸಿದರು. ಸುಹಾಸಿನಿ ವಂದಿಸಿದರು.




