ಬೆಳಗಾವಿ | ಜಿಲ್ಲೆಯಲ್ಲಿ ಮಳೆ ಕೊರತೆ: ಒಣಗಿದ ಬೆಳೆ,ಕಡಿಮೆಯಾದ ಬಿತ್ತನೆ ಪ್ರಮಾಣ

Date:

ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ಮೇಲ್ವಿಚಾರಣಾ ಕೇಂದ್ರ (ಕೆಎಸ್‌ಎನ್‌ಡಿಎಂಸಿ) ಮಾಹಿತಿ ಪ್ರಕಾರ,  ಬೆಳಗಾವಿ ಜಿಲ್ಲೆಯಲ್ಲಿ ಜೂನ್ ತಿಂಗಳಲ್ಲಿ ಜಿಲ್ಲೆಯಲ್ಲಿ 146 ಮಿ.ಮೀ ಮಳೆಯಾಗಬೇಕಾಗಿತ್ತು, ಸದ್ಯ ಕೇವಲ 104 ಮಿ.ಮೀ ಮಳೆಯಾಗಿದೆ. ಇದರಿಂದ ಶೇ 29ರಷ್ಟು ಮಳೆ ಕೊರತೆ ದಾಖಲಾಗಿದೆ.

ಪ್ರಸಕ್ತ ಸಾಲಿನ ಮುಂಗಾರು ಕೊರತೆ ಹಾಗೂ ಜೂನ್ ತಿಂಗಳಲ್ಲಿಯೂ ಮುಂದುವರಿದ ಅತಿ ಬಿಸಿಲಿನಿಂದ ಬೆಳಗಾವಿ ಜಿಲ್ಲೆಯ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮಳೆಯ ಕೊರತೆಯಿಂದ ಬಿತ್ತನೆಯು ಕಡಿಮೆಯಾಗಿದೆ, ಈಗಾಗಲೇ ಬಿತ್ತಿದ ಬೆಳೆಗಳೂ ಒಣಗುವ ಆತಂಕ ಎದುರಾಗಿದೆ.

- Advertisement -

ಜಿಲ್ಲೆಯ ತಾಲೂಕುಗಳ ಪೈಕಿ ಬೆಳಗಾವಿ ತಾಲೂಕಿನಲ್ಲಿ ಅತಿ ಹೆಚ್ಚು 105 ಮಿ.ಮೀ ಮಳೆಯಾಗಿದ್ದರೆ, ರಾಮದುರ್ಗ ತಾಲೂಕಿನಲ್ಲಿ ಕೇವಲ 46 ಮಿ.ಮೀ ಪ್ರಮಾಣದ ಕಡಿಮೆ ಮಳೆ ದಾಖಲಾಗಿದೆ. ಮಳೆಯ ಕೊರತೆಯ ಜೊತೆಗೆ ಜೂನ್ ತಿಂಗಳಿಡೀ ಬಿಸಿಲಿನ ಪ್ರಮಾಣ ಹೆಚ್ಚಿದ್ದರಿಂದ ಮುಂಗಾರು ಬೆಳೆಗಳು ಹಾಗೂ ಕಬ್ಬಿನ ಬೆಳೆ ಬಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಹಲವು ಗ್ರಾಮಗಳಲ್ಲಿ ರೈತರು ಹೊಲಗಳನ್ನು ಬಿತ್ತನೆಗೆ ಸಿದ್ಧಪಡಿಸಿಕೊಂಡಿದ್ದರೂ ಮಳೆಯಿಲ್ಲದೆ ಬಿತ್ತನೆ ಮುಂದೂಡಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಹವ್ಯಾಸದಿಂದ ಉದ್ಯಮದತ್ತ: ಶಿರಸಿ ಮಹಿಳೆಯರ ʻಡೇರೆʼ ಕೃಷಿಗೆ ಸ್ವಾವಲಂಬನೆಯ...

ಮನೆಯಂಗಳದ ಅಂದ ಹೆಚ್ಚಿಸುವ ಹೂವಷ್ಟೇ ಆಗಿದ್ದ ಡೇರೆ ಹೂವು (ಡೇಲಿಯಾ), ಇದೀಗ ಮಲೆನಾಡಿನ ಮಹಿಳೆಯರ ಪಾಲಿಗೆ ಹೊಸ ಆದಾಯದ ಸಾಧ್ಯತೆಗಳನ್ನು ತೆರೆದಿಡುತ್ತಿದೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿ, ಸಿದ್ದಾಪುರ, ಯಲ್ಲಾಪುರ ಹಾಗೂ ಶಿವಮೊಗ್ಗ...

ನಂಬಿಕೆಯ ಪ್ರಾರ್ಥನೆಗೆ ‘ಸಮ್ಮತಿ ಪತ್ರ’ದ ಕಾವಲು: ಮಹಾರಾಷ್ಟ್ರದ ಚರ್ಚ್...

ಸಾಮಾನ್ಯವಾಗಿ ಈ ಹಿಂದಿನಿಂದಲೂ ಚರ್ಚ್‌ಗಳ ಮೂಲಕ ಉಚಿತ ವೈದ್ಯಕೀಯ ಶಿಬಿರ, ರಕ್ತದಾನ, ಇತರೆ ಸಾಮಾಜಿಕ ಸೇವೆಗಳನ್ನು ಮಾಡಿಕೊಂಡು ಬರಲಾಗಿದೆ. ಆದರೆ ಮಹಾರಾಷ್ಟ್ರದಲ್ಲಿ ಜಾರಿಗೆ ಬಂದಿರುವ ಮತಾಂತರ ವಿರೋಧ ಕಾಯ್ದೆ ಈ ಸಾಮಾಜಿಕ ಕಾರ್ಯಗಳಿಗೂ...

ಮೋದಿ ಸರ್ಕಾರ ಗೆದ್ದದ್ದೇ ಅಥವಾ ಕದ್ದದ್ದೇ? ಸಿಇಸಿ ವಿವಾದ...

2024ರ ಲೋಕಸಭಾ ಚುನಾವಣೆಯ ಮತದಾನ ಅಂಕಿಅಂಶಗಳಲ್ಲಿ ಕಂಡುಬಂದ 4.65 ಕೋಟಿ ಮತಗಳ ವ್ಯತ್ಯಾಸ ಮತ್ತು 79 ಕ್ಷೇತ್ರಗಳ ಫಲಿತಾಂಶಗಳ ಕುರಿತು VFD ವರದಿ ಗಂಭೀರ ಪ್ರಶ್ನೆಗಳನ್ನು ಎತ್ತಿತ್ತು. ಇದೇ ವೇಳೆ ಚುನಾವಣಾ ಆಯೋಗದ...

ಕೃಷಿ ಇಲಾಖೆಯ ಮಾಹಿತಿಯಂತೆ, ಜಿಲ್ಲೆಯಲ್ಲಿ 7,52,312 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿತ್ತು. ಆದರೆ ಇದುವರೆಗೆ 3,81,887 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆಯಾಗಿದ್ದು, ಒಟ್ಟು ಗುರಿಯ ಶೇ 51ರಷ್ಟು ಮಾತ್ರ ಪ್ರಗತಿ ಸಾಧಿಸಲಾಗಿದೆ.

ಜಿಲ್ಲೆಯಲ್ಲಿ ಹೆಸರು 38,271 ಹೆಕ್ಟೇರ್, ಭತ್ತ 32,540 ಹೆಕ್ಟೇರ್, ಸೋಯಾಬಿನ್ 42,405 ಹೆಕ್ಟೇರ್, ಮೆಕ್ಕೆಜೋಳ 14,820 ಹೆಕ್ಟೇರ್, ಹತ್ತಿ 99,993 ಹೆಕ್ಟೇರ್ ಹಾಗೂ ಕಬ್ಬು 2,29,229 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಬೆಳೆದಿದೆ. ಆದರೆ ಮಳೆ ಕೊರತೆಯಿಂದ ಕೆಲವು ತಾಲೂಕುಗಳಲ್ಲಿ ಬಿತ್ತನೆ ಇನ್ನೂ ಆರಂಭವಾಗಿಲ್ಲ.

ಅಥಣಿ ತಾಲೂಕಿನಲ್ಲಿ 71,285 ಹೆಕ್ಟೇರ್ ಬಿತ್ತನೆ ಗುರಿ ಹೊಂದಲಾಗಿದ್ದರೂ, ಮಳೆಯ ಅಭಾವದಿಂದ ಕೇವಲ 36,230 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆ ನಡೆದಿದೆ. ತಾಲೂಕಿನ ಹಲವಾರು ಗ್ರಾಮಗಳಲ್ಲಿ ರೈತರು ಹೊಲಗಳನ್ನು ಸಿದ್ಧಪಡಿಸಿಕೊಂಡು ಮಳೆಯ ನಿರೀಕ್ಷೆಯಲ್ಲಿದ್ದಾರೆ.

ಎರಡನೇ ಬಾರಿ ಈರುಳ್ಳಿ ಬಿತ್ತನೆ

ಮಳೆಯ ಕೊರತೆ ಮತ್ತು ಜೂನ್ ತಿಂಗಳಿನಲ್ಲಿ ಹೆಚ್ಚಾದ ತಾಪಮಾನದಿಂದ ಈರುಳ್ಳಿ ಬೆಳೆ ಒಣಗಿದ ಪರಿಣಾಮ ಅನೇಕ ರೈತರು ಈಗಾಗಲೇ ಬಿತ್ತಿದ್ದ ಬೆಳೆಯನ್ನು ಉಳುಮೆ ಮಾಡಿ ಮತ್ತೆ ಜೂನ್ ಕೊನೆಯ ವಾರದಲ್ಲಿ ಬಿತ್ತನೆ ನಡೆಸಿದ್ದಾರೆ. ಇದರಿಂದ ಉತ್ಪಾದನಾ ವೆಚ್ಚ ಹೆಚ್ಚಾಗಿದ್ದು ರೈತರಿಗೆ ಆರ್ಥಿಕ ಹೊರೆಯಾಗಿದೆ.

ಈ ಕುರಿತು ಈದಿನ್.ಕಾಮ್ ಜತೆ ಮಾತನಾಡಿದ ರೈತ ವಿಠಲ ಸುನಗದ, “ನಾವು ಎರಡು ಎಕರೆ ಈರುಳ್ಳಿ ಬಿತ್ತಿದ್ದೀವಿ. ಆದ್ರ ಜೂನ್ ತಿಂಗಳೊಳಗ ಸರಿಯಾಗಿ ಮಳೆ ಆಗಲಿಲ್ಲ. ಈರುಳ್ಳಿ ಬೆಳೆಗೆ ತಂಪಾದ ವಾತಾವರಣ ಬೇಕಾಗ್ತದ. ಆದ್ರ 38 ಡಿಗ್ರಿವರೆಗೂ ಬಿಸಿಲು ಬಿದ್ದಿದ್ದರಿಂದ ಬೆಳೆ ಪೂರ್ತಿ ಒಣಗಿ ಹೋಗಿದೆ. ಅದಕ್ಕ ಹೊಲ ಹರಗಿ ಜೂನ್ ಕೊನೆ ವಾರದಲ್ಲಿ ಮತ್ತೊಮ್ಮೆ ಬಿತ್ತನೆ ಮಾಡಬೇಕಾಯ್ತು. ಎರಡು ಎಕರೆ ಈರುಳ್ಳಿ ಬೆಳೆಗೆ ಮೊದಲೇ ಸುಮಾರು ₹10 ಸಾವಿರ ಖರ್ಚಾಗಿತ್ತು. ಈಗ ಮತ್ತೆ ಅಷ್ಟೇ ಖರ್ಚು ಮಾಡಬೇಕಾಯ್ತು. ಈರುಳ್ಳಿ ಬೆಳೆಗೆ 90ರಿಂದ 105 ದಿನ ಬೇಕಾಗ್ತದ. ಒಂದು ಸಲ ಕಳೆ ತೆಗೆಯಾಕ ₹5 ಸಾವಿರ ಖರ್ಚು ಆಗ್ತದ. ನಾಲ್ಕು ಸಲ ಕಳೆ ತೆಗೆಯಬೇಕಾಗ್ತದ. ಅದಲ್ಲದೇ ಎರಡು ಎಕರೆಗೆ ಕಳೆನಾಶಕಕ್ಕೆ ₹1,400 ಖರ್ಚು, ಕೀಟನಾಶಕ ಸಿಂಪಡಣೆಗೂ ಸಾಕಷ್ಟು ಹಣ ಬೇಕಾಗ್ತದ. ಇಂಥಾ ಪರಿಸ್ಥಿತಿಯಲ್ಲಿ ಕೃಷಿ ಇಲಾಖೆ ರೈತರ ನೆರವಿಗೆ ಬರಬೇಕು” ಎಂದು ಮನವಿ ಮಾಡಿದರು.

ರೈತ ರಮೇಶ ಚಾಕಲಬ್ಬಿ ಮಾತನಾಡಿ, “ನಾವು ಎಂಟು ಎಕರೆಯಲ್ಲಿ ಹೆಸರು ಬಿತ್ತಿದ್ದೀವಿ. ಈ ವರ್ಷ ಮಳೆಯಾಗದ ಕಾರಣ ಇಳುವರಿ ಕಡಿಮೆ ಆಗಲಿದೆ. ನಾಲ್ಕು ಎಕರೆಯಲ್ಲಿ ಈರುಳ್ಳಿಯೂ ಬಿತ್ತಿದ್ದೀವಿ. ಎಂಟು ಎಕರೆಯಲ್ಲಿ ಕಬ್ಬು ಹಾಕಿದ್ದೀವಿ. ಇನ್ನೂ ಐದಾರು ದಿನದೊಳಗ ಮಳೆ ಆಗದಿದ್ದರ ಕಬ್ಬು ಕೂಡ ಒಣಗುವ ಭಯ ಇದೆ. ಈ ವರ್ಷ ಸರ್ಕಾರ ರೈತರ ಕಷ್ಟಕ್ಕೆ ಸ್ಪಂದಿಸಿ ನೆರವಿನ ಹಸ್ತ ನೀಡಬೇಕಿದೆ” ಎಂದು ಆಗ್ರಹಿಸಿದರು.

ಮುಂಗಾರು ಆರಂಭದಲ್ಲೇ ಮಳೆ ಕೊರತೆ ಉಂಟಾಗಿರುವುದರಿಂದ ಬಿತ್ತನೆ ಪ್ರಮಾಣ ಕುಸಿದಿದ್ದು, ಬೆಳೆಗಳ ಬೆಳವಣಿಗೆಯ ಮೇಲೂ ಪ್ರತಿಕೂಲ ಪರಿಣಾಮ ಬೀರಿದೆ. ಹೀಗಾಗಿ ಸರ್ಕಾರ ತಕ್ಷಣವೇ ಪರಿಸ್ಥಿತಿ ಪರಿಶೀಲಿಸಿ ಅಗತ್ಯ ನೆರವು ಹಾಗೂ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು ಎಂಬುದು ಜಿಲ್ಲೆಯ ರೈತರ ಮನವಿಯಾಗಿದೆ.

IMG 20251111 WA0000
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

45 ಲಕ್ಷ ಮತದಾರರನ್ನು ಪಟ್ಟಿಯಿಂದ ಕೈಬಿಡುವ ಷಡ್ಯಂತ್ರ; ಮುಖ್ಯ ಚುನಾವಣಾಧಿಕಾರಿಗೆ ಸಿಎಂ ದೂರು

ರಾಜ್ಯದಲ್ಲಿ ಅಲ್ಪಸಂಖ್ಯಾತರು, ದಲಿತರು ಹಾಗೂ ಹಿಂದುಳಿದ ವರ್ಗಗಳಿಗೆ ಸೇರಿದ ಸುಮಾರು 45...

ದ್ವೇಷಭಾಷಣ ಆರೋಪ: TMC ಸಂಸದೆ ಮಹುವಾ ಮೊಯಿತ್ರಾಗೆ ಬಂಧನದಿಂದ ಮುಕ್ತಿ; ಕ್ಷೇತ್ರ ಭೇಟಿ ವೇಳೆ ಭದ್ರತೆ ನೀಡಲು ಹೈಕೋರ್ಟ್‌ ಸೂಚನೆ

ದ್ವೇಷಪೂರಿತ ಭಾಷಣ ಮಾಡಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಬಂಗಾಳದ ಟಿಎಂಸಿ...

ಗ್ಯಾನೇಶ್ ಕುಮಾರ್ ವಿರುದ್ಧ ಅ. 2ರಂದು ಬೃಹತ್ ಪ್ರತಿಭಟನೆ: ಸಾಮಾಜಿಕ ಹೋರಾಟಗಾರ ಪ್ರಶಾಂತ್ ಭೂಷಣ್

ಚುನಾವಣಾ ಆಯೋಗದ ಪಾರದರ್ಶಕತೆ ಮತ್ತು ನಿಷ್ಪಕ್ಷಪಾತ ಕಾರ್ಯವೈಖರಿಯನ್ನು ಒತ್ತಾಯಿಸಿ ಹಾಗೂ ಮುಖ್ಯ...