ಬೀದರ್‌ | ಗ್ರಾಮೀಣ ರಸ್ತೆ ಅಭಿವೃದ್ಧಿ ಯೋಜನೆಯಲ್ಲಿ ಅವ್ಯವಹಾರ : ಕ್ರಮಕ್ಕೆ ಒತ್ತಾಯ

Date:

2025-26ನೇ ಸಾಲಿನ ಬೀದರ್ ಜಿಲ್ಲೆಯಲ್ಲಿ ಮುಖ್ಯಮಂತ್ರಿಗಳ ಗ್ರಾಮೀಣ ರಸ್ತೆ ಅಭಿವೃದ್ಧಿ ಯೋಜನೆಯಡಿ ರಸ್ತೆ ದುರಸ್ತಿ ಮತ್ತು ಒಗ್ಗೂಡಿಸುವಿಕೆ ಕಾಮಗಾರಿಗಳನ್ನು ಕೈಗೊಳ್ಳದೇ ಸರ್ಕಾರದ ಕೋಟ್ಯಂತರ ರೂಪಾಯಿ ಹಣವನ್ನು ದುರುಪಯೋಗಪಡಿಸಿಕೊಂಡಿರುವ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಂಡು ಸೇವೆಯಿಂದ ವಜಾಗೊಳಿಸುವಂತೆ ಆಗ್ರಹಿಸಿ ಕರ್ನಾಟಕ ಪ್ರಜಾ ಶಕ್ತಿ ಸಮಿತಿ  ಜಿಲ್ಲಾ ಘಟಕದ ವತಿಯಿಂದ ಜಿ.ಪಂ ಕಚೇರಿ ಎದುರಿಗೆ ಬುಧವರಾ ಒಂದು ದಿನದ ಸಾಂಕೇತಿಕ ಸತ್ಯಾಗ್ರಹ ಧರಣಿ ನಡೆಸಿ ಮನವಿ ಸಲ್ಲಿಸಲಾಯಿತು.

- Advertisement -

ಜಿಲ್ಲೆಯ ವಿವಿಧೆಡೆ ರಸ್ತೆ ದುರಸ್ತಿ ಕಾಮಗಾರಿ ನಡೆಸದೆ ಯೋಜನೆಯ ಅನುದಾನವನ್ನು ದುರುಪಯೋಗ ಆಗಿದೆ. ಬೀದರ್ ತಾಲ್ಲೂಕಿನ ಅಲಿಯಾಬಾದ್-ಜನವಾಡ ರಸ್ತೆ, ಅಲಿಯಂಬರ್-ಯರನಳ್ಳಿ ರಸ್ತೆ, ಔರಾದ್ (ಬಿ) ತಾಲ್ಲೂಕಿನ ಸುಂಕನಾಳ ಕ್ರಾಸ್-ಸುಂಕನಾಳ ಗ್ರಾಮ ರಸ್ತೆ, ನಾಗೂರ(ಬಿ)ಕ್ರಾಸ್-ಚಂದರ್ ಮಹಾರಾಜ ತಾಂಡಾ ರಸ್ತೆ ಸೇರಿದಂತೆ ಹಲವೆಡೆ ಕಾಮಗಾರಿಗಳು ನಡೆದಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಆರ್‌ಟಿಇ ಶಿಕ್ಷಣ ಹಕ್ಕೋ, ಶಾಲೆಗಳಲ್ಲಿನ ಸಾಮಾಜಿಕ ಅಂತರಕ್ಕೆ ಕಾರಣವೋ?

ಶಿಕ್ಷಣದ ಸಮಾನ ಅವಕಾಶದ ಆಶಯಕ್ಕೆ ಸವಾಲಾಗುತ್ತಿರುವ ನಿಯಮಗಳು, ಖಾಸಗೀಕರಣ ಮತ್ತು ಸರ್ಕಾರಿ ಶಾಲೆಗಳ ದುಸ್ಥಿತಿ ಒಂದೇ ಶಾಲೆಯ ಆವರಣ, ಒಂದೇ ತರಗತಿಯ ಕೊಠಡಿ, ಒಂದೇ ಪಠ್ಯಪುಸ್ತಕ, ಒಂದೇ ಶಿಕ್ಷಕರು. ಆದರೆ ಆ ಮಕ್ಕಳ ಹಿನ್ನೆಲೆ...

ಬಿಲ್ಕಿಸ್‌ ಬಾನೋ ‘ಮುಸ್ಲಿಂ’ ಎಂಬ ಕಾರಣಕ್ಕೇ ಪದೇ-ಪದೇ ದೂರವಾಗುತ್ತಿದೆಯೇ...

ಅಪರಾಧಿಗಳ ಹಕ್ಕುಗಳ ಬಗ್ಗೆ ಮಾತನಾಡುವ ನ್ಯಾಯವ್ಯವಸ್ಥೆ, ಸಂತ್ರಸ್ತೆಯ ಬದುಕುವ ಹಕ್ಕು, ಸುರಕ್ಷತೆ ಮತ್ತು ಘನತೆಯನ್ನೂ ಅಷ್ಟೇ ಗಂಭೀರವಾಗಿ ಪರಿಗಣಿಸುತ್ತಿದೆಯೇ? ಬಿಲ್ಕಿಸ್‌ ಬಾನೋ ಪ್ರಕರಣದಲ್ಲಿ ಈ ಪ್ರಶ್ನೆ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಭಾರತದಲ್ಲಿ ನ್ಯಾಯದ ಮುಂದೆ...

ನವ-ಉದಾರವಾದದ ಬಿಕ್ಕಟ್ಟು ಮತ್ತು ಫ್ಯಾಸಿಸ್ಟ್-ವಿರೋಧಿ ಅರ್ಥಶಾಸ್ತ್ರ: ಡಾ. ಇಸಬೆಲ್ಲಾ...

ಪ್ರಸ್ತುತ ಜಗತ್ತನ್ನು ಕಾಡುತ್ತಿರುವ ಬೆಲೆ ಏರಿಕೆ, ಆರ್ಥಿಕ ಅಸಮಾನತೆ ಮತ್ತು ಅದರಿಂದಾಗಿ ಜಾಗತಿಕವಾಗಿ ತಲೆ ಎತ್ತುತ್ತಿರುವ ಫ್ಯಾಸಿಸಂ ಪ್ರವೃತ್ತಿಗಳಿಗೆ ಪರ್ಯಾಯ ಆರ್ಥಿಕ ಮಾರ್ಗವನ್ನು ಡಾ. ಇಸಬೆಲ್ಲಾ ವೆಬರ್ ಇಲ್ಲಿ ಚರ್ಚಿಸಿದ್ದಾರೆ. ಜರ್ಮನಿಯ ಪ್ರಖ್ಯಾತ ಅರ್ಥಶಾಸ್ತ್ರಜ್ಞೆ...

ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರ ಶಿವಾಜಿರಾವ ಡೋಣೆ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಕಲೀಮೊದ್ದಿನ್, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಸುನೀಲ ಚಿಲ್ಲರ್ಗೆ ಹಾಗೂ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ಕಿರಿಯ ಅಭಿಯಂತರ ಕಿರಣ ರಾಠೋಡ್ ವಿರುದ್ಧ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳಬೇಕು. ಒಂದು ವಾರದೊಳಗೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳದಿದ್ದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಅರೆಬತ್ತಲೆ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಸಂಘಟನೆ ಎಚ್ಚರಿಕೆ ನೀಡಿದೆ.‌

ಇದನ್ನೂ ಓದಿ : ವಚನ ಸಾಹಿತ್ಯ ಸಂರಕ್ಷಕ ಫ.ಗು.ಹಳಕಟ್ಟಿ

ಧರಣಿಯಲ್ಲಿ ಕರ್ನಾಟಕ ಪ್ರಜಾ ಶಕ್ತಿ ಸಮಿತಿ  ಜಿಲ್ಲಾಧ್ಯಕ್ಷ ಸಾಯಿ ಶಿಂಧೆ, ಜಿಲ್ಲಾ ಉಪಾಧ್ಯಕ್ಷ ಮಹೇಂದ್ರಕುಮಾರ ಹೊಸಮನಿ,ಕರ್ನಾಟಕ ಕೂಲಿ ಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷ ರಮೇಶ್ ಪಾಸ್ವಾನ್, ನಗರ ಘಟಕದ ಅಧ್ಯಕ್ಷ ವಿನೋದ ಶಿಂಧೆ, ಸಂಜುಕುಮಾರ ವಲ್ಲೆಪೂರೆ, ಯುವ ಮುಖಂಡ ಬಿ. ವೀರೇಶ ಕೋರೆ, ದಲಿತ ವಿದ್ಯಾರ್ಥಿ ಪರಿಷತ್ ಜಿಲ್ಲಾ ಸಂಚಾಲಕ ಸಂದೀಪ್ ಕಾಂಟೆ, ಹೋರಾಟಗಾರ ಉಮೇಶ್ ಮುಗನೂರೆ, ಸಂತೋಷ ಸಂಗಮ, ಜೆಡಸನ್, ಬಸವರಾಜ ಭಾವಿದೊಡ್ಡಿ, ಗೌತಮ ಮುತ್ತಂಗಿಕರ್, ಶಿವುಕುಮಾರ ಗುನ್ನಳ್ಳಿಕರ್ ಉಪಸ್ಥಿತರಿದ್ದರು.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವೈವಾಹಿಕ ಅತ್ಯಾಚಾರ ಪ್ರಕರಣ: ಡಿಸೆಂಬರ್‌ನಲ್ಲಿ ಸುಪ್ರೀಂನಿಂದ ಅಂತಿಮ ವಿಚಾರಣೆ

ದೇಶಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿರುವ 'ವೈವಾಹಿಕ ಅತ್ಯಾಚಾರ' ವಿಷಯಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾಗಿರುವ...

ನನಗೀಗ 80 ವರ್ಷ, ವಯೋಸಹಜ ಕಾರಣದಿಂದಾಗಿ ನಾನು ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಲ್ಲ: ಮಾಜಿ ಸಿಎಂ ಸಿದ್ದರಾಮಯ್ಯ

ನನಗೀಗ 80 ವರ್ಷ, ಯಯೋಸಹಜ ಕಾರಣದಿಂದಾಗಿ ನಾನು ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ...

ಈ ದಿನ ಸಂಪಾದಕೀಯ | ಬರಗಾಲ, ಬೆಲೆ ಏರಿಕೆ, ಭ್ರಷ್ಟಾಚಾರ: ಬಡವರು ಬದುಕುವುದು ಹೇಗೆ?

ಲಂಚ ಕೊಡುವ ಸಾಮಾನ್ಯ ನಾಗರಿಕನನ್ನು ಮಾತ್ರ ಅಪರಾಧಿ ಎಂದು ನೋಡುವುದಕ್ಕಿಂತ, ಭ್ರಷ್ಟ...

GTA ಶೈಲಿಯಲ್ಲಿ ಪ್ರಗತಿ ಪಟ್ಟಿ ಹಂಚಿಕೊಂಡ ಮೋದಿ; ಜೈರಾಮ್ ರಮೇಶ್ ಟೀಕೆ

ಜಾಗತಿಕವಾಗಿ ಭಾರೀ ಕುತೂಹಲ ಮೂಡಿಸಿದ್ದ ಜನಪ್ರಿಯ ವಿಡಿಯೋ ಗೇಮ್ 'ಗ್ರ್ಯಾಂಡ್ ಥೆಫ್ಟ್...