Gen-Zಗಳಿಂದ ಹಳೆ ತಲೆಮಾರು ಕಲಿಯುವುದೇನು? ಹೇಗೆ ಸಹಾಯ ಮಾಡುವುದು?

Date:

ಜೆನ್‌-ಝೀಗಳದ್ದು ಪರೀಕ್ಷಾ ಹಾಲ್‌ಗಳಲ್ಲಿ, ಕೋಚಿಂಗ್ ಸೆಂಟರ್‌ಗಳಲ್ಲಿ ಮತ್ತು ಉದ್ಯೋಗ ನೇಮಕಾತಿ ಸಾಲುಗಳಲ್ಲಿ ಕಾಯುವಂತೆ ಮಾಡಲ್ಪಟ್ಟ ಒಂದು ಪೀಳಿಗೆ. Gen-Z ಗಳಿಂದ ಹಳೆ ತಲೆಮಾರು ಏನು ಕಲಿಯಬಹುದು, ಹೇಗೆ ಸಹಾಯ ಮಾಡಬಹುದು? ಎಂಬುದನ್ನು ಇಂಡಿಯನ್ ಎಕ್ಸ್‌ಪ್ರೆಸ್‌ನಲ್ಲಿ ಪ್ರಕಟಿಸಲಾದ ಲೇಖನದಲ್ಲಿ ರಾಜ್ಯಸಭಾ ಸದಸ್ಯ ಮನೋಜ್ ಝಾ ವಿವರಿಸಿದ್ದಾರೆ.

ಜೆನ್‌ ಝೀ (Gen Z) ಯುವಜನತೆ ತಮ್ಮ ಹೋರಾಟದ ಮೂಲಕ ಜನರೇಷನ್ X ಸೇರಿದಂತೆ ಇಡೀ ದೇಶವೇ ತಮ್ಮತ್ತ ತಿರುಗಿ ನೋಡುವಂತೆ ಮಾಡಿದ್ದಾರೆ. ಈ ಯುವಕರ ತಂದೆ-ತಾಯಿಗಳು ತಮ್ಮ ಮಕ್ಕಳಲ್ಲಿದ್ದ ಪ್ರತಿಭೆ ಮತ್ತು ಸಾಮರ್ಥ್ಯವನ್ನು ಮೊದಲೇ ಗುರುತಿಸಿರಬಹುದು. ಆದರೆ ಪ್ರಾಮಾಣಿಕವಾಗಿ ಹೇಳಬೇಕೆಂದರೆ ಅವರನ್ನು ಸರಿಯಾಗಿ ಅರ್ಥಮಾಡಿಕೊಳ್ಳುವಲ್ಲಿ ವಿಫಲರಾಗಿದ್ದರು ಎಂಬುದು ವಾಸ್ತವ. ಪ್ರಬುದ್ಧ ಪ್ರಜಾಪ್ರಭುತ್ವದಲ್ಲಿ ಎಂದಿಗೂ ಪ್ರತಿಭಟನೆಯ ಅಗತ್ಯವೇ ಇರಬಾರದು ಎನಿಸುವ ಸಾಮಾನ್ಯ ಬೇಡಿಕೆಯೊಂದಿಗೆ ಇವರ ಹೋರಾಟ ಶುರುವಾಯಿತು. “ಪರೀಕ್ಷೆಗಳು ಪ್ರಾಮಾಣಿಕವಾಗಿ ನಡೆಯಬೇಕು ಮತ್ತು ಸಾರ್ವಜನಿಕ ಸಂಸ್ಥೆಗಳು ತಮ್ಮ ವೈಫಲ್ಯಗಳ ಹೊಣೆ ಹೊರಬೇಕು. ಯುವಜನತೆ ತಮ್ಮ ಭವಿಷ್ಯಕ್ಕಾಗಿ ತೆತ್ತ ವರ್ಷಗಳನ್ನು ಅಷ್ಟೊಂದು ಅಗ್ಗವಾಗಿ ಅಥವಾ ಕಡೆಗಣಿಸುವಂತೆ ನೋಡಬಾರದು ಎಂಬುದು ಈ ಜೆನ್‌-ಝೀಗಳ ಬೇಡಿಕೆ.

- Advertisement -

ಈ ಪ್ರತಿಭಟನೆಯಲ್ಲಿ ಭಾಗವಹಿಸಿದ ಅನೇಕ ಯುವಕರು ಒಂದೇ ಒಂದು ಅವಕಾಶಕ್ಕಾಗಿ ವರ್ಷಗಟ್ಟಲೆ ಶ್ರಮಿಸಿದವರು. ಹಳ್ಳಿಗಳು ಮತ್ತು ಸಣ್ಣ ಪಟ್ಟಣಗಳನ್ನು ತೊರೆದು, ಕಿರಿದಾದ ಕೊಠಡಿಗಳಲ್ಲಿ ವಾಸಿಸುತ್ತಾ, ಓದಿನ ಜೊತೆಗೆ ಕೆಲಸ ಮಾಡುತ್ತಾ ಇಡೀ ಕುಟುಂಬದ ನಿರೀಕ್ಷೆಯನ್ನು ಹೆಗಲ ಮೇಲೆ ಹೊತ್ತವರು. ಇಂತಹ ಸಂದರ್ಭದಲ್ಲಿ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಲೀಕ್ ಆದಾಗ, ಫಲಿತಾಂಶ ಅನಗತ್ಯವಾಗಿ ವಿಳಂಬವಾದಾಗ ಅಥವಾ ನೇಮಕಾತಿ ರದ್ದಾದಾಗ ಆ ಯುವಕರಿಗೆ ಉಂಟಾಗುವ ನಷ್ಟವನ್ನು ಕೇವಲ ಆಡಳಿತಾತ್ಮಕ ಮಾತುಗಳಲ್ಲಿ ಅಳೆಯಲು ಸಾಧ್ಯವಿಲ್ಲ. ಇದರಿಂದ ಯುವಕರ ಅಮೂಲ್ಯ ವರ್ಷಗಳು ಪೋಲಾಗುತ್ತವೆ, ವಯಸ್ಸಿನ ಮಿತಿ ಮೀರಿ ಇರುವ ಅವಕಾಶಗಳ ಬಾಗಿಲುಗಳೂ ಮುಚ್ಚಿಹೋಗುತ್ತವೆ. ಮತ್ತೊಮ್ಮೆ ಪ್ರಯತ್ನಿಸುವುದು ಅಂದರೆ ಆ ಬಡ ಕುಟುಂಬಗಳಿಗೆ ಮತ್ತಷ್ಟು ಆರ್ಥಿಕ ಹೊರೆಯಾಗುವುದು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

History Repeats | ರೋಮ್‌ ಉರಿಯುತ್ತಿದ್ದಾಗ ಪಿಟೀಲು ನುಡಿಸಿದ...

ದೇಶದ ಪ್ರಜಾಪ್ರಭುತ್ವದ ಆಧಾರಸ್ತಂಭಗಳು ಒಂದೊಂದಾಗಿ ಕುಸಿಯುತ್ತಾ, ಚುನಾವಣಾ ವ್ಯವಸ್ಥೆಯೇ ಅಕ್ರಮ ಎಸಗುತ್ತಿರುವಾಗ, ನಿರುದ್ಯೋಗ-ಬೆಲೆ ಏರಿಕೆಯ ಭಾರದಿಂದ ಜನ ಹೈರಾಣಾಗಿರುವಾಗ ಭಾರತದ ಪ್ರಧಾನಿ ಭಜನೆ ಮಾಡುತ್ತಿದ್ದಾರೆ. ರೋಂ ಹೊತ್ತಿ ಉರಿಯುತ್ತಿದ್ದಾಗ ನೀರೋ ಪಿಟೀಲು...

ಅಪರಾಧಿಗಳ ಪರ ಬಿ ಸಿ ರೋಡ್ ಚಲೋ: ಎಂದಿನಂತೆ...

ಕೊಲೆಯಂತಹ ಗಂಭೀರ ಅಪರಾಧ ಎಸಗಿದ ಆರೋಪ ಹೊತ್ತವರ ಪರವಾಗಿ ಸಂಘಪರಿವಾರ ಬೀದಿಗಿಳಿಯುತ್ತಿರುವುದು ಇದೇ ಮೊದಲೇನಲ್ಲ. ಕರಾವಳಿಯ ಜನತೆ ಇಂತಹ ಪ್ರಚೋದನಾತ್ಮಕ ನಡೆಗಳನ್ನು ತಿರಸ್ಕರಿಸಿ, ಸತ್ಯ ಮತ್ತು ನ್ಯಾಯದ ಪರವಾಗಿ ನಿಲ್ಲಬೇಕಾಗಿದೆ. ಕರಾವಳಿ ಕರ್ನಾಟಕವಾಗಲಿ...

14 ಆಕ್ಷೇಪಗಳಿಂದ SIT ಬೇಡಿಕೆಯವರೆಗೆ: ಗ್ಯಾನೇಶ್‌ ಕುಮಾರ್ ಸುತ್ತ...

ಚುನಾವಣಾ ಆಯೋಗದೊಳಗಿನ ಭಿನ್ನಾಭಿಪ್ರಾಯಗಳು ಬಹಿರಂಗಗೊಂಡ ಬೆನ್ನಲ್ಲೇ ಎಸ್‌ಐಆರ್‌ ವಿವಾದ ಹೊಸ ತಿರುವು ಪಡೆದುಕೊಂಡಿದೆ. ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್‌ ಕುಮಾರ್ ಅವರ ನಿರ್ಧಾರಗಳ ಕುರಿತು ಚುನಾವಣಾ ಆಯುಕ್ತರಾದ ಸುಖಬೀರ್‌ ಸಿಂಗ್‌ ಸಂಧು ಮತ್ತು...

ಇದನ್ನೂ ಓದಿ: ಈ ದಿನ ಸಂಪಾದಕೀಯ | ಅಮಿತ್ ಶಾ ರಾಜೀನಾಮೆ ನೀಡಬೇಕಲ್ಲವೇ?

ಜೆನ್‌-ಝೀಗಳದ್ದು ಪರೀಕ್ಷಾ ಹಾಲ್‌ಗಳಲ್ಲಿ, ಕೋಚಿಂಗ್ ಸೆಂಟರ್‌ಗಳಲ್ಲಿ ಮತ್ತು ಉದ್ಯೋಗ ನೇಮಕಾತಿ ಸಾಲುಗಳಲ್ಲಿ ಕಾಯುವಂತೆ ಮಾಡಲ್ಪಟ್ಟ ಒಂದು ಪೀಳಿಗೆ. ಜೆನ್‌-ಝೀಗಳು ಈ ಹಿಂದಿನ ತಲೆಮಾರುಗಳ ಜನರು ಅರಗಿಸಿಕೊಳ್ಳಲು ಕಷ್ಟಕರವಾಗುವಂತೆ, ಸತ್ಯದೊಂದಿಗೆ ಮುಖಾಮುಖಿಯಾಗುವಂತೆ ಮಾಡುವಲ್ಲಿ ಯಶಸ್ವಿಯಾದ ಯುವಜನತೆ. ರಾಜ್ಯಸಭಾ ಸದಸ್ಯ ಮನೋಜ್ ಝಾ ಅವರು ತಮ್ಮ ಲೇಖನದಲ್ಲಿ ಹೇಳುವಂತೆ ಜೆನ್‌-ಝೀಗಳು ಪ್ರತಿಭಟನೆಯ ರಾಜಕೀಯ ಭಾಷೆಯನ್ನೇ ಬದಲಾಯಿಸಿದ್ದಾರೆ. ತಮ್ಮನ್ನು ಕುಗ್ಗಿಸಲು ಬಳಕೆಯಾದ ಹಣೆಪಟ್ಟಿಯನ್ನೇ ಒಗ್ಗಟ್ಟಿನ ಸಂಕೇತವಾಗಿ ಪರಿವರ್ತಿಸಿದವರು. ಹೊಸದೊಂದು ರಾಜಕೀಯ ಶಬ್ದಕೋಶವನ್ನು ರೂಪಿಸಿದವರು. ಒಂಟಿ ಹತಾಶೆಯೇ ಸಾಮಾನ್ಯವಾಗಿರುವಾಗ ಜೆನ್‌ಝೀಗಳನ್ನು ಒಗ್ಗಟ್ಟನ್ನು ಬಳಸಿದ್ದಾರೆ, ವ್ಯಾಪಕವಾಗಿದ್ದ ಭಯವನ್ನು ತಣಿಸಲು ಹಾಸ್ಯವನ್ನು ಬಳಸಿದ್ದಾರೆ. ಅಷ್ಟು ಮಾತ್ರವಲ್ಲದೆ ಅತ್ಯಂತ ಮುಖ್ಯವಾಗಿ, ಅಧಿಕಾರದಲ್ಲಿದ್ದವರು ತಮ್ಮನ್ನು ಮೌನವಾಗಿಸಲು ಯತ್ನಿಸಿದಾಗ ತೀಕ್ಷ್ಣವಾದ ವಿಮರ್ಶೆಯನ್ನೂ ಮಾಡಿದ್ದಾರೆ. ಸ್ಥಾಪಿತ ಮುಖ್ಯವಾಹಿನಿಗಳು ಎಂದು ಕರೆಸಿಕೊಳ್ಳುವ ಮಾಧ್ಯಮಗಳು ತಮ್ಮ ಕೆಲಸವನ್ನು ಮಾಡುವಲ್ಲಿ ವಿಫಲವಾದಾಗ ಈ ಪ್ರತಿಭಟನಾಕಾರರು ತಮಗೆ ತಾವೇ ದನಿಯಾದರು. ಅವರ ಮೊಬೈಲ್ ಫೋನ್‌ಗಳೇ ಕ್ಯಾಮೆರಾಗಳಾದವು, ವಿಷಯ ಪ್ರಸಾರಕ್ಕೆ ಯಾವುದೇ ಸುದ್ದಿ ಸಂಸ್ಥೆಯ ಅಗತ್ಯ ಬೀಳಲಿಲ್ಲ. ಪ್ರತಿಯೊಂದಕ್ಕೂ ‘ಕೌಂಟರ್’ ಅಸ್ತ್ರ ಹೊಂದಿದ್ದರು, ಸರ್ಕಾರ ಹೊಣೆಗಾರಿಕೆ ಹೊರಲೇಬೇಕೆಂದು ಬಯಸಿದರು.

ಇವೆಲ್ಲವುದರ ನಡುವೆ ಕೆಲವರು ಜೆನ್‌ ಝೀಗಳ ವಿಧಾನಗಳು ಗಂಭೀರವಾಗಿಲ್ಲ, ಅಶ್ಲೀಲವಾಗಿದೆ ಎಂದು ಹೇಳಿಕೊಂಡರು. ಆದರೆ ಅವರು ಹಾಸ್ಯದ ಹಿಂದಿರುವ ರಾಜಕೀಯ ಜಾಣ್ಮೆಯನ್ನು ಅರ್ಥಮಾಡಿಕೊಳ್ಳುವಲ್ಲಿ ವಿಫಲರಾದರು. ವಾಸ್ತವವೆಂದರೆ ಭಾಷಣಗಳು ತಕ್ಷಣ ಬೀರುವ ಪ್ರಭಾವಕ್ಕಿಂತ ವ್ಯಂಗ್ಯ/ಹಾಸ್ಯದ ಪ್ರಭಾವವು ಅಹಂಕಾರವನ್ನು ಬಯಲು ಮಾಡಬಲ್ಲದು. ಈ ವ್ಯಂಗ್ಯವು ಒಂದೇ ಸಂಸ್ಥೆಗೆ ಸೇರದ ಅಥವಾ ಒಂದೇ ಸಿದ್ಧಾಂತದ ಭಾಷೆಯನ್ನು ಮಾತನಾಡದ ಜನರನ್ನು ಒಟ್ಟುಗೂಡಿಸಬಲ್ಲದು. ಅಧಿಕಾರದಲ್ಲಿರುವವರು ಇಷ್ಟಪಡುವ ಭಾಷೆ ಮತ್ತು ನಡವಳಿಕೆಗಳನ್ನು ಅಳವಡಿಸಿಕೊಳ್ಳುವುದು ನಾಗರಿಕರ ಕರ್ತವ್ಯವಲ್ಲ ಎಂಬುದನ್ನು ಜೆನ್‌-ಝೀಗಳ ಈ ನಿರ್ಭೀತ ಭಾಷೆ ಪ್ರತಿಪಾದಿಸಿದೆ.

ಈ ಯುವ ಪ್ರತಿಭಟನಾಕಾರರು ಒಂದು ಮೂಲಭೂತ ಪ್ರಜಾಸತ್ತಾತ್ಮಕ ತತ್ವವನ್ನು ಪುನಃಸ್ಥಾಪಿಸಿದ್ದಾರೆ: “ಚುನಾವಣೆಯಲ್ಲಿ ಗೆದ್ದು ಬಂದರೆ ಸಾಲದು, ಸರ್ಕಾರವು ಚುನಾವಣೆಗಳ ನಡುವಿನ ಅವಧಿಯಲ್ಲೂ ನಾಗರಿಕರಿಗೆ ಉತ್ತರದಾಯಿಯಾಗಿರಬೇಕು.” ಪ್ರಜಾಪ್ರಭುತ್ವ ಎಂದರೆ ಕೇವಲ ಸಂಸತ್ತು ಮತ್ತು ಚುನಾವಣೆಗಳಷ್ಟೇ ಅಲ್ಲ; ಅದು ಕ್ಯಾಂಪಸ್‌ಗಳು, ಸಾರ್ವಜನಿಕ ಸಭೆಗಳು, ಸ್ವತಂತ್ರ ಮಾಧ್ಯಮಗಳು ಮತ್ತು ಶಾಂತಿಯುತ ಪ್ರತಿಭಟನೆಗಳಲ್ಲೂ ಜೀವಂತವಾಗಿದೆ ಎಂಬುದನ್ನು ಜೆನ್‌-ಝೀಗಳು ತೋರಿಸಿಕೊಟ್ಟಿದ್ದಾರೆ.

ಇದನ್ನೂ ಓದಿ: ಜೆನ್‌-ಝೀ ಮಾತ್ರವಲ್ಲ, ಮೋದಿಯ ಕಟ್ಟಾ ಬೆಂಬಲಿಗ ‘ಕುಲೀನ ವರ್ಗ’ವೂ BJPಯಿಂದ ದೂರ ಸರಿಯುತ್ತಿದೆ!

ಸಚಿವರೊಬ್ಬರ ರಾಜೀನಾಮೆ ಮತ್ತು ಬಿಜೆಪಿ ನೇತೃತ್ವದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ಜೆನ್‌-ಝೀಗಳು ಪಡೆದುಕೊಂಡ ಇತರ ಬದ್ಧತೆಗಳು ಪ್ರಮುಖ ಸಾಧನೆಗಳಾಗಿದ್ದರೂ, ಈ ಪ್ರತಿಭಟನೆಗಳ ಆಳವಾದ ಮಹತ್ವವಿರುವುದು ಸಂಘಟಿತ ನಾಗರಿಕರು ಇಂದಿಗೂ ಬಲಿಷ್ಠ ಸರ್ಕಾರವನ್ನು ಹೊಣೆಗಾರರನ್ನಾಗಿ ಮಾಡಬಹುದು ಎಂಬ ನಂಬಿಕೆಯನ್ನು ಮರುಸ್ಥಾಪಿಸಿರುವುದರಲ್ಲಿ. ಆ ಆತ್ಮವಿಶ್ವಾಸವು ಇದರಲ್ಲಿ ಭಾಗವಹಿಸಿದ, ದಾಖಲಿಸಿದ, ಸ್ವಯಂಸೇವಕರಾಗಿ ಶ್ರಮಿಸಿದ, ನೀರು ಮತ್ತು ಆಹಾರ ನೀಡಿದ, ಕಾನೂನು ನೆರವು ಒದಗಿಸಿದ, ಗಾಯಗೊಂಡವರನ್ನು ಆರೈಕೆ ಮಾಡಿದ ಅಥವಾ ಮತ್ತೊಂದು ನಗರದಿಂದ ಈ ಚಳವಳಿಯನ್ನು ಬೆಂಬಲಿಸಿದ ಪ್ರತಿಯೊಬ್ಬರಿಗೂ ಸಲ್ಲುತ್ತದೆ.

ಈ ಹೋರಾಟಗಾರರು ಬೆದರಿಕೆ, ಬಂಧನ ಅಥವಾ ಹತಾಶೆಗೆ ಒಳಗಾಗದಂತೆ ಅವರ ಜೊತೆ ನಿಲ್ಲುವುದು ಹಿರಿಯರ ಕರ್ತವ್ಯ. ಯುವಜನರ ಬಳಿ ಹೊಸ ಸಂಪರ್ಕ ಮಾಧ್ಯಮಗಳು, ಸಾಂಸ್ಕೃತಿಕ ಭಾಷೆ ಮತ್ತು ಬದಲಾವಣೆಯ ತವಕವಿದೆ. ಹಿರಿಯರ ಬಳಿ ಹಳೆಯ ಹೋರಾಟಗಳ ಅನುಭವ, ಇತಿಹಾಸದ ನೆನಪುಗಳು ಹಾಗೂ ಅನುಭವಗಳಿವೆ. ಈ ಇರಡೂ ಪೀಳಿಗೆಗಳು ಪರಸ್ಪರ ಸಹಕರಿಸಿದಾಗ ಪ್ರಜಾಪ್ರಭುತ್ವ ಮತ್ತಷ್ಟು ಬಲಗೊಳ್ಳುತ್ತದೆ.

ಮುಂದೆ ಈ ಚಳವಳಿ ಒಂದು ರಾಜಕೀಯ ಪಕ್ಷವಾಗುತ್ತದೆಯೋ ಅಥವಾ ಇಲ್ಲವೋ ಎಂಬುದು ಅವರ ವೈಯಕ್ತಿಕ ನಿರ್ಧಾರ. ಆದರೆ, ಜೆನ್ ಝೀ ಒಳಗೆ ಇರುವ ಜಾತಿ, ಲಿಂಗ, ಧರ್ಮ, ಭಾಷೆ, ಪ್ರಾದೇಶಿಕ ಮತ್ತು ಆರ್ಥಿಕ ಅಸಮಾನತೆಗಳನ್ನು ಮೆಟ್ಟಿ ನಿಂತು ಎಲ್ಲರನ್ನೂ ಒಳಗೊಂಡಾಗ ಮಾತ್ರ ಈ ಯುವ ಚಳವಳಿಗೊಂದು ಶಾಶ್ವತ ಪ್ರಜಾಸತ್ತಾತ್ಮಕ ಶಕ್ತಿ ಸಿಗುತ್ತದೆ.

ಯುವಜನರನ್ನು ಕೇವಲ ‘ಆನ್‌ಲೈನ್‌ನಲ್ಲೇ ಇರುವವರು’ ಎಂದು ನೋಡುವ ಕಾಲ ಮುಗಿದಿದೆ. ಮೇ 1968ರ ಪ್ಯಾರಿಸ್ ವಿದ್ಯಾರ್ಥಿ ಹೋರಾಟದ ಜನಪ್ರಿಯ ಘೋಷಣೆಯಾದ “Soyez réalistes, demandez l’impossible” (ವಾಸ್ತವವಾದಿಗಳಾಗಿರಿ, ಅಸಾಧ್ಯವಾದುದನ್ನು ಸಾಧಿಸಿ) ಎಂಬುದರಂತೆ, ಜೆನ್ ಝೀ ಇಡೀ ದೇಶದ ರಾಜಕೀಯ ಸಂವಾದವನ್ನೇ ಬದಲಾಯಿಸಿ ಹೊಸ ಭರವಸೆ ಮೂಡಿಸಿದೆ.

ಮೂಲ: ಇಂಡಿಯನ್ ಎಕ್ಸ್‌ಪ್ರೆಸ್
ಬರಹ: ರಾಜ್ಯಸಭಾ ಸದಸ್ಯ ಮನೋಜ್ ಝಾ
(ಕನ್ನಡಕ್ಕೆ :‌ ಮಯೂರಿ ಬೋಳಾರ್)

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅಪರಾಧಿಗಳ ಪರ ಬಿ ಸಿ ರೋಡ್ ಚಲೋ: ಎಂದಿನಂತೆ ಅಮಾನವೀಯ ಕೊಲೆಗಡುಕರ ಬೆಂಬಲಕ್ಕೆ ನಿಂತ ಸಂಘಪರಿವಾರ

ಕೊಲೆಯಂತಹ ಗಂಭೀರ ಅಪರಾಧ ಎಸಗಿದ ಆರೋಪ ಹೊತ್ತವರ ಪರವಾಗಿ ಸಂಘಪರಿವಾರ ಬೀದಿಗಿಳಿಯುತ್ತಿರುವುದು...

14 ಆಕ್ಷೇಪಗಳಿಂದ SIT ಬೇಡಿಕೆಯವರೆಗೆ: ಗ್ಯಾನೇಶ್‌ ಕುಮಾರ್ ಸುತ್ತ ಬಿಗಿಯಾಗುತ್ತಿರುವ ಬಿಕ್ಕಟ್ಟು!

ಚುನಾವಣಾ ಆಯೋಗದೊಳಗಿನ ಭಿನ್ನಾಭಿಪ್ರಾಯಗಳು ಬಹಿರಂಗಗೊಂಡ ಬೆನ್ನಲ್ಲೇ ಎಸ್‌ಐಆರ್‌ ವಿವಾದ ಹೊಸ ತಿರುವು...

ಮೋದಿ ಜನ್ಮದಿನದ ನಾಟಕದಲ್ಲಿ ಅಭಿನಯಿಸಲು ನಕಾರ; ವಿದ್ಯಾರ್ಥಿಗೆ ‘ಅಂಕ ಕಡಿತ’ದ ಬೆದರಿಕೆ

ಪ್ರಧಾನಿ ಮೋದಿ ಜನ್ಮದಿನದ ಅಂಗವಾಗಿ ಆಯೋಜಿಸಲಾಗಿರುವ ನಾಟಕದಲ್ಲಿ ಅಭಿನಯಿಸಲು ನಿರಾಕರಿಸಿದ ವಿದ್ಯಾರ್ಥಿಗಳಿಗೆ...