ʼಉಡಾಳʼನ ಹಾಡಿಗೆ ಸೈ ಎಂದ ಮಂದಿ; ಸದ್ದು ಮಾಡ್ತಿದೆ ʼಹೊಡಿ ಶ್ಯಾವಿಗ್ಯಾಗ ಮಜಿಗಿʼ

Date:

ಕೆಲ ದಿನಗಳಿಂದ ಸೋಷಿಯಲ್‌ ಮೀಡಿಯಾ ತುಂಬೆಲ್ಲಾ ʼಉಡಾಳʼನ ಹಾಡಿನದ್ದೇ ಸದ್ದು. ಯೋಗರಾಜ್ ಸಿನಿಮಾಸ್ ಮತ್ತು ರವಿ ಶಾಮನೂರು ಫಿಲಂಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ʼಉಡಾಳʼ ಚಿತ್ರದ ʼಹೊಡಿ ಶ್ಯಾವಿಗ್ಯಾಗ ಮಜಿಗಿʼ ಹಾಡು ಸದ್ಯ ಟ್ರೆಂಡಿಂಗ್‌ನಲ್ಲಿದ್ದು, ನೆಟ್ಟಿಗರ ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ.

- Advertisement -

ಇತ್ತೀಚೆಗಷ್ಟೇ ಸರಿಗಮ ಯೂಟ್ಯೂಬ್ ಚಾನಲ್‌ನಲ್ಲಿ ಬಿಡುಗಡೆಯಾಗಿರುವ ಉಡಾಳ ಚಿತ್ರದ ಈ ಮೊದಲ ಹಾಡು ನಾಲ್ಕೇ ದಿನಕ್ಕೆ 6 ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದು ಮುನ್ನುಗ್ಗುತ್ತಿದೆ. ಯೋಗರಾಜ್ ಭಟ್ಟರು ಬರೆದಿರುವ ಸಾಹಿತ್ಯಕ್ಕೆ ಚೇತನ್ ಡ್ಯಾವಿ ಸಂಗೀತ ಸಂಯೋಜನೆ ನೀಡಿದ್ದಾರೆ. ಉತ್ತರ ಕನ್ನಡದ ಗೀತೆಗಳಿಂದಲೇ ಹೆಸರು ಮಾಡಿರುವ ಸದ್ಯ ʼಬಿಗ್‌ ಬಾಸ್‌ʼನಲ್ಲಿರುವ ಗಾಯಕ ಮಾಳು ನಿಪ್ನಾಳ್ ಮತ್ತು ಸೃಷ್ಟಿ ಶಾಮನೂರು ಅವರ ಧ್ವನಿಯಲ್ಲಿ ಹಾಡು ಮತ್ತಷ್ಟು ಕ್ಯಾಚಿಯಾಗಿ ಮೂಡಿಬಂದಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಭಾರತಕ್ಕೆ ಬರದ ಬುಲೆಟ್ ಟ್ರೈನ್: ತಡವಾಗುತ್ತಿರುವುದು ಮೋದಿಯಿಂದಲೋ, ಜಪಾನ್‌ನವರಿಂದಲೋ?

ಮುಂಬೈ ಮತ್ತು ಅಹಮದಾಬಾದ್ ನಡುವಿನ 508 ಕಿ.ಮೀ ಉದ್ದದ ಈ ಮಾರ್ಗವು ಭಾರತೀಯ ರೈಲ್ವೆಯನ್ನು ಆಧುನೀಕರಿಸುವ ಯೋಜನೆಯ ಭಾಗವಾಗಿ ನರೇಂದ್ರ ಮೋದಿಯವರು ಘೋಷಿಸಿದ್ದರು. ಅದಾಗಿ ಹತ್ತು ವರ್ಷವಾದರೂ ಸುದ್ದಿಯೇ ಇಲ್ಲ. ಬುಲೆಟ್ ಟ್ರೈನ್...

ನೊಬೆಲ್‌ ಪ್ರಶಸ್ತಿ ಸರಣಿ | ರಸಾಯನವಿಜ್ಞಾನದ ʼಅಸಮಮಿತಿʼ (Chirality)ಯ...

ರಸಾಯನವಿಜ್ಞಾನದ ನೊಬೆಲ್ ಪ್ರಶಸ್ತಿಯನ್ನು ಈ ಬಾರಿ ಹೆನ್ರಿ ಕಗಾನ್‌ ಮತ್ತು ಕೆನ್ಸೊ ಸುಆಯ್‌ ಅವರಿಗೆ ನೀಡಲಾಗಿದೆ. ಅವರ ಸಂಶೋಧನೆಯ ಕೇಂದ್ರ ಬಿಂದು ರಸಾಯನವಿಜ್ಞಾನದಲ್ಲಿ ಶತಮಾನಗಟ್ಟಲೆ ಅತ್ಯಂತ ಕುತೂಹಲಕಾರಿ ಪ್ರಶ್ನೆಯಾಗಿದ್ದ- ಒಂದಕ್ಕೊಂದು ಕನ್ನಡಿಯ ಪ್ರತಿಬಿಂಬದಂತಿರುವ...

ಅನುದಾನ ಕೊರತೆ: ವಿದ್ಯಾರ್ಥಿಗಳಿಂದ ನಿರ್ವಹಣಾ ಶುಲ್ಕ ವಸೂಲಿ, ಶಿಕ್ಷಕರ...

ಹಾವೇರಿ ಜಿಲ್ಲೆಯಲ್ಲಿ ಸರಕಾರಿ ಶಾಲೆಗಳಿಗೆ ನಿರ್ವಹಣಾ ವೆಚ್ಚದ ಅನುದಾನ ಬಿಡುಗಡೆಯಾಗದ ಹಿನ್ನೆಲೆಯಲ್ಲಿ ಶಿಕ್ಷಕರು ನಿತ್ಯದ ಖರ್ಚು-ವೆಚ್ಚ ಸರಿದೂಗಿಸಲು ಪರದಾಡುವಂತಾಗಿದೆ. ಶಾಲೆ ನಡೆಸಲು ವಿದ್ಯಾರ್ಥಿಗಳಿಂದಲೇ ಹಣ ವಸೂಲಿ ಮಾಡುತ್ತಿರುವ ಆರೋಪ ಕೇಳಿಬಂದಿದ್ದು, ಪೋಷಕರಿಂದ ಮತ್ತು...

ʼಉಡಾಳʼ ಚಿತ್ರದ ನಿರ್ದೇಶನ ಅಮೋಲ್ ಪಾಟೀಲ್ ಅವರದ್ದು. ʼಪದವಿಪೂರ್ವʼ ಚಿತ್ರದಿಂದ ಗಮನಸೆಳೆದ ಪೃಥ್ವಿ ಶಾಮನೂರು ಈ ಸಿನಿಮಾದ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ನಟಿಯಾಗಿ ರಿತಿಕಾ ಶ್ರೀನಿವಾಸ್‌ ಬಣ್ಣ ಹಚ್ಚಿದ್ದಾರೆ. ಈ ಹಾಡು ಯೂಟ್ಯೂಬ್‌ನಲ್ಲಿ ಮಾತ್ರವಲ್ಲದೇ ಜಿಯೋ ಸಾವನ್ ಚಾನಲ್‌ನಲ್ಲಿ ಈಗ ಭಾರತದಲ್ಲಿ ಎರಡನೇ ಸ್ಥಾನಕ್ಕೇರಿದೆ. ಹಾಡಿನ ವಿಶಿಷ್ಟ ರಾಗ ಮತ್ತು ನೃತ್ಯ ಶೈಲಿಯು ವಿಶಿಷ್ಟವಾಗಿದ್ದು, ಇನ್ಸ್ಟಾಗ್ರಾಂ ನಲ್ಲಿ ರೀಲ್ಸ್‌ ಮೇಕರ್ಸ್‌ಗಳ ಮನಗೆದ್ದಿದೆ. ʼಉಡಾಳʼ ಚಿತ್ರದ ಮೊದಲ ಹಾಡು ಮತ್ತು ಟೀಸರ್ ಈಗಾಗಲೇ ಸಿನಿಪ್ರಿಯರ ಕುತೂಹಲ ಹೆಚ್ಚಿಸಿದ್ದು, ಚಿತ್ರದ ಎರಡನೇ ಹಾಡು ಶೀಘ್ರದಲ್ಲೇ ಬಿಡುಗಡೆಯಾಗಲಿದ್ದು, ನವೆಂಬರ್ 14 ರಂದು ಚಿತ್ರ ತೆರೆಗೆ ಬರಲಿದೆ.

ಇದನ್ನೂ ಓದಿ: ಈ ದಿನ ಸಂಪಾದಕೀಯ | ಕುರುಡು ದ್ವೇಷದ ಈ ಅಂಧಕಾರಕ್ಕೆ ಅಂತ್ಯವೆಂದು?

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೆಳ್ಳಿತೆರೆಯ ಮೇಲಿನ ಬಣ್ಣ: ಚಿತ್ರ ಚೌಕಟ್ಟಿನಲ್ಲಿ ರಂಗಿನಾಟ

ಸಿನೆಮಾ ಪರದೆಯ ಮೇಲಿನ ಬಣ್ಣವು ಸೌಂದರ್ಯಪ್ರಜ್ಞೆಯಷ್ಟೇ ಅಲ್ಲ, ತಾಂತ್ರಿಕ ಮಿತಿ ಮತ್ತು...

ಸಮುದ್ರತೀರ, ಪಾರ್ಟಿ ಆಚೆಗಿನ ನೈಜ ಗೋವಾವನ್ನು ದೇಶದ ಮುಂದೆ ತರುತ್ತೇವೆ: ನಿರ್ದೇಶಕ ಆದಿತ್ಯ ಜಾಂಭಳೆ

ಗೋವಾ ಎಂದರೆ ತಕ್ಷಣವೇ ಕಣ್ಣಮುಂದೆ ಬರುವ ಸಮುದ್ರತೀರಗಳು, ಪ್ರವಾಸೋದ್ಯಮ ಹಾಗೂ ಪಾರ್ಟಿಗಳ...

ಚಿತ್ರರಂಗದ ತೀರ್ಪುಗಾರರ ಮಂಡಳಿಯಲ್ಲಿ ಮಹಿಳೆಯರ ಭಾಗವಹಿಸುವಿಕೆ ಹೆಚ್ಚಿಸಿ: ರಾಷ್ಟ್ರಪತಿ ದ್ರೌಪದಿ ಮುರ್ಮು

ಚಿತ್ರರಂಗದ ನಿರ್ಧಾರ ಕೈಗೊಳ್ಳುವ ಪ್ರಕ್ರಿಯೆಯಲ್ಲಿ ಮಹಿಳೆಯರ ಭಾಗವಹಿಸುವಿಕೆಯನ್ನು ಹೆಚ್ಚಿಸಬೇಕು ಎಂದು ರಾಷ್ಟ್ರಪತಿ...