ಟ್ವಿಟರ್‌ನಲ್ಲಿ ಟ್ರೆಂಡ್‌ ಸೃಷ್ಟಿಸಿದ #ಕಿಚ್ಚ46; ಮುಂದಿನ ಚಿತ್ರಗಳ ಬಗ್ಗೆ ಕಿಚ್ಚ ಸುದೀಪ್‌ ಸ್ಪಷ್ಟನೆ

Date:

  • ಮೂರು ಸಿನಿಮಾ ಅಂತಿಮಗೊಂಡಿದೆ ಎಂದ ಕಿಚ್ಚ ಸುದೀಪ್
  • ಕಿಚ್ಚನ ಮುಂದಿನ ಚಿತ್ರದ ಬಗ್ಗೆ ಗರಿಗೆದರಿದ ಅಭಿಮಾನಿಗಳ ಉತ್ಸಾಹ

ನಟ ಕಿಚ್ಚ ಸುದೀಪ್‌ ಅವರ ಮುಂಬರುವ ಸಿನಿಮಾ ಕುರಿತು ಅಭಿಮಾನಿಗಳಲ್ಲಿ ನಿರೀಕ್ಷೆ ಗರಿಗೆದರಿದೆ. ಈ ಹಿನ್ನೆಲೆಯಲ್ಲಿ ಟ್ವಿಟರ್‌ನಲ್ಲಿ #ಕಿಚ್ಚ46 ಹ್ಯಾಶ್‌ಟ್ಯಾಗ್‌ ಟ್ರೆಂಡ್‌ ಆಗಿದೆ.

ಇದೆಲ್ಲದರ ಬಗ್ಗೆ ನಟ ಸುದೀಪ್‌ ಭಾನುವಾರ (ಏಪ್ರಿಲ್‌ 2) ತಮ್ಮ ಅಧಿಕೃತ ಟ್ವಿಟರ್‌ ಖಾತೆಯಲ್ಲಿ ತಮ್ಮ ಮುಂದಿನ ಹೊಸ ಚಿತ್ರಗಳ ಬಗ್ಗೆ ಸೂಚ್ಯವಾಗಿ ಮಾಹಿತಿ ಹರಿಬಿಟ್ಟಿದ್ದಾರೆ.

ಆದರೆ ಕಿಚ್ಚ ಇಲ್ಲಿ ಯಾವ ಚಿತ್ರ, ಯಾರು ನಿರ್ದೇಶನ, ನಿರ್ಮಾಣ ಎಂಬ ಬಗ್ಗೆ ಮಾಹಿತಿ ನೀಡಿಲ್ಲ. ಮೂರು ಚಿತ್ರಗಳಲ್ಲಿ ನಟಿಸುವುದು ಅಂತಿಮಗೊಂಡಿರುವುದಾಗಿ ಹೇಳಿಕೊಂಡಿದ್ದಾರೆ.

ಕಿಚ್ಚ ಸುದೀಪ್‌ ಅವರ ಈ ಸ್ಪಷ್ಟೀಕರಣದಿಂದ ಹಲವು ಅಭಿಮಾನಗಳ ಮೊಗದಲ್ಲಿ ಸಂತಸ ಮೂಡಿದೆ. ಅನೇಕರು ಹೊಸ ಚಿತ್ರದ ಹೆಸರು ಘೋಷಣೆಗಾಗಿ ಕಾಯುತ್ತಿರುವುದಾಗಿ ಹೇಳಿದ್ದಾರೆ. ಹಲವರು ಸುದೀಪ್‌ ಅವರು ಹೊಸ ಚಿತ್ರಗಳ ಘೋಷಣೆಯಿಂದಾಗಿ ಖುಷಿಯಾಗಿ ಕಿಚ್ಚನಿಗೆ ಶುಭ ಕೋರಿದ್ದಾರೆ.

ಕಿಚ್ಚ ಸುದೀಪ್‌ ಹೊಸ ಚಿತ್ರಗಳ ಘೋಷಣೆಯ ಬಗ್ಗೆ ತಮ್ಮ ಅಧಿಕೃತ ಟ್ವಿಟರ್‌ ಖಾತೆಯಲ್ಲಿ ಪತ್ರವೊಂದನ್ನು ಹಂಚಿಕೊಂಡಿದ್ದಾರೆ. ಅದರ ಒಕ್ಕಣೆ ಹೀಗಿದೆ.

“ನನ್ನ ಎಲ್ಲ ಸ್ನೇಹಿತರಿಗೆ ನಮಸ್ಕಾರ…

ನನ್ನ ಮುಂದಿನ ಚಿತ್ರದ ಬಗ್ಗೆ ನೀವು ಕರೆಯುವ #ಕಿಚ್ಚ46 ಬಗ್ಗೆ ಟ್ವೀಟ್ ಹಾಗೂ ಮೀಮ್ಸ್‌ ಮೂಲಕ ನಿಮ್ಮ ಕಾತರ ನನಗೆ ಅರ್ಥವಾಗುತ್ತದೆ. ಇದು ನನಗೆ ವಿಶೇಷ ಹಾಗೂ ಪ್ರೀತಿಪಾತ್ರವೆನಿಸಿದೆ. ಇದಕ್ಕಾಗಿ ಧನ್ಯವಾದಗಳು.

ಆದ್ದರಿಂದ ನಿಮ್ಮ ಕಾತರದ ಬಗ್ಗೆ ಸಣ್ಣ ಸ್ಪಷ್ಟನೆ ನೀಡಲು ನಿರ್ಧರಿಸಿದ್ದೇನೆ.

ನಾನು ನನ್ನ ಮೊದಲ ವಿರಾಮ ತೆಗೆದುಕೊಂಡೆ. ವಿಕ್ರಾಂತ್‌ ರೋಣ ಸಿನಿಮಾ ಬಳಿಕ ಈ ವಿರಾಮ ಅಗತ್ಯವಾಗಿತ್ತು. ಕೋವಿಡ್‌ ಸಮಯ ಹಾಗೂ ದೀಘಾವಧಿಯ ಬಿಗ್‌ಬಾಸ್‌ ಸರಣಿ (ಒಟಿಟಿ ಮತ್ತು ಟಿ.ವಿ) ತುಂಬಾ ತ್ರಾಸದಾಯಕ ಹಾಗೂ ಶ್ರಮದಾಯಕವಾಗಿತ್ತು. ನನ್ನ ವಿರಾಮದ ಸಮಯ ಕಳೆಯಲು ಕ್ರಿಕೆಟ್‌ ಆಡುವುದು ನನಗೆ ಆರಾಮದಾಯಕವಾಗಿತ್ತು. ಅದಕ್ಕಾಗಿ ನಾನು ಕೆಸಿಸಿ ಮತ್ತು ಕೆಬಿ ಜೊತೆ ಸಂತಸದ ಸಮಯದ ಕಳೆದೆ.

ಅಂತೆಯೇ ಚಿತ್ರಕಥೆಗಳ ಚರ್ಚೆ ನನ್ನ ಜೀವನದ ಭಾಗವಾಗಿದೆ. ಈಗ ಮೂರು ಸಿನಿಮಾ ಕಥೆ ಅಂತಿಮಗೊಂಡಿದೆ. ಹೆಚ್ಚಿನ ಅಭ್ಯಾಸ ಬಯಸುವ ಈ ಮೂರು ಸಿನಿಮಾಗಳಿಗೆ ಸಿದ್ಧತೆಗಳು ನಡೆದಿವೆ. ಈ ನಿಟ್ಟಿನಲ್ಲಿ ಚಿತ್ರತಂಡಗಳೂ ಸಹ ಹಗಲು, ರಾತ್ರಿ ಶ್ರಮಿಸುತ್ತಿವೆ. ಈ ಬಗ್ಗೆ ಶೀಘ್ರ ಮಾಹಿತಿ ಘೋಷಣೆ ಮಾಡುತ್ತೇನೆ.

ಪ್ರೀತಿಯ ಧನ್ಯವಾದಗಳು

ಕಿಚ್ಚ

ಈ ಸುದ್ದಿ ಓದಿದ್ದೀರಾ? ಸೆಟ್ಟೇರಿದ ಸಿದ್ದರಾಮಯ್ಯ ಸಿನಿಮಾ: ಚಿತ್ರದ ಫಸ್ಟ್ ಲುಕ್ ಜೊತೆಗೆ ಟೈಟಲ್ ಬಿಡುಗಡೆ

ತಮ್ಮ ನೆಚ್ಚಿನ ನಟ ಕಿಚ್ಚ ಯಾವ ರೀತಿಯ, ಯಾರ ಜೊತೆ ಸಿನಿಮಾ ಮಾಡಬಹುದು ಎಂದು ಅಭಿಮಾನಿಗಳು ಲೆಕ್ಕಾಚಾರ ಹಾಕತೊಡಗಿದ್ದಾರೆ. ಕಿಚ್ಚನ ಹೊಸ ಸಿನಿಮಾಗೆ ಅನೇಕರು ಟ್ವಿಟರ್‌ #ಕಿಚ್ಚ46 ಹ್ಯಾಶ್‌ಟ್ಯಾಗ್‌ ಮೂಲಕ ಶುಭಾಶಯ ಕೋರುತ್ತಿದ್ದಾರೆ.

ಸುದೀಪ್‌ ತಮ್ಮ ಮುಂದಿನ ಸಿನಿಮಾ ಯಾವ ಬ್ಯಾನರ್‌ನಡಿ ಮಾಡಲಿದ್ದಾರೆ ಎಂಬ ಬಗ್ಗೆ ಅಭಿಮಾನಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆಗಳಲ್ಲಿ ತೊಡಗಿದ್ದಾರೆ. ಈ ಬಗ್ಗೆ ಅನೇಕರು ಮೀಮ್ಸ್‌ ಸಹ ಆರಂಭಿಸಿದ್ದಾರೆ.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕಾರಿನೊಳಗೆ ಶವವಾಗಿ ಪತ್ತೆಯಾದ ಮಲಯಾಳಂ ನಟ ವಿನೋದ್ ಥಾಮಸ್

ಮಲಯಾಳಂ ನಟ ವಿನೋದ್ ಥಾಮಸ್ ಕೇರಳದ ಕೊಟ್ಟಾಯಂನ ಪಂಪಾಡಿ ಬಳಿಯ ಹೋಟೆಲ್‌ನಲ್ಲಿ...

ತೆಲಂಗಾಣ ಚುನಾವಣಾ ಹೊಸ್ತಿಲಲ್ಲಿ ಬಿಜೆಪಿಗೆ ರಾಜೀನಾಮೆ ನೀಡಿದ ವಿಜಯಶಾಂತಿ: ಕಾಂಗ್ರೆಸ್ ಸೇರ್ಪಡೆ ಸಾಧ್ಯತೆ

ಬಹುಭಾಷಾ ನಟಿ ಹಾಗೂ ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯೆ ವಿಜಯಶಾಂತಿ ಅವರು...

ಮೊದಲು ಹೊಡೆದು ನಂತರ ಕ್ಷಮೆ ಕೇಳಿದ ನಟ ನಾನಾ ಪಾಟೇಕರ್: ವಿಡಿಯೋ ವೈರಲ್

ಸದಾ ಒಂದಿಲ್ಲೊಂದು ಸುದ್ದಿಯಲ್ಲಿರುವ ಬಾಲಿವುಡ್ ಹಿರಿಯ ನಟ-ನಿರ್ದೇಶಕ ನಾನಾ ಪಾಟೇಕರ್ ಇದೀಗ...

ಬಿಗ್‌ಬಾಸ್ ಶೋನಲ್ಲಿ ಭೋವಿ ಜನಾಂಗಕ್ಕೆ ಅವಹೇಳನ ಆರೋಪ: ಸ್ಪರ್ಧಿ ತನಿಷಾ ವಿರುದ್ಧ ಎಫ್‌ಐಆರ್

ಇತ್ತೀಚೆಗಷ್ಟೇ ಕನ್ನಡದ 'ಬಿಗ್‌ಬಾಸ್ ರಿಯಾಲಿಟಿ ಶೋ'ನಲ್ಲಿ ಸ್ಪರ್ಧಾಳುವಾಗಿದ್ದ ವರ್ತೂರು ಸಂತೋಷ್ ಹುಲಿ...