ಹೆಚ್ಚುತ್ತಿರುವ ದ್ವೇಷ ಮತ್ತು ಹಿಂದಿ ಚಿತ್ರರಂಗದ ʼಜಾಣ ಮೌನʼ

Date:

  • ಆರ್ಯನ್‌ ಖಾನ್‌ ಬಂಧನ ಹಿಂದಿ ಚಿತ್ರರಂಗಕ್ಕೆ ನೀಡಿದ ಸಂದೇಶ
  • ಶಾರುಖ್‌ ಖಾನ್‌ ಸ್ಥಿತಿಯೇ ಹೀಗಾದರೆ ಉಳಿದವರ ಗತಿಯೇನು?

ಬಾಲಿವುಡ್‌ನ ಹಿರಿಯ ನಟ ನಾಸಿರುದ್ದೀನ್‌ ಶಾ, ಕೇಂದ್ರ ಸರ್ಕಾರದ ಜನ ವಿರೋಧಿ ನೀತಿಗಳನ್ನು ಮೊದಲಿನಿಂದಲೂ ವಿರೋಧಿಸುತ್ತಾ ಬಂದಿದ್ದಾರೆ. ಅದೇ ಕಾರಣಕ್ಕೆ ಜೀವ ಬೆದರಿಕೆಗಳನ್ನು ಕೂಡ ಎದುರಿಸಿದ್ದಾರೆ. ಜನಪರ ನಿಲುವುಗಳ ಮೂಲಕ ಸದಾ ಸುದ್ದಿಯಾಗುವ ಅವರು ಇದೀಗ ಹಿಂದಿ ಚಿತ್ರರಂಗದ ʼಜಾಣ ಮೌನʼದ ಕುರಿತು ಮಾತನಾಡಿದ್ದಾರೆ.

ಹಿಂದಿ ಚಿತ್ರರಂಗದ ಮಂದಿ ಸಾಮಾಜಿಕ ಸಮಸ್ಯೆಗಳ ಬಗ್ಗೆ ಯಾವತ್ತಿಗೂ ತುಟ್ಟಿ ಬಿಚ್ಚುವುದಿಲ್ಲ. ಷಡ್ಯಂತ್ರದ ಸಿನಿಮಾಗಳೇ ವಿಜೃಂಭಿಸುತ್ತಿದ್ದರೂ ಅದರ ಬಗ್ಗೆ ಯಾವ ಕಲಾವಿದನೂ ಮಾತನಾಡದಷ್ಟು ಭಯದ ವಾತಾವರಣ ಬಾಲಿವುಡ್‌ನಲ್ಲಿದೆ ಎಂದು ಹಿರಿಯ ನಟ ನಾಸಿರುದ್ದೀನ್‌ ಶಾ ಅಭಿಪ್ರಾಯ ಪಟ್ಟಿದ್ದಾರೆ.

ನಾಸೀರುದ್ದೀನ್‌ ಶಾ ಇತ್ತೀಚೆಗೆ ರಾಷ್ಟ್ರೀಯ ಸುದ್ದಿ ಮಾಧ್ಯಮವೊಂದಕ್ಕೆ ನೀಡಿದ ವಿಶೇಷ ಸಂದರ್ಶನ ಭಾವಾನುವಾದ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ದ್ವೇಷದ ವಾತಾವರಣ ದೇಶದ ಸಾಮಾಜಿಕ ಸೌಹಾರ್ದವನ್ನು ಹದಗೆಡಿಸುತ್ತಿದೆ. ದ್ವೇಷದ ಕಾರಣಕ್ಕಾಗಿಯೇ ಜನ ಭಯಭೀತರಾಗಿದ್ದಾರೆ. ಒಂದು ಕಾಲಕ್ಕೆ ಹಿಂದಿ ಚಿತ್ರರಂಗದಲ್ಲಿ ಕೆ.ಎಸ್‌ ಅಬ್ಬಾಸ್‌, ವಿ ಶಾಂತಾರಾಮ್‌ ತರಹದ ನಿರ್ದೇಶಕರು ಪ್ರಗತಿಪರ ಚಿತ್ರಗಳ ಮೂಲಕ ಸಮಾಜಿಕ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲುವ ಪ್ರಯತ್ನ ಮಾಡಿದ್ದರು. ಆದರೆ, ಹಿಂದಿ ಚಿತ್ರರಂಗ ನಿರ್ದಿಷ್ಟ ರಾಜಕೀಯ ಮತ್ತು ಸಾಮಾಜಿಕ ವಿಚಾರಗಳ ಬಗ್ಗೆ ಯಾವತ್ತಿಗೂ ಜಾಗೃತವಾಗಿ ನಡೆದುಕೊಳ್ಳಲೇ ಇಲ್ಲ. ಚಿತ್ರರಂಗದ ಯಾರೊಬ್ಬರೂ ಸಮಸ್ಯೆಗಳನ್ನು ಎದುರಿಸುವ ದಿಟ್ಟತನ ತೋರಲಿಲ್ಲ. ಷಡ್ಯಂತ್ರದ ಸಿನಿಮಾಗಳೇ ವಿಜೃಂಭಿಸುತ್ತಿದ್ದರೂ, ಆ ಸಿನಿಮಾಗಳು ತಮ್ಮ ನಂಬಿಕೆಗೆ ವಿರುದ್ಧವಾಗಿದ್ದರೂ ಅದರ ಬಗ್ಗೆ ಯಾವ ಕಲಾವಿದನೂ ಮಾತನಾಡದಷ್ಟು ಭಯದ ವಾತಾವರಣ ಬಾಲಿವುಡ್‌ನಲ್ಲಿದೆ.

ಯಾವುದೇ ವಿಚಾರವನ್ನು ಜನರಿಗೆ ತಲುಪಿಸಲು ಸಿನಿಮಾ ಶಕ್ತಿಶಾಲಿ ಮಾಧ್ಯಮ. ದೇಶಕ್ಕಾಗಿ ಪದಕ ಗೆದ್ದ ಮಹಿಳಾ ಕುಸ್ತಿಪಟುಗಳು ಲೈಂಗಿಕ ದೌರ್ಜನ್ಯದ ವಿರುದ್ಧ ಹೋರಾಡುತ್ತಿದ್ದಾರೆ. ಅವರಿಗಾದ ಅನ್ಯಾಯದ ಬಗ್ಗೆ ಯಾರಿಗಾದರೂ ಸಿನಿಮಾ ಮಾಡುವ ಧೈರ್ಯ ಇದೆಯೇ? ಇಂತಹ ವಿಚಾಗಳ ಬಗ್ಗೆ ಸಿನಿಮಾ ಮಾಡಿದರೆ ಮುಂದೆ ಅದರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂಬ ಭಯ ಎಲ್ಲರಲ್ಲೂ ಇದೆ. ಸಿನಿಮಾದ ಮೂಲಕ ಸತ್ಯಾಂಶಗಳನ್ನು ಹೇಳಲು ಹೊರಟರೆ, ಸಮಸ್ಯೆಗಳ ಬಗ್ಗೆ ಮಾತನಾಡುವ ಪ್ರಯತ್ನ ಮಾಡಿದರೆ ತಮ್ಮ ಬಳಿ ಇರುವುದನ್ನೆಲ್ಲ ಕಳೆದುಕೊಳ್ಳುವ ಸ್ಥಿತಿ ನಿರ್ಮಾಣವಾಗಬಹುದು. ಇಲ್ಲವೇ ವೈಯಕ್ತಿಕವಾಗಿ ದೌರ್ಜನ್ಯಕ್ಕೆ ಒಳಗಾಗಬಹುದು ಎಂಬ ಭಯ ಹಿಂದಿ ಸಿನಿಮಾ ಮಂದಿಯಲ್ಲಿದೆ. ಆರ್ಯನ್‌ ಖಾನ್‌ ಬಂಧನ ಪ್ರಕರಣ ಚಿತ್ರರಂಗದವರಿಗೆ (ಕೇಂದ್ರ ಸರ್ಕಾರ) ನೀಡಿದ ಸಂದೇಶ ಎಂದು ನನಗನ್ನಿಸುತ್ತದೆ. ನಾವು ಶಾರುಖ್‌ ಖಾನ್‌ ಅವರನ್ನೇ ಈ ಸ್ಥಿತಿಗೆ ತರಬಹುದು ಎಂದಾದರೆ ಉಳಿದವರು ಯಾವ ಲೆಕ್ಕ ಎಂಬ ಸಂದೇಶವದು. ಹಿಂದಿ ಚಿತ್ರರಂಗ ದೇಶದ ಆಗುಹೋಗುಗಳ ಬಗ್ಗೆ ಮೌನವಹಿಸಿರುವುದು ಇದೇ ಮೊದಲೇನಲ್ಲ. ಎಲ್ಲ ಸಂದರ್ಭದಲ್ಲೂ ಈ ಚಿತ್ರರಂಗದ ಮಂದಿ ಇದೇ ರೀತಿ ವರ್ತಿಸುತ್ತಾ ಬಂದಿದ್ದಾರೆ.

ಈ ಸುದ್ದಿ ಓದಿದ್ದೀರಾ? ʼದಿ ಕೇರಳ ಸ್ಟೋರಿʼ ಕುರಿತ ಹೇಳಿಕೆ ತಿರುಚಿದ ಮಾಧ್ಯಮಗಳು : ಚಳಿ ಬಿಡಿಸಿದ ನವಾಜುದ್ದೀನ್‌ ಸಿದ್ದಿಕಿ

ನಾನು ನನ್ನ ಅಭಿಪ್ರಾಯವನ್ನು ಹೇಳಲು ಎಂದಿಗೂ ಅಂಜುವುದಿಲ್ಲ. ಆದರೆ, ಈ ದೇಶದ ಭವಿಷ್ಯವನ್ನು ಯೋಚಿಸಿದಾಗ ಭಯಭೀತನಾಗುತ್ತೇನೆ. ಭಾರತ ಪ್ರಗತಿಯಲ್ಲಿ ಹಿಂದೆ ಬೀಳುತ್ತಿದೆ. ಇತ್ತೀಚಿನ ದಿನಗಳಲ್ಲಿ ಮುಸ್ಲಿಂ ದ್ವೇಷ ಹೆಚ್ಚುತ್ತಿದೆ. ಕೆಲ ವರ್ಷಗಳ ಹಿಂದೆ ಇದೇ ರೀತಿ ಮಾತನಾಡಿದ್ದಕ್ಕೆ ಹಲವರು ನನಗೆ ಬೆದರಿಕೆಯ ಪತ್ರಗಳನ್ನು ಬರೆದಿದ್ದರು. ಓರ್ವ ವ್ಯಕ್ತಿಯಂತೂ ಪಾಕಿಸ್ತಾನಕ್ಕೆ ಹೋಗಿ ಎಂದು ವಿಮಾನದ ಟಿಕೆಟ್‌ ಬುಕ್‌ ಮಾಡಿ ಮನೆಗೆ ಕಳಿಸಿಕೊಟ್ಟಿದ್ದರು.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹೆಣ್ಣುಮಕ್ಕಳ ಬಗ್ಗೆ ನಾಲಿಗೆ ಹರಿಬಿಟ್ಟ ಎಚ್‌ಡಿಕೆ ‘ದಾರಿತಪ್ಪಿದ ಮಗ’: ಪ್ರಕಾಶ್ ರಾಜ್

ನಾಡಿನ ಹೆಣ್ಣು ಮಕ್ಕಳ ಬಗ್ಗೆ ಅತ್ಯಂತ ಹಗುರ ಮತ್ತು ಅವಹೇಳನಕಾರಿಯಾಗಿ ಮಾತನಾಡಿರುವ...

ಖ್ಯಾತ ಕನ್ನಡ ಸಿನಿಮಾ ನಿರ್ಮಾಪಕ ಸೌಂದರ್ಯ ಜಗದೀಶ್​ ಆತ್ಮಹತ್ಯೆ!

ಬೆಂಗಳೂರಿನ ಜೆಟ್​ಲಾಗ್​ ಪಬ್ ಮಾಲೀಕ ಹಾಗೂ ಕನ್ನಡ ಚಿತ್ರರಂಗದ ಖ್ಯಾತ ನಿರ್ಮಾಪಕ...

‘RCB ಸೋಲಿಗೆ ಅಶ್ವಿನಿ ಪುನೀತ್ ರಾಜ್​ಕುಮಾರ್ ಕಾರಣ’ ಎಂದು ಅವಹೇಳನಕಾರಿ ಟ್ವೀಟ್: ಕಮಿಷನರ್‌ಗೆ ದೂರು

ಕನ್ನಡ ಚಿತ್ರರಂಗದ ನಟ, ದಿವಂಗತ ಪುನೀತ್ ರಾಜ್‌ಕುಮಾರ್ ಅವರ ಪತ್ನಿ ಅಶ್ವಿನಿ...