ಕುತೂಹಲ ಹೆಚ್ಚಿಸಿದ ʼಆದಿಪುರುಷ್‌ʼ 2ನೇ ಟ್ರೈಲರ್‌

Date:

ಜೂನ್‌ 16ಕ್ಕೆ ತೆರೆಗೆ ಬರಲಿದೆ ʼಆದಿಪುರುಷ್‌ʼ

ಒಂದೂವರೆ ಕೋಟಿ ವೀಕ್ಷಣೆ ಪಡೆದ ಟ್ರೈಲರ್‌

ತೆಲುಗಿನ ಖ್ಯಾತ ನಟ ಪ್ರಭಾಸ್‌ ಅಭಿನಯದ ʼಆದಿಪುರುಷ್‌ʼ ಸಿನಿಮಾ ತೆರೆಗೆ ಬರಲು ಸಜ್ಜಾಗಿದೆ. ಈಗಾಗಲೇ ಪ್ರಚಾರ ಕಾರ್ಯ ಶುರುವಿಟ್ಟುಕೊಂಡಿರುವ ಚಿತ್ರತಂಡ ಮಂಗಳವಾರ ತಿರುಪತಿಯಲ್ಲಿ 2ನೇ ಟ್ರೈಲರ್‌ ಅನ್ನು ಬಿಡುಗಡೆ ಮಾಡಿದ್ದು, ಅಂದಾಜು ಎರಡೂವರೆ ನಿಮಿಷಗಳ ಈ ಟ್ರೈಲರ್‌ ಚಿತ್ರದ ಮೇಲಿನ ಕುತೂಹಲ ಹೆಚ್ಚಿಸಿದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ರಾಮಾಯಣದ ಕಥಾಹಂದರವನ್ನು ಹೊಂದಿರುವ ʼಆದಿಪುರುಷ್‌ʼ ಚಿತ್ರದಲ್ಲಿ ಪ್ರಭಾಸ್‌, ರಾಮನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಬಾಲಿವುಡ್‌ನ ಖ್ಯಾತ ನಟಿ ಕೃತಿ ಸನೋನ್‌ ಸೀತೆಯ ಪಾತ್ರದಲ್ಲಿ ನಟಿಸಿದ್ದು, ಸೈಫ್‌ ಅಲಿಖಾನ್‌ ರಾವಣನ ಪಾತ್ರದಲ್ಲಿ ಮಿಂಚಿದ್ದಾರೆ. ಸೀತೆಯ ಅಪಹರಣ ಮತ್ತು ರಾವಣ ಸಂಹಾರದ ಸುತ್ತ ಪ್ರಧಾನವಾಗಿ ಚಿತ್ರದ ಕಥೆಯನ್ನು ಹೆಣೆಯಲಾಗಿದೆ ಎಂಬುದನ್ನು ಟ್ರೈಲರ್‌ನಲ್ಲಿ ಸೂಚ್ಯವಾಗಿ ತೋರಿಸಲಾಗಿದೆ. ಆ್ಯಕ್ಷನ್ ದೃಶ್ಯಗಳು ಮತ್ತು ಹಿನ್ನೆಲೆ ಸಂಗೀತ,ವಿಷ್ಯುವಲ್‌ ಎಫೆಕ್ಟ್‌ ಎಲ್ಲವೂ ಗಮನ ಸೆಳೆಯುವಂತಿದೆ.

ಕಳೆದ ಅಕ್ಟೋಬರ್‌ನಲ್ಲಿ ಬಿಡುಗಡೆಯಾಗಿದ್ದ ಆದಿಪುರುಷ್‌ ಚಿತ್ರದ ಟೀಸರ್‌ ವ್ಯಾಪಕ ಟೀಕೆಗೆ ಗುರಿಯಾಗಿತ್ತು. ʼಅನಿಮೇಷನ್‌ʼ ಟೀಸರ್‌ ನೋಡಿದ್ದ ಸಿನಿ ರಸಿಕರು ಕಾರ್ಟೂನ್‌ಗಿಂತ ಕಳಪೆಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು. ನಿರ್ದೇಶಕ ಓಂ ರಾವತ್‌ ಅವರನ್ನು ಕೂಡ ಟೀಕಿಸಿದ್ದ ನೆಟ್ಟಿಗರು ʼ700 ಕೋಟಿ ಮೊತ್ತದಲ್ಲಿ ಕಾರ್ಟೂನ್‌ ಸಿನಿಮಾ ಮಾಡುತ್ತಿದ್ದೀರಾʼ ಎಂದು ಪ್ರಶ್ನಿಸಿದ್ದರು.

ಈ ಸುದ್ದಿ ಓದಿದ್ದೀರಾ? ʻಅಜ್ಮೀರ್ 92’ ಚಲನಚಿತ್ರ ನಿಷೇಧಕ್ಕೆ ಜಮೀಯತ್ ಉಲಮಾ ಹಿಂದ್ ಆಗ್ರಹ

ಟೀಸರ್‌ಗೆ ವ್ಯಾಪಕ ಟೀಕೆ, ಖಂಡನೆ ವ್ಯಕ್ತವಾದ ಬಳಿಕ ಚಿತ್ರದ ಬಿಡುಗಡೆ ದಿನಾಂಕವನ್ನು ಮುಂದೂಡಿದ್ದ ಚಿತ್ರತಂಡ ಮತ್ತೆ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳನ್ನು ನಡೆಸಿ ಗುಣಮಟ್ಟವನ್ನು ಸುಧಾರಿಸುವ ನಿಟ್ಟಿನಲ್ಲಿ ಕೆಲಸ ಮಾಡಿದೆ. ಈ ಹಿನ್ನೆಲೆ ಹಳೆಯ ಟೀಸರ್‌ಗೆ ಹೋಲಿಸಿಕೊಂಡರೆ ಕಳೆದ ಒಂದು ತಿಂಗಳ ಅಂತರದಲ್ಲಿ ಬಿಡುಗಡೆಯಾಗಿರುವ ಎರಡೂ ಟ್ರೈಲರ್‌ಗಳು ಬಹುಪಾಲು ಉತ್ತಮ ಎಂಬ ಮೆಚ್ಚುಗೆಯ ಮಾತುಗಳು ಕೇಳಿ ಬರುತ್ತಿವೆ. ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟು ಹಾಕಿರುವ ಈ ಚಿತ್ರ ಜೂನ್‌ 16ರಂದು ಹಿಂದಿ, ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ತೆರೆಗೆ ಬರಲಿದೆ.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಒಪ್ಪಿಗೆಯಿಲ್ಲದೆ ಹಾಡು ಬಳಕೆ: ‘ಮಂಜುಮ್ಮೆಲ್ ಬಾಯ್ಸ್’ ನಿರ್ಮಾಪಕರಿಗೆ ಇಳಯರಾಜ ನೋಟಿಸ್

ಇತ್ತೀಚಿಗೆ ಮಲಯಾಳಂನಲ್ಲಿ ಸೂಪರ್‌ ಡೂಪರ್‌ ಹಿಟ್‌ ಆಗಿದ್ದ ‘ಮಂಜುಮ್ಮೆಲ್ ಬಾಯ್ಸ್’ ಸಿನಿಮಾ...

ಬಿಸಿಗಾಳಿ | ಅಹಮದಾಬಾದ್‌ನಲ್ಲಿ ಆಸ್ಪತ್ರೆಗೆ ದಾಖಲಾದ ಬಾಲಿವುಡ್ ನಟ ಶಾರೂಖ್ ಖಾನ್

ಮಂಗಳವಾರ ಅಹ್ಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದಿದ್ದ ಇಂಡಿಯನ್ ಪ್ರೀಮಿಯರ್ ಲೀಗ್‌ನ...

ಅಪಘಾತದಲ್ಲಿ ನಟಿ ಪವಿತ್ರ ಜಯರಾಂ ನಿಧನರಾದ ಬೆನ್ನಲ್ಲೇ ಸ್ನೇಹಿತ, ನಟ ಚಂದ್ರಕಾಂತ್ ಆತ್ಮಹತ್ಯೆ

ಕಳೆದ ಐದು ದಿನಗಳ ಹಿಂದಷ್ಟೇ ಬೆಂಗಳೂರಿನಿಂದ ಹೈದರಾಬಾದ್‌ಗೆ ತೆರಳುತ್ತಿದ್ದಾಗ ಮೆಹಬೂಬ್‌ ನಗರದಲ್ಲಿ...

ನೀವು ಮನುಷ್ಯನಾಗಿರಲೇ ಅಯೋಗ್ಯ: ಪ್ರಧಾನಿ ಮೋದಿ ವಿರುದ್ಧ ನಟ ಕಿಶೋರ್ ಕುಮಾರ್ ಗರಂ

ಪ್ರಧಾನಿ ನರೇಂದ್ರ ಮೋದಿಯವರ ಕಟು ಟೀಕಾಕಾರರಲ್ಲಿ ಒಬ್ಬರಾಗಿರುವ ಬಹುಭಾಷಾ ನಟ ಕಿಶೋರ್...