ಕೋವಿಡ್ ಲಸಿಕೆ ಪಡೆದ ನಂತರ ಹೃದಯದಲ್ಲಿ ಉರಿಯೂತಕ್ಕೆ ಕಾರಣ ಪತ್ತೆ

Date:

ಕೋವಿಡ್ ಲಸಿಕೆ ಪಡೆದ ನಂತರ ಕೆಲವರಲ್ಲಿ ಹೃದಯದ ಉರಿಯೂತ ಕಾಣಿಸಿಕೊಂಡಿರುವುದಕ್ಕೆ ಕಾರಣ ಲಸಿಕೆಯಲ್ಲ ದೇಹದಲ್ಲಿ ರೋಗ ನಿರೋಧಕ ಶಕ್ತಿಗೆ ಕಾರಣವಾಗುವ ಜೀವಕೋಶಗಳ ವೇಗ ಉತ್ಪತ್ತಿಯಾಗುವುದು ಇದಕ್ಕೆ ಕಾರಣ ಎಂದು ಅಮೆರಿಕದ ಯೇಲ್ ಎಂಬ ವಿಶ್ವವಿದ್ಯಾಲಯ ಈ ಬಗ್ಗೆ ಪತ್ತೆ ಹಚ್ಚಿದೆ.

ಕೋವಿಡ್ ಲಸಿಕೆ ಪಡೆದ ನಂತರ ಕೆಲವರಲ್ಲಿ ಪ್ರೋಟಿನ್‌ಗಳು ಅಧಿಕ ಪ್ರಮಾಣ ಉತ್ಪತ್ತಿಯಾಗುವ ಮತ್ತು ಅತಿ ವೇಗವಾಗಿ ಸೃಷ್ಟಿಯಾಗುವ ಕಾರಣ ಹೃದಯದಲ್ಲಿ ಉರಿಯೂತ ಸೇರಿದಂತೆ ಮತ್ತಿತ್ತರ ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ ಎಂದು ‘ಸೈನ್ಸ್‌ ಇಮ್ಯುನಾಲಜಿ’ ಜರ್ನಲ್‌ನಲ್ಲಿ ಅಧ್ಯಯನ ವರದಿಯಲ್ಲಿ ಈ ಬಗ್ಗೆ ಹೇಳಲಾಗಿದೆ.

ಕೋವಿಡ್ ಲಸಿಕೆ ಪಡೆದ ನಂತರ ವ್ಯಕ್ತಿಯಲ್ಲಿ ಪ್ರತಿಕಾಯಗಳು ಉತ್ಪತ್ತಿಯಾಗುವ ಜೊತೆಗೆ ಸೈಟೊಕಿನ್‌ ಎಂಬ ಪ್ರೋಟಿನ್‌ ಸಹ ಸೃಷ್ಟಿಯಾಗುತ್ತವೆ. ದೇಹದಲ್ಲಿ ಉರಿಯೂತ ನಿಯಂತ್ರಣಕ್ಕೆ ಈ ಸೈಟೊಕಿನ್‌ಗಳು ನೆರವಾಗುತ್ತವೆ ಎಂದು ಸಂಶೋಧಕರು ಹೇಳಿದ್ದಾರೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

2020ರಲ್ಲಿ ಕೋವಿಡ್ ಉಲ್ಬಣಗೊಂಡಿದ್ದ ಕಾಲದಲ್ಲಿ ಲಸಿಕೆ ಹಾಕಿಸಿಕೊಂಡ ಕೆಲ ವ್ಯಕ್ತಿಗಳಲ್ಲಿ ‘ಮೈಯೊಕಾರ್ಡಿಟಿಸ್’ ಎಂಬ ಹೃದಯದ ಸಮಸ್ಯೆ ಕಾಣಿಸಿಕೊಂಡಿತ್ತು. ಹೃದಯದ ಸ್ನಾಯುಗಳ ಉರಿಯೂತವೇ ಇದಕ್ಕೆ ಕಾರಣ. ಆದರೆ, ಈ ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳಲು ನಿಖರ ಕಾರಣಗಳು ಗೊತ್ತಾಗಿರಲಿಲ್ಲ. ಈಗ, ಯೇಲ್‌ ವಿ.ವಿ ಸಂಶೋಧಕರ ತಂಡವು ಲಸಿಕೆ ಪಡೆದವರಲ್ಲಿನ ರೋಗನಿರೋಧಕ ವ್ಯವಸ್ಥೆಯ ವಿಶ್ಲೇಷಣೆ ನಡೆಸಿ, ಹೃದಯದ ಸಮಸ್ಯೆಗೆ ಕಾರಣವನ್ನು ವಿವರಿಸಿದೆ.

ಕೋವಿಡ್–19 ಸಂಬಂಧಿತ ಕಾಯಿಲೆ ಸೇರಿದಂತೆ ಮತ್ತಿತ್ತರ ರೋಗಗಳ ವಿರುದ್ಧ ಲಸಿಕೆಗಳು ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸಿದೆ ಎಂದು ಅಮೆರಿಕದ ವಿಶ್ವವಿದ್ಯಾಲಯದ ಇಮ್ಯುನೊಬಯಾಲಜಿ ವಿಭಾಗದ ಪ್ರಾಧ್ಯಾಪಕಿ ಕೆರ‍್ರಿ ಲೂಕಾಸ್ ಹೇಳುತ್ತಾರೆ.

ಈ ಸುದ್ದಿ ಓದಿದ್ದೀರಾ? ಕೋವಿಡ್-19 ಇನ್ನು ಮುಂದೆ ಜಾಗತಿಕ ಆರೋಗ್ಯ ತುರ್ತುಸ್ಥಿತಿ ಅಲ್ಲ : ವಿಶ್ವ ಆರೋಗ್ಯ ಸಂಸ್ಥೆ

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೊರೋನಾ | ಪ್ರತಿಯೊಬ್ಬರಿಗೂ ಕೋವಿಡ್ ಲಸಿಕೆ ಅಗತ್ಯವಿಲ್ಲ: ಡಾ.ಶರಣ್ ಪ್ರಕಾಶ್ ಪಾಟೀಲ್

ಹೊಸದಾಗಿ ಕಾಣಿಸಿಕೊಂಡಿರುವ ರೂಪಾಂತರ ಜೆಎನ್- 1 ಸೋಂಕು ರಾಜ್ಯದಲ್ಲಿ ಕಾಣಿಸಿಕೊಂಡಿದ್ದರೂ ಜನತೆ...

ಕೋವಿಡ್‌ | ಹೊಸ ವರ್ಷಾಚರಣೆಗೆ ನಿರ್ಬಂಧ ಹೇರುತ್ತಿಲ್ಲ, ಭಯ ಬೇಡ: ದಿನೇಶ್‌ ಗುಂಡೂರಾವ್‌

ಇಂದಿನ ಸಭೆಯಲ್ಲಿ ಸಮಿತಿಯ ತಜ್ಞರೊಂದಿಗೂ ಚರ್ಚಿಸಿ ಮುಂದಿನ ಕ್ರಮದ ಬಗ್ಗೆ...

ಡಿ.25ರಂದು 125 ಮಂದಿಗೆ ಕೊರೋನಾ ಸೋಂಕು ದೃಢ : ಮೂವರು ಸಾವು

ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಡಿ.25 ರಂದು...

ಕರ್ನಾಟಕಕ್ಕೆ ಲಗ್ಗೆಯಿಟ್ಟ ಜೆಎನ್‌ 1 : ಎಂಟು ಜನರಲ್ಲಿ ಪಾಸಿಟಿವ್

ಮಾರಿ ಕೊರೋನಾ ವೈರಸ್​ನ ರೂಪಾಂತರಿ ಜೆಎನ್‌ 1 ಮೊದಲ ಪ್ರಕರಣ ಕೇರಳದಲ್ಲಿ...