ಅನಧಿಕೃತ ಗರ್ಭಪಾತ; ಮಹಿಳಾ ಶುಶ್ರೂಷಕಿ ವಿರುದ್ಧ ದೂರು

Date:

  • ‘ಸುರಕ್ಷಿತ ಗರ್ಭಪಾತಕ್ಕಾಗಿ ವೈದ್ಯರನ್ನೇ ಸಂಪರ್ಕಿಸಿ’
  • ಅನಧಿಕೃತ ಗರ್ಭಪಾತ ಸಾವು, ಬಂಜೆತನ, ಸೋಂಕಿಗೆ ಕಾರಣ

ಮನೆಯೊಂದರಲ್ಲಿ ಅನಧಿಕೃತವಾಗಿ ಗರ್ಭಪಾತ ಮಾಡುತ್ತಿದ್ದ ಆರೋಪದ ಮೇಲೆ ಮಹಿಳಾ ಶುಶ್ರೂಷಕಿಯೊಬ್ಬರ ಮೇಲೆ ದೂರು ದಾಖಲಿಸಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಶಿರಾದಲ್ಲಿ ನಡೆದಿದೆ.

- Advertisement -

ಪಟ್ಟಣದ ಜ್ಯೋತಿನಗರದಲ್ಲಿ ಮಹಿಳಾ ಶುಶ್ರೂಷಕಿ ಸೌಜನ್ಯ ಎಂಬವರು ಅನಧಿಕೃತವಾಗಿ ಗರ್ಭಪಾತ ಮಾಡುತ್ತಿದ್ದರು. ಆಕೆ ಗರ್ಭಪಾತಕ್ಕೆ ಬಳಸುತ್ತಿದ್ದ ಉಪಕರಣಗಳು ಹಾಗೂ ಔಷಧಿಗಳನ್ನು ವಶಪಡಿಸಿಕೊಂಡು, ಗರ್ಭಪಾತ ಕಾಯ್ದೆ ಅಡಿ ದೂರು ದಾಖಲಿಸಲು ಜಿಲ್ಲಾ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಮತ್ತು ತಾಲೂಕು ಆರೋಗ್ಯ ಅಧಿಕಾರಿಗಳಿಗೆ ಕರ್ನಾಟಕ ರಾಜ್ಯ ಸಮಗ್ರ ಗರ್ಭಪಾತ ಸೇವೆಯ ನೋಡಲ್ ಅಧಿಕಾರಿ ಡಾ. ಚಂದ್ರಿಕಾ ಬಿ.ಆರ್ ಸೂಚನೆ ನೀಡಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಮಹಿಳೆ ಮಾಡುತ್ತಿರುವ ಬಿಟ್ಟಿ ಚಾಕರಿಗಳೇನೇನು? ಇದನ್ನೇಕೆ ಅರಿಯಲು ಮುಂದಾಗಿದೆ...

2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವ ಸರ್ಕಾರದ ಗುರಿಗೆ ಒಂದು ದೊಡ್ಡ ಅಡ್ಡಿ ಎದುರಾಗಿದೆ. ಅದೇನೆಂದರೆ; ಸಾಕಷ್ಟು ಸಂಖ್ಯೆಯ ಮಹಿಳೆಯರನ್ನು ಉದ್ಯೋಗ ಕ್ಷೇತ್ರಕ್ಕೆ ತರುವುದು. ವಿಶ್ವಬ್ಯಾಂಕ್ ಪ್ರಕಾರ, 2047ರ ವೇಳೆಗೆ...

ಭದ್ರತೆಯ ಹೆಸರಿನಲ್ಲಿ ಮಾಂಸದಂಗಡಿಗಳಿಗೆ ಬೀಗ: ಸರ್ಕಾರದ ಈ ನಿರ್ಧಾರದ...

ಈ ಬೆಳವಣಿಗೆ ಕಾಂಗ್ರೆಸ್ ಸರ್ಕಾರದ ಆಡಳಿತಾತ್ಮಕ ಹೊಣೆಗಾರಿಕೆಯನ್ನೂ ಮುನ್ನೆಲೆಗೆ ತಂದಿದೆ. ಪ್ರಧಾನಿಯ ಭೇಟಿಯ ಹಿನ್ನೆಲೆಯಲ್ಲಿ ಹೆಲಿಕಾಪ್ಟರ್‌ಗಳ ಆಗಮನ ಮತ್ತು ನಿರ್ಗಮನದ ಭದ್ರತೆಯನ್ನು ನಿರ್ಬಂಧಕ್ಕೆ ಕಾರಣವೆಂದು ಸಮರ್ಥಿಸಲಾಗುತ್ತಿದ್ದರೆ, ಅದಕ್ಕೂ ಸಮಗ್ರ ವಿವರಣೆ ಬೇಕಾಗುತ್ತದೆ. ಪ್ರಧಾನಿ...

ನಿಜಕ್ಕೂ ಭಾರತದ ಬಡತನ 16%ಗೆ ಇಳಿದಿದೆಯೇ? ವಾಸ್ತವ ಹೇಳುವುದೇನು?

ವಿಶ್ವಬ್ಯಾಂಕ್ ವರದಿ ಪ್ರಕಾರ, ಭಾರತದಲ್ಲಿ ಬಡತನ 16.1%ಗೆ ಮತ್ತು ತೀವ್ರ ಬಡತನ 2.6%ಗೆ ಇಳಿದಿದೆ. ಇದೇ ಅಂಕಿಅಂಶವನ್ನು ಬಳಸಿಕೊಂಡು ತಮ್ಮ ಸಾಧನೆ ಎಂಬಂತೆ ಕೇಂದ್ರ ಸರ್ಕಾರ ಸಂಭ್ರಮಿಸುತ್ತಿದೆ. ಆದರೆ, ದೇಶದ ಸುಮಾರು 80...

ಅನಧಿಕೃತ ಗರ್ಭಪಾತದ ಬಗ್ಗೆ ರಾಜ್ಯ ಪಿಸಿಪಿಎನ್‌ಡಿಟಿಯ ಉಪನಿರ್ದೇಶಕ ಡಾ. ವಿವೇಕ್ ದೊರೆ ಎಂಬುವವರು ದೂರು ನೀಡಿದ್ದರು. ಅವರ ದೂರಿನ ಆಧಾರ ಮೇಲೆ ನೋಡಲ್ ಅಧಿಕಾರಿ ಡಾ. ಚಂದ್ರಿಕಾ ಅವರು ದಾಳಿ ನಡೆಸಿದ್ದು, ಪ್ರಕರಣ ಬೆಳಕಿಗೆ ಬಂದಿದೆ.

“ಅನಧಿಕೃತ ಗರ್ಭಪಾತದಿಂದಾಗಿ ಸಾವು ಸಂಭವಿಸಬಹುದು. ಶಾಶ್ವತ ಬಂಜೆತನ, ಸೋಂಕು, ಹಾಗೂ ಮಾರಕ ರೋಗಗಳು ಹರಡುವ ಸಾಧ್ಯತೆ ಇದೆ. ಗರ್ಭನಿರೋಧಕಗಳ ಬಳಕೆ ಕೊರತೆಯಿಂದ ಅನಗತ್ಯ ಗರ್ಭಧಾರಣೆಯು ಒಂದು ತಾಯಿಯ ಆರೋಗ್ಯಕ್ಕೆ ಮಾರಕ” ಎಂದು ಡಾ. ಚಂದ್ರಿಕಾ ತಿಳಿಸಿದರು.

ಈ ಸುದ್ದಿ ಓದಿದ್ದೀರಾ?: ಮನಸ್ಸಿನ ಕತೆಗಳು | ಸಿಟ್ಟಿನ ಈ ಪುಟ್ಟನ ಕತೆ ನಿಮ್ಮ ಮಗುವಿನದ್ದೂ ಆಗಿರಬಹುದು

“ಒಂದು ವೇಳೆ ಗರ್ಭಪಾತದ ವಿಷಯದ ಬಗ್ಗೆ ಗೌಪ್ಯತೆ ಕಾಯ್ದುಕೊಳ್ಳುವ ಸಂದರ್ಭ ಬಂದಾಗ ವೈದ್ಯರೊಡನೆ ಸಮಾಲೋಚನೆ ನಡೆಸಿ ನಂತರ ಸುರಕ್ಷಿತ ಗರ್ಭಪಾತ ಮಾಡಿಸಿಕೊಳ್ಳಬೇಕು. ಗರ್ಭಪಾತಕ್ಕೊಳಗಾಗುವವರ ಹೆಸರನ್ನು ಗೌಪ್ಯತೆಯಿಂದಿಡಲಾಗುತ್ತದೆ. ಒಂದು ವೇಳೆ ಕಾನೂನು ರೀತಿಯಲ್ಲಿ ಗರ್ಭಧಾರಣೆಗೆ ನೋಂದಾಯಿಸಿಕೊಂಡಿದ್ದಲ್ಲಿ ದಾಖಲೆ ಅಥವಾ ವರದಿಗಳನ್ನು ಕಾನೂನು ಮೂಲಕ ಕೋರಿದ್ದಾಗ ಮಾತ್ರ ನೀಡಬೇಕಾಗಿರುತ್ತದೆ. ವೈದ್ಯರು ದಾಖಲೆಗಳನ್ನು ಬಹಿರಂಗಗೊಳಿಸಿದರೆ, ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ಸುರಕ್ಷಿತ ಗರ್ಭಪಾತಕ್ಕಾಗಿ ವೈದ್ಯರನ್ನೇ ಸಂಪರ್ಕಿಸಿ, ನೋಂದಾಯಿತ ಸ್ಥಳದಲ್ಲಿ ಮಾತ್ರ ಗರ್ಭಪಾತ ಮಾಡಿಸುವುದು ಉತ್ತಮ” ಎಂದು ಸಲಹೆ ನೀಡಿದರು.

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅಭಯ ದಿನ: ಭಯಮುಕ್ತ ಬದುಕಿನ ಭರವಸೆಗೆ ನಾಂದಿ

ವೈದ್ಯಕೀಯ ವೃತ್ತಿಯನ್ನು ಸಮಾಜದಲ್ಲಿ ಅತ್ಯಂತ ಪವಿತ್ರವಾದ ಸೇವೆ ಎಂದು ಪರಿಗಣಿಸಲಾಗುತ್ತದೆ. ರೋಗಿಗಳ...

ಬಾಲ್ಯದಲ್ಲಿ ಹಣ್ಣಿನ ಜ್ಯೂಸ್, ಸಿಹಿ ಪಾನೀಯ ಸೇವನೆಯು ಭವಿಷ್ಯದಲ್ಲಿ ‘BP’ ಅಪಾಯ ಹೆಚ್ಚಿಸುತ್ತದೆ: ಅಧ್ಯಯನ

ಅನೇಕ ಪೋಷಕರು ಹಣ್ಣಿನ ಜ್ಯೂಸ್‌ಗಳನ್ನು ಸಾಫ್ಟ್ ಡ್ರಿಂಕ್ಸ್‌ಗಳಿಗೆ ಆರೋಗ್ಯಕರ ಪರ್ಯಾಯ ಎಂದು...

ಭಾರತದ ಪ್ರತಿ 10ರಲ್ಲಿ ಒಬ್ಬರಿಗೆ ಕ್ಯಾನ್ಸರ್: WHO ವರದಿ

ಭಾರತದಲ್ಲಿ ಕ್ಯಾನ್ಸರ್ ರೋಗಿಗಳ ಸಂಖ್ಯೆ ವೇಗವಾಗಿ ಏರಿಕೆಯಾಗುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆಯ...

ವೈದ್ಯರ ಕೊರತೆ ನೆಪ; ಆಸ್ಪತ್ರೆ ನಿರ್ವಹಣೆಗೆ ಖಾಸಗಿ ಮೊರೆ ಹೋದ ಮಧ್ಯಪ್ರದೇಶ; ಖಾಸಗೀಕರಣದ ಹುನ್ನಾರ!

ಗ್ರಾಮೀಣ ಆರೋಗ್ಯ ಸೇವೆಯಲ್ಲಿ ವೈದ್ಯರು ಮತ್ತು ತಜ್ಞರ ತೀವ್ರ ಕೊರತೆಯನ್ನು ಎದುರಿಸುತ್ತಿರುವ...