ವರ್ಗಾವಣೆ ದಂಧೆ | ಸಾಕ್ಷಿ ಇದ್ದರೆ ಅಧಿವೇಶನದಲ್ಲಿ ಚರ್ಚೆ ಮಾಡಲಿ: ಗೃಹ ಸಚಿವ ಪರಮೇಶ್ವರ್ ಸವಾಲು

Date:

  • ‘ಪೊಲೀಸ್ ಇನ್ ಸ್ಪೆಕ್ಟರ್ ವರ್ಗಾವಣೆ ಸ್ವಾಭಾವಿಕ’
  • ‘ಯತೀಂದ್ರ ನನ್ನ ಬಳಿ ಯಾವ ಹೆಸರನ್ನು ಹೇಳಿಲ್ಲ’

ರಾಜ್ಯ ಸರ್ಕಾರದಲ್ಲಿ ವರ್ಗಾವಣೆ ದಂಧೆ ನಡೆಯುತ್ತಿದೆ ಎಂದು ಆರೋಪಿಸುವ ಪ್ರತಿಪಕ್ಷಗಳು ಬೆಳಗಾವಿ ವಿಧಾನಮಂಡಲ ಅಧಿವೇಶನದಲ್ಲಿ ಇದರ ಬಗ್ಗೆ ಚರ್ಚೆ ಮಾಡಲಿ. ಹಣ ತೆಗೆದುಕೊಂಡಿರುವ ಬಗ್ಗೆ ದಾಖಲೆ ಇದ್ದರೆ ಪ್ರಸ್ತಾಪ ಮಾಡಲಿ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಸವಾಲು ಹಾಕಿದರು.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಡಿ.4 ರಿಂದ ಬೆಳಗಾವಿಯಲ್ಲಿ ‌ಅಧಿವೇಶನ ನಡೆಯಲಿದೆ ಅಲ್ಲಿ ಎಲ್ಲಾ ವಿಷಯ ಪ್ರಸ್ತಾಪ‌ ಮಾಡಬಹುದು. ನಾವು ಸಮರ್ಥವಾಗಿ ಉತ್ತರ ನೀಡುತ್ತೇವೆ, ಅವರಿಗೆ ಸಮಾಧಾನ ಆಗುವ ರೀತಿಯಲ್ಲೇ ಉತ್ತರ ನೀಡುತ್ತೇವೆ, ನಾವೇನು ಉದ್ವೇಗಕ್ಕೆ ಒಳಗಾಗುವುದಿಲ್ಲ” ಎಂದರು.

“ಪೊಲೀಸ್ ಇನ್ ಸ್ಪೆಕ್ಟರ್ ವರ್ಗಾವಣೆ ಸ್ವಾಭಾವಿಕ. ಅದಕ್ಕಾಗಿ ಇಲಾಖೆಯಲ್ಲಿ ಮಂಡಳಿ ರಚನೆ ಮಾಡಲಾಗಿದೆ. ಅನೇಕ ಕಾರಣದಿಂದ ವರ್ಗಾವಣೆಗಳಾಗುತ್ತವೆ. ಪೊಲೀಸ್ ಇಲಾಖೆ ಬೇರೆ ಇಲಾಖೆಯಂತಲ್ಲ, ಠಾಣೆಗಳಲ್ಲಿ ಅಧಿಕಾರಿಗಳ ಹುದ್ದೆಗಳನ್ನು ಹೆಚ್ಚು ಸಮಯ ಖಾಲಿ ಇಡಲಾಗಲ್ಲ. ಠಾಣೆಯಲ್ಲಿ ಇನ್ ಸ್ಪೆಕ್ಟರ್ ಇಲ್ಲ ಅಂದರೆ ಮುಂದಿನ ವರ್ಷ ವರ್ಗಾವಣೆ ಸಮಯ ಬರುವವರೆಗೂ ಕಾಯಲು ಆಗಲ್ಲ, ಅದಕ್ಕಾಗಿ ಮಂಡಳಿಯ ಮೂಲಕ ಕಾಲ ಕಾಲಕ್ಕೆ ವರ್ಗಾವಣೆ ಮಾಡುತ್ತಲೇ ಇರುತ್ತೇವೆ. ಕೆಲವೊಮ್ಮೆ ಕಾರ್ಯಾಧ್ಯಕ್ಷತೆ ಕೊರತೆಯಾದಾಗಲೂ ಬದಲಾವಣೆ ಮಾಡುತ್ತೇವೆ” ಎಂದು ‌ವಿವರಿಸಿದರು.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಪ್ರಬಲ ಜಾತಿಗಳ ಜೋಡೆತ್ತುಗಳು, ಬಿಜೆಪಿಗರಿಗೇ ಬೇಡವಾಗಿದ್ದೇಕೆ?

“ಮೈಸೂರಿನ ವಿ.ವಿ.ಪುರಂ ಠಾಣೆಗೆ ವಿವೇಕಾನಂದ ಎಂಬ ಅಧಿಕಾರಿ ವರ್ಗಾವಣೆಯಾಗಿರುವುದು, ಯತೀಂದ್ರ ಅವರ ವಿಡಿಯೋದಲ್ಲಿ ವಿವೇಕಾನಂದ ಹೆಸರು ಹೇಳಿರುವುದು ಕಾಕತಾಳೀಯ ಇರಬಹುದು. ಅಧಿಕಾರಿಗಳ ವರ್ಗಾವಣೆ ವಿಷಯದಲ್ಲಿ ನನ್ನ ಮೇಲೆ ಯಾರು ಒತ್ತಡ ಹೇರಿಲ್ಲ. ಯತೀಂದ್ರ ನನ್ನ ಬಳಿ ಯಾವ ಹೆಸರನ್ನು ಹೇಳಿಲ್ಲ, ಪೊಲೀಸ್ ಅಧಿಕಾರಿಗಳ ವರ್ಗಾವಣೆಗೂ ಯತೀಂದ್ರ ಅವರ ವಿಡಿಯೋದಲ್ಲಿನ ಸಂಭಾಷಣೆಗೂ ಸಂಬಂಧ ಇಲ್ಲ” ಎಂದು ಸ್ಪಷ್ಟಪಡಿಸಿದರು.

“ಬಿಜೆಪಿಯಿಂದ ವಿರೋಧ ಪಕ್ಷ ನಾಯಕನಾಗಿ ಆಯ್ಕೆಯಾದ ಆರ್.ಅಶೋಕ್ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಅವರ ಪಕ್ಷ ದೊಡ್ಡ ಜವಾಬ್ದಾರಿ ನೀಡಿದೆ. ಸರ್ಕಾರಕ್ಕೆ ಸಲಹೆ ಕೊಟ್ಟು, ಎಚ್ಚರಿಸುವ ಕೆಲಸ ಮಾಡಲಿ, ವಿರೋಧ ಪಕ್ಷದ ನಾಯಕರಾದ ಮೇಲೆ ಟೀಕೆ ಮಾಡುವುದು, ಸರ್ಕಾರದ ತಪ್ಪು ಹೇಳುವುದು ಸ್ವಾಭಾವಿಕ. ಸತ್ಯಾಸತ್ಯತೆ ಅರಿತು ಮಾತನಾಡಲಿ” ಎಂದು ಸಲಹೆ‌ ಮಾಡಿದರು.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚೀನಾದಲ್ಲಿ ಹೊಸ ಮಾದರಿಯ ಸೋಂಕು ಪತ್ತೆ : ಕರ್ನಾಟಕ ಸೇರಿ 5 ರಾಜ್ಯಗಳಿಗೆ ಎಚ್ಚರಿಕೆ

ಈಗಷ್ಟೇ, ಕೊರೊನಾ ಸೋಂಕಿನ ಅಬ್ಬರದಿಂದ ನಿರಾಳರಾಗಿರುವ ಜನತೆಗೆ ಇದೀಗ ಮತ್ತೊಂದು ಸಂಕಷ್ಟ...

ತನಿಖೆ ಆಗುವವರೆಗೂ ಸದನಕ್ಕೆ ಹೋಗಲ್ಲ; ತಮ್ಮದೇ ಸರ್ಕಾರದ ವಿರುದ್ಧ ಬಿ.ಆರ್ ಪಾಟೀಲ್ ಕಿಡಿ

ಕಳೆದ ಸದನದಲ್ಲಿ ನನ್ನ ಪ್ರಶ್ನೆಗೆ ಉತ್ತರಿಸಿದ್ದ ಕಂದಾಯ ಸಚಿವ ಕೃಷ್ಣ ಬೈರೇಗೌಡ...

ಕಲಬುರಗಿ | ಸಕಾಲ ಅರ್ಜಿ ವಿಲೇವಾರಿ : ಕಲಬುರಗಿಗೆ ರಾಜ್ಯದಲ್ಲೇ ನಂಬರ್‌ 1 ಸ್ಥಾನ

ಕಾಲಮಿತಿಯಲ್ಲಿ ಸರ್ಕಾರಿ ಸೇವೆ ನೀಡುವ ಸಕಾಲ ಯೋಜನೆಯಡಿ ನವೆಂಬರ್ ತಿಂಗಳ ಅರ್ಜಿ...