ಕೆಎಂಎಫ್‌ನಿಂದ ಹೊಸ ಹೆಜ್ಜೆ: ಮಧುಮೇಹಿಗಳಿಗಾಗಿ ‘ಸಕ್ಕರೆ ರಹಿತ ಉತ್ಪನ್ನ’ ಬಿಡುಗಡೆ; ಬೆಲೆ ಎಷ್ಟು?

Date:

ಕರ್ನಾಟಕದ ಪ್ರತಿಷ್ಠಿತ ಮತ್ತು ಕನ್ನಡಿಗರ ಹೆಮ್ಮೆಯ ‘ನಂದಿನಿ’ ಬ್ರ್ಯಾಂಡ್‌, ದೀಪಾವಳಿ ಪ್ರಯುಕ್ತ ಮಧುಮೇಹಿಗಳನ್ನು ಗುರಿಯಾಗಿರಿಸಿಕೊಂಡು ಹೊಸ ಸಕ್ಕರೆ ರಹಿತ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

- Advertisement -

ಸಕ್ಕರೆ ರಹಿತ ನಂದಿನಿ ಖೋವಾ ಗುಲಾಬ್‌ ಜಾಮೂನ್‌, ನಂದಿನಿ ಹಾಲಿನ ಪೇಡಾ, ನಂದಿನಿ ಬೆಲ್ಲದ ಓಟ್ಸ್‌ ಆ್ಯಂಡ್‌ ನಟ್ಸ್‌ ಬರ್ಫಿಯನ್ನು ಪಶು ಸಂಗೋಪನಾ ಮತ್ತು ರೇಷ್ಮೆ ಸಚಿವ ಕೆ. ವೆಂಕಟೇಶ್‌ ವಿಕಾಸ ಸೌಧದಲ್ಲಿ ಕೆಎಂಎಫ್ ಅಧಿಕಾರಿಗಳ ಸಮ್ಮುಖದಲ್ಲಿ ಬಿಡುಗಡೆಗೊಳಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಕ್ಷಿಪಣಿ ಬಿಡಿಭಾಗಗಳ ಖರೀದಿಯಲ್ಲಿ ಸ್ವಜನಪಕ್ಷಪಾತ; ಬಿಡಿಎಲ್ ಮಾಜಿ ಮುಖ್ಯಸ್ಥನ...

ಕ್ಷಿಪಣಿಯ ಆಪ್ಟಿಕಲ್ ಸೈಟ್‌ಗಳ ಪೂರೈಕೆಗಾಗಿ ಭಾರತ್ ಡೈನಾಮಿಕ್ಸ್ ಲಿಮಿಟೆಡ್ (BDL) ತನ್ನದೇ ಸಂಸ್ಥೆಯ ಮಾಜಿ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕರ (CMD) ಪತ್ನಿಯ ಒಡೆತನದ ಖಾಸಗಿ ಕಂಪನಿಗೆ 'ತುರ್ತು' ನೆಪವೊಡ್ಡಿ 56.8 ಕೋಟಿ...

ನುಡಿ ನಮನ | ಚೆರುವಯಲ್ ರಾಮನ್ – ಭತ್ತದ...

ಕೃಷಿ ಎಂದರೆ ಕೇವಲ ಬೆಳೆ ಬೆಳೆಯುವುದಲ್ಲ; ಬಿತ್ತನೆಗೆ ಸೂಕ್ತವಾದ ಬೀಜಗಳನ್ನು ಆಯ್ಕೆ ಮಾಡುವುದು, ಅವುಗಳನ್ನು ಸಂಗ್ರಹಿಸುವುದು ಹಾಗೂ ಮುಂದಿನ ಋತುವಿಗೆ ಉಳಿಸುವುದೂ ಕೃಷಿಯ ಅವಿಭಾಜ್ಯ ಅಂಗ ಎನ್ನುತ್ತಿದ್ದ ರಾಮನ್, ತಮ್ಮ ಇಡೀ ಜೀವನವನ್ನೇ...

ಬರಗಾಲದ ದಸರಾದಲ್ಲಿ ಕಂಬಳದ ಹಠ: ಜನಾಭಿಪ್ರಾಯಕ್ಕೆ ಬೆಲೆಯಿಲ್ಲವೇ?

ನೀರಿನ ಅಭಾವ, ಪರಿಸರ ನಾಶ, ಸಾರ್ವಜನಿಕ ಹಣದ ವೆಚ್ಚದ ನಡುವೆ ಸರ್ಕಾರದ ಸಮರ್ಥನೆ; ಇತಿಹಾಸದ ಹೆಸರಿನಲ್ಲಿ ವಿವಾದ, ಆಡಳಿತದ ನಡೆಗೆ ಸಾರ್ವಜನಿಕರ ಪ್ರಶ್ನೆ. ರಾಜ್ಯದ ಜನತೆ ಬರಗಾಲದ ಸಂಕಷ್ಟ ಎದುರಿಸುತ್ತಿರುವಾಗ, ರೈತರು ಮಳೆ-ಬೆಳೆಯಿಲ್ಲದೆ ಕಂಗಾಲಾಗಿರುವಾಗ,...

ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಕೆಎಂಎಫ್‌ ವ್ಯವಸ್ಥಾಪಕ ನಿರ್ದೇಶಕರಾದ ಬಿ.‌ಶಿವಸ್ವಾಮಿ, ಕರ್ನಾಟಕ ಹಾಲು ಮಹಾಮಂಡಳಿಯು ಕಳೆದ 5 ದಶಕಗಳಿಂದ ʼನಂದಿನಿʼ ಬ್ರ್ಯಾಂಡ್‌ ಮೂಲಕ ರಾಜ್ಯ ಮತ್ತು ಹೊರ ರಾಜ್ಯದ ಗ್ರಾಹಕರಿಗೆ ಕೈಗೆಟುಕುವ ಬೆಲೆಗಳಲ್ಲಿ ಪರಿಶುದ್ಧ ಮತ್ತು ರುಚಿಕರ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಒದಗಿಸುತ್ತಿದೆ. ನಂದಿನಿ ಬ್ರ್ಯಾಂಡ್‌ ಮೂಲಕ ಈಗಾಗಲೇ 175ಕ್ಕೂ ಅಧಿಕ ಮಾದರಿಯ ಹಾಲಿನ ಉತ್ಪನ್ನಗಳನ್ನು ಉತ್ಪಾದಿಸಿ ಮಾರಾಟ ಮಾಡಲಾಗುತ್ತಿದೆ. ಮುಂದಿನ ಯೋಜನೆಯಾಗಿ ಮಧುಮೇಹ ಹೊಂದಿರುವ ಗ್ರಾಹಕರನ್ನು ಗುರಿಯಾಗಿರಿಸಿಕೊಂಡು No Added Sugar ಉತ್ಪನ್ನಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತಿದ್ದೇವೆ’ ಎಂದು ತಿಳಿಸಿದ್ದಾರೆ.

“ಈ ಬಾರಿಯ ಅಂದರೆ 2025ರ ದಸರಾ ಹಬ್ಬದ ಸಂದರ್ಭದಲ್ಲಿ 750 ಮೆ.ಟನ್‌ಗಳನ್ನು ನಂದಿನಿ ಸಿಹಿ ತಿಂಡಿ ಮಾರಾಟವಾಗಿತ್ತು. ಕಾಲಕ್ಕೆ ಅನುಗುಣವಾಗಿ ನಂದಿನಿ ತನ್ನ ಉತ್ಪನ್ನಗಳನ್ನು ಅಭಿವೃದ್ದಿಪಡಿಸುತ್ತಲೇ ಬಂದಿದೆ. ಅದರ ಫಲವೇ ಇದೀಗ ಬಿಡುಗಡೆಗೊಳಿಸಿರುವ ಸಕ್ಕರೆ ರಹಿತ ಸಿಹಿ ಉತ್ಪನ್ನಗಳು” ಎಂದು ತಿಳಿಸಿದ್ದಾರೆ.

1002709654

“ಪ್ರಸ್ತುತ ಯುವಜನತೆಯಲ್ಲಿ ಆರೋಗ್ಯ ಕಾಳಜಿ ಹೆಚ್ಚಾಗುತ್ತಿದೆ. ಹೀಗಾಗಿ ಬಹುತೇಕರು ಸಕ್ಕರೆ ರಹಿತ ಆಹಾರ ಉತ್ಪನ್ನಗಳತ್ತ ಮುಖ ಮಾಡಿದ್ದಾರೆ. ಇವು ಮಧುಮೇಹಿಗಳಿಗೂ ಉತ್ತಮ. ತೂಕ ನಿಯಂತ್ರಣಕ್ಕೆ ಸಹಕಾರಿ. ಹೀಗಾಗಿ ಸಕ್ಕರೆ ರಹಿತ ಸಿಹಿತಿಂಡಿಗಳೂ ಜನಪ್ರಿಯಗೊಳ್ಳುತ್ತಿವೆ. ಈ ಹಿನ್ನೆಲೆಯೊಂದಿಗೆ ಗ್ರಾಹಕರ ಆಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಕೆಎಂಎಫ್‌ ಗ್ರಾಹಕರಿಗೆ ಹೊಸ ಸಕ್ಕರೆ ರಹಿತ ಸಿಹಿ ತಿಂಡಿಗಳನ್ನು ನಂದಿನಿ ಬ್ರ್ಯಾಂಡ್‌ ಅಡಿಯಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಬಿಡುಗಡೆ ಮಾಡಿದೆ” ಎಂದು ಕರ್ನಾಟಕ ಹಾಲು ಮಹಾಮಂಡಳದ ವ್ಯವಸ್ಥಾಪಕ ನಿರ್ದೇಶಕರಾದ ಬಿ. ಶಿವಸ್ವಾಮಿ ತಿಳಿಸಿದ್ದಾರೆ.

ಯಾವುದೆಲ್ಲ ಉತ್ಪನ್ನ? ಬೆಲೆ ಎಷ್ಟು?

  1. “ನಂದಿನಿ ಖೋವಾ ಗುಲಾಬ್ ಜಾಮೂನ್”

(ಸಕ್ಕರೆ ರಹಿತ – No added sugar): 500 ಗ್ರಾಂ ಪ್ಯಾಕ್‌ ದರ – ರೂ. 220

  1. ಎಲ್ಲರ ಮೆಚ್ಚಿನ ಪರಿಶುದ್ಧ “ನಂದಿನಿ ಹಾಲಿನ ಪೇಡಾ” (ಸಕ್ಕರೆ ರಹಿತ – No added sugar 200 ಗ್ರಾಂ ಪ್ಯಾಕ್‌: ದರ ರೂ. 170
  2. ರುಚಿಯ ಸಮ್ಮಿಲನವಾಗಿರುವ “ನಂದಿನಿ ಬೆಲ್ಲದ ಓಟ್ಸ್ ಅಂಡ್ ನಟ್ಸ್ ಬರ್ಫಿ” (ಬೆಲ್ಲದಿಂದ ತಯಾರಿಸಲಾದ ಸಿಹಿ) – 200ಗ್ರಾಂ ಪ್ಯಾಕ್‌ ದರ – ರೂ. 170

ಹೊಸ ಉತ್ಪನ್ನಗಳ ಬಿಡುಗಡೆ ಸಂದರ್ಭದಲ್ಲಿ ಕೆಎಂಎಫ್‌ನ ಆಡಳಿತಾಧಿಕಾರಿ ಟಿ.ಹೆಚ್.ಎಂ ಕುಮಾರ್, ಮಾರುಕಟ್ಟೆ ವಿಭಾಗದ ರಘುನಂದನ್ ಸೇರಿದಂತೆ ಕೆಎಂಎಫ್‌ನ ಅಧಿಕಾರಿ ವರ್ಗದವರು ಉಪಸ್ಥಿತರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿದ್ದರಾಮಯ್ಯ ‘ಸ್ಟಿಂಗ್’ ವಿವಾದದ ಅಸಲಿ ವೃತ್ತಾಂತವೇನು? ‘ಸತ್ಯಕ್ಕೇ ಜಯ’ ಎಂದು ಮಾಜಿ ಸಿಎಂ ಹೇಳಿದ್ದೇಕೆ?

ಕರ್ನಾಟಕ ರಾಜಕಾರಣದಲ್ಲಿ ಇದೀಗ ‘ಸ್ಟಿಂಗ್ ಆಪರೇಷನ್’ ಹೆಸರಿನಲ್ಲಿ ಹೊಸ ವಿವಾದ ಭುಗಿಲೆದ್ದಿದೆ....

ಬೀದರ್‌ | ಜಿಪಂ, ತಾಪಂ ಚುನಾವಣೆ: ಸಾಮಾಜಿಕ ಜಾಲತಾಣದಲ್ಲಿ ಆಕಾಂಕ್ಷಿಗಳ ಪ್ರಚಾರ ಜೋರು!

ರಾಜ್ಯದಲ್ಲಿ ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿ ಕ್ಷೇತ್ರವಾರು ಮೀಸಲಾತಿ ಪ್ರಕಟವಾಗುತ್ತಿದ್ದಂತೆ, ಬೀದರ್‌...

ರ‍್ಯಾಂಕ್ ಸಾಮರ್ಥ್ಯದ ಮಾನದಂಡವಲ್ಲ: ಮಕ್ಕಳ ವಿಕಾಸಕ್ಕೆ ಒತ್ತಡ ರಹಿತ ಕಲಿಕೆಯ ವಾತಾವರಣ ಅಗತ್ಯ

ಶಿಕ್ಷಣವೆಂದರೆ ಕೇವಲ ಅಂಕ ಗಳಿಸುವುದು, ರ‍್ಯಾಂಕ್ ಪಡೆಯುವುದು ಅಥವಾ ಪರೀಕ್ಷೆಯಲ್ಲಿ ಶೇ.90ಕ್ಕಿಂತ...