ರಾಜ್ಯದಲ್ಲಿ ಬಿರುಸಿನಿಂದ ನಡೆದ ನಾಯಕತ್ವ ಬದಲಾವಣೆ ಪ್ರಕ್ರಿಯೆ, ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಿದ ಬಳಿಕ ಕೊಂಚ ತಣ್ಣಗಾಗಿದೆ. ಸದ್ಯ ಸಿದ್ದು ನಡೆಯನ್ನು ಖ್ಯಾತ ಸಂಗೀತ ನಿರ್ದೇಶಕ ಡಾ. ಹಂಸಲೇಖ ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ.
ತಮ್ಮ ಫೇಸ್ಬುಕ್ ಖಾತೆಯಲ್ಲಿ ,
ನಿಮ್ಮ ನಡೆ ; “ಮುನ್ನಡೆ” !
ನಿಮ್ಮ ನುಡಿ ; “ಚೆನ್ನುಡಿ” !
ನಿಮ್ಮ ನಡತೆ ; ಘನತೆಗೆ “ಮುನ್ನುಡಿ” !
ನೀವಿಂದು ” ಪ್ರಬುದ್ಧ ರಾಮಯ್ಯ”
ಕನ್ನಡದ ಕಹಳೆಯೇ
ಉಘೇ ಉಘೇ
~ ಐದನಿ ಬಳಗ… ಎಂದು ಬರೆದುಕೊಂಡಿದ್ದಾರೆ.

ಈ ಪೋಸ್ಟ್ಗೆ ಹಲವರು ಮೆಚ್ಚುಗೆ ಸೂಚಿಸಿದ್ದಾರೆ. ಪ್ರಸ್ತುತ ಸಿದ್ದರಾಮಯ್ಯ ಅವರು, ತಮ್ಮ ಎರಡನೇ ಬಾರಿಯ ಮುಖ್ಯಮಂತ್ರಿ ಹುದ್ದೆಗೆ 3 ವರ್ಷಗಳ ಬಳಿಕ ರಾಜೀನಾಮೆ ನೀಡಿ, ಡಿಕೆ ಶಿವಕುಮಾರ್ ಅವರಿಗೆ ಅಧಿಕಾರ ಹಸ್ತಾಂತರಿಸಿದ್ದಾರೆ. ಜೂನ್ ಮೊದಲ ವಾರದಲ್ಲಿ ಡಿಕೆಶಿ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸುವ ಎಲ್ಲ ಸಿದ್ದತೆಗಳು ಗರಿಗೆದರಿವೆ.





