ಬಾಗಲಕೋಟೆ ಜಿಲ್ಲಾ ಪಂಚಾಯತಿ ನೂತನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಗಜಾನನ ಬಾಲೆ ಅಧಿಕಾರ ವಹಿಸಿಕೊಂಡಿದ್ದು, ಜಿಲ್ಲಾ ಪಂಚಾಯತ್ ಸಿಇಒ ಹುದ್ದೆಯ ಪ್ರಭಾರ ವಹಿಸಿಕೊಂಡಿದ್ದ ಜಿಲ್ಲಾಧಿಕಾರಿ ಸಂಗಪ್ಪ ಅವರಿಂದ ಅಧಿಕಾರ ಸ್ವೀಕರಿಸಿದರು.
ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಕುಡಿಚಿಯ ಗಜಾನನ ಬಾಲೆ ಅವರು ಎಲ್ಟ್ರಾನಿಕ್ ಮತ್ತು ಕಮ್ಯುನಿಕೇಷನ್ ವಿಭಾಗದಲ್ಲಿ ಎಂಜಿನಿಯರಿಂಗ್ ಪದವಿ ಪಡೆದಿದ್ದಾರೆ. 2022ರ ಇಎಸ್‌ಎಎಸ್ ಬ್ಯಾಚಿನ ಅಧಿಕಾರಿಯಾಗಿದ್ದು, ರಾಯಚೂರು ವಿಭಾಗಧಿಕಾರಿಯಾಗಿ, ಬಾಗಲಕೋಟೆ ಯುಕೆಪಿಯ ಮಹಾ ವ್ಯವಸ್ಥಾಪಕರಾಗಿಯೂ ಕಾರ್ಯನಿರ್ವಹಿಸಿದ್ದಾರೆ.
ಸದ್ಯ ಜಿಲ್ಲಾ ಪಂಚಾಯತ್ ಸಿಇಒ ಹುದ್ದೆಯೊಂದಿಗೆ ಹೆಚ್ಚುವರಿಯಾಗಿ ಯುಕೆಪಿ ಮಹಾ ವ್ಯವಸ್ಥಾಪಕರಾಗಿ ನೇಮಕವಾಗಿದ್ದಾರೆ.
ಜಿಪಂ ಉಪಕಾರ್ಯದರ್ಶಿ ಎನ್ ಯ ಬಸರಗಿಡದ, ಮುಖ್ಯ ಲೆಕ್ಕಧಿಕಾರಿ ಸಿದ್ದರಾಮೇಶ್ವರ ಉಕ್ಕಲಿ, ಜಂಟಿ ಕೃಷಿ ನಿರ್ದೇಶಕ ಟಿ ಎಸ್ ರುದ್ರೇಶಪ್ಪ, ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ರವೀಂದ್ರ ಹಕಾಟಿ, ಯುಕೆಪಿ ಉಪ ಮಹಾ ವ್ಯವಸ್ಥಾಪಕ ಮಹಾದೇವಿ ಮುರಗಿ, ಕೃಷಿ ಇಲಾಖೆಯ ಉಪನಿರ್ದೇಶಕ ಕೆ ಎಸ್ ಅಗಸನಾಳ, ಜಿಪಂ ಮುಖ್ಯ ಯೋಜನಿಧಿಕಾರಿ ಅಲ್ಲಮಪ್ರಭು, ಸಹಾಯಕ ಯೋಜನಾಧಿಕಾರಿ ಭೀಮಪ್ಪ ತಳವಾರ ಸೇರಿದಂತೆ ಇತರರು ಇದ್ದರು.
ಈ ಸುದ್ದಿ ಓದಿದ್ದೀರಾ? ವಿಜಯಪುರ | ಸರ್ಕಾರಿ ಯೋಜನೆಗಳ ಫಲಾನುಭವಿಗಳ ಅರ್ಜಿ ವಿಳಂಬಿಸದಿರಿ: ಅಧಿಕಾರಿಗಳಿಗೆ ಡಿ.ಸಿ ಸೂಚನೆ
ಜಿಪಂ ಸಿಇಒ ಆಗಿದ್ದ ಶಶಿಧರ ಕುರೇರ ವರ್ಗಾವಣೆ ಬಳಿಕ ಒಂದು ತಿಂಗಳನಿಂದ ಹುದ್ದೆ ಖಾಲಿಯಿತ್ತು. ಸರ್ಕಾರ ಈಗ ಗಜಾನನ ಬಾಲೆ ಅವರನ್ನು ನೇಮಕ ಮಾಡಿದೆ.




