ಹುನಗುಂದ | ಮುಳುಗಡೆ ಸಂತ್ರಸ್ತರ ಹೋರಾಟಕ್ಕೆ ಎಮ್ಮೆಟ್ಟಿ ಗ್ರಾಮಸ್ಥರ ಸಾಥ್‌; ಪುನರ್ವಸತಿಗೆ ಆಗ್ರಹ

Date:

ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲ್ಲೂಕಿನ ಇದ್ದಲಗಿ ಗ್ರಾಮದ ಮುಳಗಡೆ ಸಂತ್ರಸ್ತರ ಮೂಲಭೂತ ಸೌಲಭ್ಯ ಕಲ್ಪಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿಯ 37ನೆಯ ದಿನ ಎಮ್ಮೆಟ್ಟಿ ಗ್ರಾಮದ ಸಂತ್ರಸ್ತರು ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸಿ ಧರಣಿ ಸತ್ಯಾಗ್ರಹಕ್ಕೆ ತಮ್ಮ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದಾರೆ.

- Advertisement -

“ಸಂತ್ರಸ್ತರ ಬೇಡಿಕೆಗಳನ್ನು ರಾಜ್ಯದ ಮುಖ್ಯಮಂತ್ರಿಯಿಂದ ಹಿಡಿದು ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳಿಗೆ ಲಿಖಿತವಾಗಿ ಮತ್ತು ಮೌಖಿಕ ಮನವಿ ಮಾಡಿ ಕಳೆದ 37 ದಿನಗಳಿಂದ ಸಂತ್ರಸ್ತರ ಬೇಡಿಕೆ ಈಡೇರಿಸುವಂತೆ ಧರಣಿ ನಡೆಸುತ್ತಿದ್ದರೂ, ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ವರ್ಗ ನಮ್ಮಗಳ ಬೇಡಿಕೆಗಳ ಪರಿಹಾರದ ಕುರಿತು ಗಂಭೀರವಾದ ನಿರ್ಧಾರ ತಗೆದುಕೊಳ್ಳುತ್ತಿಲ್ಲ” ಎಂದು ಧರಣಿಗೆ ಕುಳಿತ ಸಂತ್ರಸ್ತರು ಜನಪ್ರತಿನಿಧಿಗಳ ಮತ್ತು ಅಧಿಕಾರಿಗಳ ವಿರುದ್ಧ ಕಿಡಿಕಾರಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬ್ರೆಜಿಲ್‌ನಲ್ಲಿ ಒಂದೇ ಹುದ್ದೆಗೆ ಎರಡು ಬಾರಿ ಚುನಾವಣೆ: ಏನಿದು...

ಭಾರತಕ್ಕೂ ಎರಡನೇ ಸುತ್ತಿನ ಪದ್ಧತಿ ಅಗತ್ಯವಿದೆಯೇ ಎಂಬ ಚರ್ಚೆ ಆಗಿಂದಾಗ್ಗೆ ಮುನ್ನೆಲೆಗೆ ಬರುತ್ತಲೇ ಇರುತ್ತದೆ. ಹಲವು ಅಭ್ಯರ್ಥಿಗಳು ಕಣದಲ್ಲಿರುವಾಗ ಮತಗಳು ಹಂಚಿಹೋಗಿ, ಕೇವಲ ಶೇ 30 ಅಥವಾ 40ರಷ್ಟು ಮತ ಪಡೆದವರೂ ನಮ್ಮಲ್ಲಿ...

ಬೆಂಗಳೂರು ಪೌರಕಾರ್ಮಿಕರ ಶ್ವಾಸಕೋಶ ಹಿಂಡುತ್ತಿದೆ ಮಾಲಿನ್ಯ; BMTC ಸಿಬ್ಬಂದಿ,...

ಬೆಂಗಳೂರಿನಲ್ಲಿ ಮಾಲಿನ್ಯವು ಹೊಸ ತಂಬಾಕಾಗಿ ಪರಿಣಮಿಸಿದೆ. ಜನರ ಶ್ವಾಸಕೋಶವನ್ನು ಹಿಂಡುತ್ತಿದೆ. ಮಾಸ್ಕ್, ಕೈಗವಸು, ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸಾ ಸೌಲಭ್ಯಗಳ ಕೊರತೆಗಳಿಂದಾಗಿ ಪೌರಕಾರ್ಮಿಕರು, ಬಿಎಂಟಿಸಿ ನೌಕರರು, ಸಂಚಾರ ಪೊಲೀಸರು ಹಾಗೂ ಕಟ್ಟಡ ಕಾರ್ಮಿಕರು...

ಗ್ರಾಮೀಣ ಮೀಸಲಾತಿಯಲ್ಲಿ ಸಾಮಾಜಿಕ ಅನ್ಯಾಯ; ಬರಿದಾಗುತ್ತಿರುವ ಬಡ ಮಕ್ಕಳ...

ಸರಕಾರಿ ಶಾಲೆ ಸೇರುವವರು ಕೇವಲ ಬಡತನ-ಕೆಳಮಟ್ಟದ ಕುಟುಂಬದವರು ಎಂಬಂತಾಗಿದೆ. ಈ ಋಣಾತ್ಮಕ ಭಾವನೆ ಹೋಗಲಾಡಿಸಲು ಕನ್ನಡದಲ್ಲಿ ಕಲಿತರೆ ಉನ್ನತ ಶಿಕ್ಷಣ, ಉದ್ಯೋಗ ಸ್ಪರ್ಧೆಯಲ್ಲಿ ಜಯಿಸಬಹುದೆಂಬ ವಿಶ್ವಾಸ ಮೂಡಿಸಬೇಕಾಗಿದೆ. ಈಗಿನ ಎಡಬಿಡಂಗಿ ಗ್ರಾಮೀಣ ಮೀಸಲಾತಿ...

ಧರಣಿಗೆ 37ನೆಯ ದಿನ ಎಮ್ಮೆಟ್ಟಿ ಗ್ರಾಮದ ಸಂತ್ರಸ್ತರು ಬೆಂಬಲ ಸೂಚಿಸಿದ್ದು, “ಮುಳುಗಡೆಯಾದ 10 ಗ್ರಾಮಗಳಲ್ಲಿ ಈಗಾಗಲೇ 9 ಗ್ರಾಮಗಳ ಸಂತ್ರಸ್ತರಿಗೆ ಪುನರ್ವಸತಿ ಕೇಂದ್ರಗಳನ್ನು ಗುರುತಿಸಿ, ಅಭಿವೃದ್ಧಿ ಕಾರ್ಯ ಅಪೂರ್ಣವಾಗಿಯೇ ಉಳಿಸಿದ್ದಾರೆ. ಆದರೆ, ಎಮ್ಮೆಟ್ಟಿ ಗ್ರಾಮದ ಸಂತ್ರಸ್ತರ ಪುನರ್ವಸತಿ ಕೇಂದ್ರಕ್ಕಾಗಿ ಗುರುತಿಸಿದ ಸ್ಥಳ ಅಭಿವೃದ್ಧಿಪಡಿಸದೇ ನ್ಯಾಯಾಲಯದ ಕುಂಟು ನೆಪ ಹೇಳಿಕೊಂಡು ಕಾಲಹರಣ ಮಾಡುತ್ತಿದ್ದಾರೆ” ಎಂದು ಆರೋಪಿಸಿದ್ದಾರೆ.

“ಕಳೆದ 18 ವರ್ಷದಿಂದ ಎಮ್ಮೆಟ್ಟಿ ಗ್ರಾಮದ ಸಂತ್ರಸ್ತರು ಪ್ರವಾಹ ಬಂದಾಗಲೆಲ್ಲಾ ತಾತ್ಕಾಲಿಕ ಆಶ್ರಯಕ್ಕೆ ಅಲೆದಲೆದು ಹೈರಾಣಾಗಿದ್ದೇವೆ. ಪುನರ್ವಸತಿ ಕೇಂದ್ರ ಅಭಿವೃದ್ಧಿ ಕಾಣದಿರುವದರಿಂದ ಮತ್ತೇ ಗ್ರಾಮಕ್ಕೆ ಬಂದು ಪಾಳು ಬಿದ್ದ ಮನೆಯಲ್ಲಿ ವಿಷಕಾರಿ ಕ್ರಿಮಿ, ಕೀಟಗಳ ನಡುವೆ ವಾಸ ಮಾಡುವಂತಾಗಿದೆ. ಸೊಳ್ಳೆ ಕಡಿಸಿಕೊಂಡು, ಮಲೇರಿಯಾಕ್ಕೆ ತುತ್ತಾಗಿ ಆರೋಗ್ಯ ಸಮಸ್ಯೆಗೆ ತುತ್ತಾಗುತ್ತಿದ್ದಾರೆ. ಗ್ರಾಮದತ್ತ ಯಾವ ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿವ ಇಣುಕಿ ಹಾಕಿಲ್ಲ, ಸಂತ್ರಸ್ಥರ ಕಷ್ಟ ಕೇಳುವವರಿಲ್ಲ” ಎಂದು ಈ ದಿನ.ಕಾಮ್‌ ಜೊತೆಗೆ ತಮ್ಮ ಸಂಕಟ ತೋಡಿಕೊಂಡರು.

“ನಾರಾಯಣಪುರ ಹಿನ್ನೀರಿನಿಂದ ಮುಳುಗಡೆಯಾದ ಹತ್ತು ಗ್ರಾಮಗಳ ಪೈಕಿ ಎಮ್ಮೆಟ್ಟಿ ಗ್ರಾಮದ ಪುನರ್ವಸತಿ ಕೇಂದ್ರಕ್ಕಾಗಿ ಸರ್ಕಾರ 65 ಎಕರೆ ಜಮೀನನ್ನು ಸ್ವಾಧೀನ ಪಡಿಸಿಕೊಂಡಿದ್ದು, ಅದರಲ್ಲಿ 50 ಎಕರೆ ಜಮೀನಗೆ ಕಳೆದ 16 ವರ್ಷಗಳ ಹಿಂದೆ ಪರಿಹಾರ ನೀಡಿದೆ. ಉಳಿದ 15 ಎಕರೆ ಜಮೀನಿನ ವಿವಾದ ನ್ಯಾಯಾಲಯದಲ್ಲಿದೆ. ನ್ಯಾಯಾಲಯದಲ್ಲಿರುವ 15 ಎಕರೆ ಜಮೀನು ಹೊರತುಪಡಿಸಿ, ಪರಿಹಾರ ನೀಡಿದ 50 ಎಕರೆ ಜಮೀನನಲ್ಲಾದರೂ ಪುನರ್ವಸತಿ ಕೇಂದ್ರ ಅಭಿವೃದ್ಧಿ ಪಡಿಸಬಹುದಾಗಿತ್ತು. ಹಾಗೆ ಮಾಡದೇ ನ್ಯಾಯಾಲಯದಲ್ಲಿರುವ ಜಮೀನಿನ ವಿಷಯವನ್ನೇ ಕಳೆದ 18 ವರ್ಷಗಳಿಂದ ನೆಪವನ್ನಾಗಿಟ್ಟುಕೊಂಡು ಜನಪ್ರತಿನಿಧಿಗಳು ಮತ್ತು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಸಂತ್ರಸ್ತರಿಗೆ ವಸತಿ ಕಲ್ಪಿಸುವ ಕಾರ್ಯ ಮುಂದೂಡುತ್ತ ಬರುತ್ತಿದ್ದು, ಪ್ರತಿ ವರ್ಷ ನದಿಯಿಂದ ಪ್ರವಾಹ ಉಂಟಾದಾಗ ಗ್ರಾಮದ ಸಂತ್ರಸ್ತರು ಸಂಕಷ್ಟದಲ್ಲಿ ಸಿಲಿಕುವಂತಾಗಿದೆ” ಎಂದು ಅಳಲು ತೋಡಿಕೊಂಡಿದ್ದಾರೆ.

ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಸ್ಥಳ ಭೇಟಿ ನೀಡಿ ಗ್ರಾಮಸ್ಥರ ಸಮಸ್ಯೆಯ ಕುರಿತು ಪರಿಶೀಲನೆ ನಡೆಸಬೇಕಿದೆ, 18 ವರ್ಷಗಳ ಸುಧೀರ್ಘ ಕಾಯುವಿಕೆಗೆ ಮುಕ್ತಿ ದೊರಕಿಸಿ, ಮನೆ ಕಳೆದುಕೊಂಡವರಿಗೆ ಶಾಶ್ವತ ಸೂರು ಒದಗಿಸುವ ಕಾರ್ಯಕ್ಕೆ ಮುಂದಾಗುತ್ತಾರೆಯೇ ಕಾಯ್ದು ನೋಡಬೇಕಿದೆ.

ಸಿದ್ದರಾಮಪ್ಪ ದೇಸಾಯಿ,ಮಾಜಿ ಅಧ್ಯಕ್ಷರು ಗ್ರಾ.ಪಂ. ಎಮ್ಮೆಟ್ಟಿ ರಮೇಶ ತುಂಬದ, ಶಾಂತಾ ಪಾಟೀಲ, ರೇಣುಕಾ ಗೌಡರ, ದೇವಕ್ಕವ್ವ ಹರಕಲ್ಲ, ಶರಣವ್ವ ತೆಗ್ಗಿಹಾಳ, ಮಲ್ಲವ್ವ ದಡ್ಡಿ, ನೀಲವ್ವ ಗೌಡರ, ಹನುಮವ್ವ ಪೂಜಾರಿ, ಅಯ್ಯಪ್ಪ ತುಂಬದ, ಬಸವರಾಜ್ ಮುಳ್ಳೂರ, ಶರಣಪ್ಪ ಮುಳ್ಳೂರ ಸೇರಿದಂತೆ ಅನೇಕರು ಧರಣಿಯಲ್ಲಿ ಭಾಗಿಯಾಗಿದ್ದರು.

eedina
ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಡುಪಿ | ಮಣಿಪಾಲದಲ್ಲಿ ಮಾರಕಾಸ್ತ್ರಗಳೊಂದಿಗೆ ಯುವಕನ ಬಂಧನ

ಉಡುಪಿ ನಗರದ ಮಣಿಪಾಲದ ವಿದ್ಯಾರತ್ನ ನಗರದ ಮಾಂಡವಿ ಎಮರಾಲ್ಡ್ ಕಟ್ಟಡದ ಹಿಂಭಾಗದ...

ಉಡುಪಿ | ಕೋಟ ಜಂಕ್ಷನ್ ಅಪಘಾತ; ಗಾಯಗೊಂಡಿದ್ದ ಕಾರು ಚಾಲಕ ಸಾವು

ಕೋಟ ಜಂಕ್ಷನ್‌ನಲ್ಲಿ ಅ. 26ರಂದು ಸಂಭವಿಸಿದ ಸೈಕಲ್‌ ಮತ್ತು ಕಾರಿನ ನಡುವಿನ...

ಉಡುಪಿ | ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿ ಲೋಪವಾಗದಿರಲಿ: ಅಶೋಕ್ ಕುಮಾರ್ ಕೊಡವೂರು

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಪಂಚ ಗ್ಯಾರಂಟಿ ಯೋಜನೆಗಳನ್ನು ಅಧಿಕಾರಿಗಳು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು....

ಬೆಳಗಾವಿಯಲ್ಲಿ ಡಿ. 7ರಿಂದ ಚಳಿಗಾಲದ ಅಧಿವೇಶನ

ರಾಜ್ಯ ಕರ್ನಾಟಕ ವಿಧಾನಮಂಡಲದ ಉಭಯ ಸದನಗಳ ಚಳಿಗಾಲದ ಅಧಿವೇಶನವನ್ನು ಬೆಳಗಾವಿಯ ಸುವರ್ಣ...