ಕರ್ನಾಟಕ ಲೋಕಾಯುಕ್ತ ಅಧಿಕಾರಿಗಳು ಏ.8ರಂದು ಬೆಳಗ್ಗೆ 10.30 ರಿಂದ ಮಧ್ಯಾಹ್ನ 1.30ರವರೆಗೆ ಬಾಗಲಕೋಟೆಯ ರಬಕವಿ ಬನಹಟ್ಟಿ ನಗರಸಭೆ ಕಾರ್ಯಾಲಯದಲ್ಲಿ ಜನಸಂಪರ್ಕ ಸಭೆ ಹಮ್ಮಿಕೊಂಡಿದ್ದಾರೆ.
ಸಾರ್ವಜನಿಕರಿಗೆ ಸರ್ಕಾರಿ ಕಚೇರಿಗಳಲ್ಲಿ ಅಧಿಕೃತ ಕೆಲಸಗಳನ್ನು ಮಾಡಿಕೊಡುವಲ್ಲಿ ವಿನಾಕಾರಣ ವಿಳಂಬ ಹಾಗೂ ಇತರೆ ತೊಂದರೆಗಳಾಗಿದ್ದರೆ ಅಂತಹ ಅಧಿಕಾರಿ ಮತ್ತು ನೌಕರರ ವಿರುದ್ದ ಸಾರ್ವಜನಿಕರು ತಮ್ಮ ಲಿಖಿತ ದೂರುಗಳನ್ನು ನಿಗದಿತ ಪ್ರಪತ್ರದಲ್ಲಿ ನೀಡಬಹುದಾಗಿದೆ. ಸ್ಥಳದಲ್ಲಿ ಪರಿಹಾರ ಕಂಡುಕೊಳ್ಳಬಹುದಾದ ದೂರುಗಳನ್ನು ಅಲ್ಲಿನ ಸ್ಥಳೀಯ ಅಧಿಕಾರಿಗಳ ಸಹಕಾರದೊಂದಿಗೆ ಇತ್ಯರ್ಥಪಡಿಸಲಾಗುತ್ತದೆ.
ಒಂದು ವೇಳೆ ಇತ್ಯರ್ಥವಾಗದೇ ಇದ್ದಲ್ಲಿ ಅಂತಹ ದೂರುಗಳನ್ನು ನಿಗದಿತ ಫಾರ್ಮ ನಂ.1&2ರ ನಮೂನೆಯಲ್ಲಿ ಸ್ವೀಕರಿಸಿ ಅವುಗಳನ್ನು ಲೋಕಾಯುಕ್ತರಿಗೆ ಕಳುಹಿಸಲಾಗುವುದು. ಇದರ ಬಗ್ಗೆ ಹೆಚ್ಚಿನ ವಿವರಗಳಿಗಾಗಿ ಬಾಗಲಕೋಟೆ ಲೋಕಾಯುಕ್ತ ಕಚೇರಿಯ ದೂಸಂ.08354-236200, 295170ನ್ನು ಸಂಪರ್ಕಿಸುವಂತೆ ಲೋಕಾಯುಕ್ತ ಪೊಲೀಸ್ ಉಪಾಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.




