ಕೃಷಿ ‌ಖಾಸಗೀಕರಣಕ್ಕೆ ಕೇಂದ್ರ ಸರ್ಕಾರದಿಂದಲೇ ಪೂರಕ ವಾತಾವರಣ ಸೃಷ್ಟಿ: ಪಿ. ಸಾಯಿನಾಥ್

Date:

ಕೃಷಿ ಖಾಸಗೀಕರಣಕ್ಕೆ ಸರ್ಕಾರವೇ ಪೂರಕವಾದ ವಾತಾವರಣ ಸೃಷ್ಟಿ ಮಾಡುತ್ತಿದೆ. ಪರ್ಯಾಯ ಕೃಷಿ ಧೋರಣೆಗಾಗಿ ಚಳವಳಿಗಳು ಬಲಗೊಳ್ಳಬೇಕು ಎಂದು ಮ್ಯಾಗ್ಸಸ್ಸೆ ಪುರಸ್ಕೃತ ಹಿರಿಯ ಪತ್ರಕರ್ತ ಪಿ. ಸಾಯಿನಾಥ್ ಅವರು ಕರೆ ನೀಡಿದರು.

- Advertisement -

ಬೆಂಗಳೂರಿನ ಭಾರತ ಸ್ಕೌಟ್ ಅಂಡ್ ಗೈಡ್ಸ್‌ ಸಂಸ್ಥೆಯ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘ ಆಯೋಜಿಸಿದ್ದ ʼಪರ್ಯಾಯ ಕೃಷಿ ಧೋರಣೆಗಳುʼ ಎಂಬ ರಾಷ್ಟ್ರೀಯ ವಿಚಾರ ಸಂಕಿರಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಗಾಂಧಿಯ ಆರ್ಥಿಕ ಸಾಮಾಜಿಕ ಸಂಕೇತಗಳು: ಉಪ್ಪು, ಖಾದಿ, ಚರಕ...

ಗ್ರಾಮೀಣ ಭಾರತದ ಆರ್ಥಿಕತೆ ಮನಗಂಡಿದ್ದ ಗಾಂಧಿ ಹಾಲಿನ ಬಗೆಗಿನ ಕಠೋರ ನಿಲುವನ್ನು ನಿರಾಕರಿಸಿ ತನ್ನನ್ನು ತಾನು ಮೇಕೆಯ ಮಮಕಾರದ ಹಾಲಿಗೆ ಕೊಟ್ಟುಕೊಂಡಿದ್ದರು. ಈಗಿನ ಪಶುಪಾಲಕ ಸಮುದಾಯಗಳ ಸಾವಯವ ಬದುಕಿನ ರೀತಿ ನೀತಿ ಗಮನಿಸಿ......

ಈ ದಿನ ವಿಶೇಷ | ಗಾಂಧೀ ಎಂದರೆ ಏನು?

ಇಂದು ಮಹಾತ್ಮಾ ಗಾಂಧೀಜಿಯವರ ಜನ್ಮದಿನ. ಅವರ ವಿಚಾರ, ಚಿಂತನೆ, ನಡೆ-ನುಡಿ... ಅವರನ್ನು ಗ್ರಹಿಸಲು ಅವರ ದಿನಚರಿಯ ಭಾಗವೇ ಆಗಿದ್ದ ಕೆಲವು ತುಣುಕುಗಳು ನಿಮ್ಮ ಓದಿಗಾಗಿ... ಆರೆಸ್ಸೆಸ್‌ಗೊಂದು ಕಿವಿಮಾತುಅದು ದೇಶ ವಿಭಜನೆಯ ಕಾಲ. ಎಲ್ಲೆಲ್ಲೂ ಹಿಂದೂ-ಮುಸ್ಲಿಂ...

ಕಪ್ಪತಗುಡ್ಡದ ಮಡಿಲಲ್ಲಿ ಗಾಂಧಿ ತತ್ವಗಳ ಪ್ರೇರಣಾ ಕೇಂದ್ರ ‘ಸಬರಮತಿ...

ಗದಗ ನಗರದ ಕಪ್ಪತಗುಡ್ಡದ ಸೆರಗಿನಲ್ಲಿರುವ 'ಮಹಾತ್ಮ ಗಾಂಧಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ'ದ ಆವರಣದಲ್ಲಿ ನಿರ್ಮಿಸಲಾಗಿರುವ ಸಬರಮತಿ ಆಶ್ರಮವು ಗಾಂಧೀಜಿಯವರ ತತ್ವ ಮತ್ತು ಆದರ್ಶಗಳನ್ನು ಇಂದಿನ ಪೀಳಿಗೆಗೆ ತಲುಪಿಸುವ ಪ್ರೇರಣಾ ಕೇಂದ್ರವಾಗಿ...

“ಕೃಷಿ ಕಾನೂನು ವಿರುದ್ದ ರೈತರ ಆಂದೋಲನದ ನಂತರ ಕೇಂದ್ರ ಸರ್ಕಾರ ಹಲವು ಕ್ರಮಗಳನ್ನು ತೆಗೆದುಕೊಂಡಿತು. ಅದರಲ್ಲಿ ದಳವಾಯಿ ಸಮಿತಿ ಪ್ರಮುಖವಾದದ್ದು. ಈ ಸಮಿತಿಯು ಅಮೆಜಾನ್ ಮೂಲಕ ಮಾರುಕಟ್ಟೆಗೆ ಶಿಫಾರಸು ನೀಡಿದೆ. ಈ ಶಿಫಾರಸು ಕೃಷಿಯನ್ನು ಖಾಸಗೀಕರಣದತ್ತ ತಳ್ಳುತ್ತಿದೆ. ಮೂರು ಕೃಷಿ ಕಾಯ್ದೆಗಳು ಕೇವಲ ರೈತರಿಗಷ್ಟೆ ಸಂಬಂಧಿಸಿಲ್ಲ. ಇವು ಜನರ ಜೀವನಕ್ಕೆ ಸಂಬಂಧಪಟ್ಟವು. ಸಂವಿಧಾನದ ಕಲಂ 31 ರ ಆಶಯಗಳನ್ನು ಧಿಕ್ಕರಿಸಿ ಈ ಕಾಯ್ದೆಗಳನ್ನು ತರುವ ಪ್ರಯತ್ನ ಮಾಡಿದ್ದು ಈ ದೇಶದ ದುರಂತಗಳಲ್ಲಿ ಒಂದಾಗಿದೆ. ಕೃಷಿಯನ್ನು ಬಂಡವಾಳಶಾಹಿಗಳ ಕೈಗೆ ನೀಡುವ ಹುನ್ನಾರಗಳು ಇದರಲ್ಲಿವೆ” ಎಂದು ಹೇಳಿದರು.

“ಕೇಂದ್ರ ಸರ್ಕಾರದ ಮೂರು ಕೃಷಿಕಾಯ್ದೆಗಳು ಜಾರಿಗೆ ಬಂದ ನಂತರ ಬೆಂಗಳೂರಿನಲ್ಲಿ ಒಂದು ಕಾರ್ಯಕ್ರಮ ನಡೆಯುವಾಗ, ಈ ಕಾಯ್ದೆ ಜಾರಿಯಾದರೆ ಮೊದಲಿಗೆ ಹೊಡೆತ ಬೀಳುವುದು ವಕೀಲರಿಗೆ, ಕೃಷಿ ಸಂಬಂಧಿತ ಪ್ರಶ್ನೆಗಳನ್ನು ಎಲ್ಲೂ ಕೂಡ ಪ್ರಶ್ನಿಸಲು ಸಾಧ್ಯವಾಗದ ಹಿನ್ನಲೆಯಲ್ಲಿ ಕೋರ್ಟ್‌ಗಳಲ್ಲಿ ವ್ಯಾಜ್ಯ ಹೂಡಲು ಸಾಧ್ಯವಿಲ್ಲ. ಹಾಗಾಗಿ ವಕೀಲ ವೃತ್ತಿಯನ್ನೇ ಈ ಕಾಯ್ದೆಗಳು ನಾಶಪಡಿಸುತ್ತವೆಂದು ಮೊದಲೇ ಹೇಳಿದ್ದೆ. ವರ್ಷಗಳ ಕಾಲ ರೈತರು ನಡೆಸಿದ ಸುಸಂಘಟಿತ ಹೋರಾಟಕ್ಕೆ ಸರ್ಕಾರ ತಲೆಬಾಗಬೇಕಾಯಿತು. ರೈತರ ಈ ಹೋರಾಟ ಜಗತ್ತಿಗೆ ಮಾದರಿಯಾಯಿತು. ಸ್ವಾತಂತ್ರ್ಯ ಹೋರಾಟವನ್ನು ನೆನಪಿಸಿತು” ಎಂದರು.

“ಬ್ರಿಟಿಷ್ ವಸಾಹತು ಕಾನೂನುಗಳಿಗೆ ಜೀವ ನೀಡುವ ಮೂಲಕ ಮತ್ತೆ ಜನರನ್ನು ಶಿಕ್ಷಿಸುವ ಕೆಲಸಕ್ಕೆ ಮುಂದಾಗಿದ್ದಾರೆ. ಸರ್ಕಾರವನ್ನು ಪ್ರಶ್ನಿಸಿದರೆ, ನೀತಿಗಳ ವಿರುದ್ಧ ಹೋರಾಡಿದರೆ ಕೇಂದ್ರ ಸರ್ಕಾರ ಕಾನೂನಿನ ಮೂಲಕ ಕಟ್ಟಿಹಾಕುವ ಹುನ್ನಾರ ಮಾಡುತ್ತಿದೆ. ಉತ್ತರ ಪ್ರದೇಶದಲ್ಲಿ ಗೋಹತ್ಯೆ ನಿಷೇಧದ ಮೂಲಕ ಮುಸ್ಲಿಂ ಸಮುದಾಯವನ್ನು ಇಲ್ಲವಾಗಿಸುವ ಪ್ರಯತ್ನ ಮಾಡಿದ್ದರು. ಯುಪಿಯ ಪ್ರಾಣಿ ಸಂಗ್ರಹಾಲಯದಲ್ಲಿ ಹುಲಿಗಳಿಗೆ ಆಹಾರವಾಗಿ ಕೋಳಿಮಾಂಸ ಕೊಡಲು ಆರಂಭಿಸಿದರು. ಆ ಹುಲಿಗಳು ಸಂಪೂರ್ಣವಾಗಿ ತೂಕ ಕಳೆದುಕೊಂಡು ಬಡಕಲು ದೇಹ ಹೊಂದಿದವು” ಎಂದು ಆರೋಪಿಸಿದರು.

“ಯುಪಿಯ ಅನೇಕ ಕಡೆಗಳಲ್ಲಿ ಗೋ ತಳಿ ನಾಶವಾಗುತ್ತಿವೆ. ಬಹಳಷ್ಟು ಜನ‌ ರೈತರು ಜಾನುವಾರು ಸಾಕಲು ಹಿಂದೇಟು ಹಾಕುತ್ತಿದ್ದಾರೆ. ಗೋಹತ್ಯೆ ಮೂಲಕ ಗ್ರಾಮೀಣ ರೈತರ ಬದುಕನ್ನು ಸರ್ಕಾರ ಬೀದಿಗೆ ತಂದಿದೆ ಎಂದು ಆರೋಪಿಸಿದರು. ಗೋಹತ್ಯೆ ನಿಷೇಧದಿಂದಾಗಿ ಮಹಾರಾಷ್ಟ್ರದ ಜನಪ್ರಿಯ ಕೊಲ್ಹಾಪುರ ಚಪ್ಪಲಿ ನಾಶವಾಗುತ್ತಿದೆ. ಕರ್ನಾಟಕದಲ್ಲಿ ಕೃಷಿ ಆದಾಯ ಕಡಿಮೆ ಆಗಿದೆ. ಕೂಲಿಯ ಆದಾಯ ಹಾಗೂ ಪಶುಸಂಗೋಪನೆಯಿಂದ ಆದಾಯ ಬರುತ್ತಿದೆ. ಈ ಬಗ್ಗೆ ಯೋಚಿಸಿ ಪರಿಹಾರ ಕಂಡುಕೊಳ್ಳಬೇಕು” ಎಂದು ಸಾಯಿನಾಥ್ ಹೇಳಿದರು.

“ಕೃಷಿ ನಿಯಂತ್ರಿಸುವ ಕೆಲಸ ನಡೆಯುವ ಇಂತಹ ಸಂದರ್ಭದಲ್ಲಿ ನಾವು ಮಾಡಬೇಕಾದ ಕೆಲಸ ಮಹತ್ವವಾಗಿದೆ. ಕರ್ನಾಟಕದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ಆ ಕೃಷಿಕಾಯ್ದೆಗಳನ್ನು ರಾಜ್ಯದಲ್ಲಿ ರದ್ದು ಮಾಡುವುದಾಗಿ ಹೇಳಿದೆ. ಆ ಬದ್ಧತೆಯನ್ನು ಜಾರಿ ಮಾಡುವಂತೆ ರೈತರು ಮತ್ತು ರೈತ ಸಂಘಟನೆಗಳು ಸರ್ಕಾರಕ್ಕೆ ಒತ್ತಡ ಹಾಕಬೇಕಿದೆ. ನಾವು ಈಗ ವಿಭಿನ್ನ ಸನ್ನಿವೇಶದಲ್ಲಿ ಇದ್ದೇವೆ. ಸ್ವಾಮಿನಾಥನ್ ಆಯೋಗದ ಶಿಫಾರಸುಗಳಲ್ಲಿ ಒಂದಿಷ್ಟು ಅಂಶಗಳು ಪ್ರಗತಿಪರವಾಗಿವೆ. ಯುಪಿಎ ಸರ್ಕಾರ ಹಾಗೂ ಎನ್‌ಡಿಎ ಸರ್ಕಾರಗಳು ಈ ಅಂಶಗಳನ್ನು ಹತ್ಯೆ ಮಾಡುತ್ತಿವೆ” ಎಂದು ಹೇಳಿದರು.

“ಯುಪಿಎ ಅವಧಿಯಲ್ಲಿ ಸಚಿವರಾಗಿದ್ದ ಶರದ್ ಪವಾರ್ ಸಂಸತ್ತಿನಲ್ಲಿ ಆಯೋಗದ ವಿಚಾರಗಳನ್ನು ಚರ್ಚೆ ಮಾಡಲಿಲ್ಲ. 2014ರ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿ ಸ್ವಾಮಿನಾಥನ್ ವರದಿಯನ್ನು ಜಾರಿ ಮಾಡುವುದಾಗಿ ಹೇಳಿ, ರೈತರಿಂದ ಮತ ಪಡೆದು ಜಾರಿ ಮಾಡದೆ ರೈತರಿಗೆ ಮೋಸ ಮಾಡಿತು” ಎಂದು ಅಸಮಾಧಾನ ವ್ಯಕ್ತಪಡಿಸಿದರು.

“ರೈತರ ಚಳವಳಿ ಉತ್ತುಂಗದಲ್ಲಿರುವಾಗ ಸುಪ್ರಿಂ ಕೋರ್ಟ್‌ ಮಧ್ಯಪ್ರವೇಶಿಸಿ ನಾಲ್ಕಾರು ತಿಂಗಳಲ್ಲಿ ರೈತರ ಸಮಸ್ಯೆಗಳನ್ನು ಪರಿಹರಿಸುವಂತೆ ಹೇಳಿತು. ಆಗ ಕೇಂದ್ರ ಸರ್ಕಾರ ಸಮಿತಿಯನ್ನು ರಚಿಸಿತು. ಅದರಲ್ಲಿ ರೈತರಿಗಿಂತ, ಕಾರ್ಪೊರೇಟ್ ಕಂಪನಿಗೆ ಸೇರಿದವರೇ ಹೆಚ್ಚಿದ್ದರು. ಬಹಳಷ್ಟು ಮಂದಿ ರೈತರು ಆ ಸಮಿತಿ ಸಭೆಗೆ ಮೊದಲೇ ರಾಜೀನಾಮೆ ನೀಡಿದರು. ಆ ಸಮಿತಿ ಸ್ವಯಂ ಬರ್ಕಾಸ್ತಾಯಿತು. ಇದರರ್ಥ ರೈತರ ಸಮಸ್ಯೆಗಳನ್ನು ಅರಿಯಲು ಸಮಿತಿಗಳನ್ನು ರಚಿಸಿ ಕಾಲಹರಣ ಮಾಡಿ ರೈತರನ್ನು ಸಾಯಿಸುವುದೇ ಆಗಿದೆ. ಹಾಗಾಗಿ ಸ್ವಾಮಿನಾಥನ್ ಆಯೋಗದ ಸಲಹೆಗಳ ಮುಂದೆ ಯಾವ ಆಯೋಗವು ಬೇಕಿಲ್ಲ, ಅದನ್ನು ಜಾರಿ ಮಾಡಬೇಕು” ಎಂದು ಒತ್ತಾಯಿಸಿದರು.

ಎಐಕೆಎಸ್‌ ಜಂಟಿ ಕಾರ್ಯದರ್ಶಿ ಡಿ. ರವೀಂದ್ರನ್ ಮಾತನಾಡಿ, “ಮೋದಿ ಸರ್ಕಾರದ 9 ವರ್ಷದ ಅವಧಿಯಲ್ಲಿ ಒಂದು ಲಕ್ಷ ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.

“ಪಿ. ಸಾಯಿನಾಥ್ ರವರು ವ್ಯಕ್ತಪಡಿಸಿರುವ ಕಳವಳವನ್ನು ರೈತರು, ರೈತ ಸಂಘಗಳು ಗಂಭೀರವಾಗಿ ಯೋಚಿಸಬೇಕಿದೆ. ಭಾರತದಲ್ಲಿ ಕೃಷಿಯ ಸಮಸ್ಯೆ ಏನಿದೆ ಎಂಬುದನ್ನು ಅರಿಯಬೇಕಿದೆ. ಕೋವಿಡ್ ಸಮಯದಲ್ಲಿ ಸರ್ಕಾರಿ ಕಚೇರಿಗಳು, ಸಾರಿಗೆ, ಶಾಲೆ ಎಲ್ಲವೂ ಬಂದ್ ಆಗಿತ್ತು. ಆದರೆ ಕೃಷಿ ಚಟುವಟಿಕೆಗಳು ನಿಂತಿರಲಿಲ್ಲ. ದೇಶದ ಜನರಿಗೆ ಆಹಾರ ಉತ್ಪಾದನೆಯಲ್ಲಿ ರೈತರು ತೊಡಗಿಕೊಂಡಿದ್ದರು. ಸಕ್ಕರೆ, ಹಾಲು ಎಲ್ಲವನ್ನೂ ಭಾರತ ಉತ್ಪಾದನೆ ಮಾಡುತ್ತಿದೆ. ಇಷ್ಟೊಂದು ಸಾಧನೆಯ ಹಿಂದೆ ರೈತರ ಶ್ರಮ ಇದೆ. ಆದರೆ, ರೈತರ ಬದಲು ಕಾರ್ಪೊರೇಟ್ ಕಂಪನಿಗಳು ಲಾಭ ಪಡೆಯುತ್ತಿವೆ” ಎಂದು ರವೀಂದ್ರನ್ ಅಸಮಾಧಾನ ವ್ಯಕ್ತಪಡಿಸಿದರು.

ಈ ಸುದ್ದಿ ಓದಿದ್ದೀರಾ? ಯಾದಗಿರಿ | ನಾರಾಯಣಪುರ ಡ್ಯಾಂನಿಂದ ಕೃಷಿಗೆ ನೀರು ಹರಿಸುವಂತೆ ಒತ್ತಾಯ

ಪ್ರಾಂತ ರೈತ ಸಂಘದ ರಾಜ್ಯಾಧ್ಯಕ್ಷ ಜಿ ಸಿ ಬಯ್ಯಾರೆಡ್ಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ. ಯಶವಂತ ಪ್ರಾಸ್ತಾವಿಕವಾಗಿ ಮಾತನಾಡಿದರು.

ರಾಜ್ಯ ಹಣಕಾಸು ಕಾರ್ಯದರ್ಶಿ ಎಚ್ ಆರ್ ನವೀನ್ ಕುಮಾರ್, ರಾಜ್ಯ ಉಪಾಧ್ಯಕ್ಷ ಯು. ಬಸವರಾಜ, ಬಿ ಎಸ್ ಸೊಪ್ಪಿನ್, ಪಿ ಆರ್ ಸೂರ್ಯನಾರಾಯಣ, ಶರಣ ಬಸಪ್ಪ ಮಮಶೆಟ್ಟಿ, ರಾಜ್ಯ ಸಹಕಾರ್ಯದರ್ಶಿ ಜಿ. ನಾಗರಾಜ, ಡಾ.ಸಾಯಬಣ್ಣ ಗುಡಬಾ ಇದ್ದರು.

WhatsApp Image 2025 07 12 at 17.38.34 e1752322718567
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕಪ್ಪತಗುಡ್ಡದ ಮಡಿಲಲ್ಲಿ ಗಾಂಧಿ ತತ್ವಗಳ ಪ್ರೇರಣಾ ಕೇಂದ್ರ ‘ಸಬರಮತಿ ಆಶ್ರಮ’

ಗದಗ ನಗರದ ಕಪ್ಪತಗುಡ್ಡದ ಸೆರಗಿನಲ್ಲಿರುವ 'ಮಹಾತ್ಮ ಗಾಂಧಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್...

ಹಾವೇರಿ | ಮುನಿಶ್ವರ ಎಚ್ ಚೂರಿ ಅವರ ನಿವೃತ್ತಿ ಬದುಕು ಹಸನಾಗಲಿ : ಉಡಚಪ್ಪ ಮಾಳಗಿ

"ತಮ್ಮ ವೃತ್ತಿ ಹಾಗೂ ಪ್ರವೃತ್ತಿಯಲ್ಲಿ ಪ್ರಮಾಣಿಕತೆಯನ್ನು ರೂಡಿಸಿಕೊಂಡು, ಯಶಸ್ವಿಯಾಗಿ ನಿವೃತ್ತಿಯಾದ ಮುನಿಶ್ವರ...

ಕಾರವಾರ, ಕುಮಟಾ, ದಾಂಡೇಲಿ ಪೊಲೀಸ್‌ ಅಧಿಕಾರಿಗಳ ವರ್ಗಾವಣೆ

ಉತ್ತರ ಕನ್ನಡ ಜಿಲ್ಲೆಯ ಪೊಲೀಸ್ ಇಲಾಖೆಯಲ್ಲಿ ಹಲವು ಅಧಿಕಾರಿಗಳ ವರ್ಗಾವಣೆ ಹಾಗೂ...

ಗದಗ | ಆನಂದಕಂದರ ಸಾಹಿತ್ಯವು ಸಾರ್ವಕಾಲಿಕ ಮೌಲ್ಯ ಹೊಂದಿದೆ: ಡಾ. ಅರ್ಜುನ ಗೊಳಸಂಗಿ

ಕನ್ನಡ ನಾಡು-ನುಡಿ, ಸಂಸ್ಕೃತಿ ಮತ್ತು ಜನಪದ ಸೊಗಡನ್ನು ಅಕ್ಷರ ರೂಪಕ್ಕಿಳಿಸಿದ ಆನಂದಕಂದರ...