ಬೆಂಗಳೂರು | ಮನೆ ತೆರವು ವೇಳೆ ದೌರ್ಜನ್ಯ; ಮನವಿಗೆ ಸ್ಪಂದಿಸದ ಜಿಲ್ಲಾಧಿಕಾರಿ: ಸಾಮಾಜಿಕ ಕಾರ್ಯಕರ್ತೆ ಆರೋಪ

Date:

ಬೆಂಗಳೂರು ಉತ್ತರ ಭಾಗದ ಒತ್ತುವರಿ ತೆರವು ಕಾರ್ಯದಲ್ಲಿ ನೊಟೀಸ್‌ ನೀಡದೆ ವಾಸದ ಮನೆ ತೆರವುಗೊಳಿಸಿದ್ದಾರೆ. ಕೇಳಲು ಹೋದರೆ ಕಾನೂನು ಬಗ್ಗೆ ಮಾತನಾಡಬೇಡ ಇಲ್ಲಿಂದ ಎದ್ದು ನಡಿ ಎಂದು ಜಿಲ್ಲಾಧಿಕಾರಿ ನಿಂದಿಸಿದ್ದಾರೆ. ನನಗೆ ನ್ಯಾಯ ಕೊಡಿಸಿ ಎಂದು ಪ್ರಗತಿಪರ ಸಂಘಟನೆಗಳಲ್ಲಿ ಸಾಮಾಜಿಕ ಕಾರ್ಯಕರ್ತೆ ಎಲ್ ಮಂಜುಳಾ ಮಹೇಶ್‌ ಅವರು ಮನವಿ ಮಾಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಪೋಸ್ಟ್‌ ಮಾಡಿರುವ ಅವರು, “ವಿಧಾನಸಭಾ ಚುನಾವಣೆಗು ಮುನ್ನ ನಡೆದ ತೆರವು ಕಾರ್ಯಾಚರಣೆಯಲ್ಲಿ ಬೆಂಗಳೂರು ನಗರ ಜಿಲ್ಲೆ ಯಲಹಂಕ ಮತಕ್ಷೇತ್ರದ ಕುಂಬಾರಳ್ಳಿಯಲ್ಲಿ ಸರ್ವೆ ನಂ.8ರಲ್ಲಿ ವಾಸವಿದ್ದ ಮನೆಯನ್ನು ತೆರವು ಮಾಡಿದ್ದರು. ತೆರವಿಗೆ ಮುನ್ನ ಯಾವುದೇ ನೊಟೀಸ್‌ ನೀಡಿಲ್ಲ. ಅಕ್ಕಪಕ್ಕದವರಿಗೆಲ್ಲ ನೊಟೀಸ್‌ ನೀಡಿದ್ದಾರೆ. ಆದರೆ, ನಮ್ಮ ಮನೆ ತೆರವು ಮಾಡುವಾಗ ಪಕ್ಕದಲ್ಲಿ ಕಾರ್ಖಾನೆಯ ಶೆಡ್‌ ನಿರ್ಮಿಸಿಕೊಂಡಿರುವವರ ಬಳಿ ಸಹಿ ಮಾಡಿಸಿಕೊಂಡು ಮನೆ ತೆರವು ಮಾಡಿದ್ದಾರೆ” ಎಂದು ಆರೋಪಿಸಿದ್ದಾರೆ.

ಈ ಕುರಿತು ಸಾಮಾಜಿಕ ಕಾರ್ಯಕರ್ತೆ ಮಂಜುಳಾ ಮಹೇಶ್‌ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ತೆರವು ಕಾರ್ಯಾಚರಣೆ ಹೆಸರಿನಲ್ಲಿ 2022ರ ಡಿಸೆಂಬರ್‌ನಲ್ಲಿ ಮನೆ ಒಡೆದು ಹಾಕಿದ್ದಾರೆ. ಅಂದಿನಿಂದ ಈವರೆಗೆ ಬೇರೆಕಡೆ ಮನೆ ಕೊಡುತ್ತೇವೆ ಚುನಾವಣೆ ಮುಗಿಯಲಿ ಎಂದು ಹೇಳಿಕೊಂಡು ಬಂದಿದ್ದರು. ಇಂದು(ಆ.4) ಸಭೆ ಇದೆ ಬನ್ನಿ ಎಂದು ಕರೆದಿದ್ದರು. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ಬಂದಿದ್ದೆವು” ಎಂದು ತಿಳಿಸಿದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

“ನನಗೆ ಅನ್ಯಾಯ ಆಗಿದೆ. ನನ್ನ ಮೇಲೆ ಅಧಿಕಾರಿಗಳೇ ದೌರ್ಜನ್ಯ ನಡೆಸಿದ್ದಾರೆ. ಸಂಬಂಧಪಟ್ಟವರ ಕುರಿತು ಪ್ರಕರಣ ದಾಖಲಿಸಿ ಎಂದು ಜಿಲ್ಲಾಧಿಕಾರಿ ಬಳಿ ಮಾನವಿ ಮಾಡಿದೆ. ಆದರೆ, ಅವರು ನನಗೆ ಕಾನೂನಿನ ಬಗ್ಗೆ ಹೇಳಲು ಬರಬೇಡ. ನಿನಗೆ ಮನೆ ಬೇಕೆಂದರೆ ಎಂಎಲ್‌ಎಗೆ ಹೇಳಿ ರಾಜೀವ್‌ ಗಾಂಧಿ ವಸತಿ ನಿಗಮದಲ್ಲಿ ಮನೆ ಸಾಂಕ್ಷನ್‌ ಮಾಡಿಸಿ ನಿಮ್ಮ ಹೆಸರು ಹಾಕಿಸಿ ಕೊಡುತ್ತೇವೆ. ಆದರೆ ಪರಿಹಾರ ನೀಡಲು ಆಗುವುದಿಲ್ಲ. ಅದಕ್ಕೆಲ್ಲ ಅವಕಾಶವಿಲ್ಲವೆಂದು ಹೇಳುತ್ತಿದ್ದಾರೆ” ಎಂದರು.

“ನನ್ನ ಮಕ್ಕಳನ್ನೆಲ್ಲ ಅಧಿಕಾರಿಗಳು ಬೀದಿಯಲ್ಲಿ ಎಳೆದಾಡಿದ್ದಾರೆ. ಬೇರೆಯವರಿಂದ ಐದು ವರ್ಷದ ನನ್ನ ಮಗಳ ಮೇಲೆ ಅತ್ಯಾಚಾರ, ಗಂಡ ಮಕ್ಕಳ ಕೊಲೆ ಮಾಡಿಸುವುದಾಗಿ ಬೇರೆಯವರಿಂದ ಧಮ್ಕಿ ಮಾತುಗಳು ಬರುತ್ತಿವೆ. ನನಗೆ ನ್ಯಾಯ ದೊರಕಿಸಿ. ದೌರ್ಜನ್ಯ ಎಸಗಿರುವ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಿ ಎಂದರೆ ನನಗೆ ಹೇಳಲು ಬರಬೇಡ, ನನ್ನೊಂದಿಗೆ ವಾದ ಮಾಡಬೇಡ ಇಲ್ಲಿಂದ ಎದ್ದು ಹೋಗು ಮೊದಲು ಎಂದು ನನ್ನ ಮೇಲೆ ಗದರುತ್ತಾ ಎದ್ದು ಹೊರಟರು” ಎಂದು ಆರೋಪಿಸಿದರು.

ಈ ಸುದ್ದಿ ಓದಿದ್ದೀರಾ? ಲಂಚ ಪಡೆಯುತ್ತಿದ್ದ ಬಿಬಿಎಂಪಿ ಸಿಬ್ಬಂದಿ ಬಂಧನ

“ನನಗೆ ಅಧಿಕಾರಿಗಳ ಮೇಲೆ ಯಾವುದೇ ಭರವಸೆ, ನಂಬಿಕೆ ಇಲ್ಲ. ಸತತವಾಗಿ ಎಂಟು ತಿಂಗಳುಗಳಿಂದ ಡಿಸಿ ಕಚೇರಿಗೆ ಅಲೆದಿದ್ದೇನೆ. ಆದರೆ, ನನ್ನ ಮೇಲಿನ ದೌರ್ಜನ್ಯಕ್ಕೆ ನನಗೆ ನ್ಯಾಯ ದೊರಕಿಲ್ಲ. ಹಾಗಾಗಿ ನನಗೆ ನ್ಯಾಯ ಸಿಗುವವರೆಗೂ ನಾನು ಡಿಸಿ ಕಚೇರಿ ಬಳಿಯಿಂದ ತೆರಳುವುದಿಲ್ಲ. ನನಗೆ ನ್ಯಾಯ ದೊರಕಿಸಿ, ಎಲ್ಲ ಸಂಗಟನೆಗಳು ನನ್ನೊಂದಿಗೆ ಕೈಜೋಡಿಸಿ, ಕಾನೂನು ಉಲ್ಲಂಘಿಸಿರುವವರ ಮೇಲೆ ಕ್ರಮ ಆಗಲೇಬೇಕು. ದೌರ್ಜನ್ಯ ಎಸಗಿದವರ ವಿರುದ್ಧ ದಲಿತ ದೌರ್ಜನ್ಯ ಪ್ರಕರಣ ದಾಖಲಿಸಬೇಕು. ಎಲ್ಲರೂ ಸಹಕರಿಸಿ” ಎಂದು ಮನವಿ ಮಾಡಿದರು.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೇಸಿಗೆಯಲ್ಲಿ ಉದ್ಯಾನವನಗಳನ್ನು ಹಸಿರಾಗಿಡಲು ಸಂಸ್ಕರಿಸಿದ ನೀರುಣಿಸಲು ಮುಂದಾದ ಬಿಬಿಎಂಪಿ

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕುಡಿಯಲು ನೀರಿಲ್ಲದೇ ಜನ ಪರಡಾಡುವಂತಾಗಿದೆ. ಜತೆಗೆ, ಮರಗಿಡಗಳು...

ಉಡುಪಿ | ಮನೆಯಲ್ಲಿ ಒಂಟಿಯಾಗಿದ್ದ ಯುವಕನನ್ನು ಗುಂಡಿಟ್ಟು ಕೊಂದ ದುಷ್ಕರ್ಮಿಗಳು

ಮನೆಯಲ್ಲಿ ಒಂಟಿಯಾಗಿದ್ದ ಯುವಕನನ್ನು ಪಿಸ್ತೂಲಿನಿಂದ ಗುಂಡಿಕ್ಕಿ ಹತ್ಯೆಗೈದಿರುವ ಘಟನೆ ಉಡುಪಿ ಜಿಲ್ಲೆಯ...

ʼಈದಿನ.ಕಾಮ್ʼ ನ್ಯೂಸ್ ಬೀದರ್ ಸಹಾಯವಾಣಿ ಬಿಡುಗಡೆಗೊಳಿಸಿದ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ

ಕಲುಷಿತವಾದ ವಾತಾವರಣದಲ್ಲಿ ಸಮಾಜದ ಉನ್ನತಿಗಾಗಿ ವಸ್ತುನಿಷ್ಠ, ಪ್ರಾಮಾಣಿಕತೆ, ದಕ್ಷತೆ ಹಾಗೂ ನಿರ್ಭಡೆಯಿಂದ...

ದಾವಣಗೆರೆ | ನಾಲೆಯ ಕೊನೆ ಭಾಗಕ್ಕೆ ನೀರು ಹರಿದಿಲ್ಲ; ಸಚಿವರು ರೈತರ ಹಿತ ಕಾಯುತ್ತಿಲ್ಲ: ಶಾಸಕ ಹರೀಶ್

ದಾವಣಗೆರೆ ಜಿಲ್ಲೆಯ ರೈತರಿಗೆ ಭದ್ರಾ ಜಲಾಶಯದಿಂದ ಸಮರ್ಪಕವಾಗಿ ನೀರು ಹರಿಸುವಲ್ಲಿ ಜಿಲ್ಲಾ...