ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಬಸ್ತವಾಡ ಗ್ರಾಮದಲ್ಲಿ ಭಾವೈಕ್ಯಕ್ಕೆ ಸಾಕ್ಷಿಯಾದ ಅಪರೂಪದ ಘಟನೆ ನಡೆದಿದೆ. ಮುಸ್ಲಿಂ ದಂಪತಿಯೊಬ್ಬರು ಹಿಂದೂ ಧರ್ಮದ ಅನಾಥ ಮಗನನ್ನು ಸಾಕಿ ಬೆಳೆಸಿ, ಶಿಕ್ಷಣ ನೀಡಿ ಇದೀಗ ಅವರ ಮದುವೆಯನ್ನೂ ನೆರವೇರಿಸಿದ್ದಾರೆ.
ಗ್ರಾಮದ ಮೆಹಬೂಬ್ ಹಸನ್ ನಾಯಿಕವಾಡಿ (ಮುಲ್ಲಾ) ಹಾಗೂ ನೂರಜಾನ್ ದಂಪತಿಯು ಹಿಂದೂ ದಂಪತಿಗೆ ಜನಿಸಿದ ಸೋಮಶೇಖರ ಹಾಗೂ ವಸಂತ ಎಂಬ ಇಬ್ಬರು ಮಕ್ಕಳನ್ನು, ಪೋಷಕರು ನಿಧನರಾದ ಬಳಿಕ ತಮ್ಮ ಮಡಿಲಿಗೆ ಸೇರಿಸಿಕೊಂಡಿದ್ದರು. ತಮ್ಮದೇ ಮಕ್ಕಳಂತೆ ಸಾಕಿ, ಉತ್ತಮ ಶಿಕ್ಷಣ ನೀಡಿದರು.
ಭಾನುವಾರ ಕಾಡಸಿದ್ದೇಶ್ವರ ಸಭಾಭವನದಲ್ಲಿ ಸೋಮಶೇಖರಗೆ ಹಿಂದೂ-ಲಿಂಗಾಯತ ಸಂಪ್ರದಾಯದಂತೆ ವಿವಾಹ ನೆರವೇರಿಸಲಾಯಿತು. ಮದುವೆಯಲ್ಲಿ ವಧು-ವರರಷ್ಟೇ ಹಿಂದೂಗಳಾಗಿದ್ದರೆ, ಮದುವೆಯ ಸಂಪೂರ್ಣ ಜವಾಬ್ದಾರಿ ಹಾಗೂ ಖರ್ಚು-ವೆಚ್ಚವನ್ನು ಮುಸ್ಲಿಂ ಕುಟುಂಬವೇ ವಹಿಸಿಕೊಂಡಿತ್ತು.
ಭಾನುವಾರ ಕಾಡಸಿದ್ದೇಶ್ವರ ಸಭಾಭವನದಲ್ಲಿ ಸೋಮಶೇಖರ್‌ಗೆ ಹಿಂದೂ-ಲಿಂಗಾಯತ ಸಂಪ್ರದಾಯದಂತೆ ವಿವಾಹ ನೆರವೇರಿಸಲಾಯಿತು. ಮದುವೆಯಲ್ಲಿ ವಧು-ವರರಷ್ಟೇ ಹಿಂದೂಗಳಾಗಿದ್ದರೆ, ಮದುವೆಯ ಸಂಪೂರ್ಣ ಜವಾಬ್ದಾರಿ ಹಾಗೂ ಖರ್ಚು-ವೆಚ್ಚವನ್ನು ಮುಸ್ಲಿಂ ಕುಟುಂಬವೇ ವಹಿಸಿಕೊಂಡಿತ್ತು.
This video cannot be played in your browser. Open the video directly
ಎಸ್.ಇ.ಝಡ್ (ಆರ್ಥಿಕ ವಲಯದ) ಕಂಪನಿಯಲ್ಲಿ ಉದ್ಯೋಗದಲ್ಲಿರುವ ಸೋಮಶೇಖರನ ಮದುವೆ ಕಂಡು ನಾಯಿಕವಾಡಿ ದಂಪತಿ ಭಾವುಕರಾದರು. ಕುಟುಂಬದ ಸದಸ್ಯರು ಹಾಗೂ ಊರಿನ ಹಿರಿಯರು ಈ ಭಾವೈಕ್ಯದ ಕ್ಷಣಕ್ಕೆ ಸಾಕ್ಷಿಯಾದರು.
ಈ ಕುರಿತು ಮಾತನಾಡಿರುವ ಮೆಹಬೂಬ್ ಹಸನ್ ನಾಯಿಕ್ (ಮುಲ್ಲಾ) ಅವರು ಮನುಷ್ಯರೆಲ್ಲ ಒಂದೇ ಎಂಬುದು ನನ್ನ ಭಾವನೆ ಇಬ್ಬರೂ ಮಕ್ಕಳು ನಮ್ಮ ಮನೆಯಲ್ಲಿ ನಮ್ಮ ಮಕ್ಕಳಂತೆಯೇ ಬೆಳೆದರು ಅವರ ಬಗ್ಗೆ ನನಗೆ ಹೆಮ್ಮೆ ಇದೆ ಎಂದು ಹೇಳಿದರು.
ಈ ಸುದ್ದಿ ಓದಿದ್ದಿರಾ ? ಬೆಳಗಾವಿ | ಕತ್ತೆ ಕಿರುಬ ದಾಳಿ : ಎರಡು ಮೇಕೆ ಮರಿಗಳು ಸಾವು
ಧರ್ಮ ಸಂಘರ್ಷಗಳು ಹೆಚ್ಚಾಗುತ್ತಿರುವ ಇಂದಿನ ದಿನಗಳಲ್ಲಿ ನಾಯಿಕವಾಡಿ ಕುಟುಂಬದ ಮಾನವೀಯ ನಿರ್ಧಾರ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.





