ಬೆಳಗಾವಿ ನಗರದ ವಿವಿಧೆಡೆ ಗಾಂಜಾ ಸೇವಿಸುತ್ತಿದ್ದ ಐವರನ್ನು ಪೊಲೀಸರು ಪ್ರತ್ಯೇಕ ಪ್ರಕರಣಗಳಲ್ಲಿ ಬಂಧಿಸಿದ್ದಾರೆ.
ಜ್ಯೋತಿ ನಗರ ಕ್ರಾಸ್ ಸಮೀಪ ಶಾಹೂ ನಗರದ ಶಿವನೇರಿ ಗಲ್ಲಿಯ ಅಭಿಷೇಕ ಪಾಟೀಲ ಹಾಗೂ ಮಾರ್ಕಂಡೇಯ ನಗರ ಹತ್ತಿರ ಕಂಗ್ರಾಳಿ ಕೆ.ಎಚ್ನ ವಿಲಾಸ ಬಾಳೇಕುಂದ್ರಿ ಅವರನ್ನು ಎಪಿಎಂಸಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಇನ್ನೂ ಸಮರ್ಥ ನಗರದಲ್ಲಿ ವಿಜಯ ಕವಿಲಕರ, ಕಪಿಲೇಶ್ವರ ನಗರದಲ್ಲಿನ ಉತ್ಕರ್ಷ ವರ್ಮಾ ಹಾಗೂ ಮಹಾದ್ವಾರ ರಸ್ತೆಯ ಹರ್ಷಾ ವರ್ಮಾ ಅವರನ್ನು ಮಾರ್ಕೆಟ್ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಈ ಸುದ್ದಿ ಓದಿದ್ದಿರಾ ? ಬೆಳಗಾವಿ | ಡಿಜಿಟಲ್ ಅರೆಸ್ಟ್ ಬಲೆಗೆ ಉದ್ಯಮಿ: ₹15.45 ಕೋಟಿ ವಂಚನೆ – ಇಬ್ಬರು ಬಂಧನ
ಬಂಧಿತರ ವಿರುದ್ಧ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.



