ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ನವದೆಹಲಿಯ ರಾಮಲೀಲಾ ಮೈದಾನದಲ್ಲಿ ಭಾಷಣ ಮಾಡಿದ ಬಳಿಕ ಸ್ಥಳವನ್ನು ಶುದ್ದೀಕರಿಸಿ ಅಸ್ಪೃಶ್ಯತೆ ಆಚರಿಸಿರುವುದನ್ನು ಖಂಡಿಸಿ ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಡಿಎಸ್‌ಎಸ್ ಘಟಕದ ಸದಸ್ಯರು ಪ್ರತಿಭಟನೆ ನಡೆಸಿ ಉಪ ತಹಶೀಲ್ದಾರ್ ಅಣ್ಣಾಸಾಬ ಕೋರೆ ಅವರಿಗೆ ಮನವಿ ಸಲ್ಲಿಸಿದರು.
ಡಿಎಸ್‌ಎಸ್ ಜಿಲ್ಲಾ ಸಂಚಾಲಕ ಸಂಜಯ ತಳವಲಕರ ಮಾತನಾಡಿ, ಖರ್ಗೆ ಅವರು ರಾಮಲೀಲಾ ಮೈದಾನದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಭಾಷಣ ಮಾಡಿದ ಎರಡು ದಿನಗಳ ಬಳಿಕ ಮೈದಾನವನ್ನು ಶುದ್ದೀಕರಿಸಿರುವುದು ಅಸ್ಪೃಶ್ಯತೆ ಆಚರಣೆಯಾಗಿದ್ದು, ರಾಷ್ಟ್ರೀಯ ನಾಯಕರಿಗೆ ಮಾಡಿರುವ ಅವಮಾನವಾಗಿದೆ. ಇಂತಹ ಆಚರಣೆಯನ್ನು ಖಂಡಿಸುವುದಾಗಿ ಹೇಳಿದರು.
ಮಚ್ಚೇಂದ್ರ ಖಾಂಡೆಕರ, ಅಮೀನ ಜಾತಗಾರ, ಕುಮಾರ ಬನಸೋಡೆ, ರವಿ ಕಾಂಬಳೆ, ಸಚಿನ ಪೂಜಾರಿ, ಉಮೇಶ ಮನೋಜ ಗೋಳು, ಪ್ರಕಾಶ ಕಾಂಬಳೆ, ರವಿ ಕುರ್ಣೆ, ಬಾಪು ದೊಂಡಾರೆ, ವಿದ್ಯಾಧರ ದೊಂಡಾರೆ, ಅನಿಲ ಕಾಂಬಳೆ ಹಾಗೂ ವಿನೋದ ದೇವಣೆ ಇದ್ದರು.



