ಮ್ಯಾಟ್ರಿಮೋನಿ ಆ್ಯಪ್‌ಗಳಲ್ಲಿ ನಕಲಿ ಫೋಟೊ ಬಳಸಿ ಬ್ಲ್ಯಾಕ್‌ಮೇಲ್; ಐದು ಠಾಣೆಗಳಲ್ಲಿ ಸುಳ್ಳು ದೂರು ಪತ್ತೆ
ಪೊಲೀಸ್ ಅಧಿಕಾರಿಗಳು ಹಾಗೂ ಪ್ರಭಾವಿ ವ್ಯಕ್ತಿಗಳನ್ನು ಗುರಿಯಾಗಿಸಿಕೊಂಡು ಅತ್ಯಾಚಾರ ಮತ್ತು ವಂಚನೆ ಆರೋಪಗಳಲ್ಲಿ ಸುಳ್ಳು ದೂರು ನೀಡಿ ಹಣ ವಸೂಲಿ ಮಾಡುತ್ತಿದ್ದ ಮಹಿಳೆಯನ್ನು ಬೆಳಗಾವಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತೆಯನ್ನು ರೇಷ್ಮಾ ಶಂಕರ್ ಮುತಾಗರ್ ಎಂದು ಗುರುತಿಸಲಾಗಿದ್ದು, ಆಕೆಯ ವಿರುದ್ಧ ರೌಡಿಶೀಟರ್ ತೆರೆಯಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ತಿಳಿಸಿದ್ದಾರೆ.
ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮ್ಯಾಟ್ರಿಮೋನಿ ಆ್ಯಪ್‌ಗಳಲ್ಲಿ ಸುಂದರ ಮಹಿಳೆಯರ ನಕಲಿ ಫೋಟೊಗಳನ್ನು ಹಾಕಿ ಹಣವಂತರು ಹಾಗೂ ಪ್ರಭಾವಿಗಳನ್ನು ಸೆಳೆಯುತ್ತಿದ್ದಳು. ಬಳಿಕ ಅವರನ್ನು ನಿಗದಿತ ಸ್ಥಳಕ್ಕೆ ಕರೆಸಿ ಅತ್ಯಾಚಾರ ಆರೋಪ ಮಾಡುವುದಾಗಿ ಬೆದರಿಸಿ ಹಣ ಕೀಳುವ ಯತ್ನ ನಡೆಸುತ್ತಿದ್ದಳು ಎಂದು ಹೇಳಿದರು.
ಪೊಲೀಸರ ಬಳಿ ದೂರು ನೀಡಲು ಹೋದವರ ಮೇಲೆಯೂ ಹಾಗೂ ತನಿಖೆ ನಡೆಸಿದ ಅಧಿಕಾರಿಗಳ ಮೇಲೆಯೂ ಅತ್ಯಾಚಾರ ಆರೋಪ ಮಾಡುವುದಾಗಿ ಬೆದರಿಸಿ ‘ಬ್ಲ್ಯಾಕ್‌ಮೇಲ್’ ಮಾಡುತ್ತಿದ್ದಳು ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಎಂಟು ತಿಂಗಳ ಹಿಂದೆ ಘಟಪ್ರಭಾ ಠಾಣೆಯಲ್ಲಿ “ಮದುವೆಯಾಗುವುದಾಗಿ ನಂಬಿಸಿ ಮೋಸ ಮಾಡಿದ್ದಾರೆ” ಎಂದು ವ್ಯಕ್ತಿಯೊಬ್ಬರ ವಿರುದ್ಧ ದೂರು ದಾಖಲಿಸಿದ್ದಳು. ತುಮಕೂರಿನ ಖಾಸಗಿ ಶಾಲೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿ ಮ್ಯಾಟ್ರಿಮೋನಿಯಲ್ಲಿ ಪರಿಚಯವಾಗಿ ಮದುವೆಯಾಗಿ ಮೋಸ ಮಾಡಿದ್ದಾರೆ ಎಂದು ಆರೋಪಿಸಿದ್ದಳು. ಪ್ರಕರಣ ದಾಖಲಿಸಲು ಹಿಂದೇಟು ಹಾಕಿದ ಪೊಲೀಸ್ ಇನ್‌ಸ್ಪೆಕ್ಟರ್ ಮೇಲೆಯೂ ₹1 ಲಕ್ಷ ಲಂಚ ಪಡೆದಿದ್ದಾರೆ ಎಂದು ಸುಳ್ಳು ಆರೋಪ ಮಾಡಿದ್ದಳು ಎಂದು ತಿಳಿಸಿದರು.

ಈ ಕುರಿತು ಬೈಲಹೊಂಗಲ ಡಿವೈಎಸ್ಪಿ ನೇತೃತ್ವದಲ್ಲಿ ತನಿಖೆ ನಡೆಸಿದಾಗ ಮಹಿಳೆಯ ಮೋಸದ ಜಾಲ ಬಹಿರಂಗವಾಗಿದೆ.
2012ರಲ್ಲಿ ಕುಡಚಿ ಠಾಣೆ, 2022ರಲ್ಲಿ ಘಟಪ್ರಭಾ ಠಾಣೆ, 2023ರಲ್ಲಿ ಗಜೇಂದ್ರಗಡ ಠಾಣೆ ಹಾಗೂ 2025ರಲ್ಲಿ ಕ್ಯಾಂಪ್ ಮತ್ತು ಧಾರವಾಡ ಸಬರ್ಬ್ ಠಾಣೆಗಳಲ್ಲಿ ಇದೇ ರೀತಿಯ ಸುಳ್ಳು ಪ್ರಕರಣಗಳನ್ನು ದಾಖಲಿಸಿರುವುದು ಪತ್ತೆಯಾಗಿದೆ. ಇವೆಲ್ಲವೂ ಸುಳ್ಳು ಪ್ರಕರಣಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.