ಬೆಳಗಾವಿ | ವಿಧವೆ ವ್ಯಾಮೋಹಕ್ಕೆ ಪತ್ನಿಯ ಕೊಲೆ: ಅಪಘಾತದ ನಾಟಕವಾಡಿದ ಪತಿ ಜೈಲು ಪಾಲು

Date:

ವಿಧವೆ ಮೇಲಿನ ವ್ಯಾಮೋಹಕ್ಕೆ ಇಲಿ ಪಾಷಾಣ ಕುಡಿಸಿ ಪತ್ನಿಗೆ ಚಟ್ಟಕಟ್ಟಿ ಅಪಘಾತದ ನಾಟಕವಾಡಿದ ಪತಿ ಜೈಲು ಸೇರಿದ್ದಾನೆ.

- Advertisement -

ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಶಿಂದಿಕುರಬೇಟ ಗ್ರಾಮದಲ್ಲಿ ಹೃದಯವಿದ್ರಾವಕಫ ಕೃತ್ಯ ನಡೆದಿದೆ. ಶಿಂದಿಕುರಬೇಟ ಗ್ರಾಮದ ಸಕ್ಕುಬಾಯಿ ಪಟಾಯತ್ ಕೊಲೆಯಾದ ಮಹಿಳೆ. ಸಂತೋಷ ಪಟಾಯತ್ ಎಂಬಾತನೇ ಕೊಲೆ ಆರೋಪಿ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಉತ್ತರ ಕನ್ನಡ: ನಡುಮುರಿದ ಕಾಂಗ್ರೆಸ್ ಕಟ್ಟಬಲ್ಲರೆ ಹೊಸ ಅಧ್ಯಕ್ಷರು?

ಉತ್ತರ ಕನ್ನಡ ಅಹಿಂದ ಜಿಲ್ಲೆ. ಬುಡಕಟ್ಟು ಹಾಲಕ್ಕಿ ಒಕ್ಕಲಿಗರು, ದೀವರು, ವಿವಿಧ ಪಂಗಡದ ಮೀನುಗಾರ ಸಂಕುಲ, ಕೋಮಾರ ಪಂಥ, ಕೊಂಕಣ ಮರಾಠರು ದೊಡ್ಡ ಸಂಖ್ಯೆಯಲ್ಲಿದ್ದಾರೆ. ಈ ಓಬಿಸಿಗಳ ಬೆಂಬಲ ಕ್ರೋಡೀಕರಿಸುವ ಚಾಕಚಕ್ಯತೆ ಹೊಸ...

ಹಳೇ ಮೈಸೂರು: ಮಹಿಳಾ ರಾಜಕಾರಣಕ್ಕೆ ದಿಕ್ಕು ತೋರಿದ ‘ಗುಂಡ್ಲುಪೇಟೆ...

ಹಳೇ ಮೈಸೂರು ಭಾಗದ ರಾಜಕೀಯ ಇತಿಹಾಸವನ್ನು ಗಮನಿಸಿದಾಗ, ಪುರುಷ ಪ್ರಧಾನ ರಾಜಕಾರಣದ ನಡುವೆ ತನ್ನದೇ ಆದ ಛಾಪು ಮೂಡಿಸಿದ ಮಹಿಳಾ ನಾಯಕಿಯರ ಪೈಕಿ ಕೆ.ಎಸ್. ನಾಗರತ್ನಮ್ಮ ಅವರ ಹೆಸರು ವಿಶಿಷ್ಟವಾಗಿ ಕಾಣಿಸುತ್ತದೆ. ಶಾಸಕಿಯಾಗಿ,...

ಬಡ ಯೆಮನ್ ಇಕ್ಕಳದಲ್ಲಿ ಶ್ರೀಮಂತ ಸೌದಿ: ವಿನಾಕಾರಣ ದಾಳಿ...

ಸುಮ್ಮನೆ ಇರಲಾರದ ಸೌದಿ ಅರೇಬಿಯಾ, ಬಡ ರಾಷ್ಟ್ರಗಳ ಮೇಲೆ ದಬ್ಬಾಳಿಕೆ ಮಾಡಲು ಹೋಗಿ, ಮರ್ಮಕ್ಕೆ ತಾಕುವಂತಹ ಹೊಡೆತ ತಿಂದು ಕೂತಿದೆ. ಈಗ ಸೌದಿ ಅರೇಬಿಯಾದ ನೆರವಿಗೆ ಅಮೆರಿಕಾ, ಇಸ್ರೇಲ್‌, ಪಾಕಿಸ್ತಾನ ಮತ್ತು ಟಿರ್ಕಿ...

ಅಧಿಕ ಮಾಸವಿದೆ ಎಂದು ಪತ್ನಿ ಜೊತೆಗೆ ಬೈಲಹೊಂಗಲ ತಾಲೂಕಿನ ಮರುಕುಂಬಿ ಗ್ರಾಮದಲ್ಲಿರುವ ಚಾಮುಂಡೇಶ್ವರಿ ದೇಗುಲಕ್ಕೆ ಹೋಗಿದ್ದರು. ಮರಳಿ ಬರುವಾಗ ತಂಪುಪಾನೀಯದಲ್ಲಿ ಇಲಿ ಪಾಷಾಣ, ಬಳೆ ಚೂರು ಬೆರೆಸಿದ್ದ ಆಸಾಮಿ, ಇದು ದೇವಿ ಪ್ರಸಾದ ಇದೆ ಎಂದು ವಿಷವಿದ್ದ ತಂಪುಪಾನೀಯ ಪತ್ನಿಗೆ ಕುಡಿಸಿದ್ದಾನೆ. ಸಕ್ಕುಬಾಯಿ ಪ್ರಜ್ಞೆ ತಪ್ಪುತ್ತಿದ್ದಂತೆ ನಡುರಸ್ತೆ ಮೇಲೆ ಕತ್ತುಹಿಸುಕಿ ಕಿರಾತಕ ಗಂಡ ಕೊಲೆಗೈದಿದ್ದಾನೆ.

ಕೊಲೆಯನ್ನೇ ಅಪಘಾತ ಎಂದು ಬಿಂಬಿಸಲು ಬೈಕನ್ನೇ ಪತ್ನಿ ಮೇಲೆ ಎತ್ತಿಹಾಕಿ ಎರಡೂರು ಗಂಟೆಗಳ ಕಾಲ ರಸ್ತೆ ಪಕ್ಕವೇ ಬಿದ್ದು ಹೈಡ್ರಾಮಾ ಮಾಡಿದ್ದ. ಬಳಿಕ ಯಾರೂ ಗಮನಿಸದೇ ಇದ್ದಾಗ ತಾನೇ ಪೊಲೀಸ್ ಕಂಟ್ರೊಲ್ ರೂಂಗೆ ಕರೆ ಸಂತೋಷ ಮಾಡಿದ್ದ. ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಆ್ಯಂಬುಲೆನ್ಸ್‌ ರವಾನಿಸಿದ್ದಾರೆ. ಸಕ್ಕುಬಾಯಿ ಮೃತದೇಹ ಕಂಡು ಅನುಮಾನಗೊಂಡ ಪೊಲೀಸರು ಮರಣೋತ್ತರ ಪರೀಕ್ಷೆಗೆಂದು ಬೆಳಗಾವಿ ಬಿಮ್ಸ್‌ಗೆ ಸಕ್ಕುಬಾಯಿ ಮೃತದೇಹ ರವಾನಿಸಿದ್ದಾರೆ.

ಮರಣೋತ್ತರ ಪರೀಕ್ಷೆಯ ಪ್ರಾಥಮಿಕ ವರದಿಯಲ್ಲಿ ಇದು ಕೊಲೆ ಎಂದು ಸಾಬೀತಾಗಿದ್ದು, ಸಂತೋಷನನ್ನು ವಶಕ್ಕೆ ಪಡೆದು ಗೋಕಾಕ ಗ್ರಾಮೀಣ ಪೊಲೀಸರು ವಿಚಾರಣೆ ನಡೆಸಿದ್ದಾರೆ.

9 ವರ್ಷಗಳ ಹಿಂದೆ ಧಾರವಾಡ ತಾಲೂಕಿನ ಕಲ್ಲೂರ ಗ್ರಾಮದ ಸಕ್ಕುಬಾಯಿ ಜೊತೆಗೆ ವಿವಾಹವಾಗಿದ್ದ ಸಂತೋಷ. ಕಳೆದ ನಾಲ್ಕು ವರ್ಷಗಳಿಂದ ತನ್ನದೇ ಗ್ರಾಮದ ವಿಧವೆ ಜೊತೆಗೆ ಲಡವಿ ಆಡುತ್ತಿದ್ದ. ಪ್ರೇಯಸಿ ಜೊತೆಗೆ ಉಳಿದ ದಿನಗಳನ್ನು ಕಳೆಯಲು ಪತ್ನಿ ಕೊಂದಿರುವುದಾಗಿ ಸಂತೋಷ ತಪ್ರೊಪ್ಪಿಕೊಂಡಿದ್ದಾನೆ.

ಪ್ರೇಯಸಿ ಜೊತೆಗೆ ಕಾಲ ಕಳೆಯಲು ಪತ್ನಿ ಕೊಂದ ಆಸಾಮಿ ಈಗ ಹಿಂಡಲಗಾ ಜೈಲು ಸೇರಿದ್ದಾನೆ. ಕೊಲೆ ಕೃತ್ಯದಲ್ಲಿ ವಿಧವೆ ಪಾತ್ರ ಇದೆಯೋ ಎಂಬ ಬಗ್ಗೆಯೂ ತನಿಖೆ ಮುಂದುವರೆದಿದೆ.

ಅಪಘಾತ ಎಂದು ಬಿಂಬಿಸಲು ವಿಫಲ ಯತ್ನ

ಪತ್ನಿಯ ಕೊಲೆಯನ್ನು ರಸ್ತೆ ಅಪಘಾತವೆಂದು ಬಿಂಬಿಸಲು ಆರೋಪಿ ಸಂತೋಷ ಹಲವು ಗಂಟೆಗಳ ಕಾಲ ರಸ್ತೆ ಪಕ್ಕದಲ್ಲೇ ಬಿದ್ದು ನಾಟಕವಾಡಿದ್ದ. ಆದರೆ ಮರಣೋತ್ತರ ಪರೀಕ್ಷೆಯ ವರದಿ ಕೊಲೆ ಎಂಬುದನ್ನು ಬಹಿರಂಗಪಡಿಸಿದ್ದರಿಂದ ಆರೋಪಿಯ ಸಂಚು ಬಯಲಾಗಿದೆ. ಪೊಲೀಸರು ತೀವ್ರ ವಿಚಾರಣೆ ನಡೆಸಿದಾಗ ಆತ ತನ್ನ ಕೃತ್ಯವನ್ನು ಒಪ್ಪಿಕೊಂಡಿದ್ದಾನೆ

ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೆಳಗಾವಿ | 400 ಲೀಟರ್ ಗೋವಾ ಮದ್ಯ ಸಾಗಾಟ: ಇಬ್ಬರ ಬಂಧನ

ಬೆಳಗಾವಿ ಜಿಲ್ಲೆಯ ಖಾನಾಪೂರ ಕರ್ನಾಟಕ-ಗೋವಾ ಗಡಿಯ ಕಣಕುಂಬಿ ಬಳಿ ಗೂಡ್ಸ್‌ ವಾಹನದಲ್ಲಿ...

ಬೆಳಗಾವಿ | ಹಾಡಹಗಲೇ ಗ್ರಾಮದಲ್ಲಿ ಚಿರತೆ ರಾಜಾರೋಷ ಓಡಾಟ!

ಬೆಳಗಾವಿ ಜಿಲ್ಲೆಯ ಖಾನಾಪೂರ ತಾಲೂಕಿನ ಗೋಲಿಹಳ್ಳಿ ಅರಣ್ಯ ವ್ಯಾಪ್ತಿಗೆ ಒಳಪಡುವ ಗೋಲಿಹಳ್ಳಿ...

ಬೆಳಗಾವಿ | ಇಡಿ ದಾಳಿ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ: ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ

ಲೋಕೋಪಯೋಗಿ ಇಲಾಖೆ ಮತ್ತು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ...

ಬೆಳಗಾವಿ | ಸತೀಶ್ ಜಾರಕಿಹೊಳಿ ಆಪ್ತರ ಮನೆಗಳ ಮೇಲೆ ED ದಾಳಿ

ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಸಂಬಂಧಿಸಿದ ಸುಮಾರು 18...