ಚನ್ನರಾಯಪಟ್ಟಣ | ಯೂರಿಯಾ ಗೊಬ್ಬರದ ಸಮಸ್ಯೆ: ರೈತರ ಪರದಾಟ 

Date:

ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲ್ಲೂಕು ಹೀರಿಸಾವೆ ಹೋಬಳಿಯಲ್ಲಿ ಯೂರಿಯಾ ಗೊಬ್ಬರದ ಸಮಸ್ಯೆ ವಾರದಿಂದ ಮುಂದುವರಿದಿದೆ. ಇಲ್ಲಿನ ಕೃಷಿ ಪತ್ತಿನ ಸಹಕಾರ ಸಂಘಕ್ಕೆ 178 ಚೀಲ ಯೂರಿಯಾ ಸರಬರಾಜು ಆಗಿರುವ ವಿಷಯ ತಿಳಿದ, ನೂರಾರು ರೈತರು ಬೆಳಿಗ್ಗೆಯಿಂದ ಯಾರಿಯಾ ಖರೀದಿಗೆ ಗಂಟೆಗಟ್ಟಲೆ ಕಾದರೂ ಒಬ್ಬರಿಗೆ ಒಂದೇ ಚೀಲ ದೊರತಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

- Advertisement -

ಕಳೆದ ವಾರ ಹೋಬಳಿಯಲ್ಲಿ ಹದವಾದ ಮಳೆಯಾಗಿದ್ದು, ಕೆಲವು ರೈತರು ರಾಗಿ, ಜೋಳ ಬಿತ್ತನೆ ಮಾಡಲು ಹೊಲವನ್ನು ಹಸನು ಮಾಡಿಕೊಂಡಿದ್ದಾರೆ. ಜುಲೈ ಮೊದಲ ವಾರದಲ್ಲಿ ಅಲ್ಪಸ್ವಲ್ಪ ಮಳೆ ಬಿದ್ದರೆ, ಇವರು ಬಿತ್ತನೆ ಮಾಡುತ್ತಾರೆ. ಆ ಸಮಯದಲ್ಲಿ ಗೊಬ್ಬರ ಸಿಗುವುದಿಲ್ಲ ಎಂದು ಈಗಲೇ ಖರೀದಿಸುತ್ತಿದ್ದಾರೆ. ರಾಗಿ ಬಿತ್ತನೆ ಮಾಡುವಾಗ ರಸಗೊಬ್ಬರಕ್ಕೆ ಯೂರಿಯಾವನ್ನು ಬೆರೆಸಿ ಹಾಕಿದರೆ, ಉತ್ತಮ ಪೈರು ಬರುತ್ತದೆ. ಮೇವಿಗಾಗಿ ತೋಟದಲ್ಲಿ ಈಗ ಜೋಳ ಸೇರಿದಂತೆ ಇತರೆ ಬೆಳೆಗಳನ್ನು ಹಾಕಿದ್ದು, ಮಳೆ ಆಗಿರುವುದರಿಂದ ಈಗ ಯೂರಿಯಾ ಹಾಕಿದರೆ, ಉತ್ತಮವಾಗಿ ಬೆಳೆಯುತ್ತದೆ ಎನ್ನುತ್ತಾರೆ ಕೆಲವು ರೈತರು. ಯೂರಿಯಾಕ್ಕೆ ಹೆಚ್ಚು ಬೇಡಿಕೆ ಇದೆ. ಇಂದು ತುಂಬಾ ರೈತರು ಬಂದಿದ್ದರು. ಎಲ್ಲರಿಗೂ ಗೊಬ್ಬರ ನೀಡುವ ಉದ್ದೇಶದಿಂದ ಪ್ರತಿ ಆಧಾರ್ ಕಾರ್ಡ್‌ಗೆ ಒಂದು ಚೀಲ ವಿತರಣೆ ಮಾಡುತ್ತಿದ್ದೇವೆ’ ಎಂದು ಸಹಕಾರ ಸಂಘದ ಮಂಜುನಾಥ್ ‘ತಿಳಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಸಾಕ್ಷ್ಯ ಚಿತ್ರಗಳಿರದ ದೇಶವು ಚರಿತ್ರೆ ಇರದ ರಾಷ್ಟ್ರದಂತೆ ಎಂದಿದ್ದ...

ಚಿಲಿ ದೇಶದ ಜನರ ಸಾಮಾಜಿಕ ಬದುಕು ಹಾಗೂ ರಾಜಕೀಯ ಬೆಳವಣಿಗೆಗಳು ಹೆಣೆದುಕೊಂಡ ಘನವಾದ ಚರಿತ್ರೆಯ ಸಂಪುಟವಾಗಿ ಕಟ್ಟಿದ ಧೀಮಂತ ಸಿನೆಮಾ ಕಲಾವಿದ ಪ್ಯಾಟ್ರಿಷಿಯೊ ಗುಜ್ಮಾನ್, ಇತ್ತೀಚಿಗೆ ಇಲ್ಲವಾದರು. ಅವರ ಸೃಜನಶೀಲತೆ, ತುಡಿತ ಮತ್ತು...

ಸೂಕ್ತ ಸಮಯಕ್ಕಾಗಿ ಕಾಯುತ್ತಲೇ ಇರುವ ಕುಮಾರಸ್ವಾಮಿ!

“ರಾಜ್ಯದಲ್ಲಿ ನಡೆಯುತ್ತಿರುವ ಅಕ್ರಮ, ಅವ್ಯವಹಾರದ ಬಗ್ಗೆ ಜನರ ಮುಂದೆ ಇಡುವುದರಲ್ಲಿ ಯಾವುದೇ ರಾಜಿಯಿಲ್ಲ. ರಾಜ್ಯದಲ್ಲಿನ ಘಟನೆ ಬಗ್ಗೆ ಬಾಯಿ ಮುಚ್ಚಿಕೊಂಡಿರಲು ಆಗಲ್ಲ" ಎಂದಿದ್ದಾರೆ ಕುಮಾರಸ್ವಾಮಿ. ಈ ಬಾರಿಯಾದರೂ ಅಲ್ಲೋಲ ಕಲ್ಲೋಲ ಸೃಷ್ಟಿಸುತ್ತಾರೆಯೇ? ‘ಸ್ಪೋಟಕ ಹೇಳಿಕೆ’,...

ಹಬ್ಬ ಅಂದ್ರ ಕೂಡಿಸಬೇಕ್ರಿ, ರಾಜಕೀಯದ ವಿಷ ಬೀಜ ಬಿತ್ತೋದಲ್ಲ…

ಹಬ್ಬಗಳು ಬಾಲ್ಯದ ಆ ಎತ್ತಿನ ಬಂಡಿಯ ನೆನಪಿನಂತೆ ಎಲ್ಲರನ್ನೂ ಮುಗ್ಧವಾಗಿ ಕೂಡಿಸಬೇಕೇ ಹೊರತು, ಮತ್ತೊಬ್ಬರ ಧರ್ಮವನ್ನು ಕೆಣಕಿ, ರಾಜಕೀಯ ಲಾಭಕ್ಕಾಗಿ ಬೀದಿಯಲ್ಲಿ ಬೆಂಕಿ ಹಚ್ಚುವ ಪ್ರವೃತ್ತಿ ಧರ್ಮವೂ ಅಲ್ಲ, ಭಾರತೀಯ ಸಂಸ್ಕೃತಿಯೂ ಅಲ್ಲ....

ಇದನ್ನೂ ಓದಿದ್ದೀರಾ?ಹಾಸನ | ಜೂ.18ರಂದು ರಂಗ ಅಭಿನಯ ತರಬೇತಿ ಶಿಬಿರ

ಈ ವೇಳೆ ಶ್ರೀನಿವಾಸ್, ರೈತ, ಹೆಗ್ಗಡಿಹಳ್ಳಿ ಬೆಳಿಗ್ಗೆಯಿಂದ ಕಾದರೂ ಒಂದೇ ಚೀಲ ಯೂರಿಯಾ ಸಿಕ್ಕಿದ್ದು. ಸರ್ಕಾರದವರು ರೈತರಿಗೆ ಅಗತ್ಯ ಇರುವಷ್ಟು ಗೊಬ್ಬರ ನೀಡುತ್ತಿಲ್ಲ. ಇದರಿಂದ ಪರದಾಡುವಂತಾಗಿದೆ- ರಮೇಶಗೌಡ, ರೈತ, ಬೂಕ ಗ್ರಾಮರಸಗೊಬ್ಬರದ ಬೆಲೆ ಹೆಚ್ಚಾಗಿದೆ. ದುಡ್ಡು ಕೊಡುತ್ತೆವೆ ಎಂದರೂ ಗೊಬ್ಬರ ಸಿಗುತ್ತಿಲ್ಲ. ಯೂರಿಯಾ ಮತ್ತು 20-20 ಗೊಬ್ಬರವನ್ನು ಹೆಚ್ಚು ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಸರಬರಾಜು ಮಾಡಬೇಕು ಎಂದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸ್ತ್ರೀ ಸಬಲೀಕರಣಕ್ಕೆ ರಾಣಿ ಚನ್ನಮ್ಮನ ಜೀವನ, ಹೋರಾಟವೇ ಪ್ರೇರಣೆ: ಪ್ರೊ. ಸಿ.ಎಂ ತ್ಯಾಗರಾಜ

ರಾಣಿ ಚನ್ನಮ್ಮನ ಚರಿತ್ರೆ ಹಾಗೂ ಅವರು ಪ್ರತಿಪಾದಿಸಿದ ಸ್ವಾತಂತ್ರ್ಯ, ಸ್ವಾಭಿಮಾನ, ಧೈರ್ಯ...

ಬಾಗಲಕೋಟೆ | ಕ್ರೀಡಾ ಪ್ರತಿಭೆಗಳಿಗೆ ಪ್ರೋತ್ಸಾಹ: ರಾಷ್ಟ್ರಮಟ್ಟದ ಸಾಧನೆಗೆ ಸಚಿವ ಕಾಶಪ್ಪನವರ ಕರೆ

ಶಿಕ್ಷಣದ ಜತೆಗೆ ಕ್ರೀಡೆಗೂ ಸಮಾನ ಮಹತ್ವ ನೀಡುವ ಮೂಲಕ ಮಕ್ಕಳ ಸರ್ವಾಂಗೀಣ...

ಭಟ್ಕಳದಲ್ಲಿ ಗಣಪತಿ ವಿಸರ್ಜನೆ ವೇಳೆ ಮಸೀದಿ, ಮದರಸಾಕ್ಕೆ ಕಲ್ಲು ತೂರಾಟ ಆರೋಪ; ಪ್ರಕರಣ ದಾಖಲು

ಗಣಪತಿ ವಿಸರ್ಜನಾ ಮೆರವಣಿಗೆ ಸಂದರ್ಭದಲ್ಲಿ ಮಸೀದಿ ಹಾಗೂ ಮದರಸಾಕ್ಕೆ ಕಲ್ಲು ತೂರಾಟ...

ರಾಯಚೂರು | ಮಳೆಗಾಲ ಮುಗಿಯುವ ಮುನ್ನವೇ ಬಿಸಿಲಿನ ತಾಪ; ರಾಯಚೂರಿನಲ್ಲಿ 37.6 ಡಿಗ್ರಿ ಉಷ್ಣಾಂಶ

ಸೆಪ್ಟೆಂಬರ್‌ ಮಳೆಗಾಲ ಮುಕ್ತಾಯವಾಗಿ, ಅಕ್ಟೋಬರ್‌ನಲ್ಲಿ ಚಳಿಗಾಲ ಆರಂಭವಾಗಬಹುದು ಎಂಬ ನಿರೀಕ್ಷೆಯಲ್ಲಿದ್ದ ಜನರಿಗೆ...