ಬಳ್ಳಾರಿ | ದಲಿತ ವಿದ್ಯಾರ್ಥಿ ಮೇಲೆ ಹಲ್ಲೆ; ಆಟ್ರಾಸಿಟಿ ಪ್ರಕರಣ ದಾಖಲು

Date:

ಬಳ್ಳಾರಿ ನಗರದ ಮೈಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ದಲಿತ ವಿದ್ಯಾರ್ಥಿ ಮೇಲೆ ಹಾಸ್ಟೆಲ್‌ನ ವಾರ್ಡನ್ ಮತ್ತು ವಾಚ್‌ಮನ್ ನಿರಂತರವಾಗಿ ಹಲ್ಲೆ ಮತ್ತು ಕಿರುಕುಳ ನೀಡುತ್ತಿದ್ದರು ಎಂದು ಆರೋಪಿಸಲಾಗಿದೆ. ಇಬ್ಬರು ಆರೋಪಿಗಳ ವಿರುದ್ಧ ಎಸ್‌ಸಿ/ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಒಂಬತ್ತನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿ ವೈ.ಎಸ್ ದಿವಾಕರ್ ಮೇಲೆ ಕಳೆದ ಆರು ತಿಂಗಳಿಂದ ವಾರ್ಡನ್ ರುದ್ರಚಾರ್ಯ ಮತ್ತು ವಾಚ್‌ಮೆನ್ ಮನೋಹರ್ ಪಟೇಲ್ ಹಲ್ಲೆ ನಡೆಸುತ್ತಿದ್ದರು. ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದರು ಎಂದು ಆರೋಪಿಸಲಾಗಿದೆ.

ಇಬ್ಬರು ಆರೋಪಿಗಳ ವಿರುದ್ಧ ಬಳ್ಳಾರಿಯ ಗಾಂಧಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಐಪಿಸಿ ಸೆಕ್ಷನ್ 323, 324, 504, 506 ಹಾಗೂ ಎಸ್‌ಟಿ/ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆಯ ಸೆಕ್ಷನ್ 3(1)(r), 3(1)(S), 3(2)(v-A) ಅಡಿ ಎಫ್‌ಐಆರ್‌ ದಾಖಲಿಸಲಾಗಿದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಪ್ರಕರಣ ಸಂಬಂಧ ಮಾತನಾಡಿರುವ ಭೀಮ್ ಆರ್ಮಿ ವಿದ್ಯಾರ್ಥಿ ಘಟಕದ ರಾಜ್ಯಾಧ್ಯಕ್ಷ ರಘು ಸಿ, “ಹಳ್ಳಿಗಳಲ್ಲಿ ಅಸ್ಪೃಶ್ಯತೆ ಅನುಭವಿಸುತ್ತಿರುವ ಕಾಲಘಟ್ಟದಲ್ಲಿಯೂ ಹಳ್ಳಿಯಿಂದ ನಗರಕ್ಕೆ ಮಕ್ಕಳ ಉನ್ನತ ವಿದ್ಯಾಭ್ಯಾಸ ಕನಸು ಇಟ್ಟುಕೊಂಡು ಬರುತ್ತಾರೆ. ಅವರು ಪೋಷಕರು ನಗರಗಳಲ್ಲಿ ತಮ್ಮ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ನೀಡಬೇಕೆಂಬ ಆಸೆಯಿಂದ ನಗರಗಳಿಗೆ ಕಳಿಸುತ್ತಾರೆ. ಆದರೆ, ನಗರಗಳ ಹಾಸ್ಟೆಲ್‌ಗಳು ಹಾಗೂ ಇನ್ನಿತರ ಪ್ರದೇಶಗಳಲ್ಲೂ ಜಾತೀಯತೆ ನಡೆಯುವುದು ಆಘಾತಕರ” ಎಂದಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

5 COMMENTS

  1. ದಲಿತ ಅಥವಾ ಸವರ್ಣಿಯ ವಿದ್ಯಾರ್ಥಿ ಆಗಲಿ ಮಗು ಮಗುನೇ ಅಷ್ಟ್ ಅದಕ್ಕೆ ತಕ್ಕ ಶಿಕ್ಷೆ ಆಗಬೇಕು ಆದರೆ ಜಾತಿ ಯಾವುದಾದರೇನು ಹಿಂಸೆ ಹಿಂಸೆಯೇ, ನಾವು ಹೋರಾಡಬೇಕಿರುವುದು ದೌರ್ಜನ್ಯದ ವಿರುದ್ಧವೇ ಹೊರತು ಜಾತಿ ಹೆಸರಿನಿಂದಲ್ಲ

    • ದೌರ್ಜನ್ಯ ಆಗುವುದು ಜಾತಿ ಆಧಾರದ ಮೇಲೆಯೇ. ಮಗು ಮಗುನೇ ಅನ್ನೋದಾದ್ರೆ ಎಲ್ಲರನ್ನೂ ಸಮಾನವಾಗಿ ನೋಡಬೇಕಾಗಿತ್ತು. ಆದರೆ ಇಲ್ಲಿ ಮಗು ಇಲ್ಲ ಜಾತಿಯ ಹೆಸರಿನಲ್ಲಿ ಕಂಟಕ ಇದೆ ಭಾವಿಸಿರಬಹುದು. ಆದ್ದರಿಂದ ಅಪರಾಧ ಅಪರಾಧವೇ, ಅಪರಾಧಕ್ಕೆ ಶಿಕ್ಷೆ ಕೊಡಬಹುದು ಮೇಲಾಗಿ ಸಾರ್ವಜನಿಕ ಅಧಿಕಾರಿ ಅನ್ನೊದನ್ನು ಮರೆತು ಜಾತಿ ಕಾರಣ ಒಡ್ಡಿ ಹಲ್ಲೆ ಮಾಡಿದ್ದಕ್ಕಾಗಿ SC/St prevention act ಅಡಿಯಲ್ಲಿ ಬಂಧಿಸಿ ಶಿಕ್ಷೆಗೆ ಗುರಿಪಡಿಸಬೇಕು.

      • ದೌರ್ಜನ್ಯ ಆಗಿರುವುದು ಆ ಹುಡುಗ ಕೀಳು ಜಾತಿಯವನು ಎನ್ನುವುದೇ ಮುಖ್ಯ ಕಾರಣ ಸ್ವಾಮಿ, ದೌರ್ಜನ್ಯ ಮಾಡಿರುವವನ ಜಾತಿ ಲಿಂಗಾಯತ ಸ್ವಾಮಿ, ಸಿ.ಸಿ. ಟಿವಿಯ ಪುಟೇಜಸ್ ಇದ್ದಾವೆ ನೋಡಬಹುದು.

  2. Super sir, niu matanadiro maatugalu, but Eedina .com davaru hotteg sagani tintar anustad sir Yivar yella news galu Jaatigala hesar heli news baritar, hintavarindane namm deshad Tarunara Tandagal TelikedSkondu Jaati jaati Anta Bedabhav maadogattar, modal hinta news reporters rann namm desh dinda Matta hakbeku,

  3. Super sir, niu matanadiro maatugalu, but Eedina .com davaru hotteg sagani tintar anustad sir Yivar yella news galu Jaatigala hesar heli news baritar, hintavarindane namm deshad Tarunara Tandagal TelikedSkondu Jaati jaati Anta Bedabhav maadogattar, modal hinta news reporters rann namm desh dinda Matta hakbeku,

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೇಸಿಗೆಯಲ್ಲಿ ಉದ್ಯಾನವನಗಳನ್ನು ಹಸಿರಾಗಿಡಲು ಸಂಸ್ಕರಿಸಿದ ನೀರುಣಿಸಲು ಮುಂದಾದ ಬಿಬಿಎಂಪಿ

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕುಡಿಯಲು ನೀರಿಲ್ಲದೇ ಜನ ಪರಡಾಡುವಂತಾಗಿದೆ. ಜತೆಗೆ, ಮರಗಿಡಗಳು...

ಉಡುಪಿ | ಮನೆಯಲ್ಲಿ ಒಂಟಿಯಾಗಿದ್ದ ಯುವಕನನ್ನು ಗುಂಡಿಟ್ಟು ಕೊಂದ ದುಷ್ಕರ್ಮಿಗಳು

ಮನೆಯಲ್ಲಿ ಒಂಟಿಯಾಗಿದ್ದ ಯುವಕನನ್ನು ಪಿಸ್ತೂಲಿನಿಂದ ಗುಂಡಿಕ್ಕಿ ಹತ್ಯೆಗೈದಿರುವ ಘಟನೆ ಉಡುಪಿ ಜಿಲ್ಲೆಯ...

ʼಈದಿನ.ಕಾಮ್ʼ ನ್ಯೂಸ್ ಬೀದರ್ ಸಹಾಯವಾಣಿ ಬಿಡುಗಡೆಗೊಳಿಸಿದ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ

ಕಲುಷಿತವಾದ ವಾತಾವರಣದಲ್ಲಿ ಸಮಾಜದ ಉನ್ನತಿಗಾಗಿ ವಸ್ತುನಿಷ್ಠ, ಪ್ರಾಮಾಣಿಕತೆ, ದಕ್ಷತೆ ಹಾಗೂ ನಿರ್ಭಡೆಯಿಂದ...

ದಾವಣಗೆರೆ | ನಾಲೆಯ ಕೊನೆ ಭಾಗಕ್ಕೆ ನೀರು ಹರಿದಿಲ್ಲ; ಸಚಿವರು ರೈತರ ಹಿತ ಕಾಯುತ್ತಿಲ್ಲ: ಶಾಸಕ ಹರೀಶ್

ದಾವಣಗೆರೆ ಜಿಲ್ಲೆಯ ರೈತರಿಗೆ ಭದ್ರಾ ಜಲಾಶಯದಿಂದ ಸಮರ್ಪಕವಾಗಿ ನೀರು ಹರಿಸುವಲ್ಲಿ ಜಿಲ್ಲಾ...