ಧಾರಾಕಾರ ಮಳೆಯಲ್ಲಿಯೂ ಕೋಗಿಲು ಸಂತ್ರಸ್ತರ ಪ್ರತಿಭಟನೆ

Date:

ಕೋಗಿಲು ಬಡಾವಣೆ ಮನೆಗಳ ಧ್ವಂಸ ಮಾಡಿ 148 ದಿನಗಳು ಕಳೆದರೂ, ಇದರುವರೆಗೂ ಮನೆ ಕೊಟ್ಟಿಲ್ಲ. ಇಷ್ಟು ದಿವಸ ಕೋಗಿಲು ಬಡಾವಣೆಯಲ್ಲಿಯೇ ಪ್ರತಿಭಟನೆ ಮಾಡುತ್ತಿದ್ದ ಸಂತ್ರಸ್ತರು, ಇಂದಿನಿಂದ ಪ್ರತಿಭಟನೆಯನ್ನು ಫ್ರೀಡಂ ಪಾರ್ಕಿಗೆ ಬಂದು ಬಿಡಾರ ಹೂಡಿದ್ದಾರೆ. ಈ ನಡುವೆ ವರುಣನ ಆರ್ಭಟ ಜೋರಾಗಿದ್ದು, ಧಾರಕಾರವಾಗಿ ಸುರಿದ ಮಳೆಯಲ್ಲಿಯೂ ಪ್ರತಿಭಟನೆಯನ್ನು ಮುಂದುವರೆಸಿದ್ದಾರೆ.

- Advertisement -

2025 ಡಿಸೆಂಬರ್‌ 20ರಂದು ಬೆಂಗಳೂರು ಉತ್ತರ ತಾಲ್ಲೂಕಿನ ಯಲಹಂಕ ಪ್ರದೇಶದ ಕೋಗಿಲು ಬಡಾವಣೆಯಲ್ಲಿ ಸುಮಾರು 20-25 ವರ್ಷಗಳಿಂದ ವಾಸವಿದ್ದ 160ಕ್ಕೂ ಹೆಚ್ಚು ಮನೆಗಳನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಅಧಿಕಾರಿಗಳು ಏಕಾಏಕಿ ಬುಲ್ಡೋಜರ್‌ಗಳ ಮೂಲಕ ಮನೆಗಳನ್ನು ನೆಲಸಮಗೊಳಿದ್ದಾರೆ. ಅಲ್ಲಿದ್ದವರೆಲ್ಲರೂ ನಿರ್ಗತಿಕರು ಹಾಗೂ ಒಂದೊತ್ತಿನ ಊಟಕ್ಕಾಗಿ ಪರದಾಡುತ್ತಿರುವವರು. ಈ ದೈತ್ಯ ಯಂತ್ರಗಳಿಗೆ ಹಾಗೂ ಸರ್ಕಾರದ ತೀರ್ಮಾನಕ್ಕೆ ಬೀದಿಗೆ ಬಿದ್ದ ಜನರು ಇಂದಿಗೂ ಬೀದಿಯಲ್ಲಿಯೇ ಬದುಕು ಕಳೆಯುತ್ತಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ವ್ಯವಸ್ಥೆಯ ವೈಫಲ್ಯಕ್ಕೆ 32 ಬೈಗಾ ಕಂದಮ್ಮಗಳ ಬಲಿ: ಬುಡಕಟ್ಟು...

ಕೇಂದ್ರ, ರಾಜ್ಯ ಸರ್ಕಾರಗಳು ಇಂತಹ ಅಳಿದುಳಿಯುತ್ತಿರುವ ಬುಡಕಟ್ಟು ಸಮುದಾಯದ ಕಡೆಗೆ ತಮ್ಮ ಮತ ಬಾಚುವ ಕಣ್ಣು ಮುಚ್ಚಿ ತನ್ಮ ಕರ್ತವ್ಯದ ಕಣ್ಣು ತೆರೆದು ನೋಡುವುದು ಅಗತ್ಯ. ಬೈಗಾ ಸಮುದಾಯದಂತಹ ಅಪರೂಪದ ಬುಡಕಟ್ಟು ಸಂತತಿಯನ್ನು...

ಆದಿವಾಸಿ ಕಲಾವಿದನ ನಿಧನದ 25 ವರ್ಷಗಳ ನಂತರ ₹18...

ಈ ಚಿತ್ರಕಲಾಕೃತಿಯಲ್ಲಿ ಚಿತ್ರಿತವಾಗಿರುವ ನಾಗ, ಭೂಮಿತಾಯಿಯ ಪ್ರತೀಕ. ನಾಗನ ಮೇಲೆ ನಿಂತಿರುವ ವಿಶಾಲ ವೃಕ್ಷ, ಪ್ರಕೃತಿ ಮತ್ತು ಬದುಕಿನ ಸಂಬಂಧದ ಪ್ರತಿಫಲನ. ಗೊಂಡ್ ಆದಿವಾಸಿ ಕಲಾವಿದನ ಚಿತ್ರ ಕಲಾಕೃತಿಯೊಂದು ಆತನ ಮರಣದ 25...

SIR ವಿರೋಧಿ ಹೋರಾಟ: ಡಿಕೆಶಿ–ಮಮತಾ ತೋರಿದ ದಾರಿ ವಿಪಕ್ಷಗಳಿಗೆ...

ಭಾರತದ ಪ್ರಜಾಪ್ರಭುತ್ವದ ಅಡಿಪಾಯವೇ ನ್ಯಾಯಯುತ, ಸ್ವತಂತ್ರ ಹಾಗೂ ಪಾರದರ್ಶಕ ಚುನಾವಣೆ. ಆದರೆ, ಅಧಿಕಾರದ ಗದ್ದುಗೆ ಏರಿರುವ ಮೋದಿ-ಶಾ ಜೋಡಿ, ಈ ಅಡಿಪಾಯವನ್ನೇ (ಚುನಾವಣಾ ಆಯೋಗವನ್ನೇ) ತಮ್ಮ ಸೂತ್ರದ ಬೊಂಬೆ ಮಾಡಿಕೊಂಡಿದೆ. ಎಸ್‌ಐಆರ್‌ ಹೆಸರಿನಲ್ಲಿ...

ಬೆಂಗಳೂರು ನಗರದ ಫ್ರೀಡಂ ಪಾರ್ಕ್‌ನಲ್ಲಿ ಕೋಗಿಲು ಲೇಔಟ್‌ ಸ್ಲಂ ನಿವಾಸಿಗಳ ಹೋರಾಟ ಸಮಿತಿ, “ಮನೆ ಕೊಡಿ ಅಥವಾ ಜೈಲಿಗಾದರೂ ಬಿಡಿ” ಎಂಬ ಘೋಷವಾಕ್ಯದೊಂದಿದೆ ಇಂದಿನಿಂದ ಅನಿರ್ದಿಷ್ಟ ಹಗಲು-ರಾತ್ರಿ ಹೋರಾಟ ಆರಂಭಿಸಿದೆ.

kogilu 2
ಪ್ರತಿಭಟನೆಯಲ್ಲಿ ಕೋಗಿಲು ಸಂತ್ರಸ್ತರು

“ಧ್ವಂಸ ನಡೆದ ಎಂಟು ದಿನಗಳ ನಂತರ, ಸರ್ಕಾರ ಪುನರ್ವಸತಿ ಒದಗಿಸುವುದಾಗಿ ಭರವಸೆ ನೀಡಿತ್ತು. ರಾಜೀವ್ ಗಾಂಧಿ ವಸತಿ ನಿಗಮವು ತುರ್ತಾಗಿ ಸಮೀಕ್ಷೆ ಪೂರ್ಣಗೊಳಿಸಿತು. ದಾಖಲೆ ಪರಿಶೀಲನೆಯ ಪ್ರಕ್ರಿಯೆಯೂ ಹಲವು ಸುತ್ತುಗಳಲ್ಲಿ ನಡೆಯಿತು. ಆದರೂ ಸರ್ಕಾರ ಮನೆ ಕೊಡುವ ಯೋಚನೆಗೆ ಬಂದಿಲ್ಲ” ಎಂದು ಪ್ರತಿಭಟನಕಾರರು ಆರೋಪಿಸಿದರು.

“ಸಚಿವರು, ಶಾಸಕರು ಮತ್ತು ಮುಖ್ಯಮಂತ್ರಿಗಳು ಕೂಡ ಪುನರ್ವಸತಿ ಕುರಿತು ಸಾರ್ವಜನಿಕ ಭರವಸೆಗಳನ್ನು ನೀಡಿದರು. ಆದಾಗ್ಯೂ 148 ದಿನಗಳಿಂದ ಇನ್ನೂ ಬೀದಿಯಲ್ಲೇ ಬದುಕುತ್ತಿದ್ದೇವೆ. ತೀವ್ರ ಬಿಸಿಲು, ಮಳೆ ಮತ್ತು ಅನಾರೋಗ್ಯದ ನಡುವೆಯೂ ಮಕ್ಕಳು, ಮಹಿಳೆಯರು ಮತ್ತು ವೃದ್ಧರನ್ನೊಳಗೊಂಡಂತೆ ಅತ್ಯಂತ ಅಮಾನವೀಯ ಪರಿಸ್ಥಿತಿಯಲ್ಲಿ ನಾವು ಬದುಕುತ್ತಿದ್ದೇವೆ. ಬಡವರ ಪರವೆಂದು ಕರೆಸಿಕೊಳ್ಳುವ ಕಾಂಗ್ರೆಸ್‌ ಸರ್ಕಾರ ನಮ್ಮ ಬದುಕನ್ನು ಮರುಕಟ್ಟಿಕೊಳ್ಳಲು ನೆರವಾಗುವುದೆಂಬುದು ನಮ್ಮ ನಿರೀಕ್ಷೆಯಾಗಿತ್ತು. ಆದರೆ, ಅದು ಇಂದು ಹುಸಿಯಾಗಿದೆ” ಎಂದು ಬೇಸರ ವ್ಯಕ್ತಪಡಿಸಿದರು.  

“ಸರ್ಕಾರವು ಜನರಿಗೆ ಪುನರ್ವಸತಿಯ ಭರವಸೆ ನೀಡಿ 138 ದಿನಗಳು ಕಳೆದಿವೆ. ಹಲವಾರು ಸುತ್ತಿನ ದಾಖಲೆ ಪರಿಶೀಲನೆ ನಡೆದಿದ್ದರು, ಮನೆ ಕಳೆದುಕೊಂಡು ನಿರಾಶ್ರಿತರಾದ ನಮಗೆ ಮನೆ ಸಿಕ್ಕಿಲ್ಲ ಪರಿಶಿಷ್ಟ ಜಾತಿ, ಅಲ್ಪಸಂಖ್ಯಾತ, ಹಿಂದುಳಿದ ಪಂಗಡ ಹಾಗೂ ಅಸಂಘಟಿತ ಕಾರ್ಮಿಕರಾದ ನಮಗೆ ಸರ್ಕಾರ ವಿಧಿಸಿರುವ ನಿಯಮಗಳ ಅನುಸಾರ ಅತ್ಯಗತ್ಯವಾದ ದಾಖಲೆಗಳನ್ನು ಪಡೆದುಕೊಳ್ಳುವಲ್ಲಿ ಇರುವ ತೊಡಕುಗಳು ಎಷ್ಟೆಂದು ಸರ್ಕಾರಕ್ಕೆ ತಿಳಿದಿದೆ. ಆದರೂ ಸರ್ಕಾರ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ವಾಸ ಧೃಡೀಕರಣ ಪತ್ರ, ರೇಷನ್ ಕಾರ್ಡ್( ಪಡಿತರ ಚೀಟಿ), ಮತದಾರರ ಗುರುತಿನ ಚೀಟಿ, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್ ಎಂಬ ಆರು ದಾಖಲೆಗಳನ್ನು ಕೇಳುತ್ತಿದೆ” ಎಂದು ಹೇಳಿದರು.

kogilu layout
ಕೋಗಿಲು ಬಡಾವಣೆಯಲ್ಲಿ ಮನೆಗಳು ನೆಲಸಮಗೊಂಡ ಚಿತ್ರ

“ಮತದಾರರ ಗುರುತಿನ ಚೀಟಿ, ಪಾನ್ ಕಾರ್ಡ್, ಆಧಾರ್ ಮತ್ತು ಬ್ಯಾಂಕ್ ಖಾತೆಗಳು ನಮ್ಮ ಬಳಿ ಇದೆ. ಆದರೆ, ನಾವು ಬದುಕುವುದೇ ಕಷ್ಟದ ಪರಿಸ್ಥಿತಿಯಲ್ಲಿರುವುದರಿಂದ ಇತರೆ ಮೂರು ದಾಖಲೆಗಳು ಇಲ್ಲ. ಶೇ 10% ಕ್ಕಿಂತ ಕಡಿಮೆ ಜನರ ಬಳಿ ಜಾತಿ ಮತ್ತು ಆದಾಯ ಪ್ರಮಾಣ ಪತ್ರವಿದೆ. ವಾಸ ಧೃಡೀಕರಣದ ಪತ್ರವನ್ನು ಮಾಡಿಸಿಕೊಳ್ಳಬೇಕೆಂಬ ಅರಿವು ಇಲ್ಲದ ಕಾರಣ ಬಹುತೇಕರ ಬಳಿ ಈ ದಾಖಲೆಯೂ ಇಲ್ಲ. ಸರ್ಕಾರ ಈ ರೀತಿಯ ಷರತ್ತುಗಳನ್ನು ಹಾಕಿ, ನಮಗೆ ಮನೆ ಕೊಡುವ ಆಸೆ ತೋರಿಸಿ ಮೋಸ ಮಾಡುತ್ತಿದೆ” ಎಂದು ಆರೋಪಿಸಿದರು.

ಕೋಗಿಲು ಲೇಔಟ್‌ ಸ್ಲಂ ನಿವಾಸಿಗಳ ಹೋರಾಟ ಸಮಿತಿ ಸರ್ಕಾರಕ್ಕೆ ಒಂದಷ್ಟು ಹಕ್ಕೋತ್ತಾಯಗಳನ್ನು ಮಾಡಿದ್ದಾರೆ.

1. ಜಿಬಿಎ ನಡೆಸಿದ ಕಾರ್ಯಾಚರಣೆಯಿಂದ ಮನೆ ಕಳೆದುಕೊಂಡ ಎಲ್ಲಾ ಕುಟುಂಬಗಳಿಗೂ ತಕ್ಷಣ ಸಂಪೂರ್ಣ ಪುನರ್ವಸತಿ ಒದಗಿಸಲೇಬೇಕು.

2. ನಮಗೆ ಮನೆಯನ್ನು ನೀಡಲು ಇರುವ ದಾಖಲೆಗಳ ಕೊರತೆಯನ್ನು ನೀಗಿಸಲು ಸರ್ಕಾರ ವಿಶೇಷ ಕ್ಯಾಂಪ್ ಗಳನ್ನು ಮಾಡಿ ಅಗತ್ಯವಾದ ದಾಖಲೆಗಳನ್ನು ನಾವು ಪಡೆದುಕೊಳ್ಳಲು ವಿಶೇಷ ಪ್ರಕ್ರಿಯೆ ನಡೆಸಲೇಬೇಕು. ಯಾವುದೇ ಕಾರಣಕ್ಕೂ ದಾಖಲೆಗಳ ಕೊರತೆ ನಮಗೆ ಮನೆ ನೀಡಲು ಅಡ್ಡಿಯಾಗದಂತೆ ಸರ್ಕಾರ ನಿಗಾ ವಹಿಸಬೇಕು.

3. ಶಾಶ್ವತ ಹಾಗೂ ಗೌರವಯುತ ಮನೆಗಳೊಂದಿಗೆ ಭೂ-ಹಕ್ಕನ್ನು ಮತ್ತು ಎಲ್ಲಾ ಮೂಲಭೂತ ನಾಗರಿಕ ಸೌಲಭ್ಯಗಳನ್ನು ಸರ್ಕಾರ ಕಲ್ಪಿಸಬೇಕು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ವಿಶೇಷ | ಗಾಂಧೀ ಎಂದರೆ ಏನು?

ಇಂದು ಮಹಾತ್ಮಾ ಗಾಂಧೀಜಿಯವರ ಜನ್ಮದಿನ. ಅವರ ವಿಚಾರ, ಚಿಂತನೆ, ನಡೆ-ನುಡಿ... ಅವರನ್ನು...

ಮುಸ್ಲಿಂ ಮತದಾರರ ಹೆಸರು ಅಳಿಸಲು ಬಿಜೆಪಿ ಜೊತೆ ಜೆಡಿಎಸ್ ಸಂಚು? ಡಿಕೆಶಿ ಹೇಳಿದ್ದೇನು?

ಮುಸ್ಲಿಂ ಸೇರಿದಂತೆ ಅಲ್ಪಸಂಖ್ಯಾತರು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ...

ಕರ್ನಾಟಕ SIR | ಅರ್ಹರ ಹೆಸರು ಡಿಲೀಟ್‌ ಮಾಡಲು ಬಿಜೆಪಿಗೆ ‘ಫಾರ್ಮ್‌-7’ ಟೂಲ್‌ಕಿಟ್; ಷಡ್ಯಂತ್ರ ಬಹಿರಂಗ

ರಾಜ್ಯದಲ್ಲಿ ನಡೆಯುತ್ತಿರುವ ಎಸ್‌ಐಆರ್‌ ಪ್ರಕ್ರಿಯೆಯಲ್ಲಿ ಬಿಜೆಪಿಗರು ‘ಫಾರ್ಮ್‌-7’ಅನ್ನು ದುರ್ಬಳಕೆ ಮಾಡಿಕೊಳ್ಳುತತಿದ್ದಾರೆ. ಈ...

SIR | ಮತ ಡಿಲೀಟ್‌ ಮಾಡಲು ಒಳಸಂಚು ಆರೋಪ : ಭಾಲ್ಕಿಯಲ್ಲಿ 32 ಜನರ ವಿರುದ್ಧ FIR

ಮತದಾರರ ಪಟ್ಟಿಯ ಸಮಗ್ರ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಯಾವುದೇ ಆಧಾರ...