ಚಿಂತಾಮಣಿ | ಎನ್.ವಿ. ಶ್ರೀನಿವಾಸನ್ ಅವರ ಚೊಚ್ಚಲ ಕವನ ಸಂಕಲನ ‘ಕಾವ್ಯ ಕುಸುಮಗಳು ಅರಳಿದಾಗ’ಲೋಕಾರ್ಪಣೆ

Date:

ಕಾವ್ಯವು ಮನುಷ್ಯನ ಭಾವನೆಗಳಿಗೆ ಅಕ್ಷರ ರೂಪ ನೀಡುವ ಶಕ್ತಿಯುತ ಮಾಧ್ಯಮವಾಗಿದ್ದು, ಕವಿಯ ಅನುಭವ, ಸಂವೇದನೆ ಹಾಗೂ ಸಾಮಾಜಿಕ ಕಾಳಜಿಗಳು ಕವಿತೆಗಳ ಮೂಲಕ ಅಭಿವ್ಯಕ್ತಗೊಳ್ಳುತ್ತವೆ ಎಂದು ಚಿಂತಾಮಣಿಯ ಹಿರಿಯ ಸಾಹಿತಿ ಕಾಗತಿ ವಿ. ವೆಂಕಟರತ್ನಂ ಹೇಳಿದರು.

ನಗರದ ವೆಂಕಟಾದ್ರಿ ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿ ಶಿಕ್ಷಕರಿಗೆ ಸನ್ಮಾನ ಮತ್ತು ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಚಿಂತಾಮಣಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎನ್.ವಿ. ಶ್ರೀನಿವಾಸನ್ ಅವರ ಚೊಚ್ಚಲ ಕವನ ಸಂಕಲನ ‘ಕಾವ್ಯ ಕುಸುಮಗಳು ಅರಳಿದಾಗ’ ಕೃತಿಯನ್ನು ಲೋಕಾರ್ಪಣೆ ಮಾಡಿ ಮಾತನಾಡಿದರು.
ಕವಿತೆ ಬರೆಯುವುದು ಕೇವಲ ಪದಗಳನ್ನು ಜೋಡಿಸುವ ಕೆಲಸವಲ್ಲ. ಜೀವನಾನುಭವಗಳನ್ನು ಸೂಕ್ಷ್ಮವಾಗಿ ಗ್ರಹಿಸಿ, ಅವುಗಳಿಗೆ ಕಾವ್ಯಾತ್ಮಕ ಅಭಿವ್ಯಕ್ತಿ ನೀಡುವ ಸೃಜನಶೀಲ ಪ್ರಕ್ರಿಯೆಯಾಗಿದೆ. ಸಾಹಿತ್ಯವು ಸಮಾಜದ ಆಗುಹೋಗುಗಳಿಗೆ ಸ್ಪಂದಿಸುವುದರ ಜೊತೆಗೆ ಓದುಗರಲ್ಲಿ ಚಿಂತನೆ ಮೂಡಿಸುವಂತಿರಬೇಕು. ಶ್ರೀನಿವಾಸನ್ ಅವರ ಮೊದಲ ಕವನ ಸಂಕಲನವು ಅವರ ಸಾಹಿತ್ಯಿಕ ಪಯಣಕ್ಕೆ ಉತ್ತಮ ಆರಂಭವಾಗಲಿ ಎಂದು ಅವರು ಆಶಿಸಿದರು.

ಚಿಂತಾಮಣಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಅಶ್ವತ ಎಸ್. ಅವರು ಕೃತಿಯ ಕುರಿತು ಮಾತನಾಡಿ, ಕವನ ಸಂಕಲನದಲ್ಲಿ ಕವಿಯ ಭಾವನೆ, ಜೀವನಾನುಭವ ಮತ್ತು ಸಾಮಾಜಿಕ ಸ್ಪಂದನೆಗಳು ಅಭಿವ್ಯಕ್ತವಾಗಿವೆ. ಈ ಕವನ ಸಂಕಲನದಲ್ಲಿರುವ ಕವನಗಳು ಜೀವನ ಮೌಲ್ಯಗಳು, ಪ್ರಕೃತಿ, ಪ್ರೇಮ, ದೇಶಾ ಭಿಮಾನ ,ಕನ್ನಡ ಭಾಷೆ, ನುಡಿ, ಸಾಹಿತ್ಯ, ಸಂಸ್ಕೃತಿ, ಮಾನವೀಯತೆ, ಸಾಮಾಜಿಕ ಜಾಗೃತಿ, ಮಕ್ಕಳ ಮನೋಲೋಕ ಮತ್ತು ಬದುಕಿನ ನಾನಾ ಅನುಭವಗಳನ್ನು ಸರಳ ಹಾಗೂ ಸುಲಭ ಭಾಷೆಯಲ್ಲಿ ಅಭಿವ್ಯಕ್ತಿಸಿವೆ. ಅಲಂಕಾರ ಪದಗಳಿಗಿಂತಲೂ ಸರಳತೆಯನ್ನು ಅಪ್ಪಿ ಕೊಂಡಿರುವ ಈ ಕವನ ಸಂಕಲನ ಓದುಗರ ಹೃದಯವನ್ನು ನೇರವಾಗಿ ಸ್ಪರ್ಶಿಸುವ ಗುಣವನ್ನು ಹೊಂದಿದೆ. ಕಾವ್ಯದ ವಿವಿಧ ಆಯಾಮಗಳನ್ನ ಕೃತಿಕಾರರು ತಮ್ಮದೇ ಆದ ರೀತಿಯಲ್ಲಿ ಕಟ್ಟಿಕೊಟ್ಟಿದ್ದಾರೆ ಎಂದು ತಿಳಿಸಿದರು.

ಕೃತಿಕಾರ ಎನ್.ವಿ. ಶ್ರೀನಿವಾಸನ್ ಮಾತನಾಡಿ, ಕವನ ರಚನೆಯ ಹಿನ್ನೆಲೆಯನ್ನು ವಿವರಿಸಿದರು. ತಮ್ಮ ಜೀವನಾನುಭವಗಳು, ಸುತ್ತಮುತ್ತಲಿನ ಸಾಮಾಜಿಕ ಪರಿಸರ ಹಾಗೂ ವಿವಿಧ ಸಂದರ್ಭಗಳು ಕವಿತೆಗಳನ್ನು ರಚಿಸಲು ಪ್ರೇರಣೆಯಾಗಿವೆ. ತಮ್ಮ ಚೊಚ್ಚಲ ಕವನ ಸಂಕಲನ ಓದುಗರಿಗೆ ತಲುಪುತ್ತಿರುವುದು ಸಂತಸ ತಂದಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಶ್ರೀನಿವಾಸನ್ ಎನ್ ವಿ ರವರನ್ನು ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು.

ಇದನ್ನು ಓದಿದ್ದೀರಾ..?ವಿದ್ಯಾರ್ಥಿಗಳೊಂದಿಗೆ ನೇರ ಸಂವಾದ ನಡೆಸಿ ಸಮಸ್ಯೆಗಳ ಕುರಿತು ಮಾಹಿತಿ ಪಡೆದ ಸಚಿವರು

ಕಾರ್ಯಕ್ರಮದಲ್ಲಿ ಸಾಹಿತ್ಯಾಸಕ್ತರು, ಕನ್ನಡಾಭಿಮಾನಿಗಳು ಹಾಗೂ ಗಣ್ಯರು ಉಪಸ್ಥಿತರಿದ್ದರು.

WhatsApp Image 2025 06 24 at 16.24.21 6207fd1d
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಾಗೇಪಲ್ಲಿ | ಮಾಜಿ ಸಂಸದ ಪ್ರತಾಪ್ ಸಿಂಹ್ ಅವರ ಮೇಲೆ ಪ್ರಕರಣ ದಾಖಲಿಸಿ ಇನ್ನೂ ಏಕೆ ಬಂದಿಸಿಲ್ಲಾ : ಬಿ.ವಿ. ವೆಂಕಟರಮಣ

ಮನುವಾದಿ ಮನಸ್ಸಿನಿಂದ ಟಿ.ನರಸಿಪುರದಲ್ಲಿ ಗಣೇಶ ವಿಸರ್ಜನೆ ವೇಳೆ ದಲಿತ ಸಂಘಟನೆಗಳ ನೀಲಿ...

ಚಿಂತಾಮಣಿ | ಪಿಎಲ್‌ಡಿ ಮತ್ತು ಡಿಸಿಸಿ ಬ್ಯಾಂಕ್‌ಗಳ ಪುನಶ್ಚೇತನದಿಂದ ರೈತರಿಗೆ ಹೆಚ್ಚಿನ ಅನುಕೂಲ

ಚಿಂತಾಮಣಿ ತಾಲ್ಲೂಕಿನ ನಂದಿಗಾನಹಳ್ಳಿ ವ್ಯವಸಾಯ ಸೇವಾ ಸಹಕಾರ ಸಂಘದ 2025-26 ನೇ...

ಚಿಕ್ಕಬಳ್ಳಾಪುರ: ರೈತ ಸಂಘದ ಕಚೇರಿಯಲ್ಲಿಯೇ ತಾಲ್ಲೂಕು ರೈತ ಸಂಘದ ಅಧ್ಯಕ್ಷ ರಾಮಾಂಜಿನಪ್ಪ ನೇಣುಹಾಕಿಕೊಂಡು ಆತ್ಮಹತ್ಯೆ

ಮರಳುಕುಂಟೆ ಗ್ರಾಮದ ರಾಮಾಂಜಿನಪ್ಪ 12 ವರ್ಷಗಳಿಂದ ತಾಲ್ಲೂಕು ರೈತ ಸಂಘದ ಅಧ್ಯಕ್ಷರಾಗಿದ್ದರು....