ಜಿಲ್ಲೆಯ ಮೂಡಿಗೆರೆ ತಾಲೂಕು ಕೇಂದ್ರದಲ್ಲಿ ನಡೆದ 71ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವು ಕನ್ನಡಿಗರ ಸಂಭ್ರಮದ ಬದಲು ಶಿಷ್ಟಾಚಾರ ಉಲ್ಲಂಘನೆ ಹಾಗೂ ನಾಡ ಹಬ್ಬದಲ್ಲೇ ಆಂಗ್ಲ ಭಾಷೆಯ ಬಳಕೆಯಿಂದಾಗಿ ವಿವಾದ ಸೃಷ್ಟಿಯಾಗಿದೆ.
ಈ ಕಾರ್ಯಕ್ರಮಕ್ಕೆ ಶಾಸಕಿ ನಯನಾ ಮೋಟಮ್ಮ ಗೈರಾಗಿದ್ದರಿಂದ ಹೀಗಾಗಿ ತಾಲೂಕು ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷ ಶಂಕರ್ ಅವರಿಂದ ಧ್ವಜಾರೋಹಣ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಕನ್ನಡ ಪರ ಸಂಘಟನೆಗಳು ಸೇರಿದಂತೆ ಪ್ರಮುಖರಿಗೆ ಸರಿಯಾದ ಆಹ್ವಾನ ನೀಡದೆ ಶಿಷ್ಟಾಚಾರ ಪಾಲಿಸಿಲ್ಲ ಎಂದು ಆರೋಪಿಸಿದ ಕೆಂಪೇಗೌಡ ವೇದಿಕೆಯ ತಾಲೂಕು ಕಾರ್ಯದರ್ಶಿ ಪ್ರಸಾದ್ ಬಕ್ಕಿ ಅವರು, ಮಾಜಿ ಸಚಿವೆ ಮೋಟಮ್ಮ ಹಾಗೂ ತಹಶೀಲ್ದಾರ್ ಅಶ್ವಿನಿ ಅವರ ಸಮ್ಮುಖದಲ್ಲೇ ಆಕ್ರೋಶ ವ್ಯಕ್ತಪಡಿಸಿ ವೇದಿಕೆಯಿಂದ ಹೊರ ನಡೆಯುವ ಮೂಲಕ ತಮ್ಮ ಬಹಿರಂಗ ವಿರೋಧ ದಾಖಲಿಸಿದರು.
ಮೆರವಣಿಗೆಯಲ್ಲಿ ಭಾಗವಹಿಸಿದ್ದ ವಿವಿಧ ಶಾಲಾ ವಿದ್ಯಾರ್ಥಿಗಳು ತಮ್ಮ ಶಾಲೆಯ ಹೆಸರುಗಳನ್ನು ಇಂಗ್ಲಿಷ್‌ನಲ್ಲಿ ಬರೆದಿದ್ದ ಫಲಕಗಳನ್ನು ಪ್ರದರ್ಶಿಸಿದ್ದು ಹೊಸಮಧನಕ್ಕೆ ಕಾರಣವಾಗಿದ್ದು ಕರುನಾಡ ಹಬ್ಬದಲ್ಲೇ ಆಂಗ್ಲ ಭಾಷೆ ರಾರಾಜಿಸಿರುವುದು ಹಾಗೂ ಅಧಿಕಾರಿಗಳ ಈ ನಿರ್ಲಕ್ಷ್ಯವು ಸ್ಥಳೀಯ ಕನ್ನಡಾಭಿಮಾನಿಗಳ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು | ʼನಮಗೊಂದು ಸೂರು ಕೊಡಿ; ಇಲ್ಲವಾದ್ರೆ ಗುಡಿಸಲಿನಲ್ಲೇ ಪ್ರಾಣ ಬಿಡ್ತೇವೆʼ: ವಸತಿಹೀನರ ಅಳಲು
ಈ ಕುರಿತು ಎಲ್ಲೆಡೆ ಸಾಮಾಜಿಕ ತಾಣಗಳಲ್ಲಿ ಸುದ್ದಿ ಹರಡಿದೆ.




