ಚಿಕ್ಕಮಗಳೂರು ನಗರದಲ್ಲಿ ಮಾರ್ಚ್ 27ರಂದು ಶ್ರೀರಾಮನವಮಿ ಹಾಗೂ ಮಾರ್ಚ್ 31ರಂದು ಮಹಾವೀರ ಜಯಂತಿ ಹಬ್ಬದ ಪ್ರಯುಕ್ತ ಈ ಎರಡು ದಿನಗಳಲ್ಲಿ ನಗರಸಭೆ ವ್ಯಾಪ್ತಿಯಲ್ಲಿ ಕಡ್ಡಾಯವಾಗಿ ಪ್ರಾಣಿ ವಧೆ ಹಾಗೂ ಮಾಂಸ ಮಾರಾಟ ಮಾಡುವುದನ್ನು ನಿಷೇಧಿಸಲಾಗಿದೆ ಎಂದು ಸರ್ಕಾರಿ ಸುತ್ತೋಲೆಯಲ್ಲಿ ಅದೇಶಿಸಲಾಗಿದೆ.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು | ಗೃಹಲಕ್ಷ್ಮೀ ಯೋಜನೆ: 28ನೇ ಕಂತು ಬಿಡುಗಡೆ; ಎಂ.ಸಿ.ಶಿವಾನಂದಸ್ವಾಮಿ
ಕೋಳಿ, ಕುರಿ, ಮೀನು ಮಾಂಸ ಮಾರಾಟಗಾರರು ಮತ್ತು ಮಾಂಸಾಹಾರಿ ಹೋಟೆಲ್‌ಗಳನ್ನು ಈ ದಿನದಂದು ತೆರೆಯಬಾರದು. ತಪ್ಪಿದಲ್ಲಿ ಅಂತಹ ಮಾಂಸ ಮಾರಾಟಗಾರರು ಮತ್ತು ಮಾಂಸಾಹಾರಿ ಹೋಟೆಲ್ ಮಾಲೀಕರ ವಿರುದ್ಧ ಕಾನೂನು ರೀತಿಯ ಕ್ರಮ ಕೈಗೊಳ್ಳಲಾಗುವುದೆಂದು ಪೌರಾಯುಕ್ತ ಬಿ.ಸಿ.ಬಸವರಾಜು ಅವರು ತಿಳಿಸಿದ್ದಾರೆ.




