ಚಿತ್ರದುರ್ಗ | ಒಳಮೀಸಲಾತಿಗಾಗಿ ಗಣತಿ ಕೂಡಲೇ ನಿಲ್ಲಿಸಿ, ತರಭೇತಿ ನೀಡಿ ಲೋಪದೋಷ ಸರಿಪಡಿಸಿ; ಮಾದಾರ ಚೆನ್ನಯ್ಯ ಶ್ರೀ.

Date:

“ಪರಿಶಿಷ್ಟ ಜಾತಿಯ ಒಳಮೀಸಲಾತಿ ವರ್ಗೀಕರಣಕ್ಕಾಗಿ ನ್ಯಾ. ನಾಗಮೋಹನ್ ದಾಸ್ ಆಯೋಗ ಸೂಚಿಸಿರುವ ಸಮಗ್ರ ಸಮೀಕ್ಷೆಯನ್ನು ತಕ್ಷಣ ನಿಲ್ಲಿಸಬೇಕು. ಸಮೀಕ್ಷೆ ಸರಿಯಾಗಿ ನಡೆಯುತ್ತಿಲ್ಲ. ಗಣತಿದಾರರಿಗೆ ಸೂಕ್ತ ತರಬೇತಿ ಕೊಟ್ಟಿಲ್ಲ. ಸರ್ವರ್ ಸಮಸ್ಯೆ ಇದೆ. 2 ದಿನ ತಡವಾದರೂ ಪರವಾಗಿಲ್ಲ.‌ ಈ ಸಮಸ್ಯೆಗಳನ್ನೆಲ್ಲ ಬಗೆಹರಿಸಿ ಸಮೀಕ್ಷೆ ನಡೆಸಲಿ” ಎಂದು ಮಾದಾರ ಚನ್ನಯ್ಯ ಗುರುಪೀಠದ ಶ್ರೀಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಅವರು ಅಸಮಾಧಾನ ವ್ಯಕ್ತಪಡಿಸಿದರು.‌

- Advertisement -

ಒಳಮೀಸಲಾತಿ ಜಾರಿಗಾಗಿ ನ್ಯಾಯಮೂರ್ತಿ ನಾಗ ಮೋಹನ್ ದಾಸ್ ಆಯೋಗ ಶಿಫಾರಸಿನಂತೆ ರಾಜ್ಯಾದ್ಯಂತ ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆ ನಡೆಯುತ್ತಿರುವ ಹೊತ್ತಿನಲ್ಲೇ ಅದರ ಪ್ರಕ್ರಿಯೆ ಹಾಗೂ ಅಡೆತಡೆಗಳ ಬಗ್ಗೆ ಮಾದಾರ ಚೆನ್ನಯ್ಯ ಶ್ರೀಗಳು . ತರಾತುರಿಯಲ್ಲಿ ಸಮೀಕ್ಷೆ ನಡೆಸುವುದರ ಭವಿಷ್ಯದ ಅಪಾಯಗಳ ಬಗ್ಗೆಯೂ ಕಳವಳ ವ್ಯಕ್ತಪಡಿಸಿದ್ದಾರೆ.
ಲೋಪ ದೋಷಗಳ ಕುರಿತು ಭೋವಿ ಗುರುಪೀಠದ ಸಿದ್ಧರಾಮೇಶ್ವರ ಶ್ರೀಗಳು ಆಕ್ಷೇಪ ವ್ಯಕ್ತಪಡಿಸಿರುವ ಜೊತೆಯಲ್ಲಿಯೇ ಮಾದಾರ ಚೆನ್ನಯ್ಯ ಗುರು ಪೀಠದ ಬಸವ ಮೂರ್ತಿ ಮಾದಾರ ಚನ್ನಯ್ಯ ಶ್ರೀಗಳು ಈ ಕೂಡಲೇ ಸಮೀಕ್ಷೆ ಕಾರ್ಯವನ್ನು ನಿಲ್ಲಿಸಿ ಲೋಪ ದೋಷಗಳನ್ನು ಸರಿಪಡಿಸಿ ಗಣತಿದಾರರಿಗೆ ಸಂಪೂರ್ಣ ತರಬೇತಿಯ ನಂತರ ಮರು ಪ್ರಾರಂಭಿಸುವಂತೆ ಒತ್ತಾಯಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

SIR ವಿರೋಧಿ ಹೋರಾಟ: ಡಿಕೆಶಿ–ಮಮತಾ ತೋರಿದ ದಾರಿ ವಿಪಕ್ಷಗಳಿಗೆ...

ಭಾರತದ ಪ್ರಜಾಪ್ರಭುತ್ವದ ಅಡಿಪಾಯವೇ ನ್ಯಾಯಯುತ, ಸ್ವತಂತ್ರ ಹಾಗೂ ಪಾರದರ್ಶಕ ಚುನಾವಣೆ. ಆದರೆ, ಅಧಿಕಾರದ ಗದ್ದುಗೆ ಏರಿರುವ ಮೋದಿ-ಶಾ ಜೋಡಿ, ಈ ಅಡಿಪಾಯವನ್ನೇ (ಚುನಾವಣಾ ಆಯೋಗವನ್ನೇ) ತಮ್ಮ ಸೂತ್ರದ ಬೊಂಬೆ ಮಾಡಿಕೊಂಡಿದೆ. ಎಸ್‌ಐಆರ್‌ ಹೆಸರಿನಲ್ಲಿ...

ಪೊಲೀಸ್ ಇಲಾಖೆ ಸುಧಾರಣೆಗೆ 3 ಸಮಿತಿ; ಬದಲಾವಣೆ ಅಗತ್ಯವೇ?...

ಪೊಲೀಸ್‌ ಇಲಾಖೆಯ ಕಾರ್ಯವೈಖರಿಯಲ್ಲಿ ಸುಧಾರಣೆ, ಡಿಜಿಟಲ್‌ ಟಚ್‌ ಹಾಗೂ ನೇಮಕಾತಿ ವ್ಯವಸ್ಥೆಯ ಪುನರ್‌ರಚನೆಗೆ ರಾಜ್ಯ ಸರ್ಕಾರ ಉನ್ನತ ಮಟ್ಟದ 3 ತಜ್ಞರ ಸಮಿತಿಗಳನ್ನು ರಚಿಸಿದೆ. ಆದರೆ, ಪೊಲೀಸ್‌ ಠಾಣೆಗಳಲ್ಲಿ ಸಾರ್ವಜನಿಕರು ಎದುರಿಸುವ ಸಮಸ್ಯೆಗಳಿಂದ...

ಪಾಕಿಸ್ತಾನದಲ್ಲಿ ಅಹಿಂಸಾ ಮೂರ್ತಿಯ ‘ರಹಸ್ಯರಕ್ಷಣೆ’: ಕರಾಚಿಯಿಂದ ಇಸ್ಲಾಮಾಬಾದ್‌ಗೆ ಗಾಂಧಿ...

ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿರುವ ಭಾರತೀಯ ಹೈಕಮಿಷನ್ ಕಚೇರಿಯ ಪ್ರವೇಶ ದ್ವಾರದಲ್ಲಿ ಮಹಾತ್ಮ ಗಾಂಧೀಜಿಯವರ ಭವ್ಯ ಕಂಚಿನ ಪ್ರತಿಮೆ ಇಂದಿಗೂ ಗಾಂಭೀರ್ಯದಿಂದ ನಿಂತಿದೆ. ಕೈಯಲ್ಲಿ ಊರುಗೋಲು ಹಿಡಿದು ದೂರದ ದಿಗಂತವನ್ನು ದಿಟ್ಟಿಸುವಂತಿರುವ ಈ ಬಾಪೂ ಪ್ರತಿಮೆಯು...
1001988061
Oplus_0

ಈ ಬಗ್ಗೆ ಚಿತ್ರದುರ್ಗದಲ್ಲಿ ಮಾಧ್ಯಮಗಳಿಗೆ ಮಾತನಾಡಿರುವ ಅವರು, “ಮಾಹಿತಿ ಪ್ರಕಾರ ಸಮೀಕ್ಷೆ ಸರಿಯಾಗಿ ನಡೆಯುತ್ತಿಲ್ಲ. ಆಪ್ ಗಳ ಮತ್ತು ಸರ್ವರ್ ಸಮಸ್ಯೆ ಇದೆ, ಗಣತಿದಾರರಿಗೆ ಸರಿಯಾದ ತರಬೇತಿ ನೀಡಿಲ್ಲ. ಇಂತಹ ಪರಿಸ್ಥಿತಿಯಲ್ಲಿ 15 ದಿನವಾದರೂ ಮನೆ ಸಮೀಕ್ಷೆ ಮುಗಿಯುವುದಿಲ್ಲ. ಅಂಕಿ ಅಂಶಗಳು ಏನೇ ಹೇಳಿದರು, ಭೌತಿಕವಾಗಿ ನಡೆಯುತ್ತಿರುವುದು ಬೇರೆ ಇದೆ. ಇನ್ನು ನಮ್ಮ ಬಳಿಗೆ ಯಾರು ಸಂಪರ್ಕಿಸಿ ಬಂದಿಲ್ಲ. ಇದೇ ರೀತಿ ಮುಂದುವರೆದರೆ ಸಮೀಕ್ಷೆ ಅರೆಬರೆಯಾಗುತ್ತದೆ. ಸಮೀಕ್ಷೆಯಲ್ಲಿ ವ್ಯತ್ಯಾಸಗಳಾಗಿ ಯಾವುದೇ ಸಮುದಾಯಕ್ಕೆ ಅನ್ಯಾಯವಾಗಬಾರದು. ಇದನ್ನು ಸರಿಪಡಿಸುವಂತೆ ಆಯೋಗಕ್ಕೆ ಒತ್ತಾಯಿಸಿದ್ದೇವೆ” ಎಂದು ತಿಳಿಸಿದರು.

“ಒಳಮೀಸಲಾತಿಗೆ ರಾಜ್ಯ ಸರ್ಕಾರಕ್ಕೆ ವಿವೇಚನಾಧಿಕಾರ ನೀಡಿದ ಸುಪ್ರೀಂಕೋರ್ಟ್ ತೀರ್ಪಿನ ತಕ್ಷಣವೇ ಸರ್ಕಾರ ಸೂಕ್ತ ಕ್ರಮ ತೆಗೆದುಕೊಂಡಿದ್ದರೆ ಆಗುತ್ತಿತ್ತು.‌ ಸಮಿತಿ ರಚನೆ, ಆಯೋಗ ರಚನೆ ಎಂದು ಕಾಲಹರಣವಾಯಿತು. ಜತೆಗೆ ರಾಜ್ಯದ 10-12 ಜಿಲ್ಲೆಗಳಲ್ಲಿ ಎರಡೂ ಸಹೋದರ ಸಮುದಾಯದಲ್ಲಿ ಗುರುತಿಸಿಕೊಂಡಿರುವ ಆದಿ ಕರ್ನಾಟಕ, ಆದಿ ದ್ರಾವಿಡ, ಆದಿ ಆಂಧ್ರ ಉಪಪಂಗಡದ ಬಗ್ಗೆ ಗೊಂದಲ ಇತ್ತು. ಎ.ಜೆ.ಸದಾಶಿವ ಆಯೋಗದ ವರದಿಯನ್ವಯ ಆದಿಕರ್ನಾಟಕ, ಆದಿ ದ್ರಾವಿಡ, ಆದಿ ಆಂಧ್ರ ಸಮುದಾಯಗಳನ್ನು ಎಡ-ಬಲಗಳಿಗೆ ಹಂಚಿದ್ದರೆ, ನಮ್ಮಲ್ಲೂ ಸಮೀಕ್ಷೆಯ ಅಗತ್ಯವೇ ಇರುತ್ತಿರಲಿಲ್ಲ” ಎಂದು ಅಭಿಪ್ರಾಯಪಟ್ಟರು.

ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ಒಳಮೀಸಲಾತಿ ಜಾರಿಯ ಪರಿಶಿಷ್ಟ ಜಾತಿ ಸಮೀಕ್ಷೆಯ ಲೋಪದೋಷಗಳನ್ನು ಶೀಘ್ರ ಸರಿಪಡಿಸಿ; ಇಮ್ಮಡಿ ಸಿದ್ದರಾಮೇಶ್ವರಶ್ರೀ.

“ಸಮೀಕ್ಷೆ ಸಂದರ್ಭದಲ್ಲಿ ಯಾವ್ಯಾವ ಪಂಗಡಗಳು ಯಾವ ಕ್ರಮಸಂಖ್ಯೆ ನಮೂದಿಸಬೇಕು ಎಂಬುದರ ಬಗ್ಗೆ ಸಮುದಾಯದೊಳಗೆ ಜಾಗೃತಿ ಆಗಿಲ್ಲ. ಕೆಲವು ಸಮುದಾಯಗಳಿಗೆ ಅಷ್ಟೇ ಗೊತ್ತಿದೆ. ಮೀಸಲಾತಿಯಲ್ಲಿ ಆಗಿರುವ ನ್ಯಾಯ ಸರಿಪಡಿಸಲೆಂದು ಒಳಮೀಸಲಾತಿ ಹೋರಾಟ ಶುರುವಾಗಿದ್ದು. ಎಡಬಲ ಸಮುದಾಯಗಳು ಒಗ್ಗಟ್ಟಿನಿಂದ ಕೆಲಸ ಮಾಡಿಕೊಂಡು ಬಂದಿವೆ. ಎಲ್ಲ ಸಮುದಾಯಗಳಲ್ಲೂ ಸಮನ್ವಯತೆ ಇದೆ. ಈ ಸಮೀಕ್ಷೆ ಮತ್ತು ಮೀಸಲಾತಿಯ ನಂತರ ಯಾರಲ್ಲೂ ಅಸಮಾಧಾನ, ಕೊರಗು ಉಂಟಾಗಬಾರದು. ವೈಮನಸ್ಸು ಶಾಶ್ವತವಾಗಿ ಇರಬಾರದು. ಯಾವುದೋ ಒಂದು ಸೌಲಭ್ಯಕ್ಕಾಗಿ ಭಾವನಾತ್ಮಕವಾಗಿರುವ ಸಂಬಂಧ ಕಳೆದುಕೊಳ್ಳುವ ಉದ್ದೇಶ ನಮಗೂ ಇಲ್ಲ, ಅವರಿಗೂ ಇಲ್ಲ. ಕುಟುಂಬ ಎಂದ ಮೇಲೆ ಒಂದು ಸಂದರ್ಭದಲ್ಲಿ ಅಸಮಾಧಾನ ಬರಬಹುದು. ಅದು ಶಾಶ್ವತ ಅಲ್ಲ. ಅದನ್ನು ನಿವಾರಿಸಿಕೊಂಡು ನಡೆಯುವ ಕೆಲಸ ಮಾಡಬೇಕು” ಎಂದು ಸಲಹೆ ನೀಡಿದರು.

ಇದನ್ನೂ ಓದಿ ; ದಾವಣಗೆರೆ | ಗೌತಮ ಬುದ್ಧನ ತತ್ವ, ಚಿಂತನೆಗಳ ಸ್ಮರಣೆಯೊಂದಿಗೆ ಬುದ್ಧ ಪೂರ್ಣಿಮೆ ಆಚರಣೆ.

“ಬಸವರಾಜ ಬೊಮ್ಮಾಯಿ ಅವರು ಎಲ್ಲ ಸಮುದಾಯಗಳಿಗೂ ಸಾಮಾಜಿಕ ನ್ಯಾಯ ಕೊಡಬೇಕೆನ್ನುವ ಏಕೈಕ ದೃಷ್ಟಿಯಿಂದ ಶೇ.2 ಮೀಸಲಾತಿ ಜಾಸ್ತಿ ಮಾಡಿದ್ದರು. ಯಾವ ಸಮುದಾಯವೂ ಮೀಸಲಾತಿಯಿಂದ ವಂಚಿತರಾಗಬಾರದೆಂದು ಮಾಧುಸ್ವಾಮಿ ಉಪಸಮಿತಿ ವರದಿ ಮೇರೆಗೆ ಶಿಫಾರಸು ಮಾಡಿತ್ತು. ಆ ಸಂದರ್ಭಕ್ಕೆ ತುಂಬ ಸೂಕ್ತವಾಗಿತ್ತು. ಈ ಸರ್ಕಾರ ಏನು ಮಾಡುತ್ತದೆಯೋ ಗೊತ್ತಾಗುತ್ತಿಲ್ಲ. ರಾಜಕಾರಣ ಪ್ರವೇಶ ಮಾಡಿದಾಗ ಸರಿ-ತಪ್ಪುಗಳ ಲೆಕ್ಕಾಚಾರ ಬೇರೆಯೇ ಆಗುತ್ತದೆ. ಶೇ.15 ರೊಳಗೆ ಒಳಮೀಸಲಾತಿ ಕೊಡುತ್ತದೆಯೋ, ಶೇ.17 ಒಳಮೀಸಲಾತಿ ಕೊಡುತ್ತೋ ಎಂಬುದನ್ನು ಕಾದು ನೋಡಬೇಕಿದೆ. ಏಕೆಂದರೆ ಆಯೋಗಕ್ಕೆ ಆ ಬಗ್ಗೆ ಯಾವುದೇ ಸ್ಪಷ್ಟನೆಯನ್ನೂ ಸರ್ಕಾರ ನೀಡಿಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದರು.‌

IMG 20250205 WA0034
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

SIR | ಮತ ಡಿಲೀಟ್‌ ಮಾಡಲು ಒಳಸಂಚು ಆರೋಪ : ಭಾಲ್ಕಿಯಲ್ಲಿ 32 ಜನರ ವಿರುದ್ಧ FIR

ಮತದಾರರ ಪಟ್ಟಿಯ ಸಮಗ್ರ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಯಾವುದೇ ಆಧಾರ...

ಮಂಗಳೂರು ಎಂಆರ್‌ಪಿಎಲ್ ದುರಂತ: ಮೃತ ಕಾರ್ಮಿಕನ ಕುಟುಂಬಕ್ಕೆ ₹1.20 ಕೋಟಿ ಪರಿಹಾರ ಘೋಷಣೆ

ಮಂಗಳೂರಿನ ಎಂಆರ್‌‌ಪಿಎಲ್ (MRPL) ಕಾರ್ಖಾನೆಯಲ್ಲಿ ನಡೆದ ದಾರುಣ ಅಪಘಾತದಲ್ಲಿ ಜೀವ ಕಳೆದುಕೊಂಡ...

‘ಎಫ್ಐಆರ್ ದಾಖಲಾಗುವವರೆಗೂ ಚುನಾವಣಾ ಆಯೋಗದ ಕಚೇರಿಯಿಂದ ಕದಲೋದೆ ಇಲ್ಲ’: ಪಟ್ಟು ಹಿಡಿದು ಕುಳಿತ ಸಿಎಂ

'ಎಫ್ಐಆರ್ ದಾಖಲಾಗುವವರೆಗೂ ಕದಲುವುದೇ ಇಲ್ಲ' ಎಂದು ಸ್ಪಷ್ಟವಾಗಿ ಹೇಳಿರುವ ಮುಖ್ಯಮಂತ್ರಿ ಡಿ.ಕೆ....