ಉದ್ಯೋಗದಿಂದ ವಜಾಗೊಂಡು ಸುರತ್ಕಲ್ ಬಾಳದಲ್ಲಿರುವ HPCL ಬಾರಿಸಿಟ್ಲಿಂಗ್ ಘಟಕದ ಮುಂಭಾಗ 70 ದಿನಗಳಿಂದ ಧರಣಿ ನಡೆಸುತ್ತಿರುವ ಮಹಿಳಾ ಗುತ್ತಿಗೆ ಕಾರ್ಮಿಕರೊಂದಿಗೆ “ನಾಗರಿಕ ಹೋರಾಟ ಸಮಿತಿ, ಸುರತ್ಕಲ್” ಬೆಳಕಿನ ಹಬ್ಬ ದೀಪಾವಳಿ ಆಚರಿಸಿತು.

ಹೋರಾಟ ಸಮಿತಿಯ ಪ್ರಮುಖರು ದೀಪ ಹಚ್ಚಿ ಮಹಿಳಾ ಕಾರ್ಮಿಕರಿಗೆ ಶುಭಾಶಯ ಕೋರಿ, ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು. ಜೊತೆಗೆ ಹಬ್ಬ ಆಚರಿಸಲು ಅನುಕೂಲ ಆಗುವಂತೆ ದಿನಸಿ ಸಾಮಾಗ್ರಿಯ ಕಿಟ್ ಹಾಗು ಸಣ್ಣ ಪ್ರಮಾಣದ ಹಣಕಾಸು ನೆರವು ಒದಗಿಸಿದರು. ಇದೇ ಸಂದರ್ಭ ಕಂಪೆನಿಯ ನಿರ್ದಯ ನಡವಳಿಕೆ, ಜಿಲ್ಲಾಡಳಿತದ ಮೌನವನ್ನು ಖಂಡಿಸಿದರು.
ಹೋರಾಟ ಸಮಿತಿಯ ಪ್ರಮುಖರಾದ ಮುನೀರ್ ಕಾಟಿಪಳ್ಳ, ಬಿ ಕೆ ಇಮ್ತಿಯಾಜ್, ಶ್ರೀನಾಥ್ ಕುಲಾಲ್, ಸಾಮರಸ್ಯ ಮಂಗಳೂರು ಇದರ ಮಂಜಳಾ ನಾಯಕ್, ಸಮರ್ಥ್ ಭಟ್, ಜನವಾದಿ ಮಹಿಳಾ ಸಂಘಟನೆಯ ಪ್ರಮೀಳಾ ಕೆ, ಅಸುಂತಾ ಡಿ ಸೋಜ, ಆಶಾ ಬೋಳೂರು, ಸಿಲ್ವಿಯಾ ಜೋಕಟ್ಟೆ, ಯೋಗಿತಾ, ಸಿಐಟಿಯು ನ ಬಶೀರ್ ಕಾನ, ಮೊಹಮ್ಮದ್ ಜನತಾ ಕಾಲನಿ, ಡಿವೈಎಫ್ಐ ನ ಹನೀಫ್ ಬೆಂಗ್ರೆ, ಜಮ್ಶೀರ್ ಮತ್ತಿತರರು ಉಪಸ್ಥಿತರಿದ್ದರು.