ಕಲಬುರಗಿಯ ಕೊಟನೂರ್ ಡಿ ಗ್ರಾಮದಲ್ಲಿ ಅಂಬೇಡ್ಕರ್ ಪ್ರತಿಮೆಗೆ ಅಪಮಾನ ಮಡಿರುವ ಕಿಡಿಗೇಡಿಗಳನ್ನು ಗಡಿಪಾರು ಮಾಡಬೇಕೆಂದು ಆಗ್ರಹಿಸಿ ಚಿತ್ತಾಪುರದಲ್ಲಿ ದಲಿತ ಸಂಘಟನೆಗಳ ಸಮನ್ವಯ ಸಮಿತಿ ಪ್ರತಿಭಟನೆ ನಡೆಸಿದೆ. ಟೈಯರ್ ಸುಟ್ಟು ಆಕ್ರೋಶ ವ್ಯಕ್ತಪಡಿಸಿದಿದೆ.
ಪ್ರತಿಭಟನೆಯಲ್ಲಿ ಮಾತನಾಡಿದ ಆನಂದ್ ಕಲ್ಲಕ್ ಹಾಗೂ ಮಹೇಶ ಕಾಶಿ, “ಅಂಬೇಡ್ಕರ್ ಪ್ರತಿಮೆಗೆ ಮಾಡಿರುವ ಅಪಮಾನ, ದೇಶಕ್ಕೆ ಅವಮಾನ ಮಾಡಿದಂತಾಗಿದೆ. ಅವಮಾನ ಮಾಡಿದ ಕಿಡಿಗೇಡಿಗಳನ್ನು ಕೂಡಲೇ ಬಂಧಿಸಿ ಜಿಲ್ಲೆಯಿಂದ ಗಡಿಪಾರು ಮಾಡಬೇಕು. ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಳ್ಳದಿದ್ದಲ್ಲಿ ಬೃಹತ್ ಹೋರಾಟ ನಡೆಸುತ್ತೇವೆ” ಎಂದು ಎಚ್ಚರಿಕೆ ನೀಡಿದ್ದಾರೆ.
“ರಾಜ್ಯದಲ್ಲಿರುವ ಅಂಬೇಡ್ಕರ್ ಪ್ರತಿಮೆಗಳ ಬಳಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಿ, ಪೊಲೀಸರ ನಿಯೋಜನೆ ಮಾಡಬೇಕು. ಅಪಮಾನ ಮಾಡಿರುವ ಕಿಡಿಗೇಡಿಗಳ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು” ಎಂದು ಆಗ್ರಹಿಸಿದ್ದಾರೆ.
ಪ್ರತಿಭಟನೆಯಲ್ಲಿ ದಲಿತ ಸಂಘಟನೆಗಳ ಸಮನ್ವಯ ಸಮಿತಿಯ ಮುಖಂಡ ಶ್ರೀಕಾಂತ್ ಶಿಂದೆ, ರಾಜಪ್ಪ ಹುಂಡೇಕರ್, ನಾಗೇಂದ್ರ ಬುರ್ಲಿ ಸಂಜಯ್ ಬುಳಕರ್, ಜಗನಾಥ್ ಮೂಡಬೂಳಕರ್, ಶಿವರಾಜ್ ಕಲ್ಲಕ್, ರವಿ ಸಾಗರ್ ಹೊಸಮನಿ, ಬಸವರಾಜ್ ಮುಡಬುಳ, ಗಂಗಾಧರ್, ದೇವಿದಾಸ ಔವರಸoಗ್, ಕುಶಾಲ್ ನಾಟಿಕರ್, ಶಿವು ಆರಬೋಳ, ಪರಶುರಾಮ್, ಶರಣು ಮರಗೋಳ, ಭೀಮು ಕೋಳಿಕಟ್ಟಿ, ಸಾಬ್ಬಣ್ಣ, ಬಾಬು, ಶಿವು, ಸಿದ್ದು ಓಂಕಾರ್ ಸೇರಿದಂತೆ ಅನೇಕರು ಇದ್ದರು.
ವರದಿ : ಸಂತೋಷ