ದಾವಣಗೆರೆ | ಕನ್ನಡಪರ ಸಂಘಟನೆ ಹೆಸರಲ್ಲಿ ವಂಚನೆ; ₹5 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟ ದುಷ್ಕರ್ಮಿಗಳು

Date:

ಕನ್ನಡ ಪರ ಸಂಘಟನೆಗಳು, ಸಾಮಾಜಿಕ ಕಾರ್ಯಕರ್ತರೆಂದು ಹೇಳಿಕೊಂಡು ಕಾನೂನು ಬದ್ಧವಾಗಿ ನಡೆಸುತ್ತಿರುವ ನಮ್ಮ ಶಾಲೆಯ ವಿರುದ್ಧ ವಿನಾಕಾರಣ ಶಿಕ್ಷಣ ಇಲಾಖೆಗೆ ದೂರು ನೀಡಿದ್ದಲ್ಲದೇ, ದೂರು ಹಿಂಪಡೆಯಲು ₹5 ಲಕ್ಷ ಹಣಕ್ಕೆ ಬೇಡಿಕೆ ಇಟ್ಟು ನನ್ನ ಬಳಿ ಇದ್ದ ಹಣವನ್ನು ದೋಚಿ, ಕೊಲೆ ಬೆದರಿಕೆ ಹಾಕಿರುವ ಕಿಡಿಗೇಡಿಗಳ ವಿರುದ್ಧ ಪೊಲೀಸ್ ಇಲಾಖೆ ಕಾನೂನು ಕ್ರಮ ಕೈಗೊಂಡು ಈ ಕೂಡಲೇ ಬಂಧಿಸಬೇಕು ಎಂದು ಗ್ಲೋಬಲ್ ಪಬ್ಲಿಕ್ ಎಜುಕೇಶನ್ ಅಂಡ್ ವೆಲ್ಫೇರ್‌ ಫೌಂಡೇಶನ್ ಸೈಯದ್ ಅಕ್ಟರ್ ಅಲಿ ಒತ್ತಾಯಿಸಿದರು.

ದಾವಣಗೆರೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, “ನಮ್ಮ ಶಾಲೆಯನ್ನು ಕಾನೂನು ಬದ್ಧವಾಗಿ ನಡೆಸಿಕೊಂಡು ಬರಲಾಗುತ್ತಿದೆ. 350ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಆದರೆ, ವಿನಾಕಾರಣ ಹಣಕ್ಕಾಗಿ ಶಿಕ್ಷಣ ಇಲಾಖೆಗೆ ಆಧಾರ ರಹಿತ ಸುಳ್ಳು ದೂರನ್ನು ನೀಡಿ ಕಿರುಕುಳ ನೀಡುತ್ತಿದ್ದಾರೆ” ಎಂದು ಆರೋಪಿಸಿದರು.

“ದೂರು ನೀಡಿದ ವ್ಯಕ್ತಿ ಈ ಕುರಿತು ಮಾತುಕತೆ ನಡೆಸಲು ಬಡಾವಣೆ ಪೊಲೀಸ್ ಠಾಣೆಯ ಸಮೀಪದ ಪ್ರವಾಸಿ ಮಂದಿರದ ಬಳಿ ಕರೆಸಿ, ನಾವು ನೀಡಿರುವ ದೂರನ್ನು ಹಿಂಪಡೆಯಬೇಕಾದರೆ ₹5 ಲಕ್ಷ ನೀಡಬೇಕು. ಇಲ್ಲವಾದರೆ ನಿಮ್ಮ ಶಾಲೆಯನ್ನು ಬಂದ್ ಮಾಡಿಸುತ್ತೇವೆಂದು ದಬ್ಬಾಳಿಕೆ ನಡೆಸಿದ್ದಾರೆ” ಎಂದು ಹೇಳಿದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಈ ಸುದ್ದಿ ಓದಿದ್ದೀರಾ? ಸಚಿವ ಖರ್ಗೆ ಕ್ಷೇತ್ರದಲ್ಲಿ ಮಧ್ಯಾಹ್ನದ ಬಿಸಿಯೂಟಕ್ಕಾಗಿ ದಿನನಿತ್ಯ 2 ಕಿ.ಮೀ ನಡೆಯುವ ಪುಟ್ಟ ಮಕ್ಕಳು

“ಇದೇ ವೇಳೆ ನನ್ನ ಜೇಬಿನಲ್ಲಿ ಇದ್ದ ಹಣವನ್ನು ಬಲವಂತವಾಗಿ ಕಿತ್ತುಕೊಂಡಿದ್ದು, ಈ ಬಗ್ಗೆ ಯಾರಿಗಾದರೂ ಹೇಳಿದರೆ ನಿನ್ನನ್ನು ಜೀವ ಸಹಿತ ಬಿಡುವುದಿಲ್ಲ. ನಮಗೆ ರಾಜಕೀಯ ಹಿನ್ನೆಲೆ ಇದೆ. ನೀವು ಹಣ ಕೊಡಲೇಬೇಕೆಂದು ಮಾನಸಿಕವಾಗಿ ಒತ್ತಡ ಹೇರುತ್ತಿದ್ದಾರೆ. ನನಗೆ ಜೀವ ಭಯ ಕಾಡುತ್ತಿದೆ” ಎಂದು ಅವಲತ್ತುಕೊಂಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಕಾರ್ಯದರ್ಶಿ ಅಸಾದುಲ್ಲಾ, ಮಹಮ್ಮದ್ ರಸೂಲ್, ಶಾಹೀದ್ ಆಜಂ, ವಾಹೀದಾ ಬಾಬು ಇದ್ದರು.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತುಮಕೂರು | ಸೇವೆ ಮರೆತ ಶಿಕ್ಷಣ ಕ್ಷೇತ್ರ ಉದ್ಯಮವಾಗಿದೆ: ಕಸಾಪ ಜಿಲ್ಲಾಧ್ಯಕ್ಷ ಸಿದ್ಧಲಿಂಗಪ್ಪ

ಕರ್ನಾಟಕ ಎಂದು ನಾಮಕರಣಗೊಂಡು ಐವತ್ತು ವರ್ಷ ಸಂದ ಈ ಸುವರ್ಣ ಸಂದರ್ಭದಲ್ಲಿ...

ರಾಯಚೂರು | ಶಿವಶರಣ ಹಡಪದ ಅಪ್ಪಣ್ಣನವರ ತತ್ವ ಆದರ್ಶಗಳು ಅನನ್ಯ: ದುರುಗಣ್ಣ

ಜಗಜ್ಯೋತಿ ಬಸವಣ್ಣನವರ ಸಮಕಾಲೀನರಾದ ಶಿವಶರಣ ಹಡಪದ ಅಪ್ಪಣ್ಣನವರ ತತ್ವ ಆದರ್ಶಗಳು ಇಂದಿಗೂ...

ಶಿರೂರು ಗುಡ್ಡ ದುರಂತ | 8 ಮೀಟರ್ ಅಡಿಯಲ್ಲಿ ಲೋಹದ ಸಾಧನ ಪತ್ತೆ; ಲಾರಿಯಾಗಿರುವ ಶಂಕೆ?

ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರಿನಲ್ಲಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ...

ಚಿತ್ರದುರ್ಗ | ಅಸಮಾನತೆ ಹೋಗಲಾಡಿಸುವುದೇ ಶೋಷಿತ ಸಮುದಾಯಗಳ ಏಳಿಗೆಗೆ ಪರಿಹಾರ: ಸಿಎಂ ಸಿದ್ದರಾಮಯ್ಯ

ಜಾತಿ ವ್ಯವಸ್ಥೆ ದೇವರಿಂದ ಸೃಷ್ಟಿಯಾಗಿದ್ದಲ್ಲ. ಸ್ವಾರ್ಥ ಮನುಷ್ಯನ ಸೃಷ್ಟಿ, ಅಸಮಾನತೆ ಹೋಗಲಾಡಿಸದೆ...