ಪಂಚ ರಾಜ್ಯಗಳ ಎಕ್ಸಿಟ್ ಪೋಲ್: ತೆಲಂಗಾಣ, ಮಧ್ಯಪ್ರದೇಶ, ಛತ್ತೀಸ್‌ಗಢದಲ್ಲಿ ಕಾಂಗ್ರೆಸ್‌ಗೆ ಅಧಿಕಾರ ಸಾಧ್ಯತೆ

Date:

ಐದು ರಾಜ್ಯಗಳ ಮತದಾನ ಮುಕ್ತಾಯವಾಗಿದ್ದು ವಿವಿಧ ಸಂಸ್ಥೆಗಳ ಚುನಾವಣೋತ್ತರ ಸಮೀಕ್ಷೆಯ(ಎಕ್ಸಿಟ್ ಪೋಲ್) ಪ್ರಕಾರ ಪಂಚ ರಾಜ್ಯಗಳಲ್ಲಿ 3 ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ಸಮೀಕ್ಷೆಯ ವರದಿಗಳು ತಿಳಿಸಿವೆ.

ತೆಲಂಗಾಣದಲ್ಲಿ ಕಳೆದ ಎರಡು ಅವಧಿಗಳಿಂದ ಅಧಿಕಾರದಲ್ಲಿದ್ದ ಬಿಆರ್‌ಎಸ್‌ಗಿಂತ ಕಾಂಗ್ರೆಸ್ ಅತಿ ಹೆಚ್ಚು ಸ್ಥಾನಗಳೊಂದಿಗೆ ಜಯಗಳಿಸಲಿದೆ ಎಂದು ಬಹುತೇಕ ಸಮೀಕ್ಷೆಗಳು ಭವಿಷ್ಯ ನುಡಿದಿವೆ.

ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಈ ಬಾರಿ ಗೆಲುವು ಸಾಧಿಸಲಿದ್ದು, ಛತ್ತೀಸ್‌ಗಢದಲ್ಲಿ ‘ಕೈ’ಗೆ ಮತ್ತೆ ಅಧಿಕಾರ ಸಿಗಲಿದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಕಾಂಗ್ರೆಸ್ ಅಧಿಕಾರದಲ್ಲಿರುವ ರಾಜಸ್ಥಾನದಲ್ಲಿ ಜಿದ್ದಾಜಿದ್ದಿ ಹೋರಾಟವಿದ್ದು, ಕಾಂಗ್ರೆಸ್ ಗೆಲುವಿನ ಸಮೀಪ ಬರಲಿದೆ ಎಂದು ಕೆಲವು ಸಮೀಕ್ಷೆಗಳು ಹೇಳಿದ್ದರೆ, ಇನ್ನೂ ಕೆಲವು ಸಮೀಕ್ಷಾ ವರದಿಗಳು ಬಿಜೆಪಿ ಜಯಗಳಿಸಲಿದೆ ಎಂದು ತಿಳಿಸಿವೆ.

ಈ ಸುದ್ದಿ ಓದಿದ್ದೀರಾ? ಪ್ರೊ. ಅರ್ನಾಲ್ಡ್ ಡಿಕ್ಸ್ : ಉತ್ತರಾಖಂಡ ಸುರಂಗ ರಕ್ಷಣಾ ಕಾರ್ಯಾಚರಣೆಯ ಹಿಂದಿನ ಶಕ್ತಿ

ಈಶಾನ್ಯ ರಾಜ್ಯ ಮಿಜೋರಾಂನಲ್ಲಿ ಎಂಎನ್‌ಎಫ್‌ ಹಾಗೂ ಜೆಡ್‌ಪಿಎಂ ನಡುವೆ ಪೈಪೋಟಿಯಿದ್ದು, ಕಾಂಗ್ರೆಸ್ ಕೂಡ ನಿರ್ಣಾಯಕ ಪಾತ್ರ ವಹಿಸುವ ಸಾಧ್ಯತೆಯಿದೆ ಎಂದು ಸಮೀಕ್ಷಾ ವರದಿಗಳು ಹೇಳಿವೆ.

ಛತ್ತೀಸ್‌ಗಢದ 90 ವಿಧಾನಸಭಾ ಕ್ಷೇತ್ರಗಳಲ್ಲಿ ಇಂಡಿಯಾ ಟುಡೆ, ಟುಡೇಸ್ ಚಾಣಕ್ಯ, ಜನ್‌ ಕಿಬಾತ್‌ ಒಳಗೊಂಡು ಬಹುತೇಕ ಸಮೀಕ್ಷೆಗಳು ಕಾಂಗ್ರೆಸ್‌ 45 ರಿಂದ 66 ಸ್ಥಾನಗಳವರೆಗೆ ಗೆಲುವು ಸಾಧಿಸಲಿದೆ ಎಂದು ಹೇಳಿದ್ದರೆ, ಬಿಜೆಪಿ 30 ರಿಂದ 48 ಸ್ಥಾನ ಜಯಗಳಿಸಬಹುದೆಂದು ತಿಳಿಸಿವೆ.

ರಾಜಸ್ಥಾನದ 200 ಕ್ಷೇತ್ರಗಳ ಪೈಕಿ ಇಂಡಿಯಾ ಟುಡೆ ಸಮೀಕ್ಷೆಯ ಪ್ರಕಾರ ಕಾಂಗ್ರೆಸ್ 96, ಬಿಜೆಪಿ 90 ಸ್ಥಾನ ಗಳಿಸಿದರೆ, ಟೈಮ್ಸ್ ನೌ ಪ್ರಕಾರ ಕಾಂಗ್ರೆಸ್ 56 ರಿಂದ 72, ಬಿಜೆಪಿ 108 ರಿಂದ 128 ಹಾಗೂ ಪಿ ಮಾರ್ಕ್ ಪ್ರಕಾರ ಕಾಂಗ್ರೆಸ್ 69 ರಿಂದ 91 ಹಾಗೂ ಬಿಜೆಪಿ 105 ರಿಂದ 125 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ.

ತೆಲಂಗಾಣ
Telangana poll

ತೆಲಂಗಾಣದ 119 ಕ್ಷೇತ್ರಗಳಲ್ಲಿ ಸಿಎನ್‌ಎನ್‌ ನ್ಯೂಸ್‌ 18 ಪ್ರಕಾರ ಕಾಂಗ್ರೆಸ್ 56, ಬಿಆರ್‌ಎಸ್ 48 ಸ್ಥಾನಗಳಲ್ಲಿ ಗೆದ್ದರೆ, ಟುಡೇಸ್‌ ಚಾಣಾಕ್ಯ ಸಮೀಕ್ಷೆಯಂತೆ ಕಾಂಗ್ರೆಸ್ 71, ಬಿಆರ್‌ಎಸ್ 33 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ ಎಕ್ಸಿಟ್ ಪೋಲ್ ಭವಿಷ್ಯ ನುಡಿದಿವೆ.

ಮಧ್ಯಪ್ರದೇಶದ 230 ಕ್ಷೇತ್ರಗಳಲ್ಲಿ ಜನ್‌ ಕೀಬಾತ್‌ ಪ್ರಕಾರ ಕಾಂಗ್ರೆಸ್ 125, ಬಿಜೆಪಿ 100,  ಪೋಲ್‌ಸ್ಟ್ರಾಟ್ ಪ್ರಕಾರ ಕಾಂಗ್ರೆಸ್ 121, ಬಿಜೆಪಿ 116 ಕ್ಷೇತ್ರಗಳಲ್ಲಿ  ಗೆಲುವು ಸಾಧಿಸಲಿದ್ದು, ಫಲಿತಾಂಶ ತೀವ್ರ ಪೈಪೋಟಿಯಿಂದ ಕೂಡಿರಲಿದೆ ಎಂದು ತಿಳಿಸಿವೆ.

ಮಿಜೋರಾಂನ ಒಟ್ಟು 40 ಕ್ಷೇತ್ರಗಳಲ್ಲಿ ಎಂಎನ್‌ಎಫ್‌ ಹಾಗೂ ಜೆಡ್‌ಪಿಎಂ ನಡುವೆ ತೀವ್ರ ಸ್ಪರ್ಧೆಯಿದೆ ಎಂದು ಬಹುತೇಕ ಎಲ್ಲ ಸಮೀಕ್ಷೆ ತಿಳಿಸಿವೆ. ಈ ರಾಜ್ಯದಲ್ಲಿ ಅತಂತ್ರ ವಿಧಾನಸಭೆ ಸೃಷ್ಟಿಯಾಗುವ ಸಾಧ್ಯತೆಯಿದ್ದು  ಕಾಂಗ್ರೆಸ್ ನಿರ್ಣಾಯಕ ಪಾತ್ರ ವಹಿಸಲಿವೆ ಎಂದು ಕೂಡ ಎಕ್ಸಿಟ್‌ ಪೋಲ್‌ಗಳು ಭವಿಷ್ಯ ನುಡಿದಿವೆ.

ಇವೆಲ್ಲ ವರದಿಗಳ ಸತ್ಯಾಸತ್ಯತೆ ಡಿ. 3 ರಂದು ಭಾನುವಾರ ಮಧ್ಯಾಹ್ನ 3 ಗಂಟೆ ಹೊತ್ತಿಗೆ ಚುನಾವಣಾ ಎಣಿಕೆ ಮೂಲಕ ಬಹಿರಂಗಗೊಳ್ಳಲಿದೆ.

ಮಧ್ಯಪ್ರದೇಶದಲ್ಲಿ 230 ಸ್ಥಾನಗಳಿಗೆ ನವೆಂಬರ್‌ 17 ರಂದು ಒಂದೇ ಹಂತದಲ್ಲಿ ಚುನಾವಣೆ ನಡೆದಿದ್ದರೆ, ರಾಜಸ್ಥಾನದ 199 ಸ್ಥಾನಗಳಿಗೆ ನ.25, ಛತ್ತೀಸ್‌ಗಢದಲ್ಲಿ 90 ಸ್ಥಾನಗಳಿ ನ.7 ಹಾಗೂ ನ.17ರಂದು ಎರಡು ಹಂತಗಳು, ತೆಲಂಗಾಣದಲ್ಲಿ ನ.30 ಹಾಗೂ ಮಿಜೋರಾಂನಲ್ಲಿ ನ.7 ರಂದು ಮತದಾನ ನಡೆದಿತ್ತು.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕಾವಡ್ ಯಾತ್ರೆ ವಿವಾದ | ಸುಪ್ರೀಂ ಕೋರ್ಟ್ ಕದ ತಟ್ಟಿದ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ

ಕಾವಡ್ ಯಾತ್ರೆಯ ಮಾರ್ಗದಲ್ಲಿರುವ ತಿನಿಸುಗಳ ಸ್ಟಾಲ್‌ಗಳ ಮಾಲೀಕರು ಸ್ಟಾಲ್‌ನಲ್ಲಿ ತಮ್ಮ ಹೆಸರನ್ನು...

ಉಮರ್ ಖಲೀದ್ ಜಾಮೀನು ಅರ್ಜಿ: ವಿಚಾರಣೆಯಿಂದ ಹಿಂದೆ ಸರಿದ ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ

ದೆಹಲಿ ಗಲಭೆಗಳ ಪಿತೂರಿ ಪ್ರಕರಣಗಳ ಆರೋಪಿಯಾಗಿರುವ ಜೆಎನ್‌ಯು ಮಾಜಿ ವಿದ್ಯಾರ್ಥಿ ಉಮರ್‌...

ಕನ್ನಡಿಗರ ಕ್ಷಮೆ ಕೋರಿದ ಫೋನ್‌ಪೇ ಸಿಇಒ ಸಮೀರ್ ನಿಗಮ್

ಖಾಸಗಿ ಕಂಪನಿಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಕಲ್ಪಿಸುವ ಸಂಬಂಧ ರಾಜ್ಯ ಸರ್ಕಾರ ರೂಪಿಸಿದ್ದ...