ದಾವಣಗೆರೆ | ಅಮೆರಿಕ ಕೃಷಿ ವ್ಯಾಪಾರ ಒಪ್ಪಂದದ ಪ್ರತಿ ಸುಟ್ಟು ರೈತ ಸಂಘ ವಿರೋಧ

Date:

ಕೇಂದ್ರ ಸರ್ಕಾರ ಅಮೆರಿಕದೊಂದಿಗೆ ಕೃಷಿ ವ್ಯಾಪಾರ ಒಪ್ಪಂದ ಮಾಡಿಕೊಂಡಿರುವುದನ್ನು ವಿರೋಧಿಸಿ ಕರ್ನಾಟಕ ರಾಜ್ಯ ರೈತ ಸಂಘದ ದಾವಣಗೆರೆ ಜಿಲ್ಲಾ ಸಮಿತಿ ಮುಖಂಡರು ಜಯದೇವ ಸರ್ಕಲ್‌ನಲ್ಲಿ ಒಪ್ಪಂದದ ಪ್ರತಿಯನ್ನು ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು.

- Advertisement -

ರೈತ ಸಂಘದ ಮುಖಂಡ ಬಲ್ಲೂರ್ ರವಿಕುಮಾರ್ ಮಾತನಾಡಿ, “ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೊಸದಾಗಿ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಮಾಡಿರುವುದು ಆಘಾತಕಾರಿ ವಿಚಾರವಾಗಿದೆ. ಈ ಒಪ್ಪಂದ ರೈತವರ್ಗದ ಬೆನ್ನು ಮೂಳೆ ಮುರಿಯುವ ಶಾಸನವಾಗಿದ್ದು ದೇಶವಾಸಿಗಳನ್ನು ಅಪಾಯಕಾರಿ ಆಹಾರ ಸಂಸ್ಕೃತಿಗೆ ಒಗ್ಗಿಸಲು ಹೊರಟಿರುವ ರೈತರ ಪಾಲಿನ ಮರಣ ಶಾಸನವಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಹೊಸ ಓದು | ಬಿ. ಚಂದ್ರೇಗೌಡರ ‘ಕಾಳ ಮಾವನ...

ಬಿ. ಚಂದ್ರೇಗೌಡರ 'ಬಯಲು ಸೀಮೆಯ ಕಟ್ಟೆಪುರಾಣ' ಅಂಕಣ ಬರಹದಿಂದ ಎದ್ದುಬಂದ ಕಾಳಮಾವ ಈಗ ತನ್ನ ಕಡೇ ದಿನಗಳಲ್ಲಿದ್ದಾರೆ. ಅವರು ಕಣ್ಣುಮುಚ್ಚುವ, ಕಾಲುಮಡಚುವ ದೃಶ್ಯಗಳು ಭಾರತದ ಆತ್ಮಸಾಕ್ಷಿಯ ಅಂತ್ಯಸಂಸ್ಕಾರವನ್ನು ಸಂಕೇತಿಸುವಂತಿವೆ. ನಮ್ಮ ನೆಲದ ನಾಲಿಗೆನಿಷ್ಠೆ...

ಬ್ರಿಟಿಷ್ ಕಾಲದ ʼಗುಲಾಮಗಿರಿʼ ಕಾನೂನುಗಳೇ ಇಂದಿನ ಪೊಲೀಸ್‌ ವ್ಯವಸ್ಥೆಯ...

ಸ್ವಾತಂತ್ರ್ಯ ಬಂದು ದಶಕಗಳೇ ಕಳೆದಿದ್ದರೂ, ನಾವಿನ್ನೂ ಬ್ರಿಟಿಷರು ಭಾರತೀಯರನ್ನು ದಮನ ಮಾಡಲು ರೂಪಿಸಿದ 1861ರ ಪೊಲೀಸ್ ಕಾಯಿದೆಯ ನೆರಳಿನಲ್ಲೇ ಬದುಕುತ್ತಿದ್ದೇವೆಯೇ? ಖಾಕಿ ಪಡೆಯನ್ನು 'ಪ್ರಜೆಗಳ ರಕ್ಷಕ'ನಾಗಿಸಬೇಕಿದ್ದ ವ್ಯವಸ್ಥೆ, ಇಂದಿಗೂ ರಾಜಕಾರಣಿಗಳ ಕೈಗೊಂಬೆಯಾಗಿ ಉಳಿದುಕೊಳ್ಳಲು...

ಯಾರು ಹಿತವರು ಈ ಇಬ್ಬರೊಳಗೆ? ನೇಹಾ ಬೋರಾ ಅಭಿಜಿತ್...

“ಹೋಲಿಕೆ ಬೇಡ, ಒಗ್ಗಟ್ಟು ಬೇಕು. ನಾವೆಲ್ಲರೂ ಒಟ್ಟಾಗಿ ಚುನಾವಣಾ ಆಯೋಗದ ಅಕ್ರಮಗಳ ವಿರುದ್ಧ ಹೋರಾಡಬೇಕು” ಎಂದು ನೇಹಾ ಬರೆದರೆ, ಅದಕ್ಕೆ ಅಭಿಜೀತ್ ಉತ್ತರ- “ಇಂಕ್ವಿಲಾಬ್ ಜಿಂದಾಬಾದ್” ನೇಹಾ ಬೋರಾ ಮತ್ತು ಅಭಿಜಿತ್ ದೀಪ್ಕೆ ನಡುವೆ...

“ಅಮೇರಿಕಾದಿಂದ ಆಮದಾಗುವ ಆಹಾರ ಉತ್ಪನ್ನಗಳು ಹಣ್ಣುಗಳು ಧಾನ್ಯಗಳ ಮೇಲಿನ ತೆರಿಗೆ ಸಂಪೂರ್ಣ ಭಾಗಶಃ ತೆಗೆದು ಹಾಕುವುದರಿಂದ ಭಾರತೀಯ ಮಾರುಕಟ್ಟೆಯಲ್ಲಿ ಅಮೆರಿಕಾದ ಉತ್ಪನ್ನಗಳು ಪ್ರವೇಶಿಸಿ ಸ್ಥಳೀಯ ರೈತರ ಬೆಲೆಗಳು ಕುಸಿಯುವ ಭಯ ಎದುರಾಗಿದೆ” ಎಂದು ಆತಂಕ ವ್ಯಕ್ತಪಡಿಸಿದರು.

“ಈ ಒಪ್ಪಂದವನ್ನು ನಾವು ಒಪ್ಪಿದ್ದೇ ಆದಲ್ಲಿ ಭಾರತ ದೇಶದ ಶೇ. 65 ರಷ್ಟಿರುವ ರೈತರು ಬೆಳೆಯುವ ಬೆಳೆಗಳಿಗೆ, ಹಾಲಿನ ಉತ್ಪನ್ನಗಳು, ತರಕಾರಿ ಹಣ್ಣುಗಳಿಗೆ ವೈಜ್ಞಾನಿಕ ಬೆಲೆ ಸಿಗುವುದಿಲ್ಲ.ಇದನ್ನು ವಿರೋಧಿಸಿ ಬೇರು ಮಟ್ಟದಲ್ಲಿಯೇ ಹೊಸಕಿ ಹಾಕಬೇಕಿದೆ” ಎಂದರು.

ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಕೋರ್ಟ್ ಗೆ ಬಾಂಬ್ ಬೆದರಿಕೆ ಸಂದೇಶ; ಪೊಲೀಸ್ ತನಿಖೆ ಬಳಿಕ ಕಲಾಪ ಆರಂಭ

ರಾಜ್ಯ ಕಾರ್ಯದರ್ಶಿ ಪೂಜಾರ್ ಅಂಜಿನಪ್ಪ, ಜಯನಾಯ್ಕ್, ಸೋಮಗೊಂಡು ಪ್ರತಾಪ್, ನಾಗರಕಟ್ಟೆ ಜೈನಾಯ್ಕ, ವಿ.ಎಚ್ ಸೋಮಗುಂದ ಇತರರು ಇದ್ದರು.

IMG 20250205 WA0034
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮುಂದಿನ 4 ದಿನ ರಾಜ್ಯದ 21 ಜಿಲ್ಲೆಗಳಲ್ಲಿ ಮಳೆ ಅಬ್ಬರ: ಹವಾಮಾನ ಇಲಾಖೆ

ರಾಜ್ಯದಲ್ಲಿ ಮುಂದಿನ ನಾಲ್ಕು ದಿನಗಳ ಕಾಲ ಒಟ್ಟು 21 ಜಿಲ್ಲೆಗಳಲ್ಲಿ ಹಗುರದಿಂದ...

ದಾವಣಗೆರೆ | ಕೇಳಿದ್ದನ್ನು ಕೊಡುವ ಏಕೈಕ ಕಾಮಧೇನು ಪುಸ್ತಕ: ಡಾ. ಮಹಾಂತೇಶ ಪಾಟೀಲ

"ಅವಮಾನ ಕೀಳರಿಮೆ ಸಂಕೋಚ ಸ್ವಭಾವ ಎಲ್ಲವನ್ನು ನೀಗುವ ಶಕ್ತಿ ಪುಸ್ತಕಗಳಲ್ಲಿದೆ. ಜಗತ್ತಿಗೆ...

ಮುಂದಿನ 5 ದಿನ ರಾಜ್ಯದ 18 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ: ಹವಾಮಾನ ಇಲಾಖೆ ಮನ್ಸೂಚನೆ

ರಾಜ್ಯದಲ್ಲಿ ನೈಋತ್ಯ ಮುಂಗಾರು ಹವಾಮಾನದ ಪ್ರಭಾವ ಮುಂದುವರಿದಿದ್ದು, ಮುಂದಿನ 5 ದಿನಗಳ...

ಚಿತ್ರದುರ್ಗ| 30ವರ್ಷದ ಹೋರಾಟದಿಂದ ಭದ್ರಾ ಮೇಲ್ದಂಡೆ ನೀರು: ಪಂಡಿತಾರಾಧ್ಯ ಶ್ರೀ ಅಭಿಮತ

30 ವರ್ಷಗಳ ಸುದೀರ್ಘ ಹೋರಾಟಕ್ಕೆ ಫಲವಾಗಿಭದ್ರಾ ಮೇಲ್ದಂಡೆ ನೀರು ಹೊಸದುರ್ಗ– ಹೊಳಲ್ಕೆರೆಗೆ...