ಧಾರವಾಡ | ಗ್ರಂಥಾಲಯದಲ್ಲಿ ಎಐ ಬಳಕೆ ಇತಿ-ಮಿತಿ ಇರಲಿ: ವಿಶ್ರಾಂತ ಕುಲಪತಿ ಪ್ರೊ. ಬಿ.ಡಿ.ಕುಂಬಾರ

Date:

“ಗ್ರಂಥಾಲಯದಲ್ಲಿ ಎಐ ಅಳವಡಿಕೆ ಮಾಡಿಕೊಳ್ಳುವದು ಒಳ್ಳೆಯದು. ಆದರೆ ಇದು ಮನುಷ್ಯನ ಸೃಜನಶೀಲತೆ ಮತ್ತು ಚಿಂತನಾಶಕ್ತಿಯನ್ನು ಕುಂಠಿತಗೊಳಿಸುತ್ತದೆ. ಆದ್ದರಿಂದ ಇದರ ಬಳಕೆಯ ಇತಿ-ಮಿತಿ ಅರಿತುಕೊಂಡು ಉಪಯೋಗಿಸಿಕೊಳ್ಳಬೇಕು” ಎಂದು ದಾವಣಗೆರೆ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ. ಬಿ.ಡಿ. ಕುಂಬಾರ ಅಭಿಪ್ರಾಯಪಟ್ಟರು.

- Advertisement -

ಧಾರವಾಡ ಪಟ್ಟಣದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಕವಿಸಂ ಆಯೋಜಿಸಿದ್ದ ಕರ್ನಾಟಕ ರಾಜ್ಯ ಗ್ರಂಥಪಾಲಕರ 3ನೇ ಸಮ್ಮೇಳನದಲ್ಲಿ ಸಮಾರೋಪದಲ್ಲಿ ಅವರು ಮಾತನಾಡಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

History Repeats | ರೋಮ್‌ ಉರಿಯುತ್ತಿದ್ದಾಗ ಪಿಟೀಲು ನುಡಿಸಿದ...

ದೇಶದ ಪ್ರಜಾಪ್ರಭುತ್ವದ ಆಧಾರಸ್ತಂಭಗಳು ಒಂದೊಂದಾಗಿ ಕುಸಿಯುತ್ತಾ, ಚುನಾವಣಾ ವ್ಯವಸ್ಥೆಯೇ ಅಕ್ರಮ ಎಸಗುತ್ತಿರುವಾಗ, ನಿರುದ್ಯೋಗ-ಬೆಲೆ ಏರಿಕೆಯ ಭಾರದಿಂದ ಜನ ಹೈರಾಣಾಗಿರುವಾಗ ಭಾರತದ ಪ್ರಧಾನಿ ಭಜನೆ ಮಾಡುತ್ತಿದ್ದಾರೆ. ರೋಂ ಹೊತ್ತಿ ಉರಿಯುತ್ತಿದ್ದಾಗ ನೀರೋ ಪಿಟೀಲು...

ಅಪರಾಧಿಗಳ ಪರ ಬಿ ಸಿ ರೋಡ್ ಚಲೋ: ಎಂದಿನಂತೆ...

ಕೊಲೆಯಂತಹ ಗಂಭೀರ ಅಪರಾಧ ಎಸಗಿದ ಆರೋಪ ಹೊತ್ತವರ ಪರವಾಗಿ ಸಂಘಪರಿವಾರ ಬೀದಿಗಿಳಿಯುತ್ತಿರುವುದು ಇದೇ ಮೊದಲೇನಲ್ಲ. ಕರಾವಳಿಯ ಜನತೆ ಇಂತಹ ಪ್ರಚೋದನಾತ್ಮಕ ನಡೆಗಳನ್ನು ತಿರಸ್ಕರಿಸಿ, ಸತ್ಯ ಮತ್ತು ನ್ಯಾಯದ ಪರವಾಗಿ ನಿಲ್ಲಬೇಕಾಗಿದೆ. ಕರಾವಳಿ ಕರ್ನಾಟಕವಾಗಲಿ...

14 ಆಕ್ಷೇಪಗಳಿಂದ SIT ಬೇಡಿಕೆಯವರೆಗೆ: ಗ್ಯಾನೇಶ್‌ ಕುಮಾರ್ ಸುತ್ತ...

ಚುನಾವಣಾ ಆಯೋಗದೊಳಗಿನ ಭಿನ್ನಾಭಿಪ್ರಾಯಗಳು ಬಹಿರಂಗಗೊಂಡ ಬೆನ್ನಲ್ಲೇ ಎಸ್‌ಐಆರ್‌ ವಿವಾದ ಹೊಸ ತಿರುವು ಪಡೆದುಕೊಂಡಿದೆ. ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್‌ ಕುಮಾರ್ ಅವರ ನಿರ್ಧಾರಗಳ ಕುರಿತು ಚುನಾವಣಾ ಆಯುಕ್ತರಾದ ಸುಖಬೀರ್‌ ಸಿಂಗ್‌ ಸಂಧು ಮತ್ತು...

“ಎಐ ಎಂಬುವದು ಹೊಸ ಪರಿಕಲ್ಪನೆಯಲ್ಲ. ಇದು ರೂಪಾಂತರಗೊಳ್ಳುತ್ತ ಹೊಸ ಹೊಸ ರೂಪ ಪಡೆಯುತ್ತಿದೆ. ಇದರಲ್ಲಿ ಒಳಿತು, ಕೆಡಕು ಎರಡೂ ಇದೆ. ಇದನ್ನು ಸರಿಯಾಗಿ ಬಳಸಿಕೊಂಡು, ಸೃಜನಶೀಲತೆ ಹೆಚ್ಚಿಸಿಕೊಂಡು ಉತ್ತಮ ಸೇವೆ ನೀಡಬೇಕು. ಇದರ ಬಳಕೆ ಮಾಡುವಾಗ ಎಚ್ಚರಿಕೆ ವಹಿಸಬೇಕು” ಎಂದರು. 

“ರಾಜ್ಯದಲ್ಲಿ ಗ್ರಂಥಪಾಲಕರ ನೇಮಕಾತಿ ನೆನೆಗುದಿಗೆ ಬಿದ್ದಿದೆ. ಒಂದು ಕಾಲದಲ್ಲಿ ಕ.ವಿ.ವಿ. ಗ್ರಂಥಾಲಯದಲ್ಲಿ 35ಜನ ಗ್ರಂಥಪಾಲಕರು ಸೇವೆ ಸಲ್ಲಿಸಿದ್ದರು. ಅಲ್ಲಿ ಈಗ ಕೇವಲ ಇಬ್ಬರು ಮಾತ್ರ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದು ರಾಜ್ಯದಾದ್ಯಂತ ಇರುವ ಪರಿಸ್ಥಿತಿ. ಸರಕಾರ ರಾಜ್ಯದಲ್ಲಿರುವ ಎಲ್ಲ ಹಂತದ ಗ್ರಂಥಾಲಯಗಳನ್ನು ಅಭಿವೃದ್ಧಿಪಡಿಸಬೇಕು. ಗ್ರಂಥಾಲಯ ಮಕ್ಕಳ ಭವಿಷ್ಯವನ್ನು ರೂಪಿಸುವ ಕೇಂದ್ರಗಳು” ಎಂದರು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಮಾಜಿ ಸಂಸದ, ಚಿಂತಕ ಪ್ರೊ. ಆಯ್.ಜಿ. ಸನದಿ ಮಾತನಾಡಿ, “ನಮ್ಮನ್ನು ಮನುಷ್ಯರನ್ನಾಗಿ ಮಾಡಿದ್ದು ನಮ್ಮ ಗುರುಗಳು, ಗ್ರಂಥಾಲಯ ಮತ್ತು ಗ್ರಂಥಪಾಲಕರು. ಪುಸ್ತಕ ಓದಿದ ಜ್ಞಾನ ನಮ್ಮ ಮನಸ್ಸಿನಲ್ಲಿ ಬಹಳ ದಿನಗಳವರೆಗೆ ಉಳಿಯುತ್ತದೆ. ಮೊಬೈಲ್, ಇಂಟರ್‌ನೆಟ್‌ನಲ್ಲಿ ನೋಡಿದ್ದು ಕ್ಷಣಾರ್ಧದಲ್ಲಿ ಮರೆತುಹೋಗುತ್ತದೆ. ನಮ್ಮ ಗುರುಗಳು ನಮಗೆ ಓದುವ ಅಭಿರುಚಿ ಹೆಚ್ಚಿಸುತ್ತಿದ್ದರು. ಶಾಸಕರ ಅನುದಾನಗಳಲ್ಲಿ ತಾಲೂಕಿನಲ್ಲಿ ಮಾದರಿ ಗ್ರಂಥಾಲಯಗಳು ಬರಬೇಕು” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಬೆಂಗಳೂರು ಎಲ್.ಐ.ಎಸ್. ಅಕಾಡೆಮಿ ಅಧ್ಯಕ್ಷ ಪ್ರೊ. ಪಿ. ವ್ಹಿ. ಕೊಣ್ಣೂರ ಮಾತನಾಡಿ, “ಇತ್ತೀಚಿನ ಯುವ ಸಮುದಾಯ ವೃತ್ತಿ ಬದ್ಧತೆ, ಗೌರವ ಹೆಚ್ಚಿಸಿಕೊಳ್ಳಬೇಕು ಇದು ಕಡಿಮೆಯಾಗುತ್ತಿದೆ. ಗ್ರಂಥಾಲಯ ಕ್ಷೇತ್ರದ ಕುಂದುಕೊರತೆಗೆ ನಿವಾರಣೆಗೆ ಕ.ವಿ.ವ.ಸಂಘ ನಮ್ಮೊಂದಿಗೆ ಕೈಜೋಡಿಸಬೇಕು. ಈ ಹಿಂದೆ ಜರುಗಿದ ಅನೇಕ  ಚಳುವಳಿ ಆರಂಭವಾಗಿದ್ದು, ಧಾರವಾಡದಿಂದ ಹಾಗೂ ಕ.ವಿ.ವ.ಸಂಘದಿಂದ. ಆ ದಿಶೆಯಲ್ಲಿ ಈಗ ಗ್ರಂಥಾಲಯ ಸಮಸ್ಯೆ ಕುರಿತು ಧಾರವಾಡದಿಂದ ಕ.ವಿ.ವ.ಸಂಘದಿಂದ ಚಳುವಳಿ ಆರಂಭವಾಗಲಿ” ಎಂದರು.

“ಕರ್ನಾಟಕ ರಾಜ್ಯ ಗ್ರಂಥಾಲಯ ಸಂಘದ ಅಧ್ಯಕ್ಷ ಡಾ. ಎಸ್.ಎಲ್. ಕಾಡದೇವರಮಠ ಮಾತನಾಡಿ, “ಕನ್ನಡವೆಂದರೆ ಸ್ವಾಭಿಮಾನ ಅದನ್ನು ಕ.ವಿ.ವ. ಸಂಘದ ಗ್ರಂಥಾಲಯ ಸಮ್ಮೇಳನದಲ್ಲಿ ಎಲ್ಲ ಗೋಷ್ಠಿಗಳು ಕನ್ನಡದಲ್ಲಿ ಜರುಗಿದ್ದು ಸಂತಸದ ಸಂಗತಿ. ಗ್ರಂಥಪಾಲಕರ ನೇಮಕಾತಿಯಲ್ಲಿ ಸರಕಾರ ಉದಾಸೀನತೆ ತೋರುತ್ತಿದೆ. ಪ್ರತಿವರ್ಷ 3-4 ಸಾವಿರ ಶಿಕ್ಷಕರನ್ನು ನೇಮಿಸುವ ಸರಕಾರ ಗ್ರಂಥಪಾಲಕರನ್ನು ನೇಮಿಸುತ್ತಿಲ್ಲ. 45 ಸರಕಾರಿ ಕಾಲೇಜುಗಳಿದ್ದು, ಅಲ್ಲಿ ಸರಿಯಾಗಿ ಗ್ರಂಥಪಾಲಕರಿಲ್ಲ. ಈ ಕುರಿತು ಕರ್ನಾಟಕ ಗ್ರಂಥಾಲಯ ಸಂಘದಿಂದ ಬೆಂಗಳೂರಿನಲ್ಲಿ ಅಕ್ಬೋಬರ 5ರಂದು ಹೋರಾಟ ಹಮ್ಮಿಕೊಂಡಿದ್ದು, ಇದು ಸರಕಾರಕ್ಕೆ ಎಚ್ಚರಿಕೆ ಗಂಟೆ” ಎಂದರು. 

ಕ.ವಿ.ವ.ಸಂಘದ ಗೌರವ ಉಪಾಧ್ಯಕ್ಷ ಶ್ರೀನಿವಾಸ ವಾಡಪ್ಪಿ ಅಧ್ಯಕ್ಷತೆ ವಹಿಸಿ ಮಾತನಾಡಿರು. ಪ್ರೊ. ವಿನಾಯಕ ಬಂಕಾಪೂರ ಸಮ್ಮೇಳನದ ಎರಡು ದಿನದ ಸಮಗ್ರ ವರದಿ ಮಂಡಿಸಿದರು. ಸಮ್ಮೇಳನಕ್ಕೆ ನೆರವು ನೀಡಿದ ಹುಬ್ಬಳ್ಳಿಯ ಕೋಳಿವಾಡ ಗ್ರಾನೈಟ್ & ಮಾರ್ಬಲ್ಸ್ನ ಶಂಕರ ಕೋಳಿವಾಡ ಮತ್ತು ಅರ್ಜಿಸ್ ಬಿಜಿನೆಸ್ ಸಲ್ಯೂಷನ್ ವೀರು ಉಪ್ಪಿನ ಹಾಗೂ ಕ.ವಿ.ವ. ಸಂಘದ ಗೌರವ ಉಪಾಧ್ಯಕ್ಷ ಶ್ರೀನಿವಾಸ ವಾಡಪ್ಪಿ ಅವರನ್ನು ಸಂಘದ ಪರವಾಗಿ ಗೌರವಿಸಿ ಸನ್ಮಾನಿಸಲಾಯಿತು. 

ಅತ್ಯುತ್ತಮ ಪ್ರಬಂಧ ಮಂಡನೆಗಾಗಿ ಕೃಷ್ಣಾ ಎಸ್. ಮರಡ್ಡಿ ಡಾ. ಕೋಟೆಪ್ಪ ಬಿ. ಹಾಗೂ ಡಾ. ಶಿವರಂಜಿನಿ ಮೊಗಲಿ ಇವರಿಗೆ ಗೌರವ ಸನ್ಮಾನ ಮಾಡಿ ಪ್ರಮಾಣ ಪತ್ರ ನೀಡಲಾಯಿತು.

ಸಮ್ಮೇಳನದಲ್ಲಿ ಕೈಕೊಂಡ ನಿರ್ಣಯಗಳು: 1) ಸರಕಾರ ಎಲ್ಲ ಹಂತದ ಗ್ರಂಥಾಲಯಗಳಲ್ಲಿ ಗ್ರಂಥಪಾಲಕರನ್ನು ತುಂಬಬೇಕು. 2) ಗ್ರಾಮೀಣ ಮತ್ತು ಶಾಲಾ ಗ್ರಂಥಾಲಯಗಳನ್ನು ಹೆಚ್ಚು ಬಲಪಡಿಸಬೇಕು. 3) ಸಾರ್ವಜನಿಕ ಗ್ರಂಥಾಲಯಗಳನ್ನು ಹೆಚ್ಚು ಬಲಪಡಿಸಬೇಕು. 4) ೧೯೬೫ ರಲ್ಲಿ ಜಾರಿಗೆ ತಂದಿರುವ ಸಾರ್ವಜನಿಕ ಗ್ರಂಥಾಲಯ ಕಾಯ್ದೆಯನ್ನು ಮರುತಿದ್ದುಪಡಿ ಮಾಡಬೇಕೆಂದು ಸರಕಾರವನ್ನು ಒತ್ತಾಯಿಸಬೇಕು.

ಸಮ್ಮೇಳನದ ಕುರಿತು ಮೈಸೂರು ವಿ.ವಿ ಪ್ರಾಧ್ಯಾಪಕಿ ಪ್ರೊ. ಆದಿತ್ಯಕುಮಾರಿ ಹಾಗೂ ವೀಣಾ ಅಮ್ಮಿನಭಾವಿ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ವೇದಿಕೆಯಲ್ಲಿ ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ, ಪ್ರೊ. ಎಸ್.ಎಲ್. ಸಂಗಮ, ಸಂಘದ ಪದಾಧಿಕಾರಿಗಳು ಸತೀಶ ತುರಮರಿ ಇದ್ದರು. ಶಂಕರ ಹಲಗತ್ತಿ ಸ್ವಾಗತಿಸಿದರು. ಡಾ. ಮಹೇಶ ಧ. ಹೊರಕೇರಿ ನಿರೂಪಿಸಿದರು. ಶಂಕರ ಕುಂಬಿ ವಂದಿಸಿದರು.  ಡಾ. ನಿರ್ಮಲಾ ಚಿಗಟೇರಿ ಪ್ರಾರ್ಥಿಸಿದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕಲೆ ಉಳಿಯಲಿ, ಕೌಶಲ್ಯ ಬೆಳೆಯಲಿ: ಕರ್ನಾಟಕ ಪರ್ವ 2026ಕ್ಕೆ ಡಿ.ಕೆ ಶಿವಕುಮಾರ್ ಚಾಲನೆ

ಬೆಂಗಳೂರಿನ ಅರಮನೆ ಮೈದಾನದಲ್ಲಿ ಶನಿವಾರ ವೈವಿಧ್ಯತೆಯಲ್ಲಿ ಏಕತೆ, ಕೌಶಲ್ಯದಲ್ಲಿ ಸ್ವಾವಲಂಬನೆ ಎಂಬ...

ಅಪರಾಧಿಗಳ ಪರ ಬಿ ಸಿ ರೋಡ್ ಚಲೋ: ಎಂದಿನಂತೆ ಅಮಾನವೀಯ ಕೊಲೆಗಡುಕರ ಬೆಂಬಲಕ್ಕೆ ನಿಂತ ಸಂಘಪರಿವಾರ

ಕೊಲೆಯಂತಹ ಗಂಭೀರ ಅಪರಾಧ ಎಸಗಿದ ಆರೋಪ ಹೊತ್ತವರ ಪರವಾಗಿ ಸಂಘಪರಿವಾರ ಬೀದಿಗಿಳಿಯುತ್ತಿರುವುದು...

ಕೋಲಾರ | ಪದವೀಧರರ ಸಮಸ್ಯೆಗಳ ಪರಿಹಾರಕ್ಕೆ ಆದ್ಯತೆ: ಡಾ. ನಾಗರಾಜ್

ಆಗ್ನೇಯ ಪದವೀಧರರ ಕ್ಷೇತ್ರದ ಜೆಡಿಯು ಅಭ್ಯರ್ಥಿ ಹಾಗೂ ಪಕ್ಷದ ಯುವ ಘಟಕದ...