ಕುಂದಗೋಳ ತಾಲ್ಲೂಕಿನ ಇಂಗಳಗಿ ಗ್ರಾಮದ ದೊಡ್ಡಾಟ, ಸಾಮಾಜಿಕ ರಂಗಭೂಮಿ ಹಾಗೂ ಪೌರಾಣಿಕ ಬಯಲಾಟ ಕಲಾವಿದ ಎಂ.ಎಸ್.ಮಾಳವಾಡ (65) ಗುರುವಾರ ನಿಧನರಾದರು. ಅವರಿಗೆ ಪತ್ನಿ, ಮೂವರು ಪುತ್ರರು, ಪುತ್ರಿ ಇದ್ದಾರೆ.
- Advertisement -
ದೊಡ್ಡಾಟ ಕ್ಷೇತ್ರದಲ್ಲಿ ‘ಏಳುಕೊಳ್ಳದ ಎಲ್ಲಮ್ಮ’, ‘ಕಪ್ಪು ನೆಲದ ಕೆಂಪು ಕಥೆ’ ಸೇರಿದಂತೆ ಹಲವಾರು ಐತಿಹಾಸಿಕ ಹಾಗೂ ಚಾರಿತ್ರಿಕ ಕಥನಗಳನ್ನು ರಚಿಸಿ, ಅವುಗಳನ್ನು ದೊಡ್ಡಾಟಗಳ ರೂಪದಲ್ಲಿ ಬರೆದು, ಆಡಿಸಿ ಜನಮನಕ್ಕೆ ತಲುಪಿಸಿದ್ದಾರೆ. ಜಾನಪದ ಕಲೆ, ದೊಡ್ಡಾಟ ಮತ್ತು ಬಯಲಾಟ ಕ್ಷೇತ್ರಕ್ಕೆ ನೀಡಿದ ಕೊಡುಗೆಗೆ ನಾಟಕ ಅಕಾಡೆಮಿ ಹಾಗೂ ಬಯಲಾಟ ಅಕಾಡೆಮಿಗಳ ಪ್ರಶಸ್ತಿ ಪಡೆದಿರುವರು.





